ಭರ್ಜರಿ ಡಿಸ್ಕೌಂಟ್‌ನಲ್ಲಿ ಸ್ಮಾರ್ಟ್ ಹೋಮ್ ಉತ್ಪನ್ನ ಖರೀದಿಸಲು ಇದುವೇ ಬೆಸ್ಟ್ ಟೈಮ್!
ದೈತ್ಯ ಇ ಕಾಮರ್ಸ್ ತಾಣ ಒಂದಿಲ್ಲೊಂದು ಮಾರಾಟ ಮೇಳವನ್ನು ಆಯೋಜಿಸುವ ಮೂಲಕ ಗ್ರಾಹಕರಿಗೆ ಕೊಡುಗೆ ನೀಡುತ್ತ ಮುನ್ನಡೆದಿದೆ. ಸದ್ಯ ಅಮೆಜಾನ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಇದೀಗ ಅಲೆಕ್ಸಾ ಉತ್ಪನ್ನಗಳಿಗೆ ಹಾಗೂ ಕೆಲವು ಸ್ಮಾರ್ಟ್ ಹೋಮ್ ಡಿವೈಸ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಿಸಿದ್ದು, ಆನ್‌ಲೈನ್ ಶಾಪಿಂಗ್ ಪ್ರಿಯರಿಗೆ ಈ ಕೊಡುಗೆಯು ಖುಷಿ ನೀಡಿದೆ. ಈ ಮಾರಾಟದಲ್ಲಿ ಆಯ್ದ ಕೆಲವು ಉತ್ಪನ್ನಗಳಿಗೆ ಶೇ. 70% ರಷ್ಟು ಡಿಸ್ಕೌಂಟ್ ನೀಡಿರುವುದು ಹೈಲೈಟ್ ಎನಿಸಿದ್ದು, ಎಕೋ ಡಾಟ್ ನಂತಹ ಉತ್ಪನ್ನ ಖರೀದಿಸುವ ಗ್ರಾಹಕರನ್ನು ಆಕರ್ಷಿಸುತ್ತಿದೆ.
ಹೌದು, ಅಮೆಜಾನ್ ತಾಣವು ಅಲೆಕ್ಸಾ ಸ್ಮಾರ್ಟ್ ಹೋಮ್ ಡೇಸ್ (Alexa Smart Home Days) ಮಾರಾಟ ಮೇಳವನ್ನು ಆಯೋಜಿಸಿದ್ದು, ಈ ಮಾರಾಟ ಈಗ ಲೈವ್ ಇದೆ. ಇದರಲ್ಲಿ ಅಮೆಜಾನ್ ಅಲೆಕ್ಸಾ, ಅಲೆಕ್ಸಾ ಸ್ಮಾರ್ಟ್ ಹೋಮ್ ಕಾಂಬೊಗಳೊಂದಿಗೆ ಎಕೋ ಸ್ಮಾರ್ಟ್ ಸ್ಪೀಕರ್‌ಗಳಲ್ಲಿ ಬಿಗ್ ರಿಯಾಯಿತಿ ಪ್ರಕಟಿಸಲಾಗಿದೆ. ಈ ಕೊಡುಗೆಯು ಇದೇ ಜೂನ್ 21 ರ ವರೆಗೂ ಚಾಲ್ತಿ ಇರಲಿದೆ.

ಅಲ್ಲದೇ ಫಿಲಿಪ್ಸ್, ಡೈಸನ್, ಎಂಐ, ಪ್ಯಾನಾಸೋನಿಕ್, ಕ್ಯುಬೋ, ವಿಪ್ರೋ, ಸಿಪಿ ಪ್ಲಸ್, ಟಿಪಿ-ಲಿಂಕ್ ಮತ್ತು ಹೋಮ್‌ಮೇಟ್. ಸ್ಮಾರ್ಟ್ ಲೈಟ್‌ಗಳು, ಪ್ಲಗ್‌ಗಳು, ಫ್ಯಾನ್‌ಗಳು, ಟಿವಿಗಳು, ಸೆಕ್ಯುರಿಟಿ ಕ್ಯಾಮೆರಾಗಳು, ಡೋರ್ ಲಾಕ್‌ಗಳು, ಎಸಿ, ವಾಟರ್ ಹೀಟರ್‌ಗಳು ಮತ್ತು ಏರ್ ಪ್ಯೂರಿಫೈಯರ್ ಸೇರಿದಂತೆ ಇತರೆ ಬ್ರ್ಯಾಂಡ್ 1200 ಅಲೆಕ್ಸಾ-ಹೊಂದಾಣಿಕೆಯ ಡಿವೈಸ್‌ಗಳಿಗೂ ಆಫರ್ ನೀಡಿದೆ.
ಡಿಸ್ಕೌಂಟ್‌ನಲ್ಲಿ ಅಲೆಕ್ಸಾ ಸ್ಮಾರ್ಟ್ ಹೋಮ್ ಕಾಂಬೊ ಖರೀದಿಸುವ ಚಾನ್ಸ್
ಅಲೆಕ್ಸಾ ಸ್ಮಾರ್ಟ್ ಹೋಮ್ ಕಾಂಬೊ ಡಿವೈಸ್ ಮೇಲೆ ಶೇ 24% ರಿಯಾಯಿತಿ. ಇದು ಎಕೋ ಡಾಟ್ (5 ನೇ ಜನ್) + ವಿಪ್ರೋ ಸ್ಮಾರ್ಟ್ ಬಲ್ಬ್ ಹೊಂದಿದೆ. ಆಫರ್ ಬೆಲೆ 5,799ರೂ. ಆಗಿದೆ. ಹಾಗೆಯೇ ಅಲೆಕ್ಸಾ ಸ್ಮಾರ್ಟ್ ಹೋಮ್ ಕಾಂಬೊ ಮೇಲೆ ಶೇ 24% ರಿಯಾಯಿತಿ ಇದ್ದು, ಈ ಕಾಂಬೋ ಎಕೋ ಪಾಪ್ + ವಿಪ್ರೋ ಸ್ಮಾರ್ಟ್ ಬಲ್ಬ್ ಒಳಗೊಂಡಿದೆ. ಇದನ್ನು 4,299ರೂ. ಗಳಿಗೆ ಖರೀದಿಸಬಹುದು.
ಹಾಗೆಯೇ ಕ್ಲಾಕ್ + ಅಮೆಜಾನ್ ಸ್ಮಾರ್ಟ್ ಪ್ಲಗ್‌ನೊಂದಿಗೆ ಅಲೆಕ್ಸಾ ಸ್ಮಾರ್ಟ್ ಹೋಮ್ ಕಾಂಬೊ - ಎಕೋ ಡಾಟ್ (4ನೇ ಜನ್) ಮೇಲೆ ಶೇ 16% ರಿಯಾಯಿತಿ ಲಭ್ಯ. ಇದರ ಕೊಡುಗೆಯ ಬೆಲೆಯು 6,298ರೂ. ಆಗಿದೆ. ಇನ್ನು ಅಲೆಕ್ಸಾ ಸ್ಮಾರ್ಟ್ ಹೋಮ್ ಕಾಂಬೊ ಮೇಲೆ ಶೇ 16% ರಿಯಾಯಿತಿ ನೀಡಲಾಗಿದ್ದು, ಇದು ಎಕೋ ಶೋ 5 (2 ನೇ ಜನ್) + ವಿಪ್ರೋ ಸ್ಮಾರ್ಟ್ ಬಲ್ಬ್ ಹೊಂದಿದೆ. ಇದರ ಆಫರ್ ದರ 9,299ರೂ. ಆಗಿದೆ.
ಅದೇ ರೀತಿ ಅಲೆಕ್ಸಾ ಸ್ಮಾರ್ಟ್ ಹೋಮ್ ಕಾಂಬೊ ಮೇಲೆ ಶೇ 31% ರಿಯಾಯಿತಿ ನೀಡಲಾಗಿದ್ದು, ಇದು ಎಕೋ ಪಾಪ್ + ಅಮೆಜಾನ್ ಸ್ಮಾರ್ಟ್ ಪ್ಲಗ್ ಡಿವೈಸ್ ಒಳಗೊಂಡಿದೆ. ಈ ಕಾಂಬೋದ ಕೊಡುಗೆಯ ದರವು 4,798ರೂ. ಗಳು ಆಗಿದೆ. ಹಾಗೆಯೇ ಅಲೆಕ್ಸಾ ಸ್ಮಾರ್ಟ್ ಹೋಮ್ ಕಾಂಬೊ ಮೇಲೆ ಶೇ 53% ರಿಯಾಯಿತಿ ಇದೆ. ಇದು ಎಕೋ ಪಾಪ್ + ಹೋಮ್‌ಮೇಟ್ ಟಚ್ ಸ್ವಿಚ್ ಡಿವೈಸ್ ಪಡೆದಿದೆ. ಇದರ ಕೊಡುಗೆಯ ದರವು 5,097 ರೂ. ಆಗಿದೆ.
ಇತರೆ ಸ್ಮಾರ್ಟ್ ಡಿವೈಸ್‌ಗಳಿಗೂ ಬಿಗ್ ಡಿಸ್ಕೌಂಟ್
ಅಲೆಕ್ಸಾ ಬೆಂಬಲ ಪಡೆದಿರುವ ಇತರೆ ಸ್ಮಾರ್ಟ್ ಉತ್ಪನ್ನಗಳಿಗೂ ಈ ಮಾರಾಟದಲ್ಲಿ ಭರ್ಜರಿ ರಿಯಾಯಿತಿ ಘೋಷಿಸಲಾಗಿದೆ. ಸ್ಮಾರ್ಟ್ ಹೋಮ್ ಸೆಕ್ಯುರಿಟಿ ಕ್ಯಾಮೆರಾ, Qubo ಸಂಸ್ಥೆಯ ಕ್ಯಾಮೆರಾ ಮತ್ತು ವಿಡಿಯೋ ಡೋರ್‌ಬೆಲ್, ಪಿಲಿಪ್ಸ್, ವಿಪ್ರೋ, ಬಜಾಜ್ ಸೇರಿದಂತೆ ಇತರೆ ಬ್ರ್ಯಾಂಡ್‌ಗಳ ಸ್ಮಾರ್ಟ್ ಹೋಮ್ ಡಿವೈಸ್‌ಗಳಿಗೆ ರಿಯಾಯಿತಿ ಲಭ್ಯ. ಆಸಕ್ತ ಖರೀದಿದಾರರು ಅಮೆಜಾನ್ ತಾಣದ ಮೂಲಕ ಖರೀದಿಸಬಹುದು.


Click it and Unblock the Notifications








