Home
Deal of the day

ಸ್ಮಾರ್ಟ್‌ ಬ್ಯಾಂಡ್ ಖರೀದಿಸುವ ಯೋಚನೆ ಇದ್ರೆ, ಈ ಆಫರ್ ಒಮ್ಮೆ ಗಮನಿಸಿ!

ದೈತ್ಯ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ಎಂದೇ ಗುರುತಿಸಿಕೊಂಡಿರುವ ಅಮೆಜಾನ್ (Amazon) ಒಂದಿಲ್ಲೊಂದು ಸೇಲ್ ಆಯೋಜಿಸುವ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತದೆ. ಇತ್ತೀಚಿಗಷ್ಟೆ ದೀಪಾವಳಿ ಮಾರಾಟ ಮೇಳ ಆಯೋಜಿಸಿ, ಆಯ್ದ ಫೋನ್‌ಗಳಿಗೆ ಸೇರಿದಂತೆ ಇತರೆ ಗ್ಯಾಡ್ಜೆಟ್ಸ್‌ಗಳಿಗೆ ಭರ್ಜರಿ ರಿಯಾಯಿತಿ ನೀಡಿತ್ತು. ಅದಾಗ್ಯೂ, ಯಾವುದೇ ಸೇಲ್ ಇಲ್ಲದಿದ್ದರೂ ಅಮೆಜಾನ್ ತಾಣದಲ್ಲಿ ಕೆಲವು ಡಿವೈಸ್‌ಗಳು ಆಕರ್ಷಕ ಕೊಡುಗೆ ಪಡೆದಿರುತ್ತವೆ.

ಸ್ಮಾರ್ಟ್‌ ಬ್ಯಾಂಡ್ ಖರೀದಿಸುವ ಯೋಚನೆ ಇದ್ರೆ, ಈ ಆಫರ್ ಒಮ್ಮೆ ಗಮನಿಸಿ!

ಹೌದು, ಜನಪ್ರಿಯ ಅಮೆಜಾನ್ ತಾಣದಲ್ಲಿ ಕೆಲವು ಗ್ಯಾಡ್ಜೆಟ್ಸ್‌ಗಳು ಆಫರ್‌ನಲ್ಲಿ ಕಾಣಿಸಿಕೊಂಡಿರುತ್ತವೆ. ಆ ಪೈಕಿ ಫೋನ್‌ಗಳಂತೆ, ಸ್ಮಾರ್ಟ್‌ ಬ್ಯಾಂಡ್‌ ಡಿವೈಸ್‌ಗಳು ರಿಯಾಯಿತಿ ದರದಲ್ಲಿ ಲಭ್ಯ. ಆಫರ್‌ನಲ್ಲಿ ಶಿಯೋಮಿ, ರಿಯಲ್‌ಮಿ, ಹಾನರ್, ಒಪ್ಪೋ ಸೇರಿದಂತೆ ಇತರೆ ಜನಪ್ರಿಯ ಬ್ರ್ಯಾಂಡ್‌ನ ಸ್ಮಾರ್ಟ್‌ ಬ್ಯಾಂಡ್‌ಗಳು ಸೇರಿವೆ. ಹಾಗಾದರೇ ಅಮೆಜಾನ್ ತಾಣದಲ್ಲಿ ಆಫರ್ ಪಡೆದಿರುವ ಸ್ಮಾರ್ಟ್‌ ಬ್ಯಾಂಡ್‌ ಡಿವೈಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಒಪ್ಪೋ ಸ್ಮಾರ್ಟ್‌ ಬ್ಯಾಂಡ್‌
ಈ ಡಿವೈಸ್ ನಿಮ್ಮ ಹೃದಯ ಬಡಿತದ ನೊಟೀಫಿಕೇಷನ್‌ಗಳನ್ನು ಕಳುಹಿಸುವ ರಿಯಲ್‌ ಟೈಂ ಮಾನಿಟರ್‌ ಮಾಡರಲಿದೆ. ಹಾರ್ಟ್‌ ಮಾನಿಟರ್ ಜೊತೆಗೆ ಒಪ್ಪೋ ಬ್ಯಾಂಡ್ ಶೈಲಿಯು ತುಂಬಾ ಉಪಯುಕ್ತ ಮತ್ತು ಗೇಮ್‌ ಚೇಜಿಂಗ್‌ SpO2 ಮಾನಿಟರ್ ಅನ್ನು ಒಳಗೊಂಡಿದೆ. ಹಾಗೆಯೇ ಹೊರಾಂಗಣ ವಾಕ್, ಹೊರಾಂಗಣ ಸೈಕ್ಲಿಂಗ್, ಒಳಾಂಗಣ ಸೈಕ್ಲಿಂಗ್, ಎಲಿಪ್ಟಿಕಲ್, ರೋಯಿಂಗ್, ಕ್ರಿಕೆಟ್, ಬ್ಯಾಡ್ಮಿಂಟನ್, ಈಜು, ಯೋಗ, ಮತ್ತು ಉಸಿರಾಟದ ವ್ಯಾಯಾಮ ಮೋಡ್‌ನಂತಹ 12ಕ್ಕೂ ಹೆಚ್ಚು ಪರಿಣಾಮಕಾರಿಯಾದ ಆಕ್ಟಿವ್‌ ಮೋಡ್‌ಗಳನ್ನು ನೀಡುತ್ತದೆ. ಹೆಚ್ಚುವರಿಯಾಗಿ, ನಿಮ್ಮ ದೈನಂದಿನ ದೈಹಿಕ ಚಟುವಟಿಕೆಯ ವಿವರವಾದ ವಿಶ್ಲೇಷಣೆಯನ್ನು ಸಹ ನೀಡಲಿದೆ.

ಮಿ ಸ್ಮಾರ್ಟ್ ಬ್ಯಾಂಡ್ 5
ಮಿ ಸ್ಮಾರ್ಟ್ ಬ್ಯಾಂಡ್ 5 ಡಿವೈಸ್ 126x294 ಪಿಕ್ಸೆಲ್ ರೆಸಲ್ಯೂಶನ್ ಅನ್ನು ಹೊಂದಿದೆ. ಇದು 1.6-ಇಂಚಿನ ಅಮೋಲೆಡ್ ಕಲರ್ ಫುಲ್ ಟಚ್ ಡಿಸ್‌ಪ್ಲೇಯನ್ನು ಹೊಂದಿದೆ. ಅಲ್ಲದೆ ಈ ಡಿಸ್‌ಪ್ಲೇ 16 ಬಿಟ್ ಕಲರ್ ಮತ್ತು 450 ನಿಟ್ಸ್ ಬ್ರೈಟ್‌ನೆಸ್ ಅನ್ನು ಹೊಂದಿದೆ. ಔಟ್‌ಡೋರ್‌ ರೇಸ್‌, ವಾಕಿಂಗ್‌, ರೈಡಿಂಗ್‌ ಇನ್‌ಡೋರ್‌ ರನ್ನಿಂಗ್‌, ಇನ್‌ಡೋರ್‌ ಸ್ವಿಮ್ಮಿಂಗ್‌ ಸೇರಿದಂತೆ ಸುಮಾರು 11 ವೃತ್ತಿಪರ ಕ್ರೀಡಾ ವಿಧಾನಗಳನ್ನು ಒಳಗೊಂಡಿದೆ. ಅಲ್ಲದೆ ಹೆಲ್ತ್‌ ಮತ್ತು ಫಿಟ್ನೆಸ್ ಫೀಚರ್ಸ್‌ಗಳಿಗೆ ಸಂಬಂಧಿಸಿದಂತೆ 24x7 ಹೃದಯ ಬಡಿತ ಮೇಲ್ವಿಚಾರಣೆ, ವಿಶ್ರಾಂತಿ ಹೃದಯ ಬಡಿತ, ನಿದ್ರೆಯ ಮೇಲ್ವಿಚಾರಣೆ, ಗಾಡ ನಿದ್ರೆ, ಲಘು ನಿದ್ರೆ, ಒತ್ತಡ ಮೇಲ್ವಿಚಾರಣೆ, ಕ್ಯಾಲೋರಿ ಎಣಿಕೆ ಮತ್ತು ಗುರಿ ನಿರ್ಧಾರದಂತಹ ಫಿಚರ್ಸ್‌ಗಳನ್ನ ಹೊಂದಿದೆ.

ಹುವಾವೇ ಬ್ಯಾಂಡ್‌ 6
ಹುವಾವೇ ಬ್ಯಾಂಡ್ 6 194x368 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 1.47-ಇಂಚಿನ ಅಮೋಲೆಡ್ ಫುಲ್-ವ್ಯೂ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 64 % ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಒಳಗೊಂಡಿದೆ. ಈ ಫಿಟ್ನೆಸ್‌ ಬ್ಯಾಂಡ್‌ ಋತುಚಕ್ರ ಸೈಕಲ್ ಟ್ರ್ಯಾಕಿಂಗ್ ಫೀಚರ್ಸ್‌ ಅನ್ನು ಸಹ ನೀಡಲಾಗಿದೆ ಅಲ್ಲದೆ ಫೋನ್ ಮೂಲಕ ಮ್ಯೂಸಿಕ್‌ ಅನ್ನು ಕಂಟ್ರೋಲ್‌ ಮಾಡುವ ಸಾಮರ್ಥ್ಯವಿದೆ. ಆದರೆ ಈ ಎರಡೂ ವೈಶಿಷ್ಟ್ಯಗಳು ಆಂಡ್ರಾಯ್ಡ್‌ನಲ್ಲಿ ಮಾತ್ರ ಬೆಂಬಲಿತವಾಗಿದೆ. ಇನ್ನು ಈ ಫಿಟ್‌ನೆಸ್ ಬ್ಯಾಂಡ್ 5ATM (50 ಮೀಟರ್ ವರೆಗೆ) ವಾಟರ್‌ ಪ್ರೂಫ್‌ ವ್ಯವಸ್ಥೆಯನ್ನು ಹೊಂದಿದೆ.

ಮಿ ಸ್ಮಾರ್ಟ್‌ ಬ್ಯಾಂಡ್‌ 6
ಈ ಡಿವೈಸ್ ಸುಮಾರು 30 ಬಗೆಯ ತಾಲೀಮು/ವರ್ಕ್‌ಔಟ್‌ ಮಾದರಿಗಳನ್ನು ಟ್ರ್ಯಾಕ್ ಮಾಡುವ ಸೌಲಭ್ಯವನ್ನು ಪಡೆದಿದ್ದು, ಫಿಟ್ನೆಸ್ ಪ್ರಿಯರನ್ನು ಹೆಚ್ಚು ಆಕರ್ಷಿಸಿದೆ. ಒಳಾಂಗಣ ಕ್ರೀಡಾ ತರಬೇತಿಗಳು ಸೇರಿದಂತೆ ವೃತ್ತಿಪರ ಕ್ರೀಡೆಗಳಾದ ಕ್ರಿಕೆಟ್ ಮತ್ತು ಜಿಮ್ನಾಸ್ಟಿಕ್ಸ್ ಮತ್ತು ಜುಂಬಾ ಚಟುವಟಿಕೆಗಳು ಸೇರಿವೆ. ಹಾಗೆಯೇ ಈ ಡಿವೈಸ್ SpO2 ಮಾಪನ ಮಾಡುವ ಸೌಲಭ್ಯವನ್ನು ಒಳಗೊಂಡಿದೆ. ಈ ಡಿವೈಸ್ 1.56-ಇಂಚಿನ (152x486 ಪಿಕ್ಸೆಲ್‌ಗಳು) ಪೂರ್ಣ ಪರದೆಯ AMOLED ಟಚ್ ಡಿಸ್‌ಪ್ಲೇಯನ್ನು ಹೊಂದಿದ್ದು 450 ನಿಟ್‌ಗಳ ಗರಿಷ್ಠ ಹೊಳಪನ್ನು ಮತ್ತು 326 ಪಿಪಿಐ ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ. ಒಂದೇ ಚಾರ್ಜ್‌ನಲ್ಲಿ 14 ದಿನಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ.

ಒನ್‌ಪ್ಲಸ್‌ ಬ್ಯಾಂಡ್
ಒನ್‌ಪ್ಲಸ್ ಬ್ಯಾಂಡ್ ಡಿವೈಸ್‌ 126 x 294 ಪಿಕ್ಸೆಲ್ ರೆಸಲ್ಯೂಶನ್ ಅನ್ನು ಹೊಂದಿದೆ. ಇದು 1.1-ಇಂಚಿನ ಅಮೋಲೆಡ್ ಕಲರ್ ಫುಲ್ ಟಚ್ ಡಿಸ್‌ಪ್ಲೇಯನ್ನು ಹೊಂದಿದೆ. ಮಿ ಬ್ಯಾಂಡ್‌ 5 ಡಿವೈಸ್‌ 450 ನಿಟ್ಸ್ ಬ್ರೈಟ್‌ನೆಸ್ ಅನ್ನು ಹೊಂದಿದೆ. ಒನ್‌ಪ್ಲಸ್ ಬ್ಯಾಂಡ್ ಬ್ಲಡ್‌ ಆಕ್ಸಿಜನ್‌ ಸೆನ್ಸಾರ್‌, ತ್ರೀ-ಆಕ್ಸಿಸ್‌ ಅಕ್ಸಿಲೆರೊಮೀಟರ್‌ ಮತ್ತು ಗೈರೊಸ್ಕೋಪ್ ಮತ್ತು ಆಪ್ಟಿಕಲ್ ಹಾರ್ಟ್‌ ಬಿಟ್‌ ಸೆನ್ಸಾರ್‌ ಅನ್ನು ಒಳಗೊಂಡಿದೆ. ಒನ್‌ಪ್ಲಸ್‌ ಬ್ಯಾಂಡ್‌ ಇತರ ಫಿಟ್‌ನೆಸ್ ಬ್ಯಾಂಡ್‌ಗಳಂತೆಯೇ, ಐಪಿ 68 ಪ್ರಮಾಣೀಕರಣ ಮತ್ತು 5 ಎಟಿಎಂ ವಾಟರ್-ರೆಸಿಸ್ಟೆಂಟ್ ರೇಟಿಂಗ್‌ ಅನ್ನು ಒಳಗೊಂಡಿದೆ.

English summary
Amazing Offers On These Popular Smart Bands On Amazon.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+