12GB RAM + 256GB ವೇರಿಯಂಟ್ ಇರುವ ಈ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ!
ವಿವೋ ಮೊಬೈಲ್ ಬ್ರ್ಯಾಂಡ್‌ನ ಸಬ್ ಬ್ರ್ಯಾಂಡ್ ಆಗಿರುವ ಐಕ್ಯೂ (iQOO) ಸಂಸ್ಥೆಯ ಕೆಲವು ಫೋನ್ ಮಾಡೆಲ್‌ಗಳು ಭಾರೀ ಮೆಚ್ಚುಗೆ ಪಡೆದಿದ್ದು, ಕೆಲವು ಬಜೆಟ್ ದರದ 5G ಮಾಡೆಲ್‌ಗಳು ಸಹ ಜನಪ್ರಿಯತೆಯಲ್ಲಿ ಇವೆ. ಆ ಪೈಕಿ ಐಕ್ಯೂ ಸಂಸ್ಥೆಯ ಐಕ್ಯೂ Z9s 5G (iQOO Z9s 5G) ಫೋನ್ ಸ್ಟೈಲಿಶ್ ಲುಕ್ ಹಾಗೂ ಬೊಂಬಾಟ್ ಫೀಚರ್ಸ್‌ಗಳ ಮೂಲಕ ಗ್ರಾಹಕರ ಗಮನ ಸೆಳೆದಿದೆ. ಅಂದಹಾಗೆ ಈ ಮೊಬೈಲ್ ಅಮೆಜಾನ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ನಲ್ಲಿ ಭಾರೀ ಇಳಿಕೆಯ ದರದಲ್ಲಿ ಕಾಣಿಸಿಕೊಂಡಿದ್ದು, ಗ್ರಾಹಕರಿಗೆ ಖುಷಿ ಎನಿಸಿದೆ
ಹೌದು, ಇ ಕಾಮರ್ಸ್ ವೆಬ್‌ಸೈಟ್ ಅಮೆಜಾನ್ ತಾಣದಲ್ಲಿ ಐಕ್ಯೂ Z9s 5G (iQOO Z9s 5G) ಸ್ಮಾರ್ಟ್‌ಫೋನ್ ಶೇ. 20% ರಷ್ಟು ನೇರ ರಿಯಾಯಿತಿ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಈ ಫೋನಿನ 12GB RAM + 256GB ವೇರಿಯಂಟ್ 23,999ರೂ. ಗಳ ಆಫರ್ ದರದಲ್ಲಿ ಖರೀದಿಗೆ ಲಭ್ಯ ಇದೆ. ಹಾಗೆಯೇ ಗ್ರಾಹಕರು ಇನ್ನಷ್ಟು ರಿಯಾಯಿತಿ ಪಡೆಯಲು ಲಭ್ಯ ಇರುವ ಬ್ಯಾಂಕ್ ಆಫರ್ ಹಾಗೂ ಎಕ್ಸ್‌ಚೇಂಜ್ ಆಫರ್ ಸಹ ಪಡೆಯಬಹುದು.

ಅಂದಹಾಗೆ ಈ ಐಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಹಾಗೆಯೇ ಈ ಫೋನ್ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಚಿಪ್‌ಸೆಟ್ ಪ್ರೊಸೆಸರ್ ಪಡೆದಿದೆ. ಅಮೆಜಾನ್ ತಾಣದಲ್ಲಿ ಐಕ್ಯೂ Z9s 5G (iQOO Z9s 5G) ಫೋನ್ ಅನ್ನು ಆಕರ್ಷಕ ಕೊಡುಗೆಯಲ್ಲಿ ಖರೀದಿಸಬಹುದು. ಹಾಗಾದರೇ ಐಕ್ಯೂ Z9s 5G ಮೊಬೈಲ್‌ನ ಇತರೆ ಫೀಚರ್ಸ್‌ಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.
ಐಕ್ಯೂ Z9s 5G - ಫೀಚರ್ಸ್ ಹೀಗಿವೆ
ಐಕ್ಯೂ Z9s 5G (iQOO Z9s 5G) ಮೊಬೈಲ್ 6.67 ಇಂಚಿನ ಡಿಸ್‌ಪ್ಲೇ AMOLED ಡಿಸ್‌ಪ್ಲೇ ಪಡೆದಿದ್ದು, ಇದರೊಂದಿಗೆ 120Hz ರಿಫ್ರೆಶ್ ರೇಟ್ ಸಪೋರ್ಟ್ ಹೊಂದಿದೆ. ಇದರ ಜೊತೆಗೆ ಮೀಡಿಯಾ ಟೆಕ್ ಡೈಮೆನ್ಸಿಟಿ 7300 ಚಿಪ್‌ಸೆಟ್ ಪ್ರೊಸೆಸರ್ ಪವರ್ ಸೌಲಭ್ಯ ಇದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 14 ಓಎಸ್ ಸಪೋರ್ಟ್ ಪಡೆದಿದೆ.
ಇನ್ನು ಐಕ್ಯೂ Z9s 5G ಮೊಬೈಲ್ 8 GB RAM + 128 GB, 8 GB + 256 GB ಹಾಗೂ 12 GB + 256 GB ವೇರಿಯಂಟ್ ಆಯ್ಕೆಗಳನ್ನು ಪಡೆದುಕೊಂಡಿದೆ. ಇದಲ್ಲದೇ ಡ್ಯುಯಲ್ ಕ್ಯಾಮೆರಾ ರಚನೆ ಅನ್ನು ಪಡೆದಿದೆ. ಇದರ ಪ್ರಾಥಮಿಕ ಕ್ಯಾಮೆರಾ 50 ಮೆಗಾ ಪಿಕ್ಸಲ್ ಇದ್ದು, ಮುಂಭಾಗದಲ್ಲಿ 16 ಮೆಗಾ ಪಿಕ್ಸಲ್ ಸೆಲ್ಫಿ ಕ್ಯಾಮೆರಾ ನೀಡಲಾಗಿದೆ. ಇನ್ನು ಈ ಫೋನ್ 5,500 mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿದ್ದು, 44W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಪಡೆದಿದೆ.
ಇನ್ನು ಐಕ್ಯೂ Z9s ಪ್ರೊ ಫೋನ್ ಅಮೆಜಾನ್ ವೆಬ್‌ಸೈಟ್‌ನಲ್ಲಿ ಖರೀದಿಗೆ ಲಭ್ಯ ಇದೆ. ಇನ್ನು ಈ ಫೋನ್ 8GB + 128GB ವೇರಿಯಂಟ್, 8GB + 256GB ವೇರಿಯಂಟ್ ಹಾಗೂ 12GB + 256GB ವೇರಿಯಂಟ್ ಆಯ್ಕೆಯಲ್ಲಿ ಲಭ್ಯ. ಅಲ್ಲದೇ ಟೈಟಾನಿಯಂ ಮ್ಯಾಟ್ ಮತ್ತು ಓನಿಕ್ಸ್ ಗ್ರೀನ್ ಕಲರ್‌ನಲ್ಲಿ ಖರೀದಿಗೆ ಲಭ್ಯ ಇರಲಿದೆ. ಈ ಫೋನ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 7 ಜೆನ್ 3 ಚಿಪ್‌ಸೆಟ್ ಪ್ರೊಸೆಸರ್ ಪವರ್ ಪಡೆದಿದೆ.


Click it and Unblock the Notifications








