Home
Deal of the day

100W SUPERVOOC ಚಾರ್ಜಿಂಗ್‌ ಇರುವ ಈ ಫೋನ್‌ ಬೆಲೆಯಲ್ಲಿ ಭಾರೀ ಇಳಿಕೆ!

ಜನಪ್ರಿಯ ಒನ್‌ಪ್ಲಸ್‌ ಸಂಸ್ಥೆಯ ನಾರ್ಡ್‌ ಸರಣಿಯ ಫೋನ್‌ಗಳು ಮೀಡ್‌ರೇಂಜ್‌ ದರದಲ್ಲಿ ಖರೀದಿದಾರರ ಗಮನ ಸೆಳದಿವೆ. ಸಂಸ್ಥೆಯ ನಾರ್ಡ್‌ ಸರಣಿಯಲ್ಲಿ ಇತ್ತೀಚಿಗೆ ಸೇರ್ಪಡೆ ಆಗಿರುವ ಒನ್‌ಪ್ಲಸ್‌ ನಾರ್ಡ್‌ 4 5G (OnePlus Nord 4 5G) ಫೋನ್‌ ರಗಡ್‌ ಲುಕ್‌ ಹಾಗೂ ಆಕರ್ಷಕ ಫೀಚರ್ಸ್‌ಗಳ ಡಿಮ್ಯಾಂಡ್‌ನಲ್ಲಿ ಇದೆ. ಸದ್ಯ ಈ ಮೊಬೈಲ್‌ ಅಮೆಜಾನ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ನಲ್ಲಿ ಗಮನಾರ್ಹ ಇಳಿಕೆಯ ಬೆಲೆಯಲ್ಲಿ ಕಾಣಿಸಿಕೊಂಡಿದ್ದು, ಖರೀದಿದಾರರಿಗೆ ಖುಷಿ ಎನಿಸಿದೆ

ಹೌದು, ಇ ಕಾಮರ್ಸ್‌ ವೆಬ್‌ಸೈಟ್‌ ಅಮೆಜಾನ್‌ ತಾಣದಲ್ಲಿ ಒನ್‌ಪ್ಲಸ್‌ ನಾರ್ಡ್‌ 4 5G (OnePlus Nord 4 5G) ಸ್ಮಾರ್ಟ್‌ಫೋನ್‌ ಶೇ. 9% ರಷ್ಟು ನೇರ ರಿಯಾಯಿತಿ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಈ ಮೊಬೈಲ್‌ನ 8GB RAM + 256GB ವೇರಿಯಂಟ್‌ 29,999ರೂ. ಗಳ ಆಫರ್‌ ದರದಲ್ಲಿ ಖರೀದಿಗೆ ಲಭ್ಯ ಇದೆ. ಹಾಗೆಯೇ ಗ್ರಾಹಕರು ಇನ್ನಷ್ಟು ಡಿಸ್ಕೌಂಟ್‌ ಪಡೆಯಲು ಲಭ್ಯ ಇರುವ ಬ್ಯಾಂಕ್‌ ಆಫರ್‌ ಹಾಗೂ ಎಕ್ಸ್‌ಚೇಂಜ್ ಆಫರ್‌ ಸಹ ಪಡೆಯಬಹುದು.

100W SUPERVOOC ಚಾರ್ಜಿಂಗ್‌ ಇರುವ ಈ ಫೋನ್‌ ಬೆಲೆಯಲ್ಲಿ ಭಾರೀ ಇಳಿಕೆ!

ಅಂದಹಾಗೆ ಒನ್‌ಪ್ಲಸ್‌ನ ಈ ಫೋನ್‌ 16 ಮೆಗಾಪಿಕ್ಸೆಲ್ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದ್ದು, ಇದರ ಜೊತೆಗೆ 5,500mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿರುವುದು ಪ್ಲಸ್‌ ಪಾಯಿಂಟ್‌ ಎನಿಸಿದೆ. ಆಸಕ್ತ ಖರೀದಿದಾರರು ಅಮೆಜಾನ್‌ ತಾಣದಲ್ಲಿ ಒನ್‌ಪ್ಲಸ್‌ ನಾರ್ಡ್‌ 4 5G ಫೋನ್‌ ಅನ್ನು ಡಿಸ್ಕೌಂಟ್‌ ಕೊಡುಗೆಯಲ್ಲಿ ಖರೀದಿಸಬಹುದು. ಹಾಗಾದರೇ ಒನ್‌ಪ್ಲಸ್‌ ನಾರ್ಡ್‌ 4 5G ಮೊಬೈಲ್‌ನ ಇತರೆ ಫೀಚರ್ಸ್‌ಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

ಒನ್‌ಪ್ಲಸ್‌ ನಾರ್ಡ್‌ 4 ಫೀಚರ್ಸ್‌ ಮಾಹಿತಿ

ಒನ್‌ಪ್ಲಸ್‌ ನಾರ್ಡ್‌ 4 5G ಮೊಬೈಲ್‌ 6.74 ಇಂಚಿನ ಅಮೋಲೆಡ್‌ ಡಿಸ್‌ಪ್ಲೇ ಅನ್ನು ಪಡೆದಿದ್ದು, ಈ ಡಿಸ್‌ಪ್ಲೇ 1240 x 2772 ಪಿಕ್ಸೆಲ್ ರೆಸಲ್ಯೂಶನ್‌ ಅನ್ನು ಒಳಗೊಂಡಿದೆ. ಹಾಗೆಯೇ 120Hz ರಿಫ್ರೆಶ್ ರೇಟ್‌ ಸೌಲಭ್ಯ ಕೂಡಾ ಪಡೆದಿದ್ದು, ಹಾಗೆಯೇ ಇದು 451ppi ಪಡೆದಿದೆ. ಇದರ ಜೊತೆಗೆ HDR10+ ಸಪೋರ್ಟ್‌ ಸಹ ಇದೆ.

ಒನ್‌ಪ್ಲಸ್‌ ನಾರ್ಡ್‌ 4 5G ಮೊಬೈಲ್‌ ಕ್ವಾಲ್ಕಮ್‌ ಸ್ನಾಪ್‌ಡ್ರಾಗನ್ 7+ ಜೆನ್‌ 3 ಪ್ರೊಸೆಸರ್‌ ಪವರ್‌ನಲ್ಲಿ ಕೆಲಸ ಮಾಡಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 14 ಆಧಾರಿತ OxygenOS 14 ನಲ್ಲಿ ಕೆಲಸ ನಿರ್ವಹಿಸಲಿದೆ. ಹಾಗೆಯೇ 16GB RAM ಮತ್ತು 256GB ಸ್ಟೋರೇಜ್‌ ಅನ್ನು ಒಳಗೊಂಡಿದೆ.

ಒನ್‌ಪ್ಲಸ್‌ ನಾರ್ಡ್‌ 4 5G ಸ್ಮಾರ್ಟ್‌ಫೋನ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌ ನಲ್ಲಿ ಇದೆ. ಇದರ ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಲೆನ್ಸ್‌ ಅನ್ನು ಪಡೆದುಕೊಂಡಿದೆ. ಹಾಗೆಯೇ ಮುಂಭಾಗದಲ್ಲಿ 16 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಪಡೆದುಕೊಂಡಿದೆ.

ಒನ್‌ಪ್ಲಸ್‌ ನಾರ್ಡ್‌ 4 5G ಸ್ಮಾರ್ಟ್‌ಫೋನ್‌ 5,500mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಪಡೆದಿದ್ದು, ಇದರ ಜೊತೆಗೆ 100W ವೈಯರ್ಡ್‌ ಫಾಸ್ಟ್‌ ಚಾರ್ಜಿಂಗ್‌ ಅನ್ನು ಸಪೋರ್ಟ್‌ ಕೂಡಾ ಇವೆ. ಇನ್ನು ಕನೆಕ್ಟಿವಿಟಿ ಸೌಲಭ್ಯ 5G, 4G LTE, Wi-Fi 6, ಬ್ಲೂಟೂತ್ 5.4, NFC, GPS ಮತ್ತು USB ಟೈಪ್-C ಪೋರ್ಟ್ ಇವೆ. ಒನ್‌ಪ್ಲಸ್‌ ನಾರ್ಡ್‌ 4 5G ಫೋನ್‌ 8GB RAM + 128GB ವೇರಿಯಂಟ್‌, 8GB RAM + 256GB ವೇರಿಯಂಟ್‌ ಹಾಗೂ 12GB RAM + 256GB ವೇರಿಯಂಟ್‌ ಆಯ್ಕೆಯಲ್ಲಿ ಲಭ್ಯ.

Best Mobiles in India

English summary
Amazing Price Reduction on OnePlus Nord 4 5G on Amazon in India. Know about mobile discount price, offer price, other specifications and more. ಇ ಕಾಮರ್ಸ್‌ ವೆಬ್‌ಸೈಟ್‌ ಅಮೆಜಾನ್‌ ತಾಣದಲ್ಲಿ ಒನ್‌ಪ್ಲಸ್‌ ನಾರ್ಡ್‌ 4 5G (OnePlus Nord 4 5G) ಸ್ಮಾರ್ಟ್‌ಫೋನ್‌ ಶೇ. 9% ರಷ್ಟು ನೇರ ರಿಯಾಯಿತಿ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಈ ಮೊಬೈಲ್‌ನ 8GB RAM + 256GB ವೇರಿಯಂಟ್‌ 29,999ರೂ. ಗಳ ಆಫರ್‌ ದರದಲ್ಲಿ ಖರೀದಿಗೆ ಲಭ್ಯ ಇದೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+