5000 ಅಗ್ಗ! 10% ಡಿಸ್ಕೌಂಟ್.. 10% ಕ್ಯಾಶ್‌ಬ್ಯಾಕ್.. ಈ Realme ಫೋನಿಗೆ ಭರ್ಜರಿ ಆಫರ್
ರಿಯಲ್‌ಮಿ ಪ್ರಿಯರಿಗೆ ಅಮೆಜಾನ್ ಭರ್ಜರಿ ಆಫರ್ ನೀಡುತ್ತಿದೆ. ಬಂಪರ್ ಡಿಸ್ಕೌಂಟ್‌ನೊಂದಿಗೆ ಈ 5G ಸ್ಮಾರ್ಟ್‌ಫೋನ್ ಲಭ್ಯವಾಗುತ್ತಿದ್ದು, ನೀವು ಸಾಕಷ್ಟು ಹಣ ಉಳಿಸಬಹುದು. ಹೌದು, ಅಮೆಜಾನ್ ಬ್ಲ್ಯಾಕ್ ಫ್ರೈಡೇ ಸೇಲ್‌ನಲ್ಲಿ (Amazon Black Friday Sale) ರಿಯಲ್‌ಮಿ GT 6T 5G (Realme GT 6T 5G) ಫೋನ್ ಖರೀದಿ ಮೇಲೆ ಭರ್ಜರಿ ಆಫರ್ ನೀಡಲಾಗುತ್ತಿದೆ. 5000 ರೂ. ಡಿಸ್ಕೌಂಟ್, ಶೇ.10 ರಷ್ಟು ತ್ವರಿತ ರಿಯಾಯಿತಿ ಮತ್ತು ಶೇ.10 ರಷ್ಟು ಕ್ಯಾಶ್‌ಬ್ಯಾಕ್ ಕೂಡ ಸಿಗುತ್ತದೆ. ಈ ಬಗ್ಗೆ ಇಲ್ಲಿದೆ ಹೆಚ್ಚಿನ ಮಾಹಿತಿ.
ಪ್ರಸ್ತುತ, ಅಮೆಜಾನ್ ಬ್ಲ್ಯಾಕ್ ಫ್ರೈಡೇ ಸೇಲ್ ಸಂಚಲನ ಸೃಷ್ಟಿಸುತ್ತಿದೆ. ಹಲವು ಪ್ರಸಿದ್ಧ ಕಂಪನಿಗಳ ಸ್ಮಾರ್ಟ್‌ಫೋನ್‌ಗಳು ಗ್ರಾಹಕರನ್ನು ಹೆಚ್ಚು ಆಕರ್ಷಿಸುತ್ತಿವೆ. ಈ ಪೈಕಿ ರಿಯಲ್‌ಮಿ GT 6T 5G ಮೊಬೈಲ್ ಸಹ ಒಂದಾಗಿದೆ. ಈ ಫೋನ್ 32 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಹೊಂದಿದೆ. ಇದು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 7+ ಜೆನ್ 3 ಪ್ರೊಸೆಸರ್‌ನಲ್ಲಿ ಕೆಲಸ ಮಾಡುತ್ತದೆ. ಜೊತೆಗೆ, 6.78 ಇಂಚಿನ ಡಿಸ್ಪ್ಲೇ, 512GB ಸ್ಟೋರೇಜ್, 5500mAh ಬ್ಯಾಟರಿ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ರಿಯಲ್‌ಮಿ GT 6T 5G ಫೋನಿನ ಬೆಲೆ ಮತ್ತು ಆಫರ್‌ಗಳು
ರಿಯಲ್‌ಮಿ GT 6T 5G ಫೋನ್ ನಾಲ್ಕು ಸ್ಟೋರೇಜ್ ರೂಪಾಂತರಗಳಲ್ಲಿ ಮಾರಾಟವಾಗುತ್ತಿದೆ. ನೀವು 8GB RAM + 128GB, 8GB RAM + 256GB, 12GB RAM + 256GB ಸ್ಟೋರೇಜ್ ಮತ್ತು 12GB RAM + 512GB ಸ್ಟೋರೇಜ್ ಆಯ್ಕೆಗಳಲ್ಲಿ ಖರೀದಿಸಬಹುದು. ಈ ಫೋನಿನ ಆರಂಭಿಕ ಬೆಲೆ 29,998 ರೂ. ಆಗಿದೆ.
ಅಮೆಜಾನ್ ಬ್ಲ್ಯಾಕ್ ಫ್ರೈಡೇ ಸೇಲ್‌ನಲ್ಲಿ ಫೋನಿನ 8GB RAM+256GB ಸ್ಟೋರೇಜ್ ರೂಪಾಂತರದ ಮೇಲೆ 5,000 ರೂ. ಡಿಸ್ಕೌಂಟ್ ಲಭ್ಯವಿದೆ. ನೀವು, ರಿಯಾಯಿತಿಯೊಂದಿಗೆ 32,998 ರೂ.ಗೆ ಕೊಳ್ಳಬಹುದು. ಜೊತೆಗೆ ಶೇ.10 ರಷ್ಟು ತ್ವರಿತ ರಿಯಾಯಿತಿ, ಶೇ.10 ರಷ್ಟು ಕ್ಯಾಶ್‌ಬ್ಯಾಕ್ ಮತ್ತು ನೋ ಕಾಸ್ಟ್ ಇಎಂಐ ಆಯ್ಕೆಯನ್ನು ನೀಡಲಾಗುತ್ತಿದೆ. ಈ ಫೋನ್ ಪ್ಲುಮಿಡ್ ಸಿಲ್ವರ್ ಮತ್ತು ರೇಜರ್ ಗ್ರೀನ್ ಬಣ್ಣಗಳಲ್ಲಿ ಲಭ್ಯವಿದೆ. ನೀವು, ಅಮೆಜಾನ್‌ನಲ್ಲಿ ಈ ಎಲ್ಲಾ ಆಫರ್‌ಗಳ ಲಾಭ ಪಡೆಯಬಹುದು.
ಈ ಸುದ್ದಿ ಓದಿದ್ದೀರಾ?: ಇಲ್ಲಿ ಕೇಳಿ..! ಆಧಾರ್ ಅಪ್ಡೇಟ್‌ಗೆ ಇದೇ ಲಾಸ್ಟ್ ಡೇಟ್! ಉಚಿತವಾಗಿ ಅಪ್ಡೇಟ್ ಮಾಡುವುದು ಹೇಗೆ?
ರಿಯಲ್‌ಮಿ GT 6T 5G ಫೋನಿನ ವೈಶಿಷ್ಟ್ಯಗಳು
ಡಿಸ್ಪ್ಲೇ ವಿವರ
ರಿಯಲ್‌ಮಿ GT 6T 5G ಮೊಬೈಲ್ 6.78 ಇಂಚಿನ ಅಮೋಲೆಡ್ ಡಿಸ್ಪ್ಲೇಯನ್ನು ಹೊಂದಿದೆ. ಇದು 2780 x 1264 ಪಿಕ್ಸೆಲ್ ರೆಸಲ್ಯೂಶನ್ ಬೆಂಬಲದೊಂದಿಗೆ ಬರುತ್ತದೆ. ಡಿಸ್ಪ್ಲೇಯು 120Hz ರಿಫ್ರೆಶ್ ದರ ಮತ್ತು 6000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಪಡೆದಿದೆ. ಇದು ಕಾರ್ನಿಂಗ್ ಗ್ಲಾಸ್ ವಿಕ್ಟಸ್ 2 ರಕ್ಷಣೆಯನ್ನು ಹೊಂದಿದೆ.
ಪ್ರೊಸೆಸರ್ ಸಾಮರ್ಥ್ಯ
ಕಂಪನಿಯು ರಿಯಲ್‌ಮಿ GT 6T 5G ಫೋನನ್ನು ಕ್ವಾಲ್ಕಾಮ್‌ನ ಸ್ನಾಪ್‌ಡ್ರಾಗನ್ 7+ ಜೆನ್ 3 ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಿದೆ. ಈ ಮೊಬೈಲ್ ಆಂಡ್ರಾಯ್ಡ್ 14 ಆಧಾರಿತ ರಿಯಲ್‌ಮಿ ಯುಐ 5.0 ಓಎಸ್‌ನಲ್ಲಿ ಕೆಲಸ ಮಾಡುತ್ತದೆ. ಇದು 12GB RAM ಮತ್ತು 512GB ಸ್ಟೋರೇಜ್ ಆಯ್ಕೆ ಒಳಗೊಂಡಿದೆ.

ಕ್ಯಾಮೆರಾ ಸೆಟಪ್
ರಿಯಲ್‌ಮಿ GT 6T 5G ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಫೋನಿನಲ್ಲಿ OIS ಬೆಂಬಲದೊಂದಿಗೆ 50 ಮೆಗಾಪಿಕ್ಸೆಲ್ ಸೋನಿ ಪ್ರಾಥಮಿಕ ಕ್ಯಾಮೆರಾ ಮತ್ತು 8 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಲಭ್ಯವಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, ಈ ಮೊಬೈಲ್ 32 ಮೆಗಾಪಿಕ್ಸೆಲ್ ಸೋನಿ ಫ್ರಂಟ್ ಕ್ಯಾಮೆರಾ ಹೊಂದಿದೆ.
ಬ್ಯಾಟರಿ ಮತ್ತು ಚಾರ್ಜಿಂಗ್
ರಿಯಲ್‌ಮಿ GT 6T 5G ಮೊಬೈಲ್ 5500mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬಿಡುಗಡೆಯಾಗಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 120W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಕೇವಲ 26 ನಿಮಿಷಗಳಲ್ಲಿ ಶೇ.100 ಸಂಪೂರ್ಣವಾಗಿ ಚಾರ್ಜ್ ಮಾಡಬಹುದು.
ಇತರೆ ವೈಶಿಷ್ಟ್ಯಗಳು
ರಿಯಲ್‌ಮಿ GT 6T 5G ಫೋನ್ ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, ಬ್ಲೂಟೂತ್ 5.2, ವೈಫೈ 6, ಜಿಪಿಎಸ್, ಯುಎಸ್‌ಬಿ 2.0 ಸಿ ಚಾರ್ಜಿಂಗ್ ಪೋರ್ಟ್ ಸೇರಿದಂತೆ ಹಲವು ಸೌಲಭ್ಯಗಳನ್ನು ಹೊಂದಿದೆ.


Click it and Unblock the Notifications








