ಕ್ರಿಸ್‌ಮಸ್ ಆಫರ್!..ಈ ಮೊಬೈಲ್ ಬೆಲೆಯಲ್ಲಿ ಭಾರೀ ಇಳಿಕೆ; 108MP ಕ್ಯಾಮೆರಾ!
ದೈತ್ಯ ಇ ಕಾಮರ್ಸ್ ತಾಣ ಅಮೆಜಾನ್ ಕ್ರಿಸ್‌ಮಸ್ ಪ್ರಯುಕ್ತ ಕ್ರಿಸ್‌ಮಸ್ ಹಾನರ್ ಡೇಸ್ (christmas HONOR days) ಮಾರಾಟವನ್ನು ಆಯೋಜಿಸಿದ್ದು, ಹಾನರ್ ಬ್ರ್ಯಾಂಡ್‌ನ ಮೊಬೈಲ್‌ಗಳಿಗೆ ಅತ್ಯುತ್ತಮ ಕೊಡುಗೆ ಘೋಷಿಸಿದೆ. ಈ ಸೇಲ್‌ನಲ್ಲಿ ಮುಖ್ಯವಾಗಿ ಹಾನರ್ 200 ಲೈಟ್ 5G (HONOR 200 Lite 5G) ಮೊಬೈಲ್ ಸಖತ್ ಡಿಸ್ಕೌಂಟ್ ಪಡೆದಿದ್ದು, 20,000ರೂ. ಒಳಗೆ ಖರೀದಿಸಬಹುದು.
ಹೌದು, ಅಮೆಜಾನ್ ಆಯೋಜಿಸಿರುವ ಕ್ರಿಸ್‌ಮಸ್ ಹಾನರ್ ಡೇಸ್ ಮಾರಾಟದಲ್ಲಿ ಹಾನರ್ 200 ಲೈಟ್ 5G (HONOR 200 Lite 5G) ಮೊಬೈಲ್ ಶೇ. 20% ರಷ್ಟು ಡಿಸ್ಕೌಂಟ್ ದರದಲ್ಲಿ ಕಾಣಿಸಿಕೊಂಡಿದ್ದು, ಈ ಮೊಬೈಲ್‌ನ 8 GB + 256 GB ವೇರಿಯಂಟ್ ಅನ್ನು ಖರೀದಿದಾರರು 19,998 ರೂ. ಗಳ ಆಫರ್ ದರದಲ್ಲಿ ಖರೀದಿಸಬಹುದು. ಇನ್ನು ಖರೀದಿದಾರರು ಲಭ್ಯ ಇರುವ ಬ್ಯಾಂಕ್ ಆಫರ್ ಹಾಗೂ ಎಕ್ಸ್‌ಚೇಂಜ್ ಕೊಡುಗೆ ಸಹ ಪಡೆದುಕೊಂಡರೆ, ಇನ್ನಷ್ಟು ರಿಯಾಯಿತಿ ಸಹ ಪಡೆಯುವ ಅವಕಾಶ ಇದೆ.

ಇನ್ನು ಹಾನರ್ 200 ಲೈಟ್ 5G ಫೋನ್ 108 ಮೆಗಾ ಪಿಕ್ಸಲ್ ಪ್ರಾಥಮಿಕ ಕ್ಯಾಮರಾ ಸೌಲಭ್ಯ ಪಡೆದಿದ್ದು, ಮೀಡಿಯಾ ಟೆಕ್ ಡೈಮೆನ್ಸಿಟಿ 6080 ಆಕ್ಟಾ ಕೋರ್ ಪ್ರೊಸೆಸರ್ ವೇಗವನ್ನು ಪಡೆದುಕೊಂಡಿದೆ. ಆಸಕ್ತ ಗ್ರಾಹಕರು HONOR 200 Lite 5G ಅನ್ನು ಅಮೆಜಾನ್‌ನಲ್ಲಿ ಸಖತ್ ಡಿಸ್ಕೌಂಟ್ ಬೆಲೆಗೆ ಖರೀದಿಸಬಹುದು. ಇನ್ನುಳಿದಂತೆ ಹಾನರ್ 200 ಲೈಟ್ 5G ಫೋನಿನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಡಿಸ್‌ಪ್ಲೇ ಡಿಸೈನ್ ಮಾಹಿತಿ
ಹಾನರ್ 200 ಲೈಟ್ 5G ಫೋನ್ 6.7 ಇಂಚಿನ FHD+ AMOLED ಡಿಸ್‌ಪ್ಲೇ ಪಡೆದಿದ್ದು, ಇದು 2412 x 1080 ಪಿಕ್ಸಲ್ ರೆಸಲ್ಯೂಶನ್ ಸೌಲಭ್ಯ ಒಳಗೊಂಡಿದೆ. ಹಾಗೆಯೇ 3240Hz PWM ಮಬ್ಬಾಗಿಸುವಿಕೆ, 2000 ನಿಟ್ಸ್ ಪೀಕ್ ಬ್ರೈಟ್ನೆಸ್ ಪಡೆದಿದೆ. ಇದರೊಂದಿಗೆ ಈ ಡಿಸ್‌ಪ್ಲೇಯು 93.7% ಸ್ಕ್ರೀನ್-ಟು-ಬಾಡಿ ಅನುಪಾತ ಹೊಂದಿದೆ.
ಯಾವ ಪ್ರೊಸೆಸರ್ ಪವರ್
ಹಾನರ್ 200 ಲೈಟ್ 5G ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6080 ಆಕ್ಟಾ ಕೋರ್ ಪ್ರೊಸೆಸರ್ ಪವರ್‌ನಲ್ಲಿ ಕೆಲಸ ಮಾಡಲಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 14 ಓಎಸ್ ಸಪೋರ್ಟ್ ಸಹ ಪಡೆದುಕೊಂಡಿದೆ. ಅಲ್ಲದೇ ಇದು 8GB + 256GB ವೇರಿಯಂಟ್ ಆಯ್ಕೆ ಪಡೆದಿದ್ದು, ಇದರೊಂದಿಗೆ 8GB HONOR RAM Turbo ಸೌಲಭ್ಯ ಸಹ ಒಳಗೊಂಡಿದೆ.
ತ್ರಿವಳಿ ಕ್ಯಾಮೆರಾ ಸೆನ್ಸಾರ್
ಹಾನರ್ 200 ಲೈಟ್ 5G ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಪಡೆದಿದ್ದು, ಆಯತಾಕಾರದ ಮಾಡ್ಯೂಲ್‌ನಲ್ಲಿ ಇರಿಸಲಾಗಿದೆ. ಈ ಫೋನಿನ ಪ್ರಾಥಮಿಕ ಕ್ಯಾಮೆರಾವು 108 ಮೆಗಾ ಪಿಕ್ಸಲ್ ಸೆನ್ಸಾರ್ ಸೌಲಭ್ಯ ಪಡೆದಿದೆ. ಅಲ್ಲದೇ ಸೆಕೆಂಡರಿ ಕ್ಯಾಮೆರಾವು 5MP ಅಲ್ಟ್ರಾವೈಡ್ ಲೆನ್ಸ್ ಮತ್ತು ತೃತೀಯ ಕ್ಯಾಮೆರಾವು 2MP ಮ್ಯಾಕ್ರೋ ಸೆನ್ಸಾರ್ ಅನ್ನು ಒಳಗೊಂಡಿದೆ. ಇದು 50 ಮೆಗಾ ಪಿಕ್ಸಲ್ ಸೆಲ್ಫಿ ಕ್ಯಾಮೆರಾ ಒಳಗೊಂಡಿದೆ.
ಬಿಗ್ ಬ್ಯಾಟರಿ ಬ್ಯಾಕ್‌ಅಪ್
ಹಾನರ್ 200 ಲೈಟ್ 5G ಫೋನ್ 4500mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಸಪೋರ್ಟ್ ಪಡೆದಿದ್ದು, ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒಳಗೊಂಡಿದೆ. ಅಲ್ಲದೇ ಇದು ವೈ-ಫೈ 5, ಬ್ಲೂಟೂತ್ 5.1, ಡ್ಯುಯಲ್ ನ್ಯಾನೋ ಸಿಮ್, ಸೈಡ್ ಫಿಂಗರ್‌ಪ್ರಿಂಟ್ ಸೆನ್ಸರ್‌ಗಳಂತಹ ಆಯ್ಕೆಗಳನ್ನು ಹೊಂದಿದೆ.


Click it and Unblock the Notifications








