Amazon: ಅಮೆಜಾನ್ ಕ್ರಿಕೆಟ್ ಸೀಸನ್ ಟಿವಿ ಸೇಲ್: 55 ಇಂಚಿನ 4K ಟಿವಿಗಳಿಗೆ 60% ವರೆಗೆ ರಿಯಾಯಿತಿ
ಸ್ಮಾರ್ಟ್‌ಟಿವಿಗಳು (smart tvs) ಈಗಂತೂ ಹಿಂದೆಂದಿಗಿಂತಲೂ ಭಿನ್ನವಾಗಿ ಕಾಣಿಸಿಕೊಳ್ಳುತ್ತಿವೆ. ಯಾಕೆಂದರೆ ಈ ಸ್ಮಾರ್ಟ್‌ಟಿವಿಗಳಲ್ಲಿ ವಿಶೇಷವಾದ ಆಕರ್ಷಕ ಫೀಚರ್ಸ್ ಅನ್ನು ನೀಡಲಾಗುತ್ತಿದ್ದು, ವಿವಿಧ ರೀತಿಯಲ್ಲಿ ಈ ಟಿವಿಯನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.
ಹೌದು, ನೀವು ಏನಾದರೂ ಈ ವೇಳೆ ಸ್ಮಾರ್ಟ್‌ಟಿವಿ ಖರೀದಿ ಮಾಡಲು ಇಚ್ಚಿಸಿದ್ರೆ ಕೂಡಲೇ ಖರೀದಿ ಮಾಡಿ. ಯಾಕೆಂದರೆ ಅಮೆಜಾನ್ (Amazon) ಇದೀಗ ಅಮೆಜಾನ್ ಕ್ರಿಕೆಟ್ ಸೀಸನ್ ಟಿವಿ ಸೇಲ್ (Amazon Cricket Season TV Sale) ಅನ್ನು ಘೋಷಣೆ ಮಾಡಿದ್ದು, ಈ ಸೇಲ್ ಮೇ 29 ರವರೆಗೆ ಇರುತ್ತದೆ. ಈ ಸೇಲ್ ನಲ್ಲಿ ಶೇಕಡಾ 60 ರಷ್ಟು ರಿಯಾಯಿತಿಯನ್ನು ಪಡೆಯಬಹುದಾಗಿದೆ. ಹಾಗಿದ್ರೆ, ತಡಯಾಕೆ ಬನ್ನಿ, ಯಾಬೆಲ್ಲಾ ಸ್ಮಾರ್ಟ್‌ಟಿವಿಗಳಿಗೆ ಏನೆಲ್ಲಾ ಆಫರ್ ಇದೆ ನೋಡೋಣ.

ಟಿಸಿಎಲ್ 4K QLED ಗೂಗಲ್ ಟಿವಿ (55T6G): ಈ 55 ಇಂಚಿನ ಯುಹೆಚ್‌ಡಿ ಸ್ಮಾರ್ಟ್ ಟಿವಿಯು QLED 60Hz ರಿಫ್ರೆಶ್ ರೇಟ್ ಆಯ್ಕೆಯ ಡಿಸ್‌ಪ್ಲೇ ಹೊಂದಿದ್ದು, 56W ಸೌಂಡ್ ಔಟ್‌ಪುಟ್ ಅನ್ನು ಹೊಂದಿದೆ. 70 ರಷ್ಟು ರಿಯಾಯಿತಿಯಲ್ಲಿ ಲಭ್ಯವಿದೆ. ಅಂದರೆ ನೀವು ಈ ಆಫರ್‌ನಲ್ಲಿ ಈ ಸ್ಮಾರ್ಟ್‌ಟಿವಿಯನ್ನು ಕೇವಲ 36,990 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ.
Vu GloLED 4K ಗೂಗಲ್ ಟಿವಿ (55GloLED): ಈ ಸ್ಮಾರ್ಟ್‌ಟಿವಿ 4K ಸಾಮರ್ಥ್ಯದ 60Hz ರಿಫ್ರೆಶ್ ರೇಟ್ ಆಯ್ಕೆಯ ಎಲ್‌ಇಡಿ ಡಿಸ್‌ಪ್ಲೇ ಹೊಂದಿದೆ. ಇದರ ಜೊತೆಗೆ ಬೃಹತ್ 104W ಸೌಂಡ್ ಔಟ್‌ಪುಟ್ ಅನ್ನು ನೀಡಲಿದ್ದು, 42 ಶೇಕಡಾ ರಿಯಾಯಿತಿಯೊಂದಿಗೆ ನೀವೀಗ ಇದನ್ನು 37,999 ರೂ.ಗಳಿಗೆ ಈ ವಿಶೇಷ ಸೇಲ್‌ನಲ್ಲಿ ಖರೀದಿ ಮಾಡಬಹುದಾಗಿದೆ.

ಶಿಯೋಮಿ X ಸರಣಿ ಗೂಗಲ್ ಟಿವಿ (L55M8-A2IN): ಈ ಸ್ಮಾರ್ಟ್ ಟಿವಿಯು 4K ಡಾಲ್ಬಿ ವಿಷನ್-ಕಂಪ್ಲೈಂಟ್ 60Hz ರಿಫ್ರೆಶ್ ರೇಟ್ ಇರುವ ಡಿಸ್‌ಪ್ಲೇ ಹೊಂದಿದ್ದು, 30W ಸೌಂಡ್ ಔಟ್‌ಪುಟ್ ನೀಡಲಿದೆ. ಈ ಟಿವಿ ಸಹ ಅಮೆಜಾನ್‌ನ ಏಲ್‌ನಲ್ಲಿ ಬರೋಬ್ಬರಿ 31 ರಷ್ಟು ರಿಯಾಯಿತಿಯೊಂದಿಗೆ 37,999 ರೂ.ಗಳ ಆಫರ್ ಬೆಲೆಗೆ ಲಭ್ಯ ಇದೆ.
ತೋಷಿಬಾ 4K QLED ಗೂಗಲ್ ಟಿವಿ (55M550MP): ಈ ಸ್ಮಾರ್ಟ್‌ಟಿವಿ ಸಹ QLED 60Hz ರಿಫ್ರೆಶ್ ರೇಟ್ ಇರುವ ಡಿಸ್‌ಪ್ಲೇ ಹೊಂದಿದ್ದು, 49W ಸೌಂಡ್ ಔಟ್‌ಪುಟ್ ಅನ್ನು ನೀಡಲಿದೆ. ಈ ಸ್ಮಾರ್ಟ್‌ಟಿವಿ ಖರೀದಿಯಲ್ಲಿ ನಾಲ್ಕು ವರ್ಷಗಳ ವಾರಂಟಿಯನ್ನು ಪಡೆಯಬಹುದು. ಅಲ್ಲದೆ ಎಲ್ಲಾ ಟಿವಿಗಳ ಖರೀದಿಯಲ್ಲೂ ಸಹ ಆಯ್ದ ಬ್ಯಾಂಕ್ ಕಾರ್ಡ್‌ಗಳ ಮೂಲಕ ಹೆಚ್ಚುವರಿ ರಿಯಾಯಿತಿಗಳನ್ನು ಸಹ ಪಡೆದುಕೊಳ್ಳಬಹುದಾಗಿದೆ. ಇನ್ನು ಈ ಸ್ಮಾರ್ಟ್‌ಟಿವಿ 43 ರಷ್ಟು ರಿಯಾಯಿತಿಯೊಂದಿಗೆ ನೀವೀಗ 39,990 ರೂ.ಗಳಿಗೆ ಕೊಂಡುಕೊಳ್ಳಬಹುದಾಗಿದೆ.
ಹೈಸೆನ್ಸ್ 4K ಗೂಗಲ್ ಟಿವಿ (55A6K): ಈ ಸ್ಮಾರ್ಟ್‌ಟಿವಿ ಸ್ಪೋರ್ಟಿಂಗ್ ಹೆಚ್‌ಎಸ್‌ಆರ್ 120 ಮೋಡ್, ಯುಹೆಚ್‌ಡಿ ಎಲ್‌ಇಡಿ ಸ್ಕ್ರೀನ್ ಮತ್ತು ಎಲ್‌ಎಲ್‌ಎಮ್ ಮತ್ತು ವಿಆರ್‌ಆರ್ ಮೋಡ್ ಹೊಂದಿದ್ದು, 24W ಸೌಂಡ್ ಔಟ್‌ಪುಟ್ ಆಯ್ಕೆ ಪಡೆದುಕೊಂಡಿದೆ. ಈ ಪ್ರಮುಖ ಫೀಚರ್ಸ್ ಆಯ್ಕೆ ಪಡೆದಿರುವ ಈ ಟಿವಿಯನ್ನು 46 ರಷ್ಟು ರಿಯಾಯಿತಿಯೊಂದಿಗೆ 34,990ರೂ.ಗಳಲ್ಲಿ ಖರೀದಿ ಮಾಡಬಹುದಾಗಿದೆ.

ಇನ್ನು ಈ ವೇಳೆ ನೀವೇನಾದರೂ ದುಬಾರಿ ಬೆಲೆಯ ಸ್ಮಾರ್ಟ್‌ಟಿವಿ ಖರೀದಿ ಮಾಡಲು ಮುಂದಾದರೆ ಸ್ಯಾಮ್‌ಸಂಗ್ ಕ್ರಿಸ್ಟಲ್ ಐಸ್ಮಾರ್ಟ್ 4K ಅಲ್ಟ್ರಾ ಹೆಚ್‌ಡಿ ಸ್ಮಾರ್ಟ್ ಟಿವಿ (UA55CUE60AKLXL) ಅಥವಾ ಎಲ್‌ಜಿ 4K ಅಲ್ಟ್ರಾ ಹೆಚ್‌ಡಿ ಸ್ಮಾರ್ಟ್ ಎಲ್‌ಇಡಿ ಟಿವಿ (55UR7500PSC) ಅನ್ನು ಖರೀದಿ ಮಾಡಬಹುದು. ಯಾಕೆಂದರೆ ಅಮೆಜಾನ್‌ನಲ್ಲಿ ಈ ಟಿವಿಗಳು 42,990 ರೂ.ಗಳಿಗೆ ಲಭ್ಯ ಇದ್ದು, ಆಯ್ದ ಬ್ಯಾಂಕ್ ಕಾರ್ಡ್ ಆಫರ್‌ಗಳ ಮೂಲಕ ಸ್ಯಾಮ್‌ಸಂಗ್ ಟಿವಿಗೆ 2,250 ರೂ.ಗಳ ರಿಯಾಯಿತಿಯನ್ನು ಪಡೆಯಬಹುದು. ಹಾಗೆಯೇ ಎಲ್‌ಜಿ ಟಿವಿಗೆ ಎಲ್ಲಾ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಮೇಲೆ 3,000ರೂ.ಗಳ ತ್ವರಿತ ರಿಯಾಯಿತಿಯನ್ನು ಪಡೆಯಬಹುದಾಗಿದೆ.


Click it and Unblock the Notifications








