Home
Deal of the day

ಬಜೆಟ್ ಬೆಲೆಯ ಟೆಕ್ನೋ ಸ್ಮಾರ್ಟ್‌ಫೋನ್‌ಗಳು ಈಗ ಮತ್ತಷ್ಟು ಅಗ್ಗ!

ಜನಪ್ರಿಯ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ಎನಿಸಿಕೊಂಡಿರುವ ಅಮೆಜಾನ್, ಆಕರ್ಷಕ ಕೊಡುಗೆಗಳ ಮೂಲಕ ಗ್ರಾಹಕರನ್ನು ತನ್ನತ್ತ ಆಕರ್ಷಿಸಿದೆ. ಮುಖ್ಯವಾಗಿ ವಿಶೇಷ ಮಾರಾಟ ಮೇಳಗಳನ್ನು ಆಯೋಜಿಸುವ ಮೂಲಕ ಆನ್‌ಲೈನ್ ಶಾಪಿಂಗ್ ಗ್ರಾಹಕರ ಫೇವರೇಟ್ ಮಾರುಕಟ್ಟೆ ಆಗಿ ಕಾಣಿಸಿಕೊಂಡಿದೆ. ಅದರಲ್ಲಿಯೂ ಸ್ಮಾರ್ಟ್‌ಫೋನ್‌ ಗಳಿಗೆ ಆಕರ್ಷಕ ಕೊಡುಗೆ ನೀಡಿ ಮೊಬೈಲ್ ಪ್ರಿಯರನ್ನು ಆಕರ್ಷಿಸುವ ಪ್ರಯತ್ನ ಮಾಡುತ್ತದೆ. ಪ್ರಸ್ತುತ ಅಮೆಜಾನ್‌ ಫ್ಯಾಬ್‌ ಫೋನ್‌ ಫೆಸ್ಟ್‌ ಸೇಲ್ ಆಯೋಜಿಸಿದೆ.

ಬಜೆಟ್ ಬೆಲೆಯ ಟೆಕ್ನೋ ಸ್ಮಾರ್ಟ್‌ಫೋನ್‌ಗಳು ಈಗ ಮತ್ತಷ್ಟು ಅಗ್ಗ!

ಅಮೆಜಾನ್‌ ತಾಣದಲ್ಲಿ ಸದ್ಯ ಅಮೆಜಾನ್‌ ಫ್ಯಾಬ್‌ ಫೋನ್‌ ಫೆಸ್ಟ್‌ ಸೇಲ್‌ ಚಾಲ್ತಿ ಇದೆ. ಈ ಸೇಲ್ ಇದೇ ಫೆಬ್ರುವರಿ 28ರ ವರೆಗೂ ಇರಲಿದೆ. ಈ ವೇಳೆ ಅಮೆಜಾನ್ ತಾಣವು ಕೆಲವು ಪ್ರಮುಖ ಕಂಪನಿಗಳ ಜನಪ್ರಿಯ ಫೋನ್‌ಗಳಿಗೆ ಆಕರ್ಷಕ ಡಿಸ್ಕೌಂಟ ಲಭ್ಯ ಮಾಡಿದೆ. ಹಾಗೆಯೇ ಆಯ್ದ ಬ್ಯಾಂಕ್‌ಗಳಿಂದ ಇನ್‌ಸ್ಟಂಟ್ ರಿಯಾಯಿತಿ ಸಹ ಸಿಗಲಿದೆ. ಹಾಗೆಯೇ ಟೆಕ್ನೋ ಸಂಸ್ಥೆಯ ಆಯ್ದ ಫೋನ್‌ ಗಳಿಗೂ ಭರ್ಜರಿ ರಿಯಾಯಿತಿ ಲಭ್ಯ ಇದೆ. ಹಾಗಾದರೇ ಅಮೆಜಾನ್‌ನಲ್ಲಿ ಸದ್ಯ ರಿಯಾಯಿತಿ ದರದಲ್ಲಿ ಗಮನ ಸೆಳೆದ ಫೋನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಟೆಕ್ನೋ ಸ್ಪಾರ್ಕ್‌ 8T ಸ್ಮಾರ್ಟ್‌ಫೋನ್‌
ಟೆಕ್ನೋ ಸ್ಪಾರ್ಕ್‌ 8T ಸ್ಮಾರ್ಟ್‌ಫೋನ್‌ 1080 x 2408 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.6 ಇಂಚಿನ ಪೂರ್ಣ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 20:9 ಅನುಪಾತವನ್ನು ಒಳಗೊಂಡಿದ್ದು, 401ppi ಪಿಕ್ಸಲ್ ಸಾಂದ್ರತೆಯನ್ನು ಹೊಂದಿದೆ. ಜೊತೆಗೆ 500 nits ಬ್ರೈಟ್ನೆಸ್‌ ಸಾಮರ್ಥ್ಯವನ್ನು ಪಡೆದಿದೆ. ಈ ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಹಿಲಿಯೋ G35 SoC ಪ್ರೊಸೆಸರ್‌ ಬಲವನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 ಸಪೋರ್ಟ್‌ ಸಹ ಪಡೆದಿದೆ. ಜೊತೆಗೆ 4 GB RAM + 64 GB ವೇರಿಯಂಟ್‌ ಆಯ್ಕೆಯನ್ನು ಹೊಂದಿದೆ. ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಅಪ್ ಅನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಇದಲ್ಲದೆ 8 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಹಾಗೆಯೇ ಟೆಕ್ನೋ ಸ್ಪಾರ್ಕ್‌ 8T ಸ್ಮಾರ್ಟ್‌ಫೋನ್‌ 5,000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಉತ್ತಮ ಸಾಮರ್ಥ್ಯದ ಚಾರ್ಜಿಂಗ್ ಸೌಲಭ್ಯ ನೀಡಲಿದೆ.

ಟೆಕ್ನೋ ಸ್ಪಾರ್ಕ್ 8 ಸ್ಮಾರ್ಟ್‌ಫೋನ್‌
ಟೆಕ್ನೋ ಸ್ಪಾರ್ಕ್ 8 ಸ್ಮಾರ್ಟ್‌ಫೋನ್‌ 6.52 ಹೆಚ್‌ಡಿ + ಡಾಟ್ ನಾಚ್ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 120 Hz ಟಚ್ ರೆಸ್ಪಾನ್ಸ್‌ ರೇಟ್‌ ಅನ್ನು ಹೊಂದಿದೆ. ಫೋನ್ ಮೀಡಿಯಾ ಟೆಕ್ A25 SoC ಪ್ರೊಸೆಸರ್‌ ಸಾಮರ್ಥ್ಯವನ್ನು ಹೊಂದಿದೆ. ಇದು ಆಂಡ್ರಾಯ್ಡ್ 11 ಗೋ ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 2GB RAM ಮತ್ತು 64GB ಇಂಟರ್‌ ಸ್ಟೋರೇಜ್‌ ಆಯ್ಕೆಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ 16 ಮೆಗಾಪಿಕ್ಸೆಲ್‌ ಎಐ ಡ್ಯುಯಲ್ ಹೈ-ರೆಸಲ್ಯೂಶನ್ ಕ್ಯಾಮೆರಾ ಹೊಂದಿದೆ. ಜೊತೆಗೆ 8 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಈ ಕ್ಯಾಮೆರಾ ಫೀಚರ್ಸ್‌ಗಳಲ್ಲಿ 1080p ಟೈಮ್-ಲ್ಯಾಪ್ಸ್ ಫೋಟೋಗ್ರಫಿ, ಸ್ಮೈಲ್ ಕ್ಯಾಪ್ಚರ್, ಪನೋರಮಾ 120fps ಸ್ಲೋ ಮೋಷನ್ ಪ್ರಯೋಜನ ಸಿಗಲಿದೆ. ಹಾಗೆಯೇ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

ಟೆಕ್ನೋ ಸ್ಮಾರ್ಕ್‌ 7 ಸ್ಮಾರ್ಟ್‌ಫೋನ್‌
ಟೆಕ್ನೋ ಸ್ಪಾರ್ಕ್ 7 ಸ್ಮಾರ್ಟ್‌ಫೋನ್‌ 720 x 1,600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.52-ಇಂಚಿನ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. 2GB RAM ರೂಪಾಂತರವು ಕ್ವಾಡ್-ಕೋರ್ ಮೀಡಿಯಾ ಟೆಕ್ ಹಿಲಿಯೊ A20 SoC ಹೊಂದಿದ್ದರೆ, 3 GB RAM ರೂಪಾಂತರವು ಆಕ್ಟಾ ಕೋರ್ ಮೀಡಿಯಾ ಟೆಕ್ ಹಿಲಿಯೊ A25 SoC ಪ್ರೊಸೆಸರ್‌ ಹೊಂದಿದೆ. ಇದು ಆಂಡ್ರಾಯ್ಡ್ 11 ನಲ್ಲಿ ಕಾರ್ಯ ನಿರ್ವಹಿಸಲಿದೆ. ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಅಪ್ ಅನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 16 ಮೆಗಾ ಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಹಾಗೆಯೇ ಈ ಫೋನ್ 6,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

ಟೆಕ್ನೋ ಸ್ಪಾರ್ಕ್ ಗೋ 2021 ಸ್ಮಾರ್ಟ್‌ಫೋನ್‌
ಟೆಕ್ನೋ ಸ್ಪಾರ್ಕ್ ಗೋ 2021 ಸ್ಮಾರ್ಟ್‌ಫೋನ್‌ 720x1,600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.52 ಇಂಚಿನ ಹೆಚ್‌ಡಿ + ಡಿಸ್‌ಪ್ಲೇ ಹೊಂದಿದೆ. ಇದು ಕ್ವಾಡ್-ಕೋರ್ ಮೀಡಿಯಾ ಟೆಕ್ ಹಿಲಿಯೊ A20 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್ 10 (ಗೋ ಎಡಿಷನ್) ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 2 GB RAM ಮತ್ತು 32 GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. ಹಾಗೆಯೇ ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ಹೊಂದಿದೆ. ಇದರೊಂದಿಗೆ ಈ ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ.

ಟೆಕ್ನೋ ಸ್ಪಾರ್ಕ್ 8 ಪ್ರೊ ಸ್ಮಾರ್ಟ್‌ಫೋನ್‌
ಟೆಕ್ನೋ ಸ್ಪಾರ್ಕ್ 8 ಪ್ರೊ ಸ್ಮಾರ್ಟ್‌ಫೋನ್‌ 1,080 x 2,460 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.8 ಫುಲ್‌ HD + ಡಿಸ್‌ಪ್ಲೇ ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್‌ ಹಿಲಿಯೋ G85 SoC ಪ್ರೊಸೆಸರ್‌ ಬಲವನ್ನು ಪಡೆದಿದೆ. ಇದು ಆಂಡ್ರಾಯ್ಡ್‌ 11 ನಲ್ಲಿ HiOS v7.6 ನೊಂದಿಗೆ ಕಾರ್ಯ ನಿರ್ವಹಿಸುತ್ತದೆ. ಇದಲ್ಲದೆ ಮೆಮೊರಿ ಕಾರ್ಡ್‌ ಮೂಲಕ 256 GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸಬಹುದಾಗಿದೆ. ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್‌ 5,000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 33W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ.

English summary
Amazon Fab Phones Fest 2022: Best Deals On These Tecno Phones.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+