Home
Deal of the day

ಹೆಚ್‌ಪಿ ಪ್ರಿಂಟರ್‌ಗಳಿಗೆ ಅಮೆಜಾನ್‌ ಸೇಲ್‌ನಲ್ಲಿ ಬೊಂಬಾಟ್‌ ರಿಯಾಯಿತಿ!

ಜನಪ್ರಿಯ ಇ ಕಾಮರ್ಸ್‌ ತಾಣ ಅಮೆಜಾನ್‌ ವಿಶೇಷ ರಿಯಾಯಿತಿ ಸೇಲ್‌ಗಳ ಮೂಲಕ ಗ್ರಾಹಕರ ಗಮನ ಸೆಳೆಯುತ್ತ ಮುನ್ನಡೆದಿದೆ. ಮುಖ್ಯವಾಗಿ ಹಬ್ಬದ ದಿನಗಳಂದು ಹಾಗೂ ಮಂತ್ ಎಂಡ್ ವೇಳೆ ಸೇಲ್‌ ಮೇಳ ಆಯೋಜಿಸುತ್ತದೆ. ಅದೇ ರೀತಿ ಸದ್ಯ ಅಮೆಜಾನ್ ತಾಣವು ಆಯೋಜಿಸಿರುವ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2021 ಪ್ರಾರಂಭಿಸಿದ್ದು, ಈ ಮೂಲಕ ಆನ್‌ಲೈನ್ ಶಾಪಿಂಗ್ ಪ್ರಿಯ ಗ್ರಾಹಕರನ್ನು ಆಕರ್ಷಿಸಿದೆ.

ಹೆಚ್‌ಪಿ ಪ್ರಿಂಟರ್‌ಗಳಿಗೆ ಅಮೆಜಾನ್‌ ಸೇಲ್‌ನಲ್ಲಿ ಬೊಂಬಾಟ್‌ ರಿಯಾಯಿತಿ!

ಹೌದು, ಅಮೆಜಾನ್ ಪ್ಲಾಟ್‌ಫಾರ್ಮ್ ಇದೇ ಅಕ್ಟೋಬರ್ 3 ರಿಂದ 'ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2021' ಅನ್ನು ಪ್ರಾರಂಭಿಸಿದೆ. ಈ ಸೇಲ್ ಮೇಳದಲ್ಲಿ ಎಲ್ಲ ಬಗೆಯ ಉತ್ಪನ್ನಗಳಿಗೆ ಭರ್ಜರಿ ಕೊಡುಗೆಗಳನ್ನು ತಿಳಿಸಿದೆ. ಆ ಪೈಕಿ ಗ್ಯಾಡ್ಜೆಟ್ಸ್‌ ಉತ್ಪನ್ನಗಳಿಗೆ ಹೆಚ್ಚಿನ ರಿಯಾಯಿತಿ ತಿಳಿಸಿದೆ. ಸ್ಮಾರ್ಟ್‌ಫೋನ್‌, ಸ್ಪೀಕರ್, ಲ್ಯಾಪ್‌ಟಾಪ್‌, ಹೆಡ್‌ಫೋನ್‌ಗಳ ಜೊತೆಗೆ ಪ್ರಿಂಟರ್‌ ಡಿವೈಸ್‌ಗಳಿಗೂ ಬೊಂಬಾಟ್‌ ಕೊಡುಗೆ ನೀಡಿದೆ.

ಹೆಚ್‌ಪಿ ಪ್ರಿಂಟರ್‌ಗಳಿಗೆ ಅಮೆಜಾನ್‌ ಸೇಲ್‌ನಲ್ಲಿ ಬೊಂಬಾಟ್‌ ರಿಯಾಯಿತಿ!

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳಿಗೆ ವಿಶೇಷ ಕೊಡುಗೆ ಇದೆ. ಪ್ರಮುಖ ಬ್ರ್ಯಾಂಡ್‌ಗಳ ಆಯ್ದ ಪ್ರಿಂಟರ್ಸ್ ಡಿವೈಸ್‌ಗಳಿಗೆ ಆಕರ್ಷಕ ಡಿಸ್ಕೌಂಟ್‌ ಸಿಗಲಿದೆ. ಇದರೊಂದಿಗೆ ಆಯ್ದ ಬ್ಯಾಂಕ್‌ಗಳಿಂದಲೂ ಇನ್‌ಸ್ಟಂಟ್ ರಿಯಾಯಿತಿ ಸಿಗಲಿದೆ. ಹಾಗಾದರೇ ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್‌ನಲ್ಲಿ ಆಕರ್ಷಕ ರಿಯಾಯಿತಿ ಪಡೆದ ಪ್ರಿಂಟರ್ಸ್ ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಹೆಚ್‌ಪಿ ಇಂಕ್ ಟ್ಯಾಂಕ್ 315 ಕಲರ್ ಪ್ರಿಂಟರ್
ಹೆಚ್‌ಪಿ ಕಂಪನಿಯ ಈ ಪ್ರಿಂಟರ್ ಆಕರ್ಷಕ ಫೀಚರ್ಸ್‌ಗಳನ್ನು ಒಳಗೊಂಡಿದೆ. ಪ್ರಿಂಟ್, ಸ್ಕ್ಯಾನ್ ಮತ್ತು ಕಾಪಿ ಕೆಲಸಗಳನ್ನು ನಿರ್ವಹಿಸುತ್ತದೆ. ಹೈ ವ್ಯಾಲೂಮ್ ಪ್ರಿಂಟಿಂಗ್ ಸೌಕರ್ಯ ಪಡೆದಿದ್ದು, ಪ್ರತಿ ಪೇಜ್‌ಗೆ ತಗಲುವ ವೆಚ್ಚ ಕಪ್ಪು ಬಣ್ಣಕ್ಕೆ 10ಪೈಸೆ ಮತ್ತು ಕಲರ್ ಪ್ರಿಂಟ್‌ಗೆ 20ಪೈಸೆ ಎನ್ನಲಾಗಿದೆ. ಹೈ ಸ್ಪೀಡ್ USB 2.0 ಕನೆಕ್ಟಿವಿಟಿ ಸೌಲಭ್ಯವನ್ನು ಒಳಗೊಂಡಿದೆ. A4, B5, A6, DL ಪೇಜ್ ಆಯ್ಕೆಗಳನ್ನು ಪಡೆದಿದ್ದು, ಇದು ಬಾರ್ಡರ್ ಲೆಸ್‌ ಪ್ರಿಂಟ್ ಆಯ್ಕೆ ಒಳಗೊಂಡಿದೆ.

ಹೆಚ್‌ಪಿ ಇಂಕ್ ಟ್ಯಾಂಕ್ 410 ವೈಫೈ ಕಲರ್ ಪ್ರಿಂಟರ್
ಹೆಚ್‌ಪಿ ಇಂಕ್ ಟ್ಯಾಂಕ್ 410 ಪ್ರಿಂಟರ್ ಕಲರ್ ಪ್ರಿಂಟರ್ ಆಗಿದ್ದು, ವೈಫೈ ಸೌಲಭ್ಯ ಪಡೆದಿದೆ. ಆಫೀಸ್ ಮತ್ತು ಮನೆ ಬಳಕೆಗೆ ಇದು ಅತ್ಯುತ್ತಮ ಪ್ರಿಂಟರ್ ಎನಿಸಿಕೊಂಡಿದೆ. ಪ್ರತಿ ಪೇಜ್‌ಗೆ ತಗಲುವ ವೆಚ್ಚ ಬ್ಲ್ಯಾಕ್ ಎಂಡ್ ವೈಟ್ ಪ್ರಿಂಟ್ ಗೆ ಜಸ್ಟ್‌ 10 ಪೈಸೆ ಮತ್ತು ಕಲರ್ ಪ್ರಿಂಟ್‌ಗೆ 20 ಪೈಸೆ ಆಗಲಿದೆ. ವೈ ಫೈ, ಪ್ರಿಂಟ್, ಸ್ಕ್ಯಾನ್ ಮತ್ತು ಕಾಪಿ ಸೌಲಭ್ಯಗಳನ್ನು ಒಳಗೊಂಡಿದೆ. ಸ್ಮಾರ್ಟ್‌ಫೋನ್‌ಗಳಿಗೂ ಕನೆಕ್ಟ್ ಮಾಡುವ ಆಯ್ಕೆಗಳನ್ನು ಇದು ಪಡೆದಿದೆ.

ಹೆಚ್‌ಪಿ ಲೇಸರ್‌ ಜೆಟ್‌ 126a ಪ್ರಿಂಟರ್
ಹೆಚ್‌ಪಿ ಕಂಪನಿಯು ಭಿನ್ನ ಶ್ರೇಣಿಯ ಪ್ರಿಂಟರ್‌ಗಳನ್ನು ಲಿಸ್ಟ್‌ ಹೊಂದಿದ್ದು, ಆ ಪೈಕಿ ಹೆಚ್‌ಪಿ ಲೇಸರ್‌ ಜೆಟ್‌ 126a ಸಹ ಒಂದಾಗಿದೆ. ಇದು ಸಹ ಪ್ರಿಂಟ್, ಸ್ಕ್ಯಾನ್ ಮತ್ತು ಕಾಪಿ ಸೌಲಭ್ಯಗಳನ್ನು ಒಳಗೊಂಡಿದೆ. ಇದರ ಪ್ರಿಂಟ್ ಸ್ಪೀಡ್ 20 PPM ಆಗಿದೆ. ಸ್ಮಾರ್ಟರ್ ಇಂಟರ್‌ಫೇಸ್‌ ಆಯ್ಕೆ ಹೊಂದಿದ್ದು, ಸರಳ ಮತ್ತು ವೇಗವಾಗಿ ಪ್ರಿಂಟ್ ಪಡೆಯಬಹುದು. ಲೇಸರ್ ಪ್ರಿಂಟಿಂಗ್ ತಂತ್ರಜ್ಞಾನ್ ಹೊಂದಿದೆ.

ಹೆಚ್‌ಪಿ ಡೆಸ್ಕ್‌ ಜೆಟ್‌ 2331 ಕಲರ್ ಪ್ರಿಂಟರ್
ಹೆಚ್‌ಪಿ ಡೆಸ್ಕ್‌ ಜೆಟ್‌ 2331 ಕಲರ್ ಪ್ರಿಂಟರ್ ಸಹ ಆಫೀಸ್‌ ಬಳಕೆಗೆ ಮತ್ತು ಮನೆಯ ಬಳಕೆಗೆ ಅತ್ಯುತ್ತಮ ಡಿವೈಸ್‌ ಆಗಿದೆ. ಹೆಚ್‌ಪಿ ಸ್ಮಾರ್ಟ್‌ ಆಪ್‌ ಇದ್ದು, ಯುಎಸ್‌ಬಿಯೊಂದಿಗೆ ಪಿಸಿಗೆ ಕನೆಕ್ಟ್ ಮಾಡಬಹುದು. B5, A4, A6, DL ಪೇಜ್‌ ಆಯ್ಕೆಗಳ ಸಪೋರ್ಟ್‌ ಪಡೆದಿದೆ. ಹೈ ಸ್ಪೀಡ್ USB 2.0 ಕನೆಕ್ಟಿವಿಟಿ ಸೌಲಭ್ಯವನ್ನು ಒಳಗೊಂಡಿದೆ. ಇದು ಇಂಕ್ ಜೆಟ್‌ ತಂತ್ರಾಜ್ಞಾನದಲ್ಲಿ ಕಾರ್ಯನಿರ್ವಹಿಸುತ್ತದೆ.

ಹೆಚ್‌ಪಿ ಇಂಕ್ ಟ್ಯಾಂಕ್ 415 ವೈಫೈ ಕಲರ್ ಪ್ರಿಂಟರ್
ಹೆಚ್‌ಪಿ ಇಂಕ್ ಟ್ಯಾಂಕ್ 415 ವೈಫೈ ಕಲರ್ ಪ್ರಿಂಟರ್ ಹೆಚ್ಚಿನ ಸಾಮರ್ಥ್ಯದ ಟ್ಯಾಂಕ್ ಆಯ್ಕೆ ಒಳಗೊಂಡಿದೆ. ಪ್ರತಿ ಪೇಜ್‌ಗೆ ತಗಲುವ ವೆಚ್ಚ ಬ್ಲ್ಯಾಕ್ ಎಂಡ್ ವೈಟ್ ಪ್ರಿಂಟ್ ಗೆ ಜಸ್ಟ್‌ 10 ಪೈಸೆ ಮತ್ತು ಕಲರ್ ಪ್ರಿಂಟ್‌ಗೆ 20 ಪೈಸೆ ಆಗಲಿದೆ. ಈ ಪ್ರಿಂಟರ್ A4, B5, A6, DL ಪೇಜ್‌ ಆಯ್ಕೆಗಳನ್ನು ಒಳಗೊಂಡಿದ್ದು, ಆಪ್‌, ವೈ ಫೈ ಹಾಗೂ ಯುಎಸ್‌ಬಿ ಮೂಲಕ ಕನೆಕ್ಟ್ ಮಾಡಬಹುದಾಗಿದೆ. ಹಾಗೆಯೇ ಸ್ಮಾರ್ಟ್‌ಫೋನ್‌ಗೂ ಸಹ ಕನೆಕ್ಟ್ ಮಾಡಬಹುದಾಗಿದೆ.

English summary
Amazon Great Indian Festival 2021: Attractive Discount On HP Printers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+