Home
Deal of the day

Amazon ಸೇಲ್‌ನಲ್ಲಿ ಈ ಕ್ಯಾಮೆರಾ ಫೋನ್‌ಗಳಿಗೆ ಬೊಂಬಾಟ್ ಆಫರ್!

ಇ ಕಾಮರ್ಸ್‌ ದೈತ್ಯ ಅಮೆಜಾನ್ ಬೆಳಕಿನ ಹಬ್ಬ ದೀಪಾವಳಿ ಪ್ರಯುಕ್ತ ಆಯೋಜಿಸಿರುವ 'ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2021' ಸದ್ಯ ಚಾಲ್ತಿ ಇದೆ. ಸೇಲ್‌ನಲ್ಲಿ ಪ್ರಮುಖ ಮೊಬೈಲ್‌ ಬ್ರ್ಯಾಂಡ್‌ಗಳ ಆಯ್ದ ಸ್ಮಾರ್ಟ್‌ಫೋನ್‌ಗಳು ಆಕರ್ಷಕ ಡಿಸ್ಕೌಂಟ್‌ ಪಡೆದಿವೆ. ಆ ಪೈಕಿ ಅಧಿಕ ಕ್ಯಾಮೆರಾ ಸೆನ್ಸಾರ್, ಬಿಗ್ ಬ್ಯಾಟರಿ ಬ್ಯಾಕ್‌ಅಪ್‌, ಹೈ ಎಂಡ್‌ ಪ್ರೊಸೆಸರ್‌ ಸ್ಮಾರ್ಟ್‌ಫೋನ್‌ಗಳು ಭರ್ಜರಿ ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿವೆ.

Amazon ಸೇಲ್‌ನಲ್ಲಿ ಈ ಕ್ಯಾಮೆರಾ ಫೋನ್‌ಗಳಿಗೆ ಬೊಂಬಾಟ್ ಆಫರ್!

ಅಮೆಜಾನ್ ಇ ಕಾಮರ್ಸ್‌ನ ಹಬ್ಬದ ಸೇಲ್‌ನಲ್ಲಿ ಗ್ಯಾಡ್ಜೆಟ್ಸ್‌ ಸೇರಿದಂತೆ ಇತರೆ ಉತ್ಪನ್ನಗಳಿಗೂ ಹೆಚ್ಚಿನ ಡಿಸ್ಕೌಂಟ್‌ ತಿಳಿಸಲಾಗಿದೆ. ಆದರೆ ಮುಖ್ಯವಾಗಿ ಸ್ಮಾರ್ಟ್‌ಫೋನ್‌ಗಳಿಗೆ ವಿಶೇಷ ರಿಯಾಯಿತಿ ನೀಡಲಾಗಿದೆ. ಅದರಲ್ಲಿಯೂ ಇತ್ತೀಚಿಗೆ ಟ್ರೆಂಡ್‌ನಲ್ಲಿರುವ 48 ಮೆಗಾ ಪಿಕ್ಸಲ್ ಮುಖ್ಯ ಕ್ಯಾಮೆರಾ ಸೆನ್ಸಾರ್ ಪಡೆದ ಸ್ಮಾರ್ಟ್‌ಫೋನ್‌ಗಳು ಸಹ ಭರ್ಜರಿ ಕೊಡುಗೆಯ ದರದಲ್ಲಿ ಕಾಣಿಸಿಕೊಂಡಿವೆ. ಹಾಗಾದರೇ ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್‌ನಲ್ಲಿ ಭರ್ಜರಿ ಡಿಸ್ಕೌಂಟ್‌ ಪಡೆದ 48 ಮೆಗಾ ಪಿಕ್ಸಲ್ ಮುಖ್ಯ ಕ್ಯಾಮೆರಾ ಸೆನ್ಸಾರ್ ಪಡೆದ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M21 2021 ಎಡಿಷನ್
ಸ್ಯಾಮ್‌ಸಂಗ್ ಗ್ಯಾಲಕ್ಸಿ M21 ಸ್ಮಾರ್ಟ್‌ಫೋನ್‌ 1080x2340 ಪಿಕ್ಸಲ್‌ ರೆಸಲ್ಯೂಶನ್‌ ಹೊಂದಿರುವ 6.4 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಜೊತೆಗೆ ಇನ್‌ಫಿನಿಟಿ ಸೂಪರ್ AMOLED ಡಿಸ್‌ಪ್ಲೇ ಹೊಂದಿದೆ. ಇದು ಆಕ್ಟಾ ಕೋರ್ exynos 9611 SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್‌ 11 ಓಎಸ್ ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ ಈ ಫೋನ್ ತ್ರಿವಳಿ ರಿಯರ್‌ ಕ್ಯಾಮೆರಾ ಸೆಟ್‌ಆಪ್‌ ಹೊಂದಿದ್ದು, ಮುಖ್ಯ ಕ್ಯಾಮೆರಾ 48 ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್‌ 6,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ ಅಪ್ ಸಾಮರ್ಥ್ಯವನ್ನು ಪಡೆದಿದೆ. ಇದರೊಂದಿಗೆ 15W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ನೀಡಿದೆ.

ಟೆಕ್ನೋ ಪೊವಾ 2
ಟೆಕ್ನೋ ಪೊವಾ 2 ಸ್ಮಾರ್ಟ್‌ಫೋನ್‌ 6.9-ಇಂಚಿನ ಬೃಹತ್ IPS LCD ಡಿಸ್‌ಪ್ಲೇಯನ್ನು ಹೊಂದಿದೆ. ಇದು ಆಕ್ಟಾ-ಕೋರ್ ಮೀಡಿಯಾ ಟೆಕ್ ಹೆಲಿಯೋ G85 SoC ಪ್ರೊಸೆಸರ್‌ ಬಲವನ್ನು ಪಡೆದಿದೆ. ಹಾಗೆಯೇ 6GB RAM ಮತ್ತು 128GB ಸ್ಟೋರೇಜ್ ಅನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್‌ ಕೂಡ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್‌ ಪಡೆದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿದೆ. ಈ ಸ್ಮಾರ್ಟ್‌ಫೋನ್‌ 7000mAh ಸಾಮರ್ಥ್ಯದ ಬೃಹತ್‌ ಬ್ಯಾಟರಿ ಸಾಮರ್ಥ್ಯ ಹೊಂದಿರುವುದು ಪ್ರಮುಖ ಹೈಲೈಟ್‌ ಆಗಿದೆ. ಇದನ್ನು 18W ಫಾಸ್ಟ್ ಚಾರ್ಜರ್ ಮೂಲಕ ಟಾಪ್ ಮಾಡಬಹುದಾಗಿದೆ.

ರೆಡ್ಮಿ 9 ಪವರ್ ಸ್ಮಾರ್ಟ್‌ಫೋನ್‌
ರೆಡ್ಮಿ 9 ಪವರ್ ಸ್ಮಾರ್ಟ್‌ಫೋನ್‌ 6.53-ಇಂಚಿನ IPS LCD ಡಿಸ್‌ಪ್ಲೇ ಹೊಂದಿದೆ. ಇದು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 662 ಪ್ರೊಸೆಸರ್‌ ಅನ್ನು ಹೊಂದಿದೆ. ಹಾಗೆಯೇ 6GB RAM ಮತ್ತು 128GB ಸ್ಟೋರೇಜ್‌ ಆಯ್ಕೆಯನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ ಫೋನ್‌ ಕ್ವಾಡ್‌ ರಿಯರ್‌ ಕ್ಯಾಮೆರಾ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊದಿದೆ. ಈ ಫೋನ್‌ 6000mAh ಸಾಮರ್ಥ್ಯದ ಬ್ಯಾಟರಿ ಯನ್ನು ಹೊಂದಿದ್ದು, 18W ಚಾರ್ಜಿಂಗ್ ಬೆಂಬಲಿಸಲಿದೆ.

ಒನ್‌ಪ್ಲಸ್‌ 9R 5G ಫೋನ್
ಒನ್‌ಪ್ಲಸ್‌ 9R 5G ಫೋನ್ 6.55-ಇಂಚಿನ ಫ್ಲೂಯಿಡ್ ಅಮೋಲೆಡ್ ಡಿಸ್‌ಪ್ಲೇ ಯನ್ನು ಒಳಗೊಂಡಿದೆ. ಇದು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 870 ಪ್ರೊಸೆಸರ್ ಬಲ ಹೊಂದಿದ್ದು, 8 ಜಿಬಿ + 128 ಜಿಬಿ ಮತ್ತು 12 ಜಿಬಿ + 256 ಜಿಬಿ ವೇರಿಯಂಟ್‌ ಆಯ್ಕೆಗಳನ್ನು ಒಳಗೊಂಡಿದೆ. ಹಾಗೆಯೇ ಈ ಫೋನ್ ಕ್ವಾಡ್ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಮುಖ್ಯ ಕ್ಯಾಮೆರಾವು 48 ಎಂಪಿ ಸೋನಿ ಐಎಂಎಕ್ಸ್ 586 ಸೆನ್ಸಾರ್‌ ಹೊಂದಿದೆ. ಹಾಗೆಯೇ 65W ವಾರ್ಪ್ ಚಾರ್ಜ್ ತಂತ್ರಜ್ಞಾನ ವನ್ನು ಪಡೆದಿದೆ. ಈ ಫೋನ್ ಕಾರ್ಬನ್ ಬ್ಲ್ಯಾಕ್ ಮತ್ತು ಲೇಕ್ ಬ್ಲೂ ಕಲರ್ ಆಯ್ಕೆಗಳಲ್ಲಿ ಲಭ್ಯ.

English summary
Amazon Great Indian Festival 2021: Best Discount On These 48MP Camera Phones.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+