ಒಪ್ಪೋ ಸಂಸ್ಥೆಯ ಈ ಜನಪ್ರಿಯ ಸ್ಮಾರ್ಟ್‌ಫೋನ್‌ಗಳಿಗೆ ಭರ್ಜರಿ ಡಿಸ್ಕೌಂಟ್!
ಅಮೆಜಾನ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಆನ್‌ಲೈನ್ ಶಾಪಿಂಗ್ ಪ್ರಿಯರಿಗೆ ಪಾಲಿಗೆ ನೆಚ್ಚಿನ ತಾಣ ಎನಿಸಿದೆ. ಅಮೆಜಾನ್ ಏನಾದರೊಂದು ಬೊಂಬಾಟ್ ಸೇಲ್ ಆಯೋಜಿಸುವ ಮೂಲಕ ಗ್ರಾಹಕರನ್ನು ಸೆಳೆಯುತ್ತ ಇರುತ್ತದೆ. ಸದ್ಯ ಸಾಲು ಸಾಲು ಹಬ್ಬದ ಅಂಗವಾಗಿ ಅಮೆಜಾನ್ ಪ್ಲಾಟ್‌ಫಾರ್ಮ್ ಜನಪ್ರಿಯ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2021 ಆಯೋಜಿಸಿದ್ದು, ಭಾರೀ ಸದ್ದು ಮಾಡುತ್ತಿದೆ. ಈ ಸೇಲ್‌ನಲ್ಲಿ ಫೋನ್‌ಗಳಿಗೆ ಬಿಗ ರಿಯಾಯಿತಿ ತಿಳಿಸಿದೆ.

ಹೌದು, ಅಮೆಜಾನ್ ತಾಣವು ಆಯೋಜಿಸಿರುವ 'ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2021' ಈಗ ಚಾಲ್ತಿ ಇದೆ. ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್‌ಗಳು, ಸ್ಪೀಕರ್‌ಗಳು ಹಾಗೂ ಸ್ಮಾರ್ಟ್‌ವಾಚ್‌ಗಳು ಸೇರಿದಂತೆ ಇತರೆ ಸ್ಮಾರ್ಟ್ ಉತ್ಪನ್ನಗಳಿಗೆ ಆಕರ್ಷಕ ರಿಯಾಯಿತಿ ತಿಳಿಸಿದೆ. ಹಾಗೆಯೇ ಆಯ್ದ ಕೆಲವು ಜನಪ್ರಿಯ ಒಪ್ಪೋ ಮೊಬೈಲ್ ಫೋನ್‌ಗಳಿಗೆ ಆಕರ್ಷಕ ಡಿಸ್ಕೌಂಟ್ ಲಭ್ಯ ಇದೆ.

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ಆಯ್ದ ಒಪ್ಪೋ ಮೊಬೈಲ್ ಫೋನ್‌ಗಳಿಗೆ ಭರ್ಜರಿ ಡಿಸ್ಕೌಂಟ್ ನೀಡಿದೆ. ಒಪ್ಪೋ ಮೊಬೈಲ್ ಸರಣಿಯಲ್ಲಿ ಹಲವು ಮಾದರಿಗಳನ್ನು ಪರಿಚಯಿಸಿದ್ದು, ಆ ಪೈಕಿ ಬಜೆಟ್ ಬೆಲೆಯಿಂದ, ಹೈ ಎಂಡ್ ಫೋನ್‌ಗಳ ಆಯ್ಕೆ ಸಹ ಗ್ರಾಹಕರಿಗೆ ಲಭ್ಯ. ಹಾಗಾದರೇ ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್‌ನಲ್ಲಿ ಆಕರ್ಷಕ ರಿಯಾಯಿತಿ ಪಡೆದ ಒಪ್ಪೋ ಫೋನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಒಪ್ಪೊ F19 ಸ್ಮಾರ್ಟ್‌ಫೋನ್
ಒಪ್ಪೊ F19 ಸ್ಮಾರ್ಟ್‌ಫೋನ್ 1,080x2,400 ಪಿಕ್ಸೆಲ್ ರೆಸಲ್ಯೂಶನ್ ಜೊತೆಗೆ 6.43-ಇಂಚಿನ ಪೂರ್ಣ-ಹೆಚ್‌ಡಿ ಪ್ಲಸ್ ಸೂಪರ್ ಅಮೋಲೆಡ್ ಡಿಸ್‌ಪ್ಲೇ ಹೊಂದಿದೆ. ಇದು ಸ್ನ್ಯಾಪ್‌ಡ್ರಾಗನ್ 662 ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್ 6GB RAM ಮತ್ತು 128GB ವೇರಿಯಂಟ್ ಆಯ್ಕೆ ಪಡೆದಿದೆ. ಇದರೊಂದಿಗೆ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಮುಖ್ಯ ಕ್ಯಾಮೆರಾವು 48 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿದೆ. ಹಾಗೆಯೇ 5,000mAh ಬ್ಯಾಟರಿಯನ್ನು ಪಡೆದಿದ್ದು, 30W VOOC ಚಾರ್ಜ್ 4.0 ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಹೊಂದಿದೆ.
ಒಪ್ಪೋ A54 ಸ್ಮಾರ್ಟ್‌ಫೋನ್
ಒಪ್ಪೋ A54 ಸ್ಮಾರ್ಟ್‌ಫೋನ್ 1080x2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.51 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೊ P35 ಪ್ರೊಸೆಸರ್ ಅನ್ನು ಹೊಂದಿದ್ದು, 4GB RAM ಮತ್ತು 128GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಇದರೊಂದಿಗೆ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 18W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ.
ಒಪ್ಪೊ A31 ಸ್ಮಾರ್ಟ್‌ಫೋನ್ (6GB+128GB)
ಒಪ್ಪೊ A31 ಸ್ಮಾರ್ಟ್‌ಫೋನ್ 1600 x 720 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.5 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಆಕ್ಟಾ ಕೋರ್ ಮೀಡಿಯಾ ಟೆಕ್ ಹಿಲಿಯೊ P35 ಪ್ರೊಸೆಸರ್ ಸಾಮರ್ಥ್ಯ ಹೊಂದಿದೆ. ಹಾಗೆಯೇ ಇದು 4GB+64GB ವೇರಿಯಂಟ್ ಮತ್ತು 6GB+128GB ವೇರಿಯಂಟ್ ಆಯ್ಕೆ ಹೊಂದಿದೆ. ಜೊತೆಗೆ ತ್ರಿವಳಿ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಮುಖ್ಯ ಕ್ಯಾಮೆರಾವು 12ಎಂಪಿ ಸೆನ್ಸಾರ್‌ನಲ್ಲಿದೆ. ಈ ಸ್ಮಾರ್ಟ್‌ಫೋನ್ 4,230 mAh ಬ್ಯಾಟರಿ ಬಾಳಿಕೆಯನ್ನು ಪಡೆದಿದ್ದು, ಉತ್ತಮ ಬ್ಯಾಟರಿ ಬ್ಯಾಕ್‌ಅಪ್ ಸಪೋರ್ಟ್ ಒದಗಿಸಲಿದೆ.
ಒಪ್ಪೋ A74 5G ಸ್ಮಾರ್ಟ್‌ಫೋನ್
ಒಪ್ಪೋ A74 5G ಫೋನ್ 1,080x2,400 ಪಿಕ್ಸಲ್ ರೆಸಲ್ಯೂಶನ್ ಜೊತೆಗೆ 6.43 ಇಂಚಿನ HD + ಗುಣಮಟ್ಟದ AMOLED ಮಾದರಿಯ ಡಿಸ್‌ಪ್ಲೇಯನ್ನು ಹೊಂದಿದೆ. ಈ ಪೋನ್ ಆಕ್ಟಾ ಕೋರ್ ಸ್ನ್ಯಾಪ್‌ಡ್ರಾಗನ್ 480 SoC ಪ್ರೊಸೆಸರ್ ಬಲವನ್ನು ಪಡೆದಿದೆ. ಇದರೊಂದಿಗೆ ಕ್ವಾಡ್ ಕ್ಯಾಮೆರಾ ರಚನೆಯನ್ನು ಹೊಂದಿದ್ದು, ಅವುಗಳು ಕ್ರಮವಾಗಿ 48 ಮೆಗಾ ಪಿಕ್ಸಲ್, 8 ಮೆಗಾ ಪಿಕ್ಸಲ್, 2 ಮೆಗಾ ಪಿಕ್ಸಲ್ ಮತ್ತು 2 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿವೆ. 5,000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ.


Click it and Unblock the Notifications