Home
Deal of the day

ಅಮೆಜಾನ್‌ ಸೇಲ್‌: ಫೈರ್ ಟಿವಿ ಸ್ಟಿಕ್ ಡಿವೈಸ್‌ಗಳಿಗೆ ಆಕರ್ಷಕ ರಿಯಾಯಿತಿ!

ಇ ಕಾಮರ್ಸ್‌ ದೈತ್ಯ ಅಮೆಜಾನ್ ತಾಣವು ದಸರಾ ಮತ್ತು ದೀಪಾವಳಿ ಹಬ್ಬದ ಅಂಗವಾಗಿ 'ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2021' ಸೇಲ್‌ ಆಯೋಜಿಸಿದೆ. ಈ ಹಬ್ಬದ ಸೇಲ್‌ ಮೇಳವು ಇದೇ ಅಕ್ಟೋಬರ್ 3 ರಿಂದ ಶುರುವಾಗಿದ್ದು, ಗ್ರಾಹಕರಿಗೆ ಭರ್ಜರಿ ಆಫರ್‌ಗಳನ್ನು ಘೋಷಿಸಿದೆ. ಈ ಸೇಲ್‌ನಲ್ಲಿ ಎಲ್ಲ ಬಗೆಯ ಉತ್ಪನ್ನಗಳಿಗೂ ವಿಶೇಷ ಆಫರ್‌ಗಳನ್ನು ತಿಳಿಸಿದೆ. ಅದಾಗ್ಯೂ ಸ್ಮಾರ್ಟ್‌ ಡಿವೈಸ್‌ ಹಾಗೂ ಗ್ಯಾಡ್ಜೆಟ್ಸ್‌ ಉತ್ಪನ್ನಗಳಿಗೆ ಆಕರ್ಷಕ ಕೊಡುಗೆ ಲಭ್ಯ ಮಾಡಿದೆ.

ಅಮೆಜಾನ್‌ ಸೇಲ್‌: ಫೈರ್ ಟಿವಿ ಸ್ಟಿಕ್ ಡಿವೈಸ್‌ಗಳಿಗೆ ಆಕರ್ಷಕ ರಿಯಾಯಿತಿ!

ಹೌದು, ಅಮೆಜಾನ್ ತಾಣವು ಆಯೋಜಿಸಿರುವ 'ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2021' ಇದೀಗ ಲೈವ್ ಇದೆ. ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್‌ಗಳು, ಸ್ಪೀಕರ್‌ಗಳು, ಸ್ಮಾರ್ಟ್‌ವಾಚ್‌ಗಳು ಸೇರಿದಂತೆ ಇತರೆ ಸ್ಮಾರ್ಟ್‌ ಡಿವೈಸ್‌ ಉತ್ಪನ್ನಗಳಿಗೂ ದೊಡ್ಡ ರಿಯಾಯಿತಿ ತಿಳಿಸಿದೆ. ಹಾಗೆಯೇ ಹೋಮ್ ಥೇಟರ್ ಅನುಭವ ನೀಡುವ 'ಫೈರ್ ಟಿವಿ ಸ್ಟಿಕ್' ಡಿವೈಸ್‌ಗಳಿಗೂ ಭಾರೀ ಕೊಡುಗೆ ನೀಡುತ್ತಿದೆ.

ಅಮೆಜಾನ್‌ ಸೇಲ್‌: ಫೈರ್ ಟಿವಿ ಸ್ಟಿಕ್ ಡಿವೈಸ್‌ಗಳಿಗೆ ಆಕರ್ಷಕ ರಿಯಾಯಿತಿ!

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ಫೈರ್ ಟಿವಿ ಸ್ಟಿಕ್ ಉತ್ಪನ್ನಗಳಿಗೆ ಶೇ. 50% ವಿಶೇಷ ಡಿಸ್ಕೌಂಟ್‌ ಲಭ್ಯ ಮಾಡಿದೆ. ಇದರೊಂದಿಗೆ ಹೆಚ್ಚುವರಿಯಾಗಿ ಆಯ್ದ ಬ್ಯಾಂಕ್‌ನಿಂದ ಗ್ರಾಹಕರಿಗೆ ಇನ್‌ಸ್ಟಂಟ್ ಡಿಸ್ಕೌಂಟ್‌ ಪ್ರಯೋಜನ ಸಹ ಲಭ್ಯವಾಗಲಿದೆ. ಹಾಗಾದರೇ ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್‌ನಲ್ಲಿ ಬೆಸ್ಟ್ ಡಿಸ್ಕೌಂಟ್‌ನಲ್ಲಿ ಲಭ್ಯ ಇರುವ ಫೈರ್ ಟಿವಿ ಸ್ಟಿಕ್ ಡಿವೈಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಫೈರ್ ಟಿವಿ ಸ್ಟಿಕ್ ಲೈಟ್
ಫೈರ್ ಟಿವಿ ಸ್ಟಿಕ್ ಲೈಟ್ ಡಿವೈಸ್ ಅಲೆಕ್ಸಾ ವಾಯ್ಸ್ ರಿಮೋಟ್ ಲೈಟ್‌ ಸೌಲಭ್ಯ ಪಡೆದಿದೆ. ಇದರೊಂದಿಗೆ ಈ ಡಿವೈಸ್ HD ಗುಣಮಟ್ಟದ ವೀಡಿಯೊ ಸ್ಟ್ರೀಮ್ ಸಪೋರ್ಟ್‌ ಪಡೆದಿದೆ. ಇನ್ನು ಈ ಡಿವಯಸ್ ಪವರ್ ಮತ್ತು ವಾಲ್ಯೂಮ್ ಬಟನ್ ಹೊಂದಿಲ್ಲ. ಯೂಟ್ಯೂಬ್, ಯೂಟ್ಯೂಬ್ ಕಿಡ್ಸ್, MX ಪ್ಲೇಯರ್, YuppTV ಉಚಿತ ಲಭ್ಯ. ಹಾಗೆಯೇ ಚಂದಾದಾರಿಕೆ ಶುಲ್ಕದೊಂದಿಗೆ ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್, ಡಿಸ್ನಿ+ ಹಾಟ್‌ಸ್ಟಾರ್, ಜೀ 5, ಸೋನಿಲೈವ್, ಸನ್ ಎನ್‌ಎಕ್ಸ್‌ಟಿ, ಎಎಲ್‌ಟಿ ಬಾಲಾಜಿ, ಡಿಸ್ಕವರಿ ಪ್ಲಸ್ ಮತ್ತು ಇತರ ಹಲವು ಆಪ್‌ಗಳಿಂದ ಸಾವಿರಾರು ಸಿನಿಮಾಗಳು ಮತ್ತು ಕಾರ್ಯಕ್ರಮಗಳನ್ನು ನೋಡಬಹುದು.

ಫೈರ್ ಟಿವಿ ಸ್ಟಿಕ್ ಪ್ಲಸ್ (2021)
ಫೈರ್ ಟಿವಿ ಸ್ಟಿಕ್ ಪ್ಲಸ್ (2021) ಡಿವೈಸ್ ಜೀ5, ಸೋನಿLIV ಮತ್ತು ವೂಟ್‌ ಓಟಿಟಿಗಳ ವಾರ್ಷಿಕ ಚಂದಾದಾರಿಕೆ ಅನ್ನು ಒಳಗೊಂಡಿದೆ. ಅಲ್ಲದೇ ಹೊಸ ಅಲೆಕ್ಸಾ ವಾಯ್ಸ್ ರಿಮೋಟ್ ಅನ್ನು ಒಳಗೊಂಡಿದೆ. ಚಂದಾದಾರಿಕೆ ಶುಲ್ಕದೊಂದಿಗೆ ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್, ಡಿಸ್ನಿ+ ಹಾಟ್‌ಸ್ಟಾರ್, ಜೀ 5, ಸೋನಿಲೈವ್, ಸನ್ ಎನ್‌ಎಕ್ಸ್‌ಟಿ, ಎಎಲ್‌ಟಿ ಬಾಲಾಜಿ, ಡಿಸ್ಕವರಿ ಪ್ಲಸ್ ಮತ್ತು ಇತರ ಹಲವು ಆಪ್‌ಗಳಿಂದ ಸಾವಿರಾರು ಸಿನಿಮಾಗಳು ಮತ್ತು ಕಾರ್ಯಕ್ರಮಗಳನ್ನು ನೋಡಬಹುದು.

ಫೈರ್ ಟಿವಿ ಸ್ಟಿಕ್ 4K
ಫೈರ್ ಟಿವಿ ಸ್ಟಿಕ್ 4K ಡಿವೈಸ್ ಅಲೆಕ್ಸಾ ವಾಯ್ಸ್ ರಿಮೋಟ್ ಸೌಲಭ್ಯವನ್ನು ಪಡೆದಿದೆ. ಇದರೊಂದಿಗೆ ಈ ಡಿವೈಸ್ 4K ರೆಸಲ್ಯೂಶನ್ ನಲ್ಲಿ ವಿಡಿಯೋ ಸ್ಟ್ರೀಮ್ ಮಾಡುವ ಸಪೋರ್ಟ್‌ ಅನ್ನು ಒಳಗೊಂಡಿದೆ. ಈ ಡಿವೈಸ್ ಆಕರ್ಷಕ ಆಡಿಯೊ ಸೌಲಬ್ಯ ಪಡೆದಿದ್ದು, 4K ಅಲ್ಟ್ರಾ HD, ಡಾಲ್ಬಿ ವಿಷನ್, ಡಾಲ್ಬಿ ಅಟ್ಮಾಸ್ ಸಪೋರ್ಟ್‌ ಪಡೆದಿದೆ. ಇನ್ನು ಗ್ರಾಹಕರು ಚಂದಾದಾರಿಕೆ ಶುಲ್ಕದೊಂದಿಗೆ ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್, ಡಿಸ್ನಿ+ ಹಾಟ್‌ಸ್ಟಾರ್, ಜೀ 5, ಸೋನಿಲೈವ್, ಸನ್ ಎನ್‌ಎಕ್ಸ್‌ಟಿ, ಎಎಲ್‌ಟಿ ಬಾಲಾಜಿ, ಡಿಸ್ಕವರಿ ಪ್ಲಸ್ ಮತ್ತು ಇತರ ಓಟಿಟಿ ಆಪ್‌ಗಳ ಸೇವೆ ಪಡೆಯಬಹುದು.

ಫೈರ್ ಟಿವಿ ಕ್ಯೂಬ್
ಫೈರ್ ಟಿವಿ ಕ್ಯೂಬ್ ಡಿವೈಸ್‌ ಅಲೆಕ್ಸಾ ವಾಯ್ಸ್ ಸೌಲಬ್ಯವನ್ನು ಒಳಗೊಂಡಿದ್ದು, ಹ್ಯಾಂಡ್ಸ್-ಫ್ರೀ ಸ್ಟ್ರೀಮಿಂಗ್ ಡಿವೈಸ್‌ ಆಗಿದೆ. ಡಿವೈಸ್ ಆನ್‌, ಆಫ್ ಸೇರಿದಂತೆ ಹಲವು ಕೆಲಸಗಳನ್ನು ಗ್ರಾಹಕರು ವಾಯಿಸ್‌ ಮೂಲಕ ನಿಯಂತ್ರಿಸಬಹುದು. ಇನ್ನು ಈ ಡಿವೈಸ್ 4K ಅಲ್ಟ್ರಾ HD ಆಯ್ಕೆ ಪಡೆದಿದೆ. ಹಾಗೆಯೇ ಇದು ಡಾಬ್ಲಿ ವಿಷನ್ ಮತ್ತು HDR10+ ಸಪೋರ್ಟ್‌ ಪಡೆದಿದೆ. ಗ್ರಾಹಕರು ಚಂದಾದಾರಿಕೆ ಶುಲ್ಕದೊಂದಿಗೆ ಪ್ರೈಮ್ ವಿಡಿಯೋ, ನೆಟ್‌ಫ್ಲಿಕ್ಸ್, ಡಿಸ್ನಿ+ ಹಾಟ್‌ಸ್ಟಾರ್, ಜೀ 5, ಸೋನಿಲೈವ್, ಸನ್ ಎನ್‌ಎಕ್ಸ್‌ಟಿ, ಎಎಲ್‌ಟಿ ಬಾಲಾಜಿ, ಡಿಸ್ಕವರಿ ಪ್ಲಸ್ ಮತ್ತು ಇತರ ಓಟಿಟಿ ಆಪ್‌ಗಳ ಸೇವೆ ಪಡೆಯಬಹುದು.

English summary
Amazon Great Indian Festival 2021: Upto 50 Off For These Fire Tv Stick Devices.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+