Home
Deal of the day

ಅಮೆಜಾನ್‌ ಸೇಲ್‌ನಲ್ಲಿ ಈ CCTV ಕ್ಯಾಮೆರಾಗಳಿಗೆ ಭರ್ಜರಿ ರಿಯಾಯಿತಿ!

ಅಮೆಜಾನ್ ಇ ಕಾಮರ್ಸ್‌ ಎಂದರೇ ಆನ್‌ಲೈನ್‌ ಶಾಪಿಂಗ್ ಪ್ರಿಯರಿಗೆ ತಕ್ಷಣಕ್ಕೆ ನೆನಪಾಗುವುದೇ ಏನಾದರೊಂದು ಆಫರ್ ಇರುತ್ತೆ ಅಂತಾ. ಇ ಕಾಮರ್ಸ್ ದೈತ್ಯ ಎನಿಸಿಕೊಂಡಿರುವ ಅಮೆಜಾನ್ ಒಂದಿಲ್ಲೊಂದು ವಿಶೇಷ ಸೇಲ್‌ ಆಯೋಜಿಸುವ ಮೂಲಕ ಗ್ರಾಹಕರನ್ನು ಸೆಳೆಯುತ್ತ ಮುನ್ನಡೆದಿದೆ. ಈ ನಿಟ್ಟಿನಲ್ಲಿ ಇದೀಗ ಸಾಲು ಸಾಲು ಹಬ್ಬದ ಪ್ರಯುಕ್ತ ಅಮೆಜಾನ್ ತಾಣವು ಆಯೋಜಿಸಿರುವ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2021 ಚಾಲ್ತಿ ಇದೆ.

ಅಮೆಜಾನ್‌ ಸೇಲ್‌ನಲ್ಲಿ ಈ CCTV ಕ್ಯಾಮೆರಾಗಳಿಗೆ ಭರ್ಜರಿ ರಿಯಾಯಿತಿ!

ಹೌದು, ಇದೇ ಅಕ್ಟೋಬರ್ 3 ರಂದು ಅಮೆಜಾನ್ ತಾಣವು ಪ್ರಾರಂಭ ಮಾಡಿರುವ 'ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2021' ಬಿಗ್ ರಿಯಾಯಿತಿಗಳಿಂದ ಗ್ರಾಹಕರ ಗಮನ ಸೆಳೆದಿದೆ. ಈ ಸೇಲ್‌ನಲ್ಲಿ ಗ್ಯಾಡ್ಜೆಟ್‌ ಉತ್ಪನ್ನಗಳಿಗೆ ಬೊಂಬಾಟ್ ಆಫರ್ ಲಭ್ಯ ಮಾಡಿದೆ. ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್‌ಗಳು, ಸ್ಪೀಕರ್‌ಗಳು ಹಾಗೂ ಸ್ಮಾರ್ಟ್‌ವಾಚ್‌ಗಳು ಸೇರಿದಂತೆ ಆಯ್ದ ಕೆಲವು ಸಿಸಿಟಿವಿ ಕ್ಯಾಮೆರಾ ಡಿವೈಸ್‌ಗಳಿಗೂ ಆಕರ್ಷಕ ರಿಯಾಯಿತಿ ನೀಡಲಾಗಿದೆ.

ಅಮೆಜಾನ್‌ ಸೇಲ್‌ನಲ್ಲಿ ಈ CCTV ಕ್ಯಾಮೆರಾಗಳಿಗೆ ಭರ್ಜರಿ ರಿಯಾಯಿತಿ!

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ಆಯ್ದ ಬ್ರ್ಯಾಂಡ್‌ಗಳ ಸಿಸಿಟಿವಿ ಕ್ಯಾಮೆರಾಗಳಿಗೆ ಆಕರ್ಷಕ ರಿಯಾಯಿತಿ ಘೋಷಿಸಿದೆ. ಸಿಸಿಟಿವಿ ಕ್ಯಾಮೆರಾಗಳು ವೈ ಫೈ ಸೌಲಭ್ಯ ಪಡೆದಿದ್ದು, ಅದಕ್ಕೆ ಪೂರಕ ಆಪ್‌ ಆಯ್ಕೆಯನ್ನು ಒಳಗೊಂಡಿವೆ. ಮನೆ ಹಾಗೂ ಆಫೀಸ್‌ ಎರಡೂ ಕಡೆಗಳಲ್ಲಿ ಬಳಕೆ ಮಾಡಬಹುದಾಗಿದೆ. ಇನ್ನು ಆಯ್ದ ಬ್ಯಾಂಕ್‌ಗಳಿಂದಲೂ ಇನ್‌ಸ್ಟಂಟ್ ರಿಯಾಯಿತಿ ಸಿಗಲಿದೆ. ಹಾಗಾದರೇ ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್‌ನಲ್ಲಿ ಆಕರ್ಷಕ ರಿಯಾಯಿತಿ ಪಡೆದ ಸಿಸಿಟಿವಿ ಕ್ಯಾಮೆರಾ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಮಿ 360 ಡಿಗ್ರಿ ಹೋಮ್ ಸೆಕ್ಯುರಿಟಿ ಕ್ಯಾಮೆರಾ

ಶಿಯೋಮಿ ಕಂಪನಿಯ ಮಿ 360 ಡಿಗ್ರಿ ಹೋಮ್ ಸೆಕ್ಯುರಿಟಿ ಕ್ಯಾಮೆರಾ ಆಕರ್ಷಕ ರಚನೆ ಪಡೆದಿದೆ. ಇದು ಕ್ಯಾಮೆರಾವನ್ನು 360 ಡಿಗ್ರಿ ಸಮತಲ ನೋಟ ಮತ್ತು 96-ಡಿಗ್ರಿ ಲಂಬ ನೋಟವನ್ನು ತಿರುಗಿಸಲು ಮತ್ತು ಸೆರೆಹಿಡಿಯಲು ಅನುವು ಮಾಡಿಕೊಡುತ್ತದೆ. ಕ್ಯಾಮೆರಾ ತನ್ನ 20 ಮೆಗಾ ಪಿಕ್ಸೆಲ್‌ಗಳು, 1080p ರೆಸಲ್ಯೂಶನ್ ಮತ್ತು ವೈಡ್ ಡೈನಾಮಿಕ್ ರೇಂಜ್ ಕ್ಯಾಮೆರಾ ಸೆನ್ಸಾರ್‌ನೊಂದಿಗೆ ಉತ್ತಮ ಚಿತ್ರ ಗುಣಮಟ್ಟವನ್ನು ನೀಡುತ್ತದೆ. ಇದು ಎಐ ತಂತ್ರಜ್ಞಾನ ಒಳಗೊಂಡಿದ್ದು, ಮೋಷನ್ ಡಿಟೆಕ್ಷನ್ ಸೌಲಭ್ಯ ಹೊಂದಿದೆ. ಹಾಗೆಯೇ ಟು ವೇ ಟಾಕ್ ಬ್ಯಾಕ್ ಸೌಲಭ್ಯವನ್ನು ಪಡೆದಿದ್ದು, ನೈಟ್ ವಿಷನ್ ಆಯ್ಕೆಯು ಸಹ ಇದೆ. ಎಸ್‌ಡಿ ಕಾರ್ಡ್‌ ಮೂಲಕ 64GB ಸ್ಟೋರೇಜ್‌ ಸಾಮರ್ಥ್ಯದ ಆಯ್ಕೆ ಅನ್ನು ಒಳಗೊಂಡಿದೆ.

ರಿಯಲ್‌ಮಿ 360 ಡಿಗ್ರಿ ಸೆಕ್ಯುರಿಟಿ ಕ್ಯಾಮೆರಾ

ರಿಯಲ್‌ಮಿ ಕಂಪನಿಯ ಈ 360 ಡಿಗ್ರಿ ಸೆಕ್ಯುರಿಟಿ ಕ್ಯಾಮೆರಾ ಮಿ ಕ್ಯಾಮೆರಾದಂತೆ ಆಕರ್ಷಕ ಲುಕ್‌ ಪಡೆದಿದೆ. ಇದು 1080p ಪಿಕ್ಸಲ್ ರೆಸಲ್ಯೂಶನ್ ಸಪೋರ್ಟ್‌ ಪಡೆದಿದೆ. ಹಾಗೆಯೇ ಈ ಹೋಮ್ ಸೆಕ್ಯುರಿಟಿ ಕ್ಯಾಮೆರಾವು 1080p ವೀಡಿಯೊ ರೆಕಾರ್ಡಿಂಗ್ ಸಾಮರ್ಥ್ಯ ನೀಡುತ್ತದೆ. ಇದು 128 ಜಿಬಿ ವರೆಗೆ ಮೈಕ್ರೊ ಎಸ್‌ಡಿ ಕಾರ್ಡ್ ಅನ್ನು ಬೆಂಬಲಿಸುತ್ತದೆ. ಇದು AI ಚಲನೆಯ ಸಂವೇದಕದೊಂದಿಗೆ ಬರುತ್ತದೆ ಮತ್ತು ಅದು ಕೋಣೆಯಲ್ಲಿ ಚಲನೆಯನ್ನು ಗ್ರಹಿಸುತ್ತದೆ ಹಾಗೂ ಬಳಕೆದಾರರನ್ನು ಎಚ್ಚರಿಸುತ್ತದೆ. ಇದಲ್ಲದೆ, ಇದು ಅತಿಗೆಂಪು ರಾತ್ರಿ ದೃಷ್ಟಿಯೊಂದಿಗೆ ಬರುತ್ತದೆ.

ಇಮೌ (Imou) 360 ಡಿಗ್ರಿ ಸೆಕ್ಯುರಿಟಿ ಕ್ಯಾಮೆರಾ

ಮಾರುಕಟ್ಟೆಯಲ್ಲಿ ಇಮೌ 360 ಸೆಕ್ಯುರಿಟಿ ಕ್ಯಾಮೆರಾ ಸಹ ಗ್ರಾಹಕರನ್ನು ಸೆಳೆದಿದೆ. ಇದು ವೈ ಫೈ ಕನೆಕ್ಷನ್ ಆಯ್ಕೆ ಒಳಗೊಂಡಿದ್ದು, ಜೊತೆಗೆ 1080p ಪಿಕ್ಸಲ್ ರೆಸಲ್ಯೂಶನ್ ಸಪೋರ್ಟ್‌ ಪಡೆದಿದೆ. ಈ ಸೆಕ್ಯುರಿಟಿ ಕ್ಯಾಮೆರಾವು ಎಸ್‌ಡಿ ಕಾರ್ಡ್‌ ಮೂಲಕ 256GB ವರೆಗೂ ಸ್ಟೋರೇಜ್ ಮಾಡುವ ಆಯ್ಕೆಯನ್ನು ಒಳಗೊಂಡಿದೆ. ಪ್ರೈವಸಿ ಮೋಡ್, ಅಲೆಕ್ಸಾ, ಗೂಗಲ್ ಅಸಿಸ್ಟಂಟ್ ಸೌಲಭ್ಯಗಳನ್ನು ಹೊಂದಿದೆ. ಹುಮನ್ ಡಿಟೆಕ್ಷನ್ ಆಯ್ಕೆ, ಟು ವೇ ಆಡಿಯೋ ಸೌಲಭ್ಯ, ನೈಟ್ ವಿಷನ್ ಸೇರಿದಂತೆ ಹಲವು ಅಗತ್ಯ ಫೀಚರ್ಸ ಹೊಂದಿದೆ.

ಟಿಪಿ-ಲಿಂಕ್ ತಪೋ C 100

ಕಡಿಮೆ ಬೆಲೆಯಲ್ಲಿ ಟಿಪಿ-ಲಿಂಕ್ ತಪೋ C 100 ಕ್ಯಾಮೆರಾ ಸಹ ಗ್ರಾಹಕರನ್ನು ಆಕರ್ಷಿಸಿದೆ. ಈ ಡಿವೈಸ್ 1080p ಪಿಕ್ಸಲ್ ರೆಸಲ್ಯೂಶನ್ ಸಪೋರ್ಟ್‌ ಪಡೆದಿದ್ದು, ಟು ವೇ ಆಡಿಯೋ ಸೌಲಭ್ಯ ಒಳಗೊಂಡಿದೆ. ಈ ಡಿವೈಸ್ ಸಹ ಅಲೆಕ್ಸಾ, ಗೂಗಲ್ ಅಸಿಸ್ಟಂಟ್ ಸೌಲಭ್ಯಗಳನ್ನು ಹೊಂದಿದೆ. ಸುಮಾರು 30 ಅಡಿ ನೈಟ್ ವಿಷನ್ ಕವರೇಜ್ ಆಯ್ಕೆ ಹೊಂದಿದ್ದು, ಎಸ್‌ಡಿ ಕಾರ್ಡ್‌ ಮೂಲಕ 128 GB ಸ್ಟೋರೇಜ್ ಆಯ್ಕೆ ಪಡೆದಿದೆ.

English summary
Amazon Great Indian Festival Sale 2021: Up To 70 Off On Security Cameras.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+