Home
Deal of the day

ಅಮೆಜಾನ್‌ ಸೇಲ್‌ನಲ್ಲಿ ಈ ಸೌಂಡ್‌ಬಾರ್‌ ಡಿವೈಸ್‌ಗಳಿಗೆ ಶೇ 60% ಡಿಸ್ಕೌಂಟ್‌!

ಜನಪ್ರಿಯ ಇ ಕಾಮರ್ಸ್‌ ತಾಣ ಅಮೆಜಾನ್ ಹಬ್ಬದ ಪ್ರಯಕ್ತ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2021 ಆಯೋಜಿಸಿದೆ. ಈ ಸೇಲ್‌ ಮೇಳವು ಅಕ್ಟೋಬರ್ 3 ರಿಂದ ಪ್ರಾರಂಭವಾಗಿದ್ದು, ವಿಶೇಷ ರಿಯಾಯಿತಿ ಕೊಡುಗೆಗಳ ಮೂಲಕ ಈಗಾಗಲೇ ಗ್ರಾಹಕರನ್ನು ಸೆಳೆದಿದೆ. ಹಬ್ಬದ ಈ ಸೇಲ್‌ನಲ್ಲಿ ಎಲ್ಲ ಉತ್ಪನ್ನಗಳಿಗೂ ಆಕರ್ಷಕ ಆಫರ್‌ಗಳನ್ನು ತಿಳಿಸಿದೆ. ಅದಾಗ್ಯೂ ಎಲೆಕ್ಟ್ರಾನಿಕ್ ಹಾಗೂ ಗ್ಯಾಡ್ಜೆಟ್ಸ್‌ ಉತ್ಪನ್ನಗಳಿಗೆ ಸ್ಪೆಷಲ್ ಕೊಡುಗೆ ಲಭ್ಯ ಮಾಡಿದೆ.

ಅಮೆಜಾನ್‌ ಸೇಲ್‌ನಲ್ಲಿ ಈ ಸೌಂಡ್‌ಬಾರ್‌ ಡಿವೈಸ್‌ಗಳಿಗೆ ಶೇ 60% ಡಿಸ್ಕೌಂಟ್‌!

ಹೌದು, ಅಮೆಜಾನ್ ತಾಣವು ಆಯೋಜಿಸಿರುವ 'ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ 2021' ಇದೀಗ ಲೈವ್ ಇದೆ. ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್‌ಗಳು, ಸ್ಪೀಕರ್‌ಗಳು, ಸ್ಮಾರ್ಟ್‌ವಾಚ್‌ಗಳು ಸೇರಿದಂತೆ ಇತರೆ ಸ್ಮಾರ್ಟ್‌ ಆಕ್ಸಸರಿಸ್‌ ಉತ್ಪನ್ನಗಳಿಗೂ ಬಿಗ್ ರಿಯಾಯಿತಿ ತಿಳಿಸಿದೆ. ಹಾಗೆಯೇ ಮ್ಯೂಸಿಕ್ ಪ್ರಿಯ ಗ್ರಾಹಕರನ್ನು ಸೆಳೆಯಲು ಪ್ರತಿಷ್ಠಿತ ಬ್ರ್ಯಾಂಡ್‌ಗಳ ಸೌಂಡ್‌ಬಾರ್‌ ಡಿವೈಸ್‌ಗಳಿಗೆ ಶೇ. 60% ರಷ್ಟು ರಿಯಾಯಿತಿ ಲಭ್ಯ ಮಾಡಿದೆ.

ಅಮೆಜಾನ್‌ ಸೇಲ್‌ನಲ್ಲಿ ಈ ಸೌಂಡ್‌ಬಾರ್‌ ಡಿವೈಸ್‌ಗಳಿಗೆ ಶೇ 60% ಡಿಸ್ಕೌಂಟ್‌!

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್‌ನಲ್ಲಿ ಆಯ್ದ ಕಂಪನಿಗಳ ಸೌಂಡ್‌ಬಾರ್‌ ಉತ್ಪನ್ನಗಳು ವಿಶೇಷ ಡಿಸ್ಕೌಂಟ್‌ ಬೆಲೆಗೆ ಸಿಗಲಿವೆ. ಇದರೊಂದಿಗೆ ಹೆಚ್ಚುವರಿಯಾಗಿ ಆಯ್ದ ಬ್ಯಾಂಕ್‌ನಿಂದ ಗ್ರಾಹಕರಿಗೆ ಇನ್‌ಸ್ಟಂಟ್ ಡಿಸ್ಕೌಂಟ್‌ ಪ್ರಯೋಜನ ಸಹ ಲಭ್ಯವಾಗಲಿದೆ. ನೋ ಕಾಸ್ಟ್ ಇಎಮ್‌ಐ ಸೌಲಭ್ಯ ಸಹ ಗ್ರಾಹಕರಿಗೆ ಸಿಗಲಿದೆ. ಹಾಗಾದರೇ ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್‌ನಲ್ಲಿ ಆಕರ್ಷಕ ಡಿಸ್ಕೌಂಟ್‌ನಲ್ಲಿ ಲಭ್ಯ ಇರುವ ಸೌಂಡ್‌ಬಾರ್‌ ಡಿವೈಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಬೋಟ್ ಅವಂತೆ ಬಾರ್ 1160
ಜನಪ್ರಿಯ ಬೋಟ್ ಕಂಪನಿಯ ಅವಂತೆ ಬಾರ್ 1160 ಮಾಡೆಲ್‌ ಸೌಂಡ್‌ಬಾರ್‌ ಅತ್ಯುತ್ತಮ ಆಡಿಯೋ ರಚನೆಯನ್ನು ಒಳಗೊಂಡಿದೆ. ಇದು 60 ವ್ಯಾಟ್ ಸಾಮರ್ಥ್ಯದ 2.0 ಚಾನೆಲ್ ವಾಯರ್‌ಲೆಸ್‌ ಬ್ಲೂಟೂತ್ ಸೌಂಡ್‌ಬಾರ್ ಆಗಿದೆ. ಟಿವಿ, ಸ್ಮಾರ್ಟ್ಫೋನ್ ಅಥವಾ ಟ್ಯಾಬ್ಲೆಟ್‌ ಡಿವೈಸ್‌ಗಳಿಗೆ ಕನೆಕ್ಟ್ ಮಾಡಬಹುದಾಗಿದೆ. ವಾಯರ್‌ಲೆಸ್‌ ಬ್ಲೂಟೂತ್, Auxiliary ಮತ್ತು ಯುಎಸ್‌ಬಿ ಮೂಲಕ ಸಂಪರ್ಕ ಮಾಡಬಹುದು. ನ್ಯೂಸ್, ಮ್ಯೂವಿಸ್ ಹಾಗೂ ಮ್ಯೂಸಿಕ್ ಮೋಡ್ ಆಯ್ಕೆಗಳನ್ನು ಇದು ಪಡೆದಿದೆ.

ಜೀಬ್ರೋನಿಕ್ಸ್ ಜೆಬ್-ಜುಕೆಬಾರ್ 3900
ಪ್ರಮುಖ ಆಡಿಯೋ ಉತ್ಪನ್ನಗಳ ಬ್ರ್ಯಾಂಡ್‌ಗಳಲ್ಲಿ ಜೀಬ್ರೋನಿಕ್ಸ್ ಸಹ ಒಂದಾಗಿದೆ. ಈ ಕಂಪನಿಯ ಜೆಬ್-ಜುಕೆಬಾರ್ 3900 ಸೌಂಡ್‌ಬಾರ್ ಮಾಡೆಲ್‌ 80W ಮಲ್ಟಿಮೀಡಿಯಾ ಸೌಂಡ್‌ಬಾರ್ ಸಬ್ ವೂಫರ್, ರೀಮೋಟ್ ಕಂಟ್ರೀಲ್ ಜೊತೆಗೆ ಸಪೋರ್ಟ್ ಬ್ಲೂಟೂತ್, ಹೆಚ್‌ಡಿಎಮ್‌ಐ (ARC), ಸೌಲಭ್ಯಗಳನ್ನು ಪಡೆದಿದೆ. ಟಿವಿ, ಸ್ಮಾರ್ಟ್ಫೋನ್ ಅಥವಾ ಟ್ಯಾಬ್ಲೆಟ್‌ ಡಿವೈಸ್‌ಗಳಿಗೆ ಕನೆಕ್ಟ್ ಮಾಡಬಹುದಾಗಿದೆ. ವಾಯರ್‌ಲೆಸ್‌ ಮೂಲಕ ಸಂಪರ್ಕ ಮಾಡಬಹುದು. ಈ ಸೌಂಡ್‌ಬಾರ್ ಎಲ್‌ಇಡಿ ಡಿಸ್‌ಪ್ಲೇ ಹೊಂದಿದ್ದು, ವಾಲ್ಯೂಮ್ ಮತ್ತು ಮೀಡಿಯಾ ಆಯ್ಕೆಗಳನ್ನು ರಿಮೋಟ್ ಕಂಟ್ರೋಲ್‌ನೊಂದಿಗೆ ಕಂಟ್ರೋಲ್ ಮಾಡಬಹುದು.

ಜೆಬಿಎಲ್ ಸಿನಿಮಾ SB110
ಮಾರುಕಟ್ಟೆಯಲ್ಲಿ ಆಡಿಯೋ ಉತ್ಪನ್ನಗಳಲ್ಲಿ ಜೆಬಿಎಲ್ ಬ್ರ್ಯಾಂಡ್‌ ಹೆಸರು ಪ್ರಮುಖ ಬ್ರ್ಯಾಂಡ್‌ಗಳ ಲಿಸ್ಟ್‌ನಲ್ಲಿದೆ. ಜೆಬಿಎಲ್ ಸಂಸ್ಥೆಯ ಜೆಬಿಎಲ್ ಸಿನಿಮಾ SB110 ಸೌಂಡ್‌ಬಾರ್ ಅತ್ಯುತ್ತಮ ಆಡಿಯೋ ಆಯ್ಕೆಗಳನ್ನು ಒಳಗೊಂಡಿದೆ. ಇದು ಡಾಲ್ಬಿ ಡಿಜಿಟಲ್ ಆಡಿಯೋ, ಇನ್‌ಬಿಲ್ಟ್‌ ಸಬ್‌ ವೂಫರ್, ರಿಮೋಟ್‌ನೊಂದಿಗೆ ಹೋಮ್ ಥೇಯೇಟರ್ ಸೌಲಭ್ಯಗಳನ್ನು ಪಡೆದಿದೆ. HDMI ARC ಮತ್ತು ಬ್ಲೂಟೂತ್ ಸಂಪರ್ಕ ಆಯ್ಕೆಗಳನ್ನು ಪಡೆದಿಕೊಂಡಿದೆ. ಇದು 110 ವ್ಯಾಟ್ ಔಟ್‌ಪುಟ್‌ ಸಾಮರ್ಥ್ಯದ ಹೊಂದಿದ್ದು, ಈ ಡಿವೈಸ್‌ ಅನ್ನು ಟಿವಿ, ಸ್ಮಾರ್ಟ್ಫೋನ್ ಅಥವಾ ಟ್ಯಾಬ್ಲೆಟ್‌ ಡಿವೈಸ್‌ಗಳಿಗೆ ಕನೆಕ್ಟ್ ಮಾಡಬಹುದಾಗಿದೆ.

ಪೋರ್ಟ್ರಾನಿಕ್ಸ್ ಫ್ಯೂರ್ ಸೌಂಡ್‌ 102
ಪೋರ್ಟ್ರಾನಿಕ್ಸ್ ಆಡಿಯೋ ಕಂಪನಿಯ ಈ ಸೌಂಡ್‌ಬಾರ್‌ ಆಕರ್ಷಕ ಫೀಚರ್ಸ್‌ ಹೊಂದಿದೆ. ಇದು 160W ಅಡ್ವಾನ್ಸ್ಡ್ ಬ್ಲೂಟೂತ್ ತಂತ್ರಜ್ಞಾನದೊಂದಿಗೆ ಬರುತ್ತದೆ. ಈ ಸೌಂಡ್‌ಬಾರ್ ವಾಯರ್‌ಲೆಸ್‌ ಸಬ್ ವೂಫರ್‌ ಹೊಂದಿದ್ದು, ಇದು ಹೈ ಡೆಫಿನಿಷನ್ ಬಾಸ್ ಆಡಿಯೋವನ್ನು ಒದಗಿಸುತ್ತದೆ.

ಯಮಹಾ YAS-109
ಯಮಹಾ ಕಂಪನಿಯ ಈ ಸೌಂಡ್‌ಬಾರ್ ಅತ್ಯುತ್ತಮ ಆಡಿಯೋ ಆಯ್ಕೆಗಳನ್ನು ಒಳಗೊಂಡಿದೆ. ಇದು ಇನ್‌ಬಿಲ್ಟ್‌ ಸಬ್ ವೂಫರ್‌ಗಳು ಹೊಂದಿದ್ದು, ಬ್ಲೂಟೂತ್ ಮತ್ತು ಅಲೆಕ್ಸಾ ವಾಯಿಸ್ ಅಸಿಸ್ಟಂಟ್ ಸೌಲಭ್ಯ ಪಡೆದಿದೆ. ಈ ಡಿವಯಸ್ ಬ್ಲೂಟೂತ್ ಕನೆಕ್ಟಿವಿಟಿ ಆಯ್ಕೆ ಹೊಂದಿದ್ದು, ಟಿವಿ, ಸ್ಮಾರ್ಟ್ಫೋನ್ ಅಥವಾ ಟ್ಯಾಬ್ಲೆಟ್‌ ಡಿವೈಸ್‌ಗಳಿಗೆ ಕನೆಕ್ಟ್ ಮಾಡಬಹುದಾಗಿದೆ.

English summary
Amazon Great Indian Festival Sale 2021: Upto 60 Off For These Soundbars.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+