ಡಿಸ್ಕೌಂಟ್‌ನಲ್ಲಿ ಹೆಡ್‌ಫೋನ್ ಖರೀದಿಸಬೇಕೆ?..ಈ ಚಾನ್ಸ್‌ ಮಿಸ್‌ ಮಾಡ್ಕೋಬೇಡಿ!

ಇ-ಕಾಮರ್ಸ್ ದೈತ್ಯ ಸಂಸ್ಥೆ ಎನಿಸಿಕೊಂಡಿರುವ ಅಮೆಜಾನ್ ತಾಣವು ವಿಶೇಷ ಸೇಲ್‌ ಆಯೋಜಿಸುವ ಮೂಲಕ ಆನ್‌ಲೈನ್ ಶಾಪಿಂಗ್ ಪ್ರಿಯರನ್ನು ಆಕರ್ಷಿಸುತ್ತದೆ. ಸೇಲ್‌ನಲ್ಲಿ ಮುಖ್ಯವಾಗಿ ಗ್ಯಾಡ್ಜೆಟ್ಸ್‌ಗಳಿಗೆ ಹಾಗೂ ಎಲೆಕ್ಟ್ರಾನಿಕ್ ಉತ್ಪನ್ನಗಳಿಗೆ ವಿಶೇಷ ಡಿಸ್ಕೌಂಟ್‌ ಘೋಷಿಸುತ್ತದೆ. ಇನ್ನು ಹಬ್ಬದ ದಿನಗಳ ಸೇಲ್‌ನಲ್ಲಿ ಹೆಚ್ಚುವರಿ ರಿಯಾಯಿತಿ ಆಯ್ಕೆಗಳನ್ನು ಗ್ರಾಹಕರಿಗೆ ನೀಡುತ್ತದೆ. ಅಮೆಜಾನ್‌ನ ಇದೀಗ ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ 2021 ಸೇಲ್‌ ಘೋಷಿಸಿದೆ.

ಡಿಸ್ಕೌಂಟ್‌ನಲ್ಲಿ ಹೆಡ್‌ಫೋನ್ ಖರೀದಿಸಬೇಕೆ?..ಈ ಚಾನ್ಸ್‌ ಮಿಸ್‌ ಮಾಡ್ಕೋಬೇಡಿ!

ಹೌದು, ಅಮೆಜಾನ್ ಸಂಸ್ಥೆಯು ಗ್ರೇಟ್ ಇಂಡಿಯನ್ ಸೇಲ್ 2021 ಅನ್ನು ಘೋಷಿಸಿದೆ. ಈ ಸೇಲ್ ಇದೇ ಅಕ್ಟೋಬರ್ 3ರಂದು ಶುರುವಾಗಲಿದ್ದು, ಎಲ್ಲ ಬಗೆಯ ಉತ್ಪನ್ನಗಳಿಗೆ ಆಕರ್ಷಕ ಆಫರ್‌ಗಳು ಲಭ್ಯವಾಗಲಿವೆ. ಇನ್ನು ಈ ಗ್ರೇಟ್ ಇಂಡಿಯನ್ ಸೇಲ್ 2021 ಮಾರಾಟದಲ್ಲಿ ಸ್ಮಾರ್ಟ್‌ಫೋನ್‌ಗಳಿಗೆ, ಲ್ಯಾಪ್‌ಟಾಪ್‌ಗಳು, ಸ್ಪೀಕರ್‌ಗಳು, ಸ್ಮಾರ್ಟ್‌ವಾಚ್‌ಗಳು ಮತ್ತು ಇತರ ಎಲೆಕ್ಟ್ರಾನಿಕ್ಸ್‌ಗಳಿಗೆ ದೊಡ್ಡ ರಿಯಾಯಿತಿಯನ್ನು ನೀಡುತ್ತದೆ. ಅದರೊಂದಿಗೆ ಆಡಿಯೋ ಉತ್ಪನ್ನಗಳಾದ ಹೆಡ್‌ಫೋನ್ ಹಾಗೂ ಸ್ಪೀಕರ್ಸ್‌ಗಳಿಗೂ ಬೊಂಬಾಟ್ ಕೊಡುಗೆ ಲಭ್ಯವಾಗಲಿದೆ.

ಶಾಪಿಂಗ್ ಪ್ರಿಯರು ಬಹುನಿರೀಕ್ಷೆಯಿಂದ ಎದುರು ನೋಡುತ್ತಿರುವ ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್‌ನಲ್ಲಿ ಆಯ್ದ ಕಂಪನಿಗಳ ಆಡಿಯೋ ಉತ್ಪನ್ನಗಳಿಗೆ ಭರ್ಜರಿ ಡಿಸ್ಕೌಂಟ್‌ ದೊರೆಯಲಿದೆ. ಬೋಟ್, ಸೋನಿ ಸೇರಿದಂತೆ ಇತರೆ ಜನಪ್ರಿಯ ಬ್ರ್ಯಾಂಡ್‌ಗಳ ಆಡಿಯೋ ಡಿವೈಸ್‌ಗಳು ಡಿಸ್ಕೌಂಟ್‌ ಬೆಲೆಯಲ್ಲಿ ಸಿಗಲಿವೆ. ಹಾಗಾದರೇ ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್‌ನಲ್ಲಿ ರಿಯಾಯಿತಿ ದರದಲ್ಲಿ ಲಭ್ಯವಾಗುವ ಹೆಡ್‌ಫೋನ್ ಹಾಗೂ ಸ್ಪೀಕರ್ಸ್‌ ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಬೋಟ್ ರಾಕರ್ಜ್ 255
ಬೋಟ್ ಸಂಸ್ಥೆಯ ಜನಪ್ರಿಯ ಇಯರ್‌ಫೋನ್‌ಗಳಲ್ಲಿ ಬೋಟ್ ರಾಕರ್ಸ್ ವೈರ್‌ಲೆಸ್ ಇಯರ್‌ಫೋನ್‌ಗಳು ಕೂಡ ಒಂದಾಗಿದೆ. ಈ ಇಯರ್‌ಫೋನ್‌ ಕ್ವಾಲ್ಕಾಮ್ CSR 8635 ಪ್ರೊಸೆಸರ್‌ ಅನ್ನು ಒಳಗೊಂಡಿದೆ. ಅಲ್ಲದೆ ಇದು 5.0 ಬ್ಲೂಟೂತ್ ಅನ್ನು ಬೆಂಬಲಿಸಲಿದ್ದು, ಅಧಿಕ ಬ್ಯಾಟರಿ ಸಾಮರ್ಥ್ಯದ ಪಾಲಿಮರ್ ಬ್ಯಾಟರಿ ಪ್ಯಾಕ್‌ಆಪ್‌ ಅನ್ನು ಹೊಂದಿದ್ದು, 8 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್ ಪಡೆದಿದೆ. ಅಲ್ಲದೆ ಸಿರಿ ಹಾಗೂ ಗೂಗಲ್ ಅಸಿಸ್ಟಂಟ್ ವಾಯಿಸ್ ಕಮಾಂಡ್ ಸೌಲಭ್ಯವನ್ನು ಪಡೆದಿದೆ. ಇದು IPX -4 ರೇಟಿಂಗ್ ವಾಟರ್‌ ಪ್ರೂಪ್‌ ಫೀಚರ್ಸ್‌ ಅನ್ನು ಒಳಗೊಂಡಿದ್ದು ಬಳಕೆದಾರರಿಗೆ ಉತ್ತಮ ಅನುಭವ ನೀಡಲಿದೆ. ಇನ್ನು ಈ ಇಯರ್‌ಫೋನ್‌ ಆಕ್ಟಿವ್ ಬ್ಲ್ಯಾಕ್ ಆಯ್ಕೆಯಲ್ಲಿ ಲಭ್ಯವಿದೆ.

boAt Rockerz 255 in-Ear Earphones with 8 Hours Battery, IPX5, Bluetooth V5.0 and Voice Assistant(Active Black)
₹799.00
₹2,990.00
73%

ಬೋಟ್ ಏರ್‌ಡೋಪ್ಸ್ 411
ಬೋಟ್ ಏರ್‌ಡೋಪ್ಸ್ 441 ಟ್ರೂಲಿ ವಾಯರ್‌ಲೆಸ್‌ ಬಜೆಟ್‌ ದರದಲ್ಲಿ ಅತ್ಯುತ್ತಮ ಡಿವೈಸ್ ಎನಿಸಿಕೊಂಡಿದೆ. ಇದು ಸಂಪರ್ಕಕ್ಕಾಗಿ ಬ್ಲೂಟೂತ್ 5.0 ಅನ್ನು ಹೊಂದಿದೆ. ಈ ಡಿವೈಸ್‌ IWP (Insta Wake N' Pair) ತಂತ್ರಜ್ಞಾನವನ್ನು ಹೊಂದಿದ್ದು, ಚಾರ್ಜಿಂಗ್ ಕೇಸ್ ಮುಚ್ಚಳವನ್ನು ತೆರೆದ ತಕ್ಷಣ, ಇಯರ್‌ಬಡ್‌ಗಳು ಪವರ್ ಆನ್ ಆಗುತ್ತವೆ ಮತ್ತು ಸಂಪರ್ಕ ಮೋಡ್‌ಗೆ ಬರುತ್ತವೆ. ಹಾಗೆಯೇ ಈ ಡಿವೈಸ್‌ 6ಎಂಎಂ ಆಡಿಯೊ ಡ್ರೈವರ್‌ಗಳ ಸೌಲಭ್ಯ ಪಡೆದಿದೆ. ಹಾಗೆಯೇ ಡಿವೈಸ್‌ 35 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದೆ. ಪ್ರತಿ ಚಾರ್ಜ್‌ಗೆ ಸುಮಾರು 5 ಗಂಟೆ ಸೌಂಡ್ ಬ್ಯಾಕ್‌ಅಪ್‌ ಲಭ್ಯವಿದ್ದು, ಇನ್ನು ಈ ಡಿವೈಸ್‌ನ ಕ್ಯಾರಿ ಕಮ್ ಚಾರ್ಜ್ ಕೇಸ್‌ ಸುಮಾರು 25 ಗಂಟೆಗಳ ಬ್ಯಾಟರಿ ಬಾಳಿಕೆಯ ಸೌಲಭ್ಯವನ್ನು ಒದಗಿಸಲಿದೆ ಎಂದು ಹೇಳಲಾಗಿದೆ. ಹಾಗೆಯೇ ಈ ಡಿವೈಸ್‌ ಆಂಡ್ರಾಯ್ಡ್‌ ಫೋನ್ಸ್‌, ಐಓಎಸ್‌ ಐಫೋನ್‌, ಲ್ಯಾಪ್‌ಟಾಪ್ ಹಾಗೂ ಇತರೆ ಬ್ಲೂಟೂತ್ ಸಂಪರ್ಕ್ ಸಾಧನಗಳೊಂದಿಗೆ ಕನೆಕ್ಟ್‌ ಆಗುವ ಆಯ್ಕೆ ಹೊಂದಿದೆ.

boAt Airdopes 441 TWS Ear-Buds with IWP Technology, Immersive Audio, Up to 30H Total Playback, IPX7 Water Resistance, Super Touch Controls, Secure Sports Fit & Type-C Port(Active Black)
₹1,799.00
₹5,999.00
70%

ಸೋನಿ WH-1000XM4 ವಾಯರ್‌ಲೆಸ್‌ ನಾಯಿಸ್‌ಲೆಸ್‌ ಹೆಡ್‌ಫೋನ್‌
ಆಡಿಯೋ ಡಿವೈಸ್‌ಗಳಲ್ಲಿ ವಿಶೇಷ ಹೆಸರು ಪಡೆದಿರುವ ಸೋನಿ ಕಂಪನಿಯ WH-1000XM4 ವೈರ್‌ಲೆಸ್ ನಾಯಿಸ್‌ಲೆಸ್‌ ಹೆಡ್‌ಫೋನ್‌ ಅತ್ಯುತ್ತಮ ನಾಯಸ್‌ ಸೆನ್ಸರ್' ತಂತ್ರಜ್ಞಾನವನ್ನು ಒಳಗೊಂಡಿದೆ. ಗೆಸ್ಚರ್ ಆಯ್ಕೆಗಳನ್ನು ಪಡೆದುಕೊಂಡಿರುವ ಈ ಡಿವೈಸ್‌ ಪ್ರಿಶಿಯಸ್‌ ವಾಯಿಸ್‌ ಪಿಕ್‌ಅಪ್‌ ತಂತ್ರಜ್ಞಾನ ಹೊಂದಿದ್ದು, 360 ರಿಯಾಲಿಟಿ ಆಡಿಯೊ ವ್ಯವಸ್ಥೆಯನ್ನು ಪಡೆದಿದೆ. ಸ್ಪೀಕ್‌ ಟು ಚಾಟ್‌ ವಿಶೇಷ ಆಯ್ಕೆಯನ್ನು ಹೊಂದಿದ್ದು, ಬಳಕೆದಾರರ ವಾಯಿಸ್‌ ಗುರುತಿಸಿಲು ನೆರವಾಗಲಿದೆ. ಅಲ್ಲದೇ ಏಕಕಾಲದಲ್ಲಿ ಎರಡು ಬ್ಲೂಟೂತ್ ಸಾಧನಗಳಿಗೆ ಸಂಪರ್ಕಿಸಬಹುದು, ಬಳಕೆದಾರರಿಗೆ ಸಂಗೀತವನ್ನು ಕೇಳಲು ಮತ್ತು ಅವರ ಸ್ಮಾರ್ಟ್‌ಫೋನ್‌ನಿಂದ ತಕ್ಷಣ ಕರೆಗಳನ್ನು ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ. ಹೊಸ ಹೆಡ್‌ಫೋನ್‌ಗಳು 30 ಗಂಟೆಗಳ ಬ್ಯಾಟರಿ ಬಾಳಿಕೆ ಮತ್ತು ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರಲಿವೆ ಎಂದು ಸೋನಿ ಬಹಿರಂಗಪಡಿಸಿದೆ.

Sony WH-1000XM4 Industry Leading Wireless Noise Cancellation Headphones, Bluetooth Headset with Mic for Phone Calls, 30 Hrs Battery Life, Quick Charge, WFH, Touch Control, Alexa Voice Control (Black)
₹22,990.00
₹29,990.00
23%

ಬೌಲ್ಟ್ ಆಡಿಯೋ ಏರ್‌ಬಾಸ್ Q10 ವಾಯರ್‌ಲೆಸ್‌ ಇಯರ್‌ಫೋನ್
ಜನಪ್ರಿಯ ಬೌಲ್ಟ್‌ ಕಂಪನಿಯ ಈ ಆಡಿಯೋ ಡಿವೈಸ್ ಆಕರ್ಷಕ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದು ಸಿರಿ ಮತ್ತು ಗೂಗಲ್‌ ಅಸಿಸ್ಟಂಟ್ ವಾಯಿಸ್ ಕಮಾಂಡ್ ಸೇವೆಗಳನ್ನು ಒಳಗೊಂಡಿದೆ. ಹಾಗೆಯೇ ವಾಯಿಸ್‌ ಕ್ಯಾನ್ಸ್‌ಲೇಶನ್ ಆಯ್ಕೆಗಳನ್ನು ಒಳಗೊಂಡಿದೆ. ಪ್ರತಿ ಚಾರ್ಜ್ ಆರು ಗಂಟೆಗಳ ಬ್ಯಾಕ್‌ಅಪ್‌ ನೀಡುತ್ತದೆ. ಇನ್ನು ಕ್ಯಾರಿ ಕೇಸ್‌ ಸಹ ಅತ್ಯುತ್ತಮ ವ್ಯಾಕ್‌ಅಪ್‌ ನೀಡುತ್ತದೆ.

Boult Audio AirBass Q10 True Wireless in-Ear Earphones with 24H Total Playtime, Touch Controls, IPX5 Water Resistant, Low Latency for Gaming (Black)
₹799.00
₹4,999.00
84%

ನಾಯಿಸ್‌ ಏರ್‌ಬಡ್ಸ್‌
ನಾಯಿಸ್‌ ಏರ್ ಬಡ್ಸ್ ಡಿವೈಸ್ ಆಕರ್ಷಕ ಫೀಚರ್ಸ್‌ಗಳಿಂದ ಗಮನ ಸೆಳೆದಿದೆ. ಇದು 13mm ಆಡಿಯೋ ಡ್ರೈವರ್‌ಗಳನ್ನು ಹೊಂದಿದ್ದು, ಇದು ಸಮತೋಲಿತ ಧ್ವನಿಯನ್ನು ನೀಡುತ್ತದೆ. ಇನ್ನು ಈ ಇಯರ್‌ಬಡ್ಸ್‌ ಕನೆಕ್ಟಿವಿಟಿಗಾಗಿ ಬ್ಲೂಟೂತ್ 5.0 ಬೆಂಬಲಿಸಲಿದ್ದು, 10 ಮೀಟರ್ ವ್ಯಾಪ್ತಿಯನ್ನು ಹೊಂದಿದೆ. ಅಲ್ಲದೆ ನಾಯ್ಸ್‌ ಏರ್ ಬಡ್ಸ್ ಆಂಡ್ರಾಯ್ಡ್ ಮತ್ತು ಐಒಎಸ್ ಸಾಧನಗಳೊಂದಿಗೆ ಹೊಂದಿಕೊಳ್ಳುತ್ತದೆ. ಜೊತೆಗೆ ನೀವು ಹ್ಯಾಂಡ್ಸ್ ಫ್ರೀ ಕರೆ, ಟಚ್‌ ಕಂಟ್ರೋಲ್‌ ಮತ್ತು ನಾಯ್ಸ್‌ ಏರ್ ಬಡ್ಸ್‌ನೊಂದಿಗೆ ಸಿರಿ ಮತ್ತು ಗೂಗಲ್ ಅಸಿಸ್ಟೆಂಟ್‌ಗೆ ಪ್ರವೇಶವನ್ನು ಪಡೆಯಬಹುದಾಗಿದೆ. ಧ್ವನಿ ಕರೆಗಳಿಗಾಗಿ ಪ್ರತ್ಯೇಕ ಮೈಕ್‌ಗಳನ್ನು ಹೊಂದಿವೆ. ಜೊತೆಗೆ ಈ ಇಯರ್‌ಬಡ್ಸ್‌ ಸ್ವತಃ 45mAh ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿರುವುದರಿಂದ ಇದು ನಾಲ್ಕು ಗಂಟೆಗಳ ಪ್ಲೇ ಟೈಂ ಅನ್ನು ನೀಡಲಿದೆ. ಸುಮಾರು 1.2 ಗಂಟೆಗಳ ಅವಧಿಯಲ್ಲಿ ಇವುಗಳನ್ನು ಚಾರ್ಜ್‌ ಮಾಡಬಹುದಾಗಿದೆ.

Noise Air Buds Truly Wireless Earbuds with Mic for Crystal Clear Calls, HD Sound, Smart Touch and 20 Hour Playtime - ICY White
₹1,498.00
₹5,999.00
75%

Disclaimer: This site contains affiliate links to products. We may receive a commission for purchases made through these links. However, this does not influence or impact any of our articles, such as reviews, comparisons, opinion pieces and verdicts.

Best Deals and Discounts
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X