Home
Deal of the day

ಮತ್ತೆ ಬಂದಿದೆ 'ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್': ಸಿಗುತ್ತೆ ಭಾರೀ ಡಿಸ್ಕೌಂಟ್‌!

ಜನಪ್ರಿಯ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ಅಮೆಜಾನ್ ಒಂದಿಲ್ಲೊಂದು ಮಾರಾಟ ಮೇಳಗಳನ್ನು ಆಯೋಜಿಸುತ್ತಲೆ ಸಾಗಿದೆ. ಆ ಮೂಲಕ ಗ್ರಾಹಕರ ಗಮನ ಸೆಳೆಯುತ್ತ ಮುನ್ನಡೆದಿದೆ. ಮಾರಾಟ ಮೇಳಗಳಲ್ಲಿ ಸ್ಮಾರ್ಟ್‌ಫೋನ್‌ ಸೇರಿದಂತೆ ಪ್ರಮುಖ ಗ್ಯಾಜೆಟ್ಸ್‌ಗಳಿಗೆ ಅತ್ಯುತ್ತಮ ರಿಯಾಯಿತಿ ಲಭ್ಯ ಮಾಡುತ್ತದೆ. ಇನ್ನು ಹಬ್ಬದ ವಿಶೇಷ ಮಾರಾಟ ಮೇಳ ಇದ್ದಾಗ ಫೋನ್‌ಗಳಿಗೆ ಮತ್ತಷ್ಟು ಹೆಚ್ಚಿನ ರಿಯಾಯಿತಿ ನೀಡುತ್ತದೆ. ಸದ್ಯ ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಶುರುವಾಗಿದೆ.

ಮತ್ತೆ ಬಂದಿದೆ 'ಅಮೆಜಾನ್ ಗ್ರೇಟ್ ರಿಪಬ್ಲಿಕ್ ಡೇ ಸೇಲ್': ಭಾರೀ ಡಿಸ್ಕೌಂಟ್‌!

ಹೌದು, ಗಣರಾಜ್ಯೋತ್ಸವದ ಪ್ರಯುಕ್ತ ಅಮೆಜಾನ್ ತಾಣವು ಗ್ರೇಟ್ ರಿಪಬ್ಲಿಕ್ ಡೇ ಸೇಲ್ ಅನ್ನು ಆಯೋಜಿಸಿದೆ. ಈ ಸೇಲ್ ಜನೆವರಿ 17 ರಿಂದ ಜನೆವರಿ 20ರ ವರೆಗೂ ನಡೆಯಲಿದೆ. ಇನ್ನು ಈ ಮಾರಾಟ ಮೇಳದಲ್ಲಿ ಆಯ್ದ ಸ್ಮಾರ್ಟ್‌ಫೋನ್‌ಗಳಿಗೆ ಆಕರ್ಷಕ ರಿಯಾಯಿತಿ ಸಿಗಲಿದೆ. ಹಾಗೆಯೇ ಈ ಕೊಡುಗೆಯಲ್ಲಿ ಆಕರ್ಷಕ ಎಕ್ಸ್‌ಚೆಂಜ್ ಆಫರ್, ನೋ ಕಾಸ್ಟ್‌ ಇಎಮ್‌ಐ, ಕೊಪನ್‌ ನಂತಹ ಕೊಡುಗೆಗಳು ಸಿಗಲಿವೆ. ಇದರೊಂದಿಗೆ ಎಸ್‌ಬಿಐ ಕ್ರೆಡಿಟ್ ಕಾರ್ಡ್‌ಗಳ ಮೂಲಕ ಖರೀದಿಸುವ ಗ್ರಾಹಕರಿಗೆ ಶೇ. 10% ತ್ವರಿತ ರಿಯಾಯಿತಿ ತಿಳಿಸಿದೆ. ಹಾಗಾದರೇ ಅಮೆಜಾನ್‌ನ ಗ್ರೇಟ್ ರಿಪಬ್ಲಿಕ್ ಡೇ ಸೇಲ್ ನಲ್ಲಿ ಬೆಸ್ಟ್ ಡಿಸ್ಕೌಂಟ್‌ನಲ್ಲಿ ಕಾಣಿಸಿಕೊಂಡ ಫೋನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಟೆಕ್ನೋ ಸ್ಪಾರ್ಕ್‌ 8T ಸ್ಮಾರ್ಟ್‌ಫೋನ್‌
ಟೆಕ್ನೋ ಸ್ಪಾರ್ಕ್‌ 8T ಸ್ಮಾರ್ಟ್‌ಫೋನ್‌ 1080 x 2408 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.6 ಇಂಚಿನ ಪೂರ್ಣ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 20:9 ಅನುಪಾತವನ್ನು ಒಳಗೊಂಡಿದ್ದು, 401ppi ಪಿಕ್ಸಲ್ ಸಾಂದ್ರತೆಯನ್ನು ಹೊಂದಿದೆ. ಜೊತೆಗೆ 500 nits ಬ್ರೈಟ್ನೆಸ್‌ ಸಾಮರ್ಥ್ಯವನ್ನು ಪಡೆದಿದೆ. ಈ ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಹಿಲಿಯೋ G35 SoC ಪ್ರೊಸೆಸರ್‌ ಬಲವನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 ಸಪೋರ್ಟ್‌ ಸಹ ಪಡೆದಿದೆ. ಜೊತೆಗೆ 4GB RAM + 64GB ವೇರಿಯಂಟ್‌ ಆಯ್ಕೆಯನ್ನು ಹೊಂದಿದೆ. ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಅಪ್ ಅನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಇದಲ್ಲದೆ 8 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಹಾಗೆಯೇ ಟೆಕ್ನೋ ಸ್ಪಾರ್ಕ್‌ 8T ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಉತ್ತಮ ಸಾಮರ್ಥ್ಯದ ಚಾರ್ಜಿಂಗ್ ಸೌಲಭ್ಯ ನೀಡಲಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ M12 ಸ್ಮಾರ್ಟ್‌ಫೋನ್‌
ಸ್ಯಾಮ್‌ಸಂಗ್ ಗ್ಯಾಲಕ್ಸಿ M12 ಸ್ಮಾರ್ಟ್‌ ಫೋನ್‌ 720 x 1,600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಯನ್ನು ಹೊಂದಿದೆ. ಈ ಸ್ಮಾರ್ಟ್‌ ಫೋನ್‌ ಆಕ್ಟಾ ಕೋರ್‌ ಎಕ್ಸಿನೋಸ್‌ 850SoC ಪ್ರೊಸೆಸರ್‌ ಅನ್ನು ಹೊಂದಿದ್ದು, ಆಂಡ್ರಾಯ್ಡ್‌ನಲ್ಲಿ ಒನ್ ಯುಐ ಕೋರ್‌ ಬೆಂಬಲ ದೊಂದಿಗೆ ಕಾರ್ಯ ನಿರ್ವಹಿಸಲಿದೆ. ಹಾಗೆಯೇ ಇದು ಡ್ಯುಯಲ್ ಸಿಮ್ (ನ್ಯಾನೋ) ಸ್ಲಾಟ್‌ಗಳನ್ನು ಬೆಂಬಲಿಸುತ್ತದೆ. ಜೊತೆಗೆ 4GB RAM + 64 GB ಮತ್ತು 6GB RAM + 128 GB ವೇರಿಯೆಂಟ್‌ ಆಯ್ಕೆಯ ಇಂಟರ್‌ ಸ್ಟೋರೇಜ್‌ ಸಾಮರ್ಥ್ಯ ವನ್ನು ಹೊಂದಿದೆ. ಹಾಗೆಯೇ ಈ ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾವು 48 ಮೆಗಾ ಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಈ ಸ್ಮಾರ್ಟ್‌ ಫೋನ್‌ 6,000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

ಒನ್‌ಪ್ಲಸ್‌ 9 5G ಸ್ಮಾರ್ಟ್‌ಫೋನ್
ಒನ್‌ಪ್ಲಸ್‌ 9 ಸ್ಮಾರ್ಟ್‌ಫೋನ್ 1,080 x 2,400 ಪಿಕ್ಸಲ್ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ 6.55 AMOLED ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯ ಅನುಪಾತವು 20:9 ಆಗಿದೆ. ಹಾಗೆಯೇ ಡಿಸ್‌ಪ್ಲೇಯು 120Hz ಸ್ಕ್ರೀನ್‌ ರೀಫ್ರೇಶ್‌ ರೇಟ್ ಹೊಂದಿದೆ. ಇದು ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್‌ 888 SoC ಪ್ರೊಸೆಸರ್ ಅನ್ನು ಹೊಂದಿದೆ. ಅದರೊಂದಿಗೆ ಒನ್‌ಪ್ಲಸ್‌ ಕೂಲ್‌ ಪ್ಲೇ ಮಲ್ಟಿ ಲೇಯರ್ ಕೂಲಿಂಗ್ ತಂತ್ರಜ್ಞಾನ ಒಳಗೊಂಡಿದೆ. ಹಾಗೆಯೇ ಈ ಪ್ರೊಸೆಸರ್‌ ಆಂಡ್ರಾಯ್ಡ್‌ ಆಕ್ಸಿಜೆನ್ 11 ಓಎಸ್‌ ಬೆಂಬಲವನ್ನು ಪಡೆದುಕೊಂಡಿದೆ. ಇನ್ನು ಈ ಫೋನ್‌ಗಳು ಎರಡು ವೇರಿಯಂಟ್ ಮಾದರಿಗಳ ಆಯ್ಕೆ ಪಡೆದಿದ್ದು, ಅವುಗಳು ಕ್ರಮವಾಗಿ 8GB/12GB RAM ಮತ್ತು 128GB/256GB ಆಗಿವೆ. ಈ ಫೋನ್ ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್ ಪಡೆದಿದೆ. 48 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯ ಹೊಂದಿದೆ. ಜೊತೆಗೆ 4,500mAh ಬ್ಯಾಟರಿ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M32 5G ಸ್ಮಾರ್ಟ್‌ಫೋನ್‌
ಸ್ಯಾಮ್‌ಸಂಗ್ ಗ್ಯಾಲಕ್ಸಿ M32 5G ಸ್ಮಾರ್ಟ್‌ಫೋನ್‌ 720 x 1600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5 ಇಂಚಿನ HD+ TFT ಇನ್ಫಿನಿಟಿ ವಿ ಡಿಸ್‌ಪ್ಲೇ ಹೊಂದಿದೆ. ಈ ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 720 SoC ಪ್ರೊಸೆಸರ್‌ ಬಲವನ್ನು ಹೊಂದಿದೆ. ಇದು ಆಂಡ್ರಾಯ್ಡ್ 11 ಅನ್ನು ಒನ್‌ಯುಐ 3.1 ನೊಂದಿಗೆ ರನ್ ಮಾಡುತ್ತದೆ. ಹಾಗೆಯೇ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯ ಹೊಂದಿದೆ. ಇದು ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಇದಲ್ಲದೆ 13 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್‌ 5,000 mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದು 15W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ರೆಡ್ಮಿ 9A ಸ್ಮಾರ್ಟ್‌ಫೋನ್‌
ರೆಡ್ಮಿ 9A ಸ್ಮಾರ್ಟ್‌ಫೋನ್ 720 x 1600 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.53 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇಯು 19.5:9 ಅನುಪಾತವನ್ನು ಪಡೆದಿದೆ. ಇದು ಮೀಡಿಯಾ ಟೆಕ್ ಹಿಲಿಯೊ G25 ಪ್ರೊಸೆಸರ್‌ ಸಾಮರ್ಥ್ಯ ಹೊಂದಿದ್ದು, ಅದಕ್ಕೆ ಪೂಕರವಾಗಿ ಆಂಡ್ರಾಯ್ಡ್ 10 ಓಎಸ್ ಬೆಂಬಲ ಪಡೆದಿದೆ. ಹಾಗೆಯೇ ಈ ಫೋನ್ 2GB RAM + 32GB ಮತ್ತು 3GB RAM + 32GB ವೇರಿಯಂಟ್‌ನ ಎರಡು ಆಂತರಿಕ ಸ್ಟೋರೇಜ್‌ ಆಯ್ಕೆಯಗಳನ್ನು ಹೊಂದಿದೆ. ಹಾಗೆಯೇ ಈ ಫೋನ್ ಸಿಂಗಲ್ ಕ್ಯಾಮೆರಾ ಸೆಟ್‌ಅಪ್ ರಚನೆಯನ್ನು ಹೊಂದಿದೆ. ಹಿಂಬದಿಯಲ್ಲಿ ಕ್ಯಾಮೆರಾವು 13ಎಂಪಿ ಸೆನ್ಸಾರ್‌ನಲ್ಲಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿದೆ.

English summary
Amazon Great Republic Day Sale 2022: Best Deals on These Mobile Phones.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+