Laptop: ಅಮೆಜಾನ್ ಲ್ಯಾಪ್‌ಟಾಪ್ ಡೇಸ್ ಸೇಲ್: ಲ್ಯಾಪ್‌ಟಾಪ್ ಖರೀದಿದಾರರಿಗೆ ಹಬ್ಬವೋ ಹಬ್ಬ.
ಪ್ರಮುಖ ಇ-ಕಾಮರ್ಸ್ ಸೈಟ್‌ನಲ್ಲಿ ಒಂದಾಗಿರುವ ಅಮೆಜಾನ್ (Amazon) ಆಗಾಗ್ಗೆ ವಿಶೇಷ ಸೇಲ್‌ಗಳನ್ನು ಆಯೋಜನೆ ಮಾಡುತ್ತಲೇ ಇರುತ್ತದೆ. ಅದರಂತೆ ಈಗ ಲ್ಯಾಪ್‌ಟಾಪ್ (Laptop) ಸಂಬಂಧ ದೊಡ್ಡ ಮಟ್ಟದ ಸೇಲ್ ಆಯೋಜನೆ ಮಾಡಿದ್ದು, ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಉದ್ಯೋಗಿಗಳಿಗೆ ಇದು ಸುವರ್ಣಾವಕಾಶವಾಗಿದೆ.
ಹೌದು, ಅಮೆಜಾನ್ ಇದೀಗ ಲ್ಯಾಪ್‌ಟಾಪ್ ಡೇಸ್ ಸೇಲ್ (Amazon Laptop Days Sale) ಅನ್ನು ಘೋಷಣೆ ಮಾಡಿದೆ. ಈ ವಿಶೇಷ ಸೇಲ್‌ನಲ್ಲಿ ಹೆಚ್‌ಪಿ, ಅಸುಸ್, ಡೆಲ್, ಏಸರ್ ಸೇರಿದಂತೆ ಅನೇಕ ಬ್ರ್ಯಾಂಡ್‌ನ ಲ್ಯಾಪ್‌ಟಾಪ್‌ಗಳನ್ನು ಖರೀದಿ ಮಾಡಬಹುದಾಗಿದೆ. ಈ ಸೇಲ್‌ನಲ್ಲಿ ಲ್ಯಾಪ್‌ಟಾಪ್‌ಗಳ ಮೇಲೆ 35,000 ರೂ.ವರೆಗೂ ರಿಯಾಯಿತಿ ಇದೆ. ಹಾಗೆಯೇ ಮಾರ್ಚ್ 8 ಕ್ಕೆ ಈ ಸೇಲ್ ಮುಕ್ತವಾಗಲಿದೆ. ಹಾಗಿದ್ರೆ, ತಡಯಾಕೆ ಬನ್ನಿ ಯಾವೆಲ್ಲಾ ಲ್ಯಾಪ್‌ಟಾಪ್‌ಗಳಿಗೆ ಏನೆಲ್ಲಾ ಆಫರ್ ಬೆಲೆ ಇದೆ ಗಮನಿಸೋಣ.

ಯಾವೆಲ್ಲಾ ಲ್ಯಾಪ್‌ಟಾಪ್‌ಗಳಿಗೆ ಎಷ್ಟು ಆಫರ್ ಬೆಲೆ ಎಷ್ಟಿದೆ?: ನೀವು ಈಗ ಯಾವುದೇ ಲ್ಯಾಪ್‌ಟಾಪ್ ಕಡೆ ಕಣ್ಣಾಯಿಸಿದರೂ ಸಹ ಅದಕ್ಕೆ ಆಫರ್ ಲಭ್ಯ ಇದೆ. ಅದರಂತೆ ಇಂಟೆಲ್ ಸೆಲೆರಾನ್ ಪ್ರೊಸೆಸರ್ ಮತ್ತು 8GB DDR4 RAM, 512GB SSD ಸ್ಟೋರೇಜ್ ಆಯ್ಕೆಯ ಹೆಚ್‌ಪಿ ಲ್ಯಾಪ್‌ಟಾಪ್ 15s ಅನ್ನು 25,990 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಹಾಗೆಯೇ ಅಸುಸ್ ವಿವೋನುಕ್ 14 ಅನ್ನು 35,990 ರೂ.ಗಳಿಗೆ ಖರೀದಿ ಮಾಡಬಹುದು.
ಇದರ ಜೊತೆಗೆ ಇಂಟೆಲ್ 12ನೇ ಜನ್ ಕೋರ್ i3-1215U, 8GB RAM, 512GB SSD ಆಯ್ಕೆಯ ಡೆಲ್ 15 ಲ್ಯಾಪ್‌ಟಾಪ್ ಅನ್ನು 35,490 ರೂ.ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಇದರ ಜೊತೆಗೆ ಏಸರ್ ಆಸ್ಪೈರ್ ಲೈಟ್‌ಅನ್ನು 32,990 ರೂ.ಗಳಿಗೆ ಖರೀದಿ ಮಾಡಬಹುದಾಗಿದ್ದು, ಲೆನೊವೊ ಐಡಿಯಾಪ್ಯಾಡ್ ಸ್ಲಿಮ್ 3 ಅನ್ನು 34,990 ರೂ.ಗಳಿಗೆ ಲಭ್ಯ ಇದೆ.
ಇನ್ನು ಜೆಬ್ರೋನಿಕ್ಸ ಪ್ರೋ ಸರಣಿ Z NBC 4S ಅನ್ನು ಆಫರ್ ಬೆಲೆ 32,990 ರೂ.ಗಳಿಗೆ ಖರೀದಿ ಮಾಡಬಹುದಾಗಿದ್ದು, ಹಾನರ್ ಮ್ಯಾಜಿಕ್ ಬುಕ್ X16 (2024) (12ನೇ ಜನ್ ಇಂಟೆಲ್ ಕೋರ್ i5-12450H, 16GB RAM, 512GB SSD) ಲ್ಯಾಪ್‌ಟಾಪ್ ಅನ್ನು 46,990 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಇದರ ಜೊತೆಗೆ AXL ವಾಯುಬುಕ್ ಲ್ಯಾಪ್‌ಟಾಪ್ (4GB RAM, 128GB SSD) ಅನ್ನು ಕೇವಲ 12,990 ರೂ.ಗಳಿಗೆ ಖರೀದಿ ಮಾಡಬಹುದು.

ಅಸುಸ್ ವಿವೋಬುಕ್ 14 ಅನ್ನು 31,490ರೂ.ಗಳಿಗೆ ಹಾಗೂ ಡೆಲ್ ಇನ್ಸ್ಪಿರಾನ್ 3520 ಲ್ಯಾಪ್‌ಟಾಪ್ ಅನ್ನು 36,890 ರೂ.ಗಳಿಗೆ, ಹೆಚ್‌ಪಿ ಲ್ಯಾಪ್‌ಟಾಪ್ 15s (12ನೇ ಜನ್ ಇಂಟೆಲ್ ಕೋರ್ i3, 8GB DDR4 RAM, 512GB SSD) ಅನ್ನು 37,490 ರೂ,ಗಳಿಗೆ ಖರೀದಿ ಮಾಡಬಹುದಾಗಿದೆ. ಇದರ ಜೊತೆಗೆ ಪ್ರೀಮಿಯಂ ಲ್ಯಾಪ್‌ಟಾಪ್‌ಗಳು ಸಹ ಆಫರ್ ಬೆಲೆಗೆ ಲಭ್ಯ ಇದ್ದು, ಅವುಗಳ ಕಡೆಗೂ ಕಣ್ಣಾಯಿಸೋಣ ಬನ್ನಿ.
ಅಸುಸ್ ವಿವೋಬುಕ್ 15 (ಇಂಟೆಲ್ ಕೋರ್ i7-12650H 12th ಜನ್, 16 GB RAM, 512GB SSD) ಲ್ಯಾಪ್‌ಟಾಪ್ 59,990 ರೂ.ಗಳ ಬೆಲೆಗೆ ಲಭ್ಯ ಇದ್ದು, ಡೆಲ್ ಇನ್ಸ್ಪಿರಾನ್ 7430 2-ಇನ್-1 ಟಚ್ ಲ್ಯಾಪ್‌ಟಾಪ್ (13ನೇ ಜನ್ ಇಂಟೆಲ್ ಕೋರ್ i5-1335U ಪ್ರೊಸೆಸರ್, 8GB LP DDR5 RAM, 1TB SSD) ಆಯ್ಕೆಯ ಲ್ಯಾಪ್‌ಟಾಪ್ ಇದೀಗ ಆಫರ್ ಬೆಲೆ 76,990 ರೂ.ಗಳಿಗೆ ಲಭ್ಯ ಇದೆ.
ಇದಿಷ್ಟೇ ಅಲ್ಲದೆ ಹೆಚ್‌ಪಿ ಲ್ಯಾಪ್‌ಟಾಪ್ 15s (12ನೇ ಜನ್‌ಇಂಟೆಲ್ ಕೋರ್ i7-1255U, 16GB DDR4 RAM, 512GB SSD) ನ ಲ್ಯಾಪ್‌ಟಾಪ್ 62,490 ರೂ.ಗಳ ಬೆಲೆ ಹೊಂದಿದ್ದರೆ ಏಸರ್ ಆಸ್ಪೈರ್ 5 (13ನೇ ಜನ್ ಇಂಟೆಲ್ ಕೋರ್ i5, 16 GB RAM, 512 GB SSD) ಲ್ಯಾಪ್‌ಟಾಪ್ 56,490 ರೂ.ಗಳ ಬೆಲೆ ಪಡೆದಿದೆ. ಹಾಗೆಯೇ ಲೆನೊವೊ ಐಡಿಯಾಪ್ಯಾಡ್ 5 2-ಇನ್-1 ಲ್ಯಾಪ್‌ಟಾಪ್ ಅನ್ನು 65,690ರೂ.ಗಳಿಗೆ ಖರೀದಿ ಮಾಡಬಹುದು.

ಹಾಗೆಯೆ ಅಸುಸ್ ವಿವೋಬುಕ್ 16 (2023) (ಇಂಟೆಲ್ ಕೋರ್ i9-13900H 13th ಜನ್, 16GB RAM, 512GB SSD) ಲ್ಯಾಪ್‌ಟಾಪ್ 87,990ರೂ.ಗಳ ಬೆಲೆಯಲ್ಲಿ ಕಾಣಿಸಿಕೊಂಡಿದ್ದು, ಅಸುಸ್ ವಿವೋಬುಕ್ 16 (2023) (ಇಂಟೆಲ್ ಕೋರ್ i5-1335U 13th ಜನ್, 16GB RAM/512GB SSD) ಲ್ಯಾಪ್‌ಟಾಪ್ ಅನ್ನು ನೀವು 60,990 ರೂ.ಗಳ ಬೆಲೆಗೆ ಕೊಂಡುಕೊಳ್ಳಬಹುದಾಗಿದೆ. ಮತ್ತು ಡೆಲ್ ಇನ್ಸ್ಪಿರಾನ್ 3530 ಲ್ಯಾಪ್‌ಟಾಪ್ (13ನೇ ಜನ್ ಇಂಟೆಲ್ ಕೋರ್ i5-1335U ಪ್ರೊಸೆಸರ್, 8GB RAM/1TB SSD) ಲ್ಯಾಪ್‌ಟಾಪ್ ಅನ್ನು 59,990ರೂ.ಗಳಿಗೆ ಖರೀದಿ ಮಾಡಬಹುದು.
ಈ ವಿಶೇಷ ಸೇಲ್‌ನಲ್ಲಿ ಬ್ಯಾಂಕ್ ಬ್ಯಾಂಕ್ ಕೊಡುಗೆಗಳು: ಈ ವೇಳೆ ನೀವು ಇಎಮ್‌ಐ ಮೂಲಕವೂ ಲ್ಯಾಪ್‌ಟಾಪ್‌ಗಳನ್ನು ಖರೀದಿ ಮಾಡಬಹುದಾಗಿದೆ. ಅಂದರೆ 6 ತಿಂಗಳಿಗಿಂತ ಹೆಚ್ಚಿನ ಇಎಮ್‌ಐ ಅವಧಿಯೊಂದಿಗೆ ಹೆಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆ ಮಾಡಿದ್ರೆ 1500 ರೂ.ಗಳ ತ್ವರಿತ ರಿಯಾಯಿತಿ, ಒನ್‌ಕಾರ್ಡ್ ಕ್ರೆಡಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದಲ್ಲಿ 1500ರೂ.ಗಳ ತ್ವರಿತ ರಿಯಾಯಿತಿ, ಹೆಚ್‌ಎಸ್‌ಬಿಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದಲ್ಲಿ 500 ತ್ವರಿತ ರಿಯಾಯಿತಿ ಸಿಗಲಿದೆ. ಈ ಮೂಲಕ ಇನ್ನೂ ಹೆಚ್ಚಿನನ ಹಣ ಉಳಿತಾಯದೊಂದಿಗೆ ನಿಮ್ಮಿಷ್ಟದ ಲ್ಯಾಪ್‌ಟಾಪ್ ಖರೀದಿ ಮಾಡಬಹುದಾಗಿದೆ.


Click it and Unblock the Notifications








