Home
Deal of the day

ಅಮೆಜಾನ್‌ ಮಿ ಡೇಸ್‌ ಸೇಲ್‌: ಶಿಯೋಮಿ ಫೋನ್‌ಗಳಿಗೆ ಭಾರೀ ಡಿಸ್ಕೌಂಟ್!

ಇ-ಕಾಮರ್ಸ್‌ ದೈತ್ಯ ಅಮೆಜಾನ್ ಗ್ರಾಹಕರನ್ನು ಸೆಳೆಯಲು ಏನಾದರೊಂದು ಕೊಡುಗೆ ನೀಡುತ್ತಲೇ ಸಾಗಿದೆ. ಅದರಲ್ಲಿಯೂ ಹಬ್ಬ ಹಾಗೂ ವಿಶೇಷ ದಿನಗಳು ಬಂದರೇ, ಮಾರಾಟ ಮೇಳಗಳನ್ನು ಆಯೋಜಿಸಿ ಗ್ಯಾಡ್ಜೆಟ್ಸ್ ಉತ್ಪನ್ನಗಳಿಗೆ ಭರ್ಜರಿ ರಿಯಾಯಿತಿ ಕೊಡುಗೆ ಘೋಷಿಸುತ್ತದೆ. ಇದೀಗ ಅಮೆಜಾನ್ ತಾಣವು 'ಅಮೆಜಾನ್‌ ಮಿ ಡೇಸ್‌' ಸೇಲ್ ಮೇಳ ವನ್ನು ಆಯೋಜಿಸಿ ಗ್ರಾಹಕರನ್ನು ತನ್ನತ್ತ ಸೆಳೆದಿದೆ.

ಅಮೆಜಾನ್‌ ಮಿ ಡೇಸ್‌ ಸೇಲ್‌: ಶಿಯೋಮಿ ಫೋನ್‌ಗಳಿಗೆ ಭಾರೀ ಡಿಸ್ಕೌಂಟ್!

ಹೌದು, ಅಮೆಜಾನ್ ಪ್ಲಾಟ್‌ಫಾರ್ಮ್ ಇದೀಗ 'ಅಮೆಜಾನ್‌ ಮಿ ಡೇಸ್‌' ಸೇಲ್ ಆಯೋಜಿಸಿದೆ. ಈ ಮಾರಾಟ ಮೇಳವು ಮಾರ್ಚ್ 8 ರಿಂದ ಪ್ರಾರಂಭವಾಗಿದ್ದು, ಮಾರ್ಚ್ 10 ರ ವರೆಗೂ ಚಾಲ್ತಿ ಇರಲಿದೆ. ಈ ವೇಳೆ ಶಿಯೋಮಿ ಸಂಸ್ಥೆಯ ಆಯ್ದ ಸ್ಮಾರ್ಟ್‌ಫೋನ್‌ಗಳಿಗೆ ಭರ್ಜರಿ ಡಿಸ್ಕೌಂಟ್ ಸಿಗಲಿದೆ. ಹಾಗೆಯೇ ಹೆಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್‌ ಮೇಲೆ 1,000 ರೂ ವರೆಗೂ ರಿಯಾಯಿತಿ ತಿಳಿಸಿದೆ. ಇದರೊಂದಿಗೆ ಅತ್ಯುತ್ತಮ ಎಕ್ಸ್‌ಚೇಂಜ್ ಕೊಡುಗೆ ಸೌಲಭ್ಯ ಲಭ್ಯ ಮಾಡಿದೆ. ಹಾಗಾದರೇ ಅಮೆಜಾನ್ ತಾಣವು ಆಯೋಜಿಸಿರುವ 'ಅಮೆಜಾನ್‌ ಮಿ ಡೇಸ್‌' ಸೇಲ್ ಕೊಡುಗೆ ಪಡೆದ ಫೋನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ರೆಡ್ಮಿ 9 ಆಕ್ಟಿವ್ ಸ್ಮಾರ್ಟ್‌ಫೋನ್
ರೆಡ್ಮಿ 9 ಆಕ್ಟಿವ್ ಸ್ಮಾರ್ಟ್‌ಫೋನ್ 1080 x 2340 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.53 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇಯು ಪಂಚ್ ಹೋಲ್ ಕ್ಯಾಮೆರಾ ಮಾದರಿಯಲ್ಲಿದ್ದು, 20:9 ಅನುಪಾತವನ್ನು ಪಡೆದಿದೆ. ಇದು ಮೀಡಿಯಾ ಟೆಕ್ ಹಿಲಿಯೊ G35 SoC ಪ್ರೊಸೆಸರ್‌ ಸಾಮರ್ಥ್ಯ ಹೊಂದಿದ್ದು, ಅದಕ್ಕೆ ಪೂಕರವಾಗಿ ಆಂಡ್ರಾಯ್ಡ್ 10 ಓಎಸ್ ಬೆಂಬಲ ಪಡೆದಿದೆ. ಹಾಗೆಯೇ ಈ ಫೋನ್ 4GB + 64GB ಮತ್ತು 6GB + 128GB ಸ್ಟೋರೇಜ್ ಸಾಮರ್ಥ್ಯದ ಎರಡು ಆಂತರಿಕ ಸ್ಟೋರೇಜ್‌ ಆಯ್ಕೆಯಗಳನ್ನು ಹೊಂದಿದೆ. ಹಾಗೆಯೇ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ರಚನೆಯನ್ನು ಹೊಂದಿದೆ. ಮುಖ್ಯ ಕ್ಯಾಮೆರಾವು 13 ಎಂಪಿ ಸೆನ್ಸಾರ್‌ನಲ್ಲಿದ್ದು, ಸೆಲ್ಫಿಗಾಗಿ 5ಎಂಪಿ ಸೆನ್ಸಾರ್ ಕ್ಯಾಮೆರಾ ಒದಗಿಸಲಾಗಿದೆ. ಇದರೊಂದಿಗೆ 5000mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿದೆ.

ರೆಡ್ಮಿ ನೋಟ್ 10T 5G ಸ್ಮಾರ್ಟ್‌ಫೋನ್‌
ರೆಡ್ಮಿ ನೋಟ್ 10T 5G ಸ್ಮಾರ್ಟ್‌ಫೋನ್‌ 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5 ಇಂಚಿನ ಫುಲ್‌ ಹೆಚ್‌ಡಿ + ಡಿಸ್‌ಪ್ಲೇ ಹೊಂದಿದೆ. ಇದು ಮೀಡಿಯಾಟೆಕ್ ಡೈಮೆನ್ಸಿಟಿ 700 SoC ಪ್ರೊಸೆಸರ್‌ ಸಾಮರ್ಥ್ಯ ಹೊಂದಿದೆ. ಇದು ಆಂಡ್ರಾಯ್ಡ್ 11 ನಲ್ಲಿ MIUI ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ಹಾಗೆಯೇ ಈ ಫೋನ್ 4GB + 64 GB ಮತ್ತು 6GB RAM + 128 GB ಆಂತರಿಕ ಸ್ಟೋರೇಜ್‌ ಆಯ್ಕೆಯಗಳನ್ನು ಹೊಂದಿದೆ. ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್ ಹೊಂದಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಹಾಗೆಯೇ ಇದು 5,000 mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, 18W ಫಾಸ್ಟ್ ಚಾರ್ಜಿಂಗ್ ಬೆಂಬಲಿಸಲಿದೆ.

ರೆಡ್ಮಿ ನೋಟ್ 10S ಸ್ಮಾರ್ಟ್‌ಫೋನ್‌
ರೆಡ್ಮಿ ನೋಟ್ 10s ಸ್ಮಾರ್ಟ್‌ ಫೋನ್‌ 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯದ 6.43 ಇಂಚಿನ AMOLED ಫುಲ್‌ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 20: 9 ರಚನೆಯ ಅನುಪಾತ ವನ್ನು ಹೊಂದಿದೆ. ಇದು ಮೀಡಿಯಾ ಟೆಕ್ ಹೆಲಿಯೊ G95 SoC ಪ್ರೊಸೆಸರ್‌ ಸಾಮರ್ಥ್ಯ ಹೊಂದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 ಆಧಾರಿತ MIUI 12.5 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟಅಪ್‌ ಹೊಂದಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಇದಲ್ಲದೆ 13 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ. 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಇದು 33W ಫಾಸ್ಟ್ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ.

ಶಿಯೋಮಿ 11 ಲೈಟ್ NE 5G ಸ್ಮಾರ್ಟ್‌ಫೋನ್
ಶಿಯೋಮಿ ಮಿ 11 ಲೈಟ್ NE 5G ಸ್ಮಾರ್ಟ್‌ಫೋನ್‌ 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.55 ಇಂಚಿನ ಫುಲ್‌ ಹೆಚ್‌ಡಿ + OLED ಡಿಸ್‌ಪ್ಲೇಯನ್ನು ಹೊಂದಿದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 780G SoC ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 11 ಬೆಂಬಲವನ್ನು ಒಳಗೊಂಡಿದೆ. ಹಾಗೆಯೇ 6 GB RAM ಮತ್ತು 128GB ಹಾಗೂ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದ ವೇರಿಯೆಂಟ್‌ ಆಯ್ಕೆ ಯನ್ನು ಹೊಂದಿದೆ. ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿವೆ. ಇದಲ್ಲದೆ 20 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಈ ಫೋನ್ ಒಳಗೊಂಡಿದೆ.

ಶಿಯೋಮಿ 11T ಪ್ರೊ 5G ಸ್ಮಾರ್ಟ್‌ಫೋನ್‌
ಶಿಯೋಮಿ 11T ಪ್ರೊ 5G ಸ್ಮಾರ್ಟ್‌ಫೋನ್‌ 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.67 ಇಂಚಿನ ಫುಲ್‌ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಆಕ್ಟಾ ಕೋರ್ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 888 SoC ಪ್ರೊಸೆಸರ್‌ ಬಲವನ್ನು ಪಡೆದಿದೆ. ಹಾಗೆಯೇ 8GB + 128GB, 8GB + 256GB ಮತ್ತು 12GB + 256GB ಸಾಮರ್ಥ್ಯದ ವೇರಿಯಂಟ್‌ ಆಯ್ಕೆಗಳನ್ನು ಹೊಂದಿದೆ. ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108 ಮೆಗಾ ಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

English summary
Amazon Mi Days Sale: Best Discount On Redmi Note 10s, Xiaomi 11T Pro 5g and More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+