Home
Deal of the day

ಡಿಸ್ಕೌಂಟ್‌ನಲ್ಲಿ ಒಪ್ಪೋ ಮತ್ತು ವಿವೋ ಫೋನ್‌ ಖರೀದಿಗೆ ಇಲ್ಲಿದೆ ಬೆಸ್ಟ್‌ ಆಫರ್!

ಲೀಡಿಂಗ್ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ಅಮೆಜಾನ್ ವಿಶೇಷ ಮಾರಾಟ ಮೇಳವನ್ನು ಆಯೋಜಿಸುವ ಮೂಲಕ ಗ್ರಾಹಕರ ಗಮನ ಸೆಳೆಯುತ್ತದೆ. ವಿಶೇಷವಾಗಿ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್‌ ಸೇರಿದಂತೆ ಇತರೆ ಗ್ಯಾಡ್ಜೆಟ್ಸ್‌ಗಳಿಗೆ ಅಧಿಕ ಕೊಡುಗೆ ನೀಡುತ್ತದೆ. ಹಾಗೆಯೇ ಯಾವುದೇ ಆಫರ್ ಇಲ್ಲದ ಸಂದರ್ಭದಲ್ಲಿಯೂ ಆಕರ್ಷಕ ರಿಯಾಯಿತಿ ಲಭ್ಯ ಮಾಡಿರುತ್ತದೆ. ಈ ನಿಟ್ಟಿನಲ್ಲಿ ಅಮೆಜಾನ್ ಆನ್‌ಲೈನ್ ಶಾಪಿಂಗ್ ಗ್ರಾಹಕರ ನೆಚ್ಚಿನ ತಾಣ ಆಗಿ ಕಾಣಿಸಿಕೊಂಡಿದೆ.

ಡಿಸ್ಕೌಂಟ್‌ನಲ್ಲಿ ಒಪ್ಪೋ ಮತ್ತು ವಿವೋ ಫೋನ್‌ ಖರೀದಿಗೆ ಇಲ್ಲಿದೆ ಬೆಸ್ಟ್‌ ಆಫರ್!

ಅಮೆಜಾನ್ ತಾಣವು ಸೇಲ್‌ನಲ್ಲಿ ಪ್ರಮುಖ ಕಂಪನಿಗಳ ಫೋನ್‌ಗಳಿಗೆ ಆಕರ್ಷಕ ಆಫರ್ ಲಭ್ಯ ಮಾಡುತ್ತದೆ. ಹಾಗೆಯೇ ಅಗ್ಗದ ಬೆಲೆಯ ಫೋನ್‌ಗಳಿಂದ ಹೈ ಎಂಡ್ ಫೋನ್‌ಗಳಿಗೂ ಕೊಡುಗೆ ಲಭ್ಯ. ಜೊತೆಗೆ ಇತ್ತೀಚಿಗೆ ಬಿಡುಗಡೆ ಆಗಿರುವ ಫೋನ್‌ ಗಳಿಗೂ ಭರ್ಜರಿ ರಿಯಾಯಿತಿ ಲಭ್ಯ ಇದೆ. ಸದ್ಯ ಒಪ್ಪೋ ಮತ್ತು ವಿವೋ ಫೋನ್‌ಗಳಿಗೆ ಆಕರ್ಷಕ ಕೊಡುಗೆ ಲಭ್ಯ ಮಾಡಿದೆ. ಹಾಗಾದರೇ ಅಮೆಜಾನ್‌ನಲ್ಲಿ ಸದ್ಯ ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿರುವ ಜನಪ್ರಿಯ ಒಪ್ಪೋ ಮತ್ತು ವಿವೋ ಫೋನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಒಪ್ಪೊ A31 ಸ್ಮಾರ್ಟ್‌ಫೋನ್‌
ಒಪ್ಪೊ A31 ಸ್ಮಾರ್ಟ್‌ಫೋನ್ 1600 x 720 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.5 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಯನ್ನು ಹೊಂದಿದೆ. ಆಕ್ಟಾ ಕೋರ್ ಮೀಡಿಯಾ ಟೆಕ್ ಹಿಲಿಯೊ P35 ಪ್ರೊಸೆಸರ್ ಸಾಮರ್ಥ್ಯ ಹೊಂದಿದೆ. ಹಾಗೆಯೇ ಇದು 4 GB + 64 GB ವೇರಿಯಂಟ್ ಮತ್ತು 6 GB + 128 GB ವೇರಿಯಂಟ್ ಆಯ್ಕೆ ಹೊಂದಿದೆ. ಜೊತೆಗೆ ತ್ರಿವಳಿ ಕ್ಯಾಮೆರಾ ರಚನೆ ಯನ್ನು ಪಡೆದಿದ್ದು, ಮುಖ್ಯ ಕ್ಯಾಮೆರಾವು 12 ಎಂಪಿ ಸೆನ್ಸಾರ್‌ನಲ್ಲಿದೆ. ಈ ಸ್ಮಾರ್ಟ್‌ಫೋನ್ 4,230 mAh ಬ್ಯಾಟರಿ ಬಾಳಿಕೆಯನ್ನು ಪಡೆದಿದ್ದು, ಉತ್ತಮ ಬ್ಯಾಟರಿ ಬ್ಯಾಕ್‌ಅಪ್ ಸಪೋರ್ಟ್ ಒದಗಿಸಲಿದೆ.

ಒಪ್ಪೋ A15s ಸ್ಮಾರ್ಟ್‌ಫೋನ್‌
ಒಪ್ಪೋ A15s ಸ್ಮಾರ್ಟ್‌ಫೋನ್‌ 720 x 1520 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಇದು 6.52 ಇಂಚಿನ ಡಿಸ್‌ಪ್ಲೇ ಯನ್ನು ಹೊಂದಿದ್ದು, ವಾಟರ್‌ಡ್ರಾಪ್ ಶೈಲಿಯ ನಾಚ್‌ ಅನ್ನು ಹೊಂದಿದೆ. ಇನ್ನು ಡಿಸ್‌ಪ್ಲೇ ರಚನೆಯ ಅನುಪಾತ 19:9 ಆಗಿದ್ದು, 258PPI ಪಿಕ್ಸೆಲ್‌ ಸಾಂದ್ರತೆಯನ್ನು ಒಳಗೊಂಡಿದೆ. ಈ ಫೋನ್ ಮೀಡಿಯಾ ಟೆಕ್‌ ಹಿಲಿಯೋ P35SoC ಪ್ರೊಸೆಸರ್ ಬಲವನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್ 10 ಆಧಾರಿತ ಕಲರ್ಓಎಸ್ 7.2 ನಲ್ಲಿ ಕಾರ್ಯ ನಿರ್ವಹಿಸಲಿದೆ. ಹಾಗೇಯೇ 4GB + 64GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ಸೆನ್ಸಾರ್‌ ಅನ್ನು ಒಳಗೊಂಡಿದೆ. ಹಾಗೆಯೇ ಸೆಲ್ಫಿಗಾಗಿ 8 ಎಂಪಿ ಸೆನ್ಸಾರ್‌ ಕ್ಯಾಮೆರಾ ಒದಗಿಸಲಾಗಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್‌ 4,230mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದೆ.

ಒಪ್ಪೋ A74 5G ಫೋನ್
ಒಪ್ಪೋ A74 5G ಫೋನ್ 1,080x2,400 ಪಿಕ್ಸಲ್ ರೆಸಲ್ಯೂಶನ್‌ ಜೊತೆಗೆ 6.43 ಇಂಚಿನ HD + ಗುಣಮಟ್ಟದ AMOLED ಮಾದರಿಯ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇಯು 90Hz ರೀಫ್ರೇಶ್ ರೇಟ್ ಅನ್ನು ಹೊಂದಿದ್ದು, ಡಿಸ್‌ಪ್ಲೇಯು 20:9 ಅನುಪಾತ ವನ್ನು ಹೊಂದಿದೆ. ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 409 ppi ಆಗಿದೆ. ಹಾಗೆಯೇ 800 nits ಬ್ರೈಟ್ನೆಸ್‌ ಸಾಮರ್ಥ್ಯ ವನ್ನು ಪಡೆದಿದೆ. ಹಾಗೆಯೇ ಈ ಪೋನ್ ಆಕ್ಟಾ ಕೋರ್ ಸ್ನ್ಯಾಪ್‌ಡ್ರಾಗನ್ 480 SoC ಪ್ರೊಸೆಸರ್‌ ಬಲವನ್ನು ಪಡೆದಿದೆ. ಇದರೊಂದಿಗೆ ಕ್ವಾಡ್‌ ಕ್ಯಾಮೆರಾ ರಚನೆಯನ್ನು ಹೊಂದಿದ್ದು, ಅವುಗಳು ಕ್ರಮವಾಗಿ 48 ಮೆಗಾ ಪಿಕ್ಸಲ್, 8 ಮೆಗಾ ಪಿಕ್ಸಲ್, 2 ಮೆಗಾ ಪಿಕ್ಸಲ್ ಮತ್ತು 2 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿವೆ. ಹಾಗೆಯೇ ಸೆಲ್ಫಿ ಕ್ಯಾಮೆರಾವು 16 ಮೆಗಾ ಪಿಕ್ಸಲ್ ಸಾಮರ್ಥ್ಯ ದಲ್ಲಿದೆ. ಫೋನ್ 5,000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಇದರೊಂದಿಗೆ 18W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಪಡೆದುಕೊಂಡಿದೆ.

ವಿವೋ V21 5G ಫೋನ್
ವಿವೋ V21 5G ಸ್ಮಾರ್ಟ್‌ಫೋನ್‌ 6.44 ಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಇದು ಮೀಡಿಯಾಟೆಕ್ ಡೈಮೆನ್ಸಿಟಿ 800U MT6853V ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್‌ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್‌ ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಸೆನ್ಸಾರ್‌ ಮ್ಯಾಕ್ರೋ ಲೆನ್ಸ್‌ ಅನ್ನು ಹೊಂದಿದೆ. ಇದಲ್ಲದೆ 44 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ. ಜೊತೆಗೆ 4000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 33W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ಬ್ಲೂಟೂತ್‌, ವೈಫೈ, ಅನ್ನು ಬೆಂಬಲಿಸಲಿದೆ.

ವಿವೋ Y33s ಫೋನ್
ವಿವೋ Y33s ಸ್ಮಾರ್ಟ್‌ಫೋನ್ 2,408 x 1,080 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.5 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿರಲಿದೆ. ಇದು ಆಕ್ಟಾ ಕೋರ್ ಮೀಡಿಯಾ ಟೆಕ್ ಹಿಲಿಯೋ G80 SoC ಪ್ರೊಸೆಸರ್‌ ಅನ್ನು ಒಳಗೊಂಡಿದೆ. ಇದಕ್ಕೆ ಬೆಂಬಲವಾಗಿ ಫನ್‌ಟಚ್ ಆಂಡ್ರಾಯ್ಡ್ 11 ಓಎಸ್‌ ಸಪೋರ್ಟ್‌ ಇದೆ. ಈ ಸ್ಮಾರ್ಟ್‌ಫೋನ್ 8GB RAM ಸಾಮರ್ಥ್ಯ ಮತ್ತು 128GB ಆಂತರಿಕ ಸ್ಟೋರೇಜ್‌ನ ಆಯ್ಕೆಯನ್ನು ಹೊಂದಿದೆ. ಎಸ್‌ಡಿ ಕಾರ್ಡ್‌ ಮೂಲಕ ಮೆಮೊರಿ ಹೆಚ್ಚಿಸಲು ಅವಕಾಶ ಇದೆ. ಇನ್ನು ಈ ಫೋನ್‌ ಹಿಂಬದಿಯಲ್ಲಿ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಪಡೆದಿದ್ದು, ಮುಖ್ಯ ಕ್ಯಾಮೆರಾವು 50 ಎಂಪಿ ಸೆನ್ಸಾರ್ ಇದೆ. ಸೆಕೆಂಡರಿ ಕ್ಯಾಮೆರಾವು 2 ಎಂಪಿ ಸೆನ್ಸಾರ್‌ನಲ್ಲಿದ್ದು, ತೃತೀಯ ಕ್ಯಾಮೆರಾವು 2 ಎಂಪಿ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಇದರೊಂದಿಗೆ 16 ಎಂಪಿಯ ಸೆಲ್ಫಿ ಕ್ಯಾಮೆರಾ ಒಳಗೊಂಡಿದೆ. ಜೊತೆಗೆ 5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, 18W ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ಬೆಂಬಲಿಸಲಿದೆ. ಇದರೊಂದಿಗೆ 4G LTE, ಡ್ಯುಯಲ್-ಬ್ಯಾಂಡ್ ವೈ-ಫೈ, ಬ್ಲೂಟೂತ್ v5 ಮತ್ತು USB OTG ಆಯ್ಕೆ ನೀಡಲಾಗಿದೆ. ಇದು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಒಳಗೊಂಡಿದೆ.

English summary
Amazon Sale 2022: Amazing Deals On The Oppo And Vivo Smartphones.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+