Home
Deal of the day

ಹೊಸದಾಗಿ 5G ಫೋನ್‌ ಖರೀದಿ ಮಾಡುವ ಗ್ರಾಹಕರೇ ಇಲ್ಲಿ ಗಮನಿಸಿ!

ಪ್ರಮುಖ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ಗಳ ಪೈಕಿ ಅಮೆಜಾನ್ ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ. ಅಮೆಜಾನ್ ತಾಣವು ಮೊಬೈಲ್‌ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ಉತ್ಪನ್ನಗಳಿಗೆ ಆಕರ್ಷಕ ರಿಯಾಯಿತಿ ಘೋಷಿಸುತ್ತದೆ. ವಿಶೇಷ ಆಫರ್ ತಿಳಿಸುವ ಮೂಲಕ ಅಮೆಜಾನ್ ಆನ್‌ಲೈನ್ ಶಾಪಿಂಗ್ ಪ್ರಿಯರಿಗೆ ನೆಚ್ಚಿನ ತಾಣ ಆಗಿ ಕಾಣಿಸಿಕೊಂಡಿದೆ. ಕೆಲವೊಂದು ವಿಶೇಷ ಸಂದರ್ಭದ ಮಾರಾಟಗಳಲ್ಲಿ ಬೊಂಬಾಟ್ ಕೊಡುಗೆಗಳನ್ನು ಗ್ರಾಹಕರಿಗೆ ಲಭ್ಯ ಮಾಡುತ್ತದೆ.

ಹೊಸದಾಗಿ 5G ಫೋನ್‌ ಖರೀದಿ ಮಾಡುವ ಗ್ರಾಹಕರೇ ಇಲ್ಲಿ ಗಮನಿಸಿ!

ಇದರೊಂದಿಗೆ ಅಮೆಜಾನ್‌ ತಾಣವು ಗ್ರಾಹಕರಿಗೆ ಆಕರ್ಷಕ ಎಕ್ಸ್‌ಚೇಂಜ್‌ ಕೊಡುಗೆಗಳನ್ನು ಸಹ ನೀಡುತ್ತದೆ. ಇನ್ನು ಅಮೆಜಾನ್ ಇ ಕಾಮರ್ಸ್‌ ಎಲ್ಲ ಮಾದರಿಯ ಸ್ಮಾರ್ಟ್‌ಫೋನ್‌ಗಳಿಗೂ ಅಧಿಕ ಆಫರ್ ಲಭ್ಯ ಮಾಡಿದ್ದು, ಕೊಡುಗೆಯಲ್ಲಿ ನೂತನವಾಗಿ ಬಿಡುಗಡೆ ಆಗಿರುವ ಫೋನ್‌ಗಳು ಸೇರಿರುತ್ತವೆ. ಸದ್ಯ 5G ಮಾದರಿಯ ಕೆಲವು ಸ್ಮಾರ್ಟ್‌ಫೋನ್‌ಗಳಿಗೂ ಅಮೆಜಾನ್‌ ಭರ್ಜರಿ ಕೊಡುಗೆಯನ್ನು ನೀಡಿದೆ. ಹಾಗಾದರೇ ಅಮೆಜಾನ್ ಪ್ಲಾಟ್‌ಫಾರ್ಮ್ ನಲ್ಲಿ ಅತ್ಯುತ್ತಮ ರಿಯಾಯಿತಿ ಪಡೆದ ಆಯ್ದ 5G ಫೋನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಒನ್‌ಪ್ಲಸ್‌ ನಾರ್ಡ್ CE 5G ಸ್ಮಾರ್ಟ್‌ಫೋನ್
ಒನ್‌ಪ್ಲಸ್‌ ನಾರ್ಡ್ CE 5G ಸ್ಮಾರ್ಟ್‌ಫೋನ್‌ 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.43 ಇಂಚಿನ ಫುಲ್‌ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಆಕ್ಟಾ ಕೋರ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 750G SoC ಪ್ರೊಸೆಸರ್‌ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್ 11 ನಲ್ಲಿ ಆಕ್ಸಿಜನ್ ಒಎಸ್ 11 ಬೆಂಬಲದೊಂದಿಗೆ ಕಾರ್ಯ ನಿರ್ವಹಿಸುತ್ತದೆ. ಹಾಗೆಯೇ 6GB RAM ಮತ್ತು 128 GB, 8GB RAM ಮತ್ತು 128 GB ಹಾಗೂ 12GB RAM + 256 GB ಇಂಟರ್‌ ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಒಳಗೊಂಡಿದೆ. ಹಾಗೆಯೇ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಇದರೊಂದಿಗೆ 4,500 mAh ಬ್ಯಾಟರಿ ಸಾಮರ್ಥ್ಯ ವನ್ನು ಪಡೆದುಕೊಂಡಿದೆ. ಜೊತೆಗೆ 30W Warp ಚಾರ್ಜ್‌ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಒಳಗೊಂಡಿದೆ.

ಶಿಯೋಮಿ 11 ಲೈಟ್ NE 5G ಸ್ಮಾರ್ಟ್‌ಫೋನ್
ಶಿಯೋಮಿ ಮಿ 11 ಲೈಟ್ NE 5G ಸ್ಮಾರ್ಟ್‌ಫೋನ್‌ 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.55 ಇಂಚಿನ ಫುಲ್‌ ಹೆಚ್‌ಡಿ + OLED ಡಿಸ್‌ಪ್ಲೇಯನ್ನು ಹೊಂದಿದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 780G SoC ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 11 ಬೆಂಬಲವನ್ನು ಒಳಗೊಂಡಿದೆ. ಹಾಗೆಯೇ 6 GB RAM ಮತ್ತು 128GB ಹಾಗೂ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯದ ವೇರಿಯೆಂಟ್‌ ಆಯ್ಕೆ ಯನ್ನು ಹೊಂದಿದೆ. ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿವೆ. ಇದಲ್ಲದೆ 20 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಈ ಫೋನ್ ಒಳಗೊಂಡಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M32 5G ಸ್ಮಾರ್ಟ್‌ಫೋನ್‌
ಸ್ಯಾಮ್‌ಸಂಗ್ ಗ್ಯಾಲಕ್ಸಿ M32 5G ಸ್ಮಾರ್ಟ್‌ಫೋನ್‌ 720 x 1600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5 ಇಂಚಿನ HD+ TFT ಇನ್ಫಿನಿಟಿ ವಿ ಡಿಸ್‌ಪ್ಲೇ ಹೊಂದಿದೆ. ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 720 SoC ಪ್ರೊಸೆಸರ್‌ ಬಲವನ್ನು ಹೊಂದಿದೆ. ಹಾಗೆಯೇ 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯ ಹೊಂದಿದೆ. ಸ್ಮಾರ್ಟ್‌ಫೋನ್‌ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಇದಲ್ಲದೆ 13 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ. ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಇದು 15W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಒಪ್ಪೋ A74 5G ಫೋನ್
ಒಪ್ಪೋ A74 5G ಫೋನ್ 1,080 x 2,400 ಪಿಕ್ಸಲ್ ರೆಸಲ್ಯೂಶನ್‌ ಜೊತೆಗೆ 6.43 ಇಂಚಿನ HD + ಗುಣಮಟ್ಟದ AMOLED ಮಾದರಿಯ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇಯು 90Hz ರೀಫ್ರೇಶ್ ರೇಟ್ ಅನ್ನು ಹೊಂದಿದ್ದು, ಡಿಸ್‌ಪ್ಲೇಯು 20:9 ಅನುಪಾತ ವನ್ನು ಹೊಂದಿದೆ. ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 409 ppi ಆಗಿದೆ. ಹಾಗೆಯೇ 800 nits ಬ್ರೈಟ್ನೆಸ್‌ ಸಾಮರ್ಥ್ಯ ವನ್ನು ಪಡೆದಿದೆ. ಹಾಗೆಯೇ ಈ ಪೋನ್ ಆಕ್ಟಾ ಕೋರ್ ಸ್ನ್ಯಾಪ್‌ಡ್ರಾಗನ್ 480 SoC ಪ್ರೊಸೆಸರ್‌ ಬಲವನ್ನು ಪಡೆದಿದೆ. ಇದರೊಂದಿಗೆ ಕ್ವಾಡ್‌ ಕ್ಯಾಮೆರಾ ರಚನೆಯನ್ನು ಹೊಂದಿದ್ದು, ಅವುಗಳು ಕ್ರಮವಾಗಿ 48 ಮೆಗಾ ಪಿಕ್ಸಲ್, 8 ಮೆಗಾ ಪಿಕ್ಸಲ್, 2 ಮೆಗಾ ಪಿಕ್ಸಲ್ ಮತ್ತು 2 ಮೆಗಾ ಪಿಕ್ಸಲ್ ಸೆನ್ಸಾರ್‌ನಲ್ಲಿವೆ. ಹಾಗೆಯೇ ಸೆಲ್ಫಿ ಕ್ಯಾಮೆರಾವು 16 ಮೆಗಾ ಪಿಕ್ಸಲ್ ಸಾಮರ್ಥ್ಯ ದಲ್ಲಿದೆ. ಫೋನ್ 5,000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಇದರೊಂದಿಗೆ 18W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಪಡೆದುಕೊಂಡಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M52 5G ಸ್ಮಾರ್ಟ್‌ಫೋನ್‌
ಸ್ಯಾಮ್‌ಸಂಗ್ ಗ್ಯಾಲಕ್ಸಿ M52 5G ಸ್ಮಾರ್ಟ್‌ಫೋನ್‌ 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.7 ಇಂಚಿನ ಫುಲ್‌ ಹೆಚ್‌ಡಿ + ಸೂಪರ್ AMOLED ಪ್ಲಸ್ ಡಿಸ್‌ಪ್ಲೇ ಹೊಂದಿದೆ. ಕ್ವಾಲ್ಕಾಮ್ ಸ್ನಾಪ್ ಡ್ರಾಗನ್ 778G ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್ ಆಧಾರಿತ ಒನ್ ಯುಐ ಮೇಲೆ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 6GB RAM ಮತ್ತು 128 GB ಇಂಟರ್‌ ಸ್ಟೋರೇಜ್‌ ಆಯ್ಕೆಯನ್ನು ಹೊಂದಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಪ್ರೈಮರಿ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್‌ 5,000 mAh ಬ್ಯಾಟರಿಯನ್ನು ಹೊಂದಿದ್ದು, 25W ಚಾರ್ಜಿಂಗ್ ಬೆಂಬಲವನ್ನು ಹೊಂದಿದೆ.

English summary
Amazon Sale 2022: Amazing Deals on these 5G Phones.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+