Home
Deal of the day

ಒನ್‌ಪ್ಲಸ್‌ ಮೊಬೈಲ್‌ಗಳಿಗೆ ಅತ್ಯುತ್ತಮ ರಿಯಾಯಿತಿ!..ಏನಿದೆ ಕೊಡುಗೆ?

ಅಮೆಜಾನ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ರಿಯಾಯಿತಿ ಮಾರಾಟ ಮೇಳಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತದೆ. ಮುಖ್ಯವಾಗಿ ಅಮೆಜಾನ್ ಗ್ಯಾಡ್ಜೆಟ್ಸ್‌ ಉತ್ಪನ್ನಗಳಿಗೆ ಆಕರ್ಷಕ ರಿಯಾಯಿತಿ ನೀಡುತ್ತದೆ. ಈ ನಿಟ್ಟಿನಲ್ಲಿ ಅಮೆಜಾನ್ ಬಹುತೇಕ ಶಾಪಿಂಗ್ ಪ್ರಿಯರ ಫೇವರೇಟ್ ತಾಣ ಆಗಿದೆ. ಪ್ರಮುಖ ಸಂಸ್ಥೆಗಳ ಮೊಬೈಲ್‌ಗಳಿಗೂ ಆಫರ್‌ ಲಭ್ಯ ಮಾಡಿ, ಮೊಬೈಲ್ ಪ್ರಿಯರನ್ನು ಆಕರ್ಷಿಸುವ ಪ್ರಯತ್ನ ಮಾಡುತ್ತದೆ. ಹಬ್ಬದ ದಿನಗಳಂದು ಅಧಿಕ ಡಿಸ್ಕೌಂಟ್ ಸೇಲ್ ಆಯೋಜಿಸುತ್ತದೆ.

ಒನ್‌ಪ್ಲಸ್‌ ಮೊಬೈಲ್‌ಗಳಿಗೆ ಅತ್ಯುತ್ತಮ ರಿಯಾಯಿತಿ!..ಏನಿದೆ ಕೊಡುಗೆ?

ಅಮೆಜಾನ್‌ ಪ್ಲಾಟ್‌ಫಾರ್ಮ್ ಯಾವುದೇ ಸ್ಪೆಷಲ್ ಸೇಲ್ ಇಲ್ಲದಿದ್ದರೂ ಕೆಲವು ಬಾರಿ ಮೊಬೈಲ್‌ಗಳಿಗೆ ಬೊಂಬಾಟ್ ಕೊಡುಗೆ ಲಭ್ಯ ಮಾಡಿರುತ್ತದೆ. ಇನ್ನು ಅಮೆಜಾನ್ ತಾಣದಲ್ಲಿ ಎಲ್ಲ ಶ್ರೇಣಿಯ ಮೊಬೈಲ್‌ಗಳಿಗೂ ಭಾರೀ ಆಕರ್ಷಕ ಕೊಡುಗೆ ಲಭ್ಯ ಮಾಡಿರುತ್ತದೆ. ಇತ್ತೀಚಿಗೆ ಬಿಡುಗಡೆ ಆಗಿರುವ ಹೊಸ ಸ್ಮಾರ್ಟ್‌ಫೋನ್‌ಗಳಿಗೂ ಆಕರ್ಷಕ ಆಫರ್ ನೀಡಿರುತ್ತದೆ. ಹಾಗೆಯೇ ಸದ್ಯ ಅಮೆಜಾನ್‌ ಒನ್‌ಪ್ಲಸ್‌ ಕಂಪನಿಯ ಆಯ್ದ ಕೆಲವು ಸ್ಮಾರ್ಟ್‌ಫೋನ್‌ಗಳಿಗೂ ಬಿಗ್ ಡಿಸ್ಕೌಂಟ್‌ ನೀಡಿದೆ. ಹಾಗಾದರೇ ಅಮೆಜಾನ್ ಪ್ಲಾಟ್‌ಫಾರ್ಮ್ ನಲ್ಲಿ ಅತ್ಯುತ್ತಮ ಡಿಸ್ಕೌಂಟ್‌ ಪಡೆದ ಒನ್‌ಪ್ಲಸ್‌ ಕಂಪನಿಯ ಮೊಬೈಲ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಒನ್‌ಪ್ಲಸ್‌ ನಾರ್ಡ್‌ 2 5G ಸ್ಮಾರ್ಟ್‌ಫೋನ್
ಒನ್‌ಪ್ಲಸ್‌ ನಾರ್ಡ್‌ 2 5G ಸ್ಮಾರ್ಟ್‌ಫೋನ್ 1,080x2,400 ಪಿಕ್ಸಲ್ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ 6.43 ಇಂಚಿನ Fluid AMOLED ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಒನ್‌ಪ್ಲಸ್‌ ನಾರ್ಡ್‌ 2 5G ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 1200 ಚಿಪ್‌ಸೆಟ್ ಪ್ರೊಸೆಸರ್‌ ಅನ್ನು ಹೊಂದಿದೆ. ಅದರೊಂದಿಗೆ ಆಂಡ್ರಾಯ್ಡ್‌ ಆಕ್ಸಿಜೆನ್ 11.3 ಓಎಸ್‌ ಬೆಂಬಲವನ್ನು ಪಡೆದುಕೊಂಡಿದೆ. ಇನ್ನು ಈ ಫೋನ್‌ 12GB RAM + 256 GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಯನ್ನು ಪಡೆದಿದೆ. ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್ ಪಡೆದಿದೆ. ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯ ಹೊಂದಿದೆ. ಇದರೊಂದಿಗೆ 4,500 mAh ಬ್ಯಾಟರಿ ಸಾಮರ್ಥ್ಯ ವನ್ನು ಪಡೆದುಕೊಂಡಿದೆ. ಈ ಫೋನ್ 65W Warp ಚಾರ್ಜ್‌ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ವನ್ನು ಒಳಗೊಂಡಿದೆ.

ಒನ್‌ಪ್ಲಸ್‌ 9 ಪ್ರೊ 5G ಸ್ಮಾರ್ಟ್‌ಫೋನ್
ಒನ್‌ಪ್ಲಸ್‌ 9 ಪ್ರೊ 5G ಸ್ಮಾರ್ಟ್‌ಫೋನ್ 1,440x3,216 ಪಿಕ್ಸಲ್ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ 6.7 ಇಂಚಿನ 2.0 AMOLED ಡಿಸ್‌ಪ್ಲೇಯನ್ನು ಹೊಂದಿದೆ. ಹಾಗೆಯೇ ಸ್ನ್ಯಾಪ್‌ಡ್ರಾಗನ್‌ 888 SoC ಪ್ರೊಸೆಸರ್ ಅನ್ನು ಹೊಂದಿದೆ. ಅದರೊಂದಿಗೆ ಒನ್‌ಪ್ಲಸ್‌ ಕೂಲ್‌ ಪ್ಲೇ ಮಲ್ಟಿ ಲೇಯರ್ ಕೂಲಿಂಗ್ ತಂತ್ರಜ್ಞಾನ ಒಳಗೊಂಡಿದೆ. ಈ ಫೋನ್‌ 8GB/12GB RAM ಮತ್ತು 128GB/256GB ಆಗಿವೆ. ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್ ಪಡೆದಿದೆ. 48 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯ, 50 ಮೆಗಾ ಪಿಕ್ಸಲ್ ಸೆನ್ಸಾರ್ ಹೊಂದಿದೆ. ಇದರೊಂದಿಗೆ ಮುಂಭಾಗದಲ್ಲಿ ಸೆಲ್ಫಿಗಾಗಿ 16 ಮೆಗಾ ಪಿಕ್ಸಲ್ ಸೆನ್ಸಾರ್ ಕ್ಯಾಮೆರಾ ಒದಗಿಸಲಾಗಿದೆ. ಇದು 4,500mAh ಬ್ಯಾಟರಿ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ಒನ್‌ಪ್ಲಸ್‌ ನಾರ್ಡ್‌ 2x Pac Man ಆವೃತ್ತಿ
ಒನ್‌ಪ್ಲಸ್‌ ನಾರ್ಡ್‌ 2x Pac Man ಆವೃತ್ತಿ ಸ್ಮಾರ್ಟ್‌ಫೋನ್‌ 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.43 ಇಂಚಿನ ಫುಲ್‌ HD + ಡಿಸ್‌ಪ್ಲೇ ಹೊಂದಿದೆ. ಇದು Fluid AMOLED ಡಿಸ್‌ಪ್ಲೇಯಾಗಿದ್ದು, 20:9 ರಚನೆಯ ಅನುಪಾತವನ್ನು ಪಡೆದಿದೆ. ಆಕ್ಟಾ ಕೋರ್ MediaTek ಡೈಮೆನ್ಸಿಟಿ 1200-AI SoC ಪ್ರೊಸೆಸರ್‌ ಹೊಂದಿದೆ. ಇದು ಆಂಡ್ರಾಯ್ಡ್‌ 11 ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 12GB RAM ಮತ್ತು 256 GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದಿದೆ. ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಹೊಂದಿದೆ. ಇದಲ್ಲದೆ 32 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಕೂಡ ಒಳಗೊಂಡಿದೆ. ಸ್ಮಾರ್ಟ್‌ಫೋನ್‌ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು Warp Charge 65 ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಒನ್‌ಪ್ಲಸ್‌ ನಾರ್ಡ್ CE 5G ಸ್ಮಾರ್ಟ್‌ಫೋನ್
ಒನ್‌ಪ್ಲಸ್‌ ನಾರ್ಡ್ CE 5G ಸ್ಮಾರ್ಟ್‌ಫೋನ್‌ 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.43 ಇಂಚಿನ ಫುಲ್‌ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಆಕ್ಟಾ ಕೋರ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 750G SoC ಪ್ರೊಸೆಸರ್‌ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್ 11 ನಲ್ಲಿ ಆಕ್ಸಿಜನ್ ಒಎಸ್ 11 ಬೆಂಬಲದೊಂದಿಗೆ ಕಾರ್ಯ ನಿರ್ವಹಿಸುತ್ತದೆ. ಹಾಗೆಯೇ 6GB RAM ಮತ್ತು 128 GB, 8GB RAM ಮತ್ತು 128 GB ಹಾಗೂ 12GB RAM + 256 GB ಇಂಟರ್‌ ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಒಳಗೊಂಡಿದೆ. ಹಾಗೆಯೇ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದ್ದು, ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಇದರೊಂದಿಗೆ 4,500 mAh ಬ್ಯಾಟರಿ ಸಾಮರ್ಥ್ಯ ವನ್ನು ಪಡೆದುಕೊಂಡಿದೆ. ಜೊತೆಗೆ 30W Warp ಚಾರ್ಜ್‌ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಒಳಗೊಂಡಿದೆ.

ಒನ್‌ಪ್ಲಸ್‌ 9R 5G ಸ್ಮಾರ್ಟ್‌ಫೋನ್
ಒನ್‌ಪ್ಲಸ್‌ 9R 5G ಫೋನ್ 6.55 ಇಂಚಿನ ಫ್ಲೂಯಿಡ್ ಅಮೋಲೆಡ್ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಇದು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 870 ಪ್ರೊಸೆಸರ್ ಬಲ ಹೊಂದಿದ್ದು, 8 ಜಿಬಿ + 128 ಜಿಬಿ ಮತ್ತು 12 ಜಿಬಿ + 256 ಜಿಬಿ ವೇರಿಯಂಟ್‌ ಆಯ್ಕೆಗಳನ್ನು ಒಳಗೊಂಡಿದೆ. ಹಾಗೆಯೇ ಈ ಫೋನ್ ಕ್ವಾಡ್-ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಮುಖ್ಯ ಕ್ಯಾಮೆರಾವು 48 ಎಂಪಿ ಸೋನಿ ಐಎಂಎಕ್ಸ್ 586 ಸೆನ್ಸಾರ್‌ ಹೊಂದಿದೆ. ಹಾಗೆಯೇ 65W ವಾರ್ಪ್ ಚಾರ್ಜ್ ತಂತ್ರಜ್ಞಾನವನ್ನು ಪಡೆದಿದೆ. ಈ ಫೋನ್ ಕಾರ್ಬನ್ ಬ್ಲ್ಯಾಕ್ ಮತ್ತು ಲೇಕ್ ಬ್ಲೂ ಕಲರ್ ಆಯ್ಕೆಗಳಲ್ಲಿ ಲಭ್ಯ.

English summary
Amazon Sale 2022: Amazing Discount on These Oneplus Mobiles.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+