Home
Deal of the day

ಬೆಸ್ಟ್‌ ಡಿಸ್‌ಪ್ಲೇ ಹೊಂದಿರುವ ಈ ಸ್ಮಾರ್ಟ್‌ಫೋನ್‌ಗಳಿಗೆ ಭಾರೀ ರಿಯಾಯಿತಿ!

ಇ ಕಾಮರ್ಸ್‌ ದೈತ್ಯ ಎಂದೇ ಗುರುತಿಸಿಕೊಂಡಿರುವ ಅಮೆಜಾನ್ ಗ್ರಾಹಕರನ್ನು ಸೆಳೆಯಲು ಏನಾದರೊಂದು ಕೊಡುಗೆ ಘೋಷಿಸುತ್ತದೆ. ಇನ್ನು ಹಬ್ಬದ ದಿನಗಳಲ್ಲಿ ಫೋನ್‌ಗಳಿಗೆ ದೊಡ್ಡ ರಿಯಾಯಿತಿ ಘೋಷಿಸುತ್ತದೆ. ಮತ್ತೆ ಕೆಲವೊಮ್ಮೆ ಹಬ್ಬದ ಮಾರಾಟ ಇಲ್ಲದಿದ್ದಾಗಲೂ ಆಯ್ದ ಸ್ಮಾರ್ಟ್‌ ಫೋನ್‌ಗಳಿಗೆ ಆಕರ್ಷಕ ರಿಯಾಯಿತಿ ನೀಡುತ್ತದೆ. ಅಮೆಜಾನ್‌ ಪ್ಲಾಟ್‌ಫಾರ್ಮ್ ನಲ್ಲಿ ಬಜೆಟ್‌ ದರದ ಫೋನ್‌ಗಳಿಂದ ಹಿಡಿದು ದುಬಾರಿ ಎಂಡ್ ಮಾದರಿಯ ಫೋನ್‌ಗಳು ರಿಯಾಯಿತಿಯಲ್ಲಿ ಲಭ್ಯ.

ಬೆಸ್ಟ್‌ ಡಿಸ್‌ಪ್ಲೇ ಹೊಂದಿರುವ ಈ ಸ್ಮಾರ್ಟ್‌ಫೋನ್‌ಗಳಿಗೆ ಭಾರೀ ರಿಯಾಯಿತಿ!

ಹೌದು, ಅಮೆಜಾನ್‌ ತಾಣ ದಲ್ಲಿ ಪ್ರತಿಷ್ಠಿತ ಮೊಬೈಲ್‌ ಬ್ರ್ಯಾಂಡ್‌ಗಳ ಹೊಸದಾಗಿ ಬಿಡುಗಡೆ ಆಗಿರುವ ಮತ್ತು ಮಾರುಕಟ್ಟೆಯಲ್ಲಿ ಈಗಾಗಲೇ ಜನಪ್ರಿಯತೆ ಗಳಿಸಿರುವ ಫೋನ್‌ಗಳಿಗೂ ಆಕರ್ಷಕ ರಿಯಾಯಿತಿ ಲಭ್ಯ ಮಾಡುತ್ತದೆ. ಅಲ್ಲದೇ ಅತ್ಯುತ್ತಮ ಡಿಸ್‌ಪ್ಲೇ ಫೋನ್‌ಗಳು, 5G ಫೋನ್‌ಗಳು, ಬೆಸ್ಟ್‌ ಕ್ಯಾಮೆರಾ ಫೋನ್‌ಗಳಿಗೂ ಬೊಂಬಾಟ್ ಕೊಡುಗೆ ಲಭ್ಯ ಇರುತ್ತದೆ. ಹಾಗಾದರೇ ಅಮೆಜಾನ್ ಪ್ಲಾಟ್‌ಫಾರ್ಮ್ ನಲ್ಲಿ ರಿಯಾಯಿತಿ ಬೆಲೆಯಲ್ಲಿ ಲಭ್ಯ ಇರುವ ಬೆಸ್ಟ್‌ ಡಿಸ್‌ಪ್ಲೇ ಹೊಂದಿರುವ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಒನ್‌ಪ್ಲಸ್‌ ನಾರ್ಡ್‌ 2 5G ಸ್ಮಾರ್ಟ್‌ಫೋನ್
ಒನ್‌ಪ್ಲಸ್‌ ನಾರ್ಡ್‌ 2 5G ಸ್ಮಾರ್ಟ್‌ಫೋನ್ 1,080 x 2,400 ಪಿಕ್ಸಲ್ ರೆಸಲ್ಯೂಶನ್‌ ಸಾಮರ್ಥ್ಯದೊಂದಿಗೆ 6.43 ಇಂಚಿನ Fluid AMOLED ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಒನ್‌ಪ್ಲಸ್‌ ನಾರ್ಡ್‌ 2 5G ಸ್ಮಾರ್ಟ್‌ಫೋನ್ ಮೀಡಿಯಾಟೆಕ್ ಡೈಮೆನ್ಸಿಟಿ 1200 ಚಿಪ್‌ಸೆಟ್ ಪ್ರೊಸೆಸರ್‌ ಅನ್ನು ಹೊಂದಿದೆ. ಅದರೊಂದಿಗೆ ಆಂಡ್ರಾಯ್ಡ್‌ ಆಕ್ಸಿಜೆನ್ 11.3 ಓಎಸ್‌ ಬೆಂಬಲವನ್ನು ಪಡೆದುಕೊಂಡಿದೆ. ಇನ್ನು ಈ ಫೋನ್‌ 12GB RAM + 256GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಯನ್ನು ಪಡೆದಿದೆ. ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್ ಪಡೆದಿದೆ. ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯ ಹೊಂದಿದೆ. ಇದರೊಂದಿಗೆ 4,500mAh ಬ್ಯಾಟರಿ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಈ ಫೋನ್ 65W Warp ಚಾರ್ಜ್‌ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಒಳಗೊಂಡಿದೆ.

ರೆಡ್ಮಿ ನೋಟ್ 10S ಫೋನ್‌
ರೆಡ್ಮಿ ನೋಟ್ 10s ಸ್ಮಾರ್ಟ್‌ ಫೋನ್‌ 1080 x 2400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯದ 6.43 ಇಂಚಿನ AMOLED ಫುಲ್‌ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 20: 9 ರಚನೆಯ ಅನುಪಾತ ವನ್ನು ಹೊಂದಿದೆ. ಇದು ಮೀಡಿಯಾ ಟೆಕ್ ಹೆಲಿಯೊ G95 SoC ಪ್ರೊಸೆಸರ್‌ ಸಾಮರ್ಥ್ಯ ಹೊಂದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 ಆಧಾರಿತ MIUI 12.5 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟಅಪ್‌ ಹೊಂದಿರಲಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಇದಲ್ಲದೆ 13 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ. 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಇದು 33W ಫಾಸ್ಟ್ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ.

ಒನ್‌ಪ್ಲಸ್‌ ನಾರ್ಡ್ CE 5G ಸ್ಮಾರ್ಟ್‌ಫೋನ್‌
ಒನ್‌ಪ್ಲಸ್‌ ನಾರ್ಡ್ CE 5G ಸ್ಮಾರ್ಟ್‌ ಫೋನ್‌ 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.43 ಇಂಚಿನ AMOLED ಫುಲ್‌ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಈ ಫೋನ್ ಆಕ್ಟಾ ಕೋರ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 750G SoC ಪ್ರೊಸೆಸರ್‌ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 6GB RAM ಮತ್ತು 128GB, 8GB RAM ಮತ್ತು 128 GB ಹಾಗೂ 12GB RAM + 256GB ಇಂಟರ್‌ ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಒಳಗೊಂಡಿದೆ. ಈ ಫೋನಿನ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಇದರೊಂದಿಗೆ ಈ ಫೋನ್ 4,500 mAh ಬ್ಯಾಟರಿ ಸಾಮರ್ಥ್ಯ ವನ್ನು ಪಡೆದುಕೊಂಡಿದೆ. ಅದಕ್ಕೆ ಪೂರಕವಾಗಿ 30W Warp ಚಾರ್ಜ್‌ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ವನ್ನು ಒಳಗೊಂಡಿದೆ.

ಸ್ಯಾಮ್‌ಸಂಗ್‌ ಗ್ಯಾಲಕ್ಸಿ M32 ಸ್ಮಾರ್ಟ್‌ಫೋನ್‌
ಸ್ಯಾಮ್‌ಸಂಗ್‌ ಗ್ಯಾಲಕ್ಸಿ M32 ಸ್ಮಾರ್ಟ್‌ ಫೋನ್ 2400 x 1080 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.4-ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಇನ್ಫಿನಿಟಿ-ಯು ಅಮೋಲೆಡ್ ಡಿಸ್‌ಪ್ಲೇ ಆಗಿದೆ. ಆಕ್ಟಾ ಕೋರ್ ಮೀಡಿಯಾ ಟೆಕ್ ಹಿಲಿಯೊ G80 ಪ್ರೊಸೆಸರ್ ಬಲವನ್ನು ಹೊಂದಿದೆ. ಇದು ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ ಇದು 6GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಅನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್‌ ಕ್ವಾಡ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಹೊಂದಿದೆ. ಇದಲ್ಲದೆ 20 ಮೆಗಾ ಪಿಕ್ಸೆಲ್‌ ಸೆನ್ಸಾರ್‌ ಸೆಲ್ಫಿ ಕ್ಯಾಮೆರಾ ಹೊಂದಿದೆ. ಜೊತೆಗೆ 6,000mAh ಸಾಮರ್ಥ್ಯದ ಬ್ಯಾಟರಿ ಯನ್ನು ಹೊಂದಿದೆ. ಇದು 25W ವೇಗದ ಚಾರ್ಜಿಂಗ್ ತಂತ್ರಜ್ಞಾನ ವನ್ನು ಬೆಂಬಲಿಸುತ್ತದೆ.

ರೆಡ್ಮಿ ನೋಟ್ 10 ಪ್ರೊ ಸ್ಮಾರ್ಟ್‌ಫೋನ್‌
ರೆಡ್ಮಿ ನೋಟ್ 10 ಪ್ರೊ ಸ್ಮಾರ್ಟ್‌ಫೋನ್‌ 6.67 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಸೂಪರ್‌ ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಆಕ್ಟಾ ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 732G SoC ಪ್ರೊಸೆಸರ್‌ ಅನ್ನು ಹೊಂದಿದೆ. ಆಂಡ್ರಾಯ್ಡ್‌ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 6 GB RAM + 64GB ಮತ್ತು 6GB + 128 GB ಆಗಿವೆ.‌ ಹಾಗೆಯೇ ಈ ಫೋನ್ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಇದಲ್ಲದೆ 16 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿದೆ. ಹಾಗೆಯೇ 5,020 mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಇದು 33W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಜೊತೆಗೆ ಡಾರ್ಕ್‌ ನೈಟ್‌, ಗ್ಲಾಸಿಲ್‌ ಬ್ಲೂ ಹಾಗೂ ವಿಂಟೆಜ್ ಬ್ರಾನ್ಜ್ ಬಣ್ಣಗಳ ಆಯ್ಕೆ ಇದೆ.

English summary
Amazon Sale 2022: Big Deals On Oppo A74 5G, Redmi note 10s and More High Resolution Display Phones.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+