ಸದ್ಯ ಟೆಕ್ನೋ ಸಂಸ್ಥೆಯ ಸ್ಮಾರ್ಟ್‌ಫೋನ್‌ಗಳಿಗೆ ಬೊಂಬಾಟ್ ಆಫರ್!
ಒಂದಿಲ್ಲೊಂದು ಆಕರ್ಷಕ ಆಫರ್‌ಗಳ ಮೂಲಕ ಗುರುತಿಸಿಕೊಂಡಿರುವ ಅಮೆಜಾನ್ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಲೀಡಿಂಗ್‌ನಲ್ಲಿ ಕಾಣಿಸಿಕೊಂಡಿದೆ. ಅಮೆಜಾನ್ ಮುಖ್ಯವಾಗಿ ಸ್ಮಾರ್ಟ್‌ಫೋನ್, ಲ್ಯಾಪ್‌ಟಾಪ್ ಸೇರಿದಂತೆ ಇತರೆ ಎಲೆಕ್ಟ್ರಾನಿಕ್ ಉತ್ಪನ್ನಗಳಿಗೆ ಭರ್ಜರಿ ರಿಯಾಯಿತಿ ನೀಡುತ್ತದೆ. ಈ ನಿಟ್ಟಿನಲ್ಲಿ ಆನ್‌ಲೈನ್ ಶಾಪಿಂಗ್ ಪ್ರಿಯರಿಗೆ ಅಮೆಜಾನ್ ಅತ್ಯುತ್ತಮ ತಾಣ ಎನಿಸಿದೆ. ಇನ್ನು ಹಬ್ಬದ ದಿನಗಳಲ್ಲಿ ಆಫರ್ ಇನ್ನಷ್ಟು ಅಧಿಕ ಆಗಿರುತ್ತದೆ.

ಹಾಗೆಯೇ ಯಾವುದೇ ವಿಶೇಷ ಮಾರಾಟ ಇಲ್ಲದೇ ವೇಳೆಯು ಅಮೆಜಾನ್ ತಾಣವು ಆಯ್ದ ಫೋನ್‌ಗಳಿಗೆ ರಿಯಾಯಿತಿ ಲಭ್ಯ ಮಾಡಿರುತ್ತದೆ. ಇನ್ನು ಅಮೆಜಾನ್ ಇ ಕಾಮರ್ಸ್ ಎಲ್ಲ ಮಾದರಿಯ ಫೋನ್‌ಗಳಿಗೂ ದೊಡ್ಡ ಕೊಡುಗೆ ಲಭ್ಯ ಮಾಡಿರುತ್ತದೆ. ಜೊತೆಗೆ ನೂತನವಾಗಿ ಬಿಡುಗಡೆ ಆಗಿರುವ ಹೊಸ ಸ್ಮಾರ್ಟ್‌ಫೋನ್‌ಗಳಿಗೂ ಭರ್ಜರಿ ಆಫರ್ ನೀಡಿರುತ್ತದೆ. ಸದ್ಯ ಅಮೆಜಾನ್ ಟೆಕ್ನೋ ಕಂಪನಿಯ ಆಯ್ದ ಕೆಲವು ಸ್ಮಾರ್ಟ್‌ಫೋನ್‌ಗಳಿಗೂ ಗಮನ ಸೆಳೆಯುವ ಡಿಸ್ಕೌಂಟ್ ನೀಡಿದೆ. ಹಾಗಾದರೇ ಅಮೆಜಾನ್ ತಾಣದಲ್ಲಿ ಆಕರ್ಷಕ ರಿಯಾಯಿತಿ ಪಡೆದ ಟೆಕ್ನೋ ಕಂಪನಿಯ ಆಯ್ದ ಫೋನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಟೆಕ್ನೋ ಸ್ಪಾರ್ಕ್ 8 ಸ್ಮಾರ್ಟ್‌ಫೋನ್
ಟೆಕ್ನೋ ಸ್ಪಾರ್ಕ್ 8 ಸ್ಮಾರ್ಟ್‌ಫೋನ್ 6.52 ಹೆಚ್‌ಡಿ + ಡಾಟ್ ನಾಚ್ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 120-Hz ಟಚ್ ರೆಸ್ಪಾನ್ಸ್ ರೇಟ್ ಅನ್ನು ಹೊಂದಿದೆ. ಫೋನ್ ಮೀಡಿಯಾ ಟೆಕ್ A25 SoC ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿದೆ. ಇದು ಆಂಡ್ರಾಯ್ಡ್ 11 ಗೋ ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 2 GB RAM ಮತ್ತು 64 GB ಇಂಟರ್ ಸ್ಟೋರೇಜ್ ಆಯ್ಕೆಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ 16 ಮೆಗಾ ಪಿಕ್ಸೆಲ್ ಎಐ ಡ್ಯುಯಲ್ ಹೈ-ರೆಸಲ್ಯೂಶನ್ ಕ್ಯಾಮೆರಾ ಹೊಂದಿದೆ. 5,000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.
ಟೆಕ್ನೋ ಸ್ಪಾರ್ಕ್ 7 ಪ್ರೊ ಸ್ಮಾರ್ಟ್‌ಫೋನ್
ಟೆಕ್ನೋ ಸ್ಪಾರ್ಕ್ 7 ಪ್ರೊ ಸ್ಮಾರ್ಟ್‌ಫೋನ್ 720 x 1,600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.6 ಇಂಚಿನ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಹೊಂದಿದೆ. ಆಕ್ಟಾ ಕೋರ್ ಮೀಡಿಯಾ ಟೆಕ್ ಹಿಲಿಯೊ G80SoC ಪ್ರೊಸೆಸರ್ ಬಲವನ್ನು ಪಡೆದುಕೊಂಡಿದೆ. ಇದು ಆಂಡ್ರಾಯ್ಡ್ 11 ನಲ್ಲಿ ಹಿಯೋಸ್ 7.5 ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ಜೊತೆಗೆ 6GB RAM ಮತ್ತು 64GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಇದಲ್ಲದೆ ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ 512GBವರೆಗೆ ಇಂಟರ್ ಸ್ಟೋರೇಜ್ ಅನ್ನು ವಿಸ್ತರಿಸಬಹುದಾಗಿದೆ. ಇನ್ನು ಈ ಸ್ಮಾರ್ಟ್ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್ 5,000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.
ಟೆಕ್ನೋ ಸ್ಪಾರ್ಕ್ ಗೋ 2021 ಸ್ಮಾರ್ಟ್‌ಫೋನ್
ಟೆಕ್ನೋ ಸ್ಪಾರ್ಕ್ ಗೋ 2021 ಸ್ಮಾರ್ಟ್‌ಫೋನ್ 720 x 1,600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.52 ಇಂಚಿನ ಹೆಚ್‌ಡಿ + ಡಿಸ್‌ಪ್ಲೇ ಹೊಂದಿದೆ. ಇದು ಕ್ವಾಡ್ ಕೋರ್ ಮೀಡಿಯಾ ಟೆಕ್ ಹಿಲಿಯೊ A20 SoC ಪ್ರೊಸೆಸರ್ ಬಲವನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್ 10 (ಗೋ ಎಡಿಷನ್) ಬೆಂಬಲದೊಂದಿಗೆ ಕಾರ್ಯ ನಿರ್ವಹಿಸಲಿದೆ. ಹಾಗೆಯೇ 2 GB RAM ಮತ್ತು 32 GB ಇಂಟರ್ ಸ್ಟೋರೇಜ್ ವೇರಿಯಂಟ್ ಆಯ್ಕೆ ಅನ್ನು ಹೊಂದಿದೆ. ಹಾಗೆಯೇ ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾ ಪಿಕ್ಸೆಲ್ ಹೊಂದಿದೆ. ಇದರೊಂದಿಗೆ ಈ ಫೋನ್ 5,000 mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ.
ಟೆಕ್ನೋ ಸ್ಮಾರ್ಕ್ 7 ಸ್ಮಾರ್ಟ್‌ಫೋನ್
ಟೆಕ್ನೋ ಸ್ಪಾರ್ಕ್ 7 ಸ್ಮಾರ್ಟ್‌ಫೋನ್ 720x1,600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.52 ಇಂಚಿನ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. 2GB RAM ರೂಪಾಂತರವು ಕ್ವಾಡ್-ಕೋರ್ ಮೀಡಿಯಾ ಟೆಕ್ ಹಿಲಿಯೊ A20 SoC ಹೊಂದಿದ್ದರೆ, 3GB RAM ರೂಪಾಂತರವು ಆಕ್ಟಾ-ಕೋರ್ ಮೀಡಿಯಾಟೆಕ್ ಹಿಲಿಯೊ A25 SoC ಪ್ರೊಸೆಸರ್ ಹೊಂದಿದೆ. ಇದು ಆಂಡ್ರಾಯ್ಡ್ 11 ನಲ್ಲಿ ಕಾರ್ಯ ನಿರ್ವಹಿಸಲಿದೆ. ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಅಪ್ ಅನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 16 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಹಾಗೆಯೇ ಈ ಫೋನ್ 6,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.
ಟೆಕ್ನೋ ಸ್ಪಾರ್ಕ್ 8T ಸ್ಮಾರ್ಟ್‌ಫೋನ್
ಟೆಕ್ನೋ ಸ್ಪಾರ್ಕ್ 8T ಸ್ಮಾರ್ಟ್‌ಫೋನ್1080 x 2408 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.6 ಇಂಚಿನ ಪೂರ್ಣ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 20:9 ಅನುಪಾತವನ್ನು ಒಳಗೊಂಡಿದ್ದು, 401ppi ಪಿಕ್ಸಲ್ ಸಾಂದ್ರತೆಯನ್ನು ಹೊಂದಿದೆ. ಜೊತೆಗೆ 500 nits ಬ್ರೈಟ್ನೆಸ್ ಸಾಮರ್ಥ್ಯವನ್ನು ಪಡೆದಿದೆ. ಈ ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೋ G35 SoC ಪ್ರೊಸೆಸರ್ ಬಲವನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 11 ಸಪೋರ್ಟ್ ಸಹ ಪಡೆದಿದೆ. ಜೊತೆಗೆ 4GB RAM + 64GB ವೇರಿಯಂಟ್ ಆಯ್ಕೆಯನ್ನು ಹೊಂದಿದೆ. ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಅಪ್ ಅನ್ನು ಒಳಗೊಂಡಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಇದಲ್ಲದೆ 8 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಹಾಗೆಯೇ ಟೆಕ್ನೋ ಸ್ಪಾರ್ಕ್ 8T ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಉತ್ತಮ ಸಾಮರ್ಥ್ಯದ ಚಾರ್ಜಿಂಗ್ ಸೌಲಭ್ಯ ನೀಡಲಿದೆ.


Click it and Unblock the Notifications