ರಿಯಾಯಿತಿ ದರದಲ್ಲಿ ವಿವೋ ಸ್ಮಾರ್ಟ್‌ಫೋನ್ ಖರೀದಿಸಬೇಕೆ?..ಇಲ್ಲಿ ಗಮನಿಸಿ!
ಪ್ರಸ್ತುತ ಇ ಕಾಮರ್ಸ್ ಮಾರುಕಟ್ಟೆ ಹೆಚ್ಚು ಲೀಡಿಂಗ್‌ನಲ್ಲಿ ಕಾಣಿಸಿಕೊಂಡಿದೆ. ಅದರಲ್ಲಿಯೂ ಅಮೆಜಾನ್ ಪ್ಲಾಟ್‌ಫಾರ್ಮ್ ಇ ಕಾಮರ್ಸ್ ದೈತ್ಯ ಸಂಸ್ಥೆ ಆಗಿ ಗುರುತಿಸಿಕೊಂಡಿದೆ. ಅಮೆಜಾನ್ ತಾಣವು ಆನ್‌ಲೈನ್ ಶಾಪಿಂಗ್ ಪ್ರಿಯರ ನೆಚ್ಚಿನ ತಾಣ ಆಗಿ ಎಂದೇನಿಸಿಕೊಂಡಿದೆ. ಮುಖ್ಯವಾಗಿ ಅಮೆಜಾನ್ ಸ್ಮಾರ್ಟ್‌ಫೋನ್‌ಗಳಿಗೆ ಒಂದಿಲ್ಲೊಂದು ಭರ್ಜರಿ ಆಫರ್ ನೀಡಿ ಮೊಬೈಲ್ ಪ್ರಿಯರನ್ನು ಆಕರ್ಷಿಸುವ ಪ್ರಯತ್ನ ಮಾಡುತ್ತದೆ. ವಿಶೇಷ ದಿನಗಳಂದು ಹೆಚ್ಚಿನ ಡಿಸ್ಕೌಂಟ್ ಸೇಲ್ ಆಯೋಜಿಸುತ್ತದೆ. ಹಾಗೆಯೇ ವಿಶೇಷ ಸೇಲ್ ಹೊರತು ಪಡಿಸಿಯೂ ಸಹ ಕೆಲವು ಆಯ್ದ ಫೋನ್‌ಗಳಿಗೆ ರಿಯಾಯಿತಿ ಲಭ್ಯ.

ಹೌದು, ಅಮೆಜಾನ್ ನಲ್ಲಿ ಅಗ್ಗದ ಬೆಲೆಯ ಫೋನ್‌ಗಳಿಂದ ಹಿಡಿದು ದುಬಾರಿ ಬೆಲೆಯ ಫೋನ್‌ಗಳಿಗೂ ಆಕರ್ಷಕ ಕೊಡುಗೆ ಲಭ್ಯ. ಹಾಗೆಯೇ ಈ ತಾಣದಲ್ಲಿ ಇತ್ತೀಚಿಗೆ ಬಿಡುಗಡೆ ಆಗಿರುವ ಜನಪ್ರಿಯ ಫೋನ್‌ಗಳೊಂದಿಗೆ, ಪ್ರಮುಖ ಬ್ರ್ಯಾಂಡ್‌ಗಳ ಫೋನ್‌ಗಳಿಗೂ ಬೊಂಬಾಟ್ ರಿಯಾಯಿತಿ ಇರುತ್ತದೆ. ಹಾಗೆಯೇ ವಿವೋ ಕಂಪನಿಯ ಆಯ್ದ ಫೋನ್‌ಗಳಿಗೂ ಆಕರ್ಷಕ ಡಿಸ್ಕೌಂಟ್ ಲಭ್ಯ ಇದೆ. ಹಾಗಾದರೇ ಅಮೆಜಾನ್ ತಾಣದಲ್ಲಿ ಬೆಸ್ಟ್ ಡಿಸ್ಕೌಂಟ್ ಪಡೆದ ವಿವೋ ಕಂಪನಿಯ ಆಯ್ದ ಫೋನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ವಿವೋ V21 5G ಸ್ಮಾರ್ಟ್‌ಫೋನ್
ವಿವೋ V21 5G ಸ್ಮಾರ್ಟ್‌ಫೋನ್ 1,080x2,404 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.44 ಇಂಚಿನ ಫುಲ್ ಹೆಚ್‌ಡಿ + ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಆಕ್ಟಾ-ಕೋರ್ ಮೀಡಿಯಾಟೆಕ್ ಡೈಮೆನ್ಸಿಟಿ 800U SoC ಪ್ರೊಸೆಸರ್ ಅನ್ನು ಹೊಂದಿದ್ದು, ಆಂಡ್ರಾಯ್ಡ್ 11 ನಲ್ಲಿ ಫಂಟೌಚ್ ಓಎಸ್ 11.1 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 128GB ಇಂಟರ್ ಸ್ಟೋರೇಜ್ ಅನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್ ಅನ್ನು ಹೊಂದಿದೆ. 44 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿದೆ. ಹಾಗೆಯೇ ಈ ಫೋನ್ 4,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಇದು 33W ಫ್ಲ್ಯಾಶ್‌ಚಾರ್ಜ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ವಿವೋ X60 ಸ್ಮಾರ್ಟ್‌ಫೋನ್
ವಿವೋ X60 ಫೋನ್ 1,080x2,376 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.56 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್ AMOLED ಡಿಸ್‌ಪ್ಲೇ ಹೊಂದಿದೆ. ಡಿಸ್‌ಪ್ಲೇಯ ಅನುಪಾತವು 19.8:9 ಆಗಿದ್ದು, 120Hz ರೀಫ್ರೇಶ್ ರೇಟ್ ಪಡೆದಿದೆ. ಇದು ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 870 SoC ಪ್ರೊಸೆಸರ್ ಹೊಂದಿದ್ದು, 12GB RAM + 256GB ಆಯ್ಕೆಯನ್ನು ಒಳಗೊಂಡಿದೆ. ಹಾಗೆಯೇ ಈ ಫೋನ್ ಟ್ರಿಪಲ್ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್‌ನಲ್ಲಿದೆ. ಸೆಲ್ಫಿ ಕ್ಯಾಮೆರಾವು 32ಎಂಪಿ ಸೆನ್ಸಾರ್ ಸಾಮರ್ಥ್ಯವನ್ನು ಒಳಗೊಂಡಿದೆ. ಹಾಗೆಯೇ ವಿವೋ X60 ಫೋನ್ 4,300mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದುಕೊಂಡಿದೆ.
ವಿವೋ Y33s ಸ್ಮಾರ್ಟ್‌ಫೋನ್
ವಿವೋ Y33s ಸ್ಮಾರ್ಟ್‌ಫೋನ್ 2,408 x 1,080 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.5 ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿರಲಿದೆ. ಡಿಸ್‌ಪ್ಲೇಯು Halo ಫುಲ್ ವ್ಯೂವ್ ಮಾದರಿಯನ್ನು ಪಡೆದಿದ್ದು, ಪಂಚ್‌ಹೋಲ್ ವಿನ್ಯಾಸ ಹೊಂದಿದೆ. ಇದು ಆಕ್ಟಾ ಕೋರ್ ಮೀಡಿಯಾ ಟೆಕ್ ಹಿಲಿಯೋ G80 SoC ಪ್ರೊಸೆಸರ್ ಅನ್ನು ಒಳಗೊಂಡಿದೆ. ಇದಕ್ಕೆ ಬೆಂಬಲವಾಗಿ ಫನ್‌ಟಚ್ ಆಂಡ್ರಾಯ್ಡ್ 11 ಓಎಸ್ ಸಪೋರ್ಟ್ ಇದೆ. ಇನ್ನು ಈ ಸ್ಮಾರ್ಟ್‌ಫೋನ್ 8GB RAM ಸಾಮರ್ಥ್ಯ ಮತ್ತು 128GB ಆಂತರಿಕ ಸ್ಟೋರೇಜ್‌ನ ಆಯ್ಕೆಯನ್ನು ಹೊಂದಿದೆ. ಹಾಗೆಯೇ ಈ ಫೋನ್ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಪಡೆದಿದ್ದು, ಮುಖ್ಯ ಕ್ಯಾಮೆರಾವು 50 ಎಂಪಿ ಸೆನ್ಸಾರ್ ಇದೆ. 16 ಎಂಪಿಯ ಸೆಲ್ಫಿ ಕ್ಯಾಮೆರಾ ಒಳಗೊಂಡಿದೆ. ಜೊತೆಗೆ ಈ ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿದೆ.
ವಿವೋ Y73 ಸ್ಮಾರ್ಟ್‌ಫೋನ್
ವಿವೋ Y73 ಸ್ಮಾರ್ಟ್‌ಫೋನ್ 1,080x2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.44 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 20:9 ರಚನೆಯ ಅನುಪಾತವನ್ನು ಹೊಂದಿದೆ. ಇದು ಮೀಡಿಯಾ ಟೆಕ್ ಹಿಲಿಯೊ G95SoC ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್ 11 ಆಧಾರಿತ ಫೋನ್ ಫಂಟೌಚ್ ಓಎಸ್ 11.1 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 128GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಒಳಗೊಂಡಿದೆ. ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್ ಇದಲ್ಲದೆ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ. ಈ ಸ್ಮಾರ್ಟ್‌ಫೋನ್ 4,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 33W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ.
ವಿವೋ Y12s ಸ್ಮಾರ್ಟ್‌ಫೋನ್
ವಿವೊ Y12s ಸ್ಮಾರ್ಟ್‌ಫೋನ್ 720x1,600 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.51 ಇಂಚಿನ ಹೆಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ ವಾಟರ್ ಡ್ರಾಪ್ ನಾಚ್ ಶೈಲಿಯನ್ನು ಹೊಂದಿದೆ. ಇದು 20: 9 ರಚನೆಯ ಅನುಪಾತವನ್ನು ಹೊಂದಿದೆ. ಇದು ಆಕ್ಟಾ-ಕೋರ್ ಮೀಡಿಯಾ ಟೆಕ್ ಹಿಲಿಯೊ P 35 SoC ಪ್ರೊಸೆಸರ್ ಅನ್ನು ಹೊಂದಿದ್ದು, ಆಂಡ್ರಾಯ್ಡ್ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ 3GB RAM ಮತ್ತು 32GB ಇಂಟರ್ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ. ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು 13 ಮೆಗಾ ಪಿಕ್ಸೆಲ್ ಪ್ರೈಮರಿ ಸೆನ್ಸಾರ್ ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್ 5,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್ ಅನ್ನು ಹೊಂದಿದೆ. ಇದು 10W ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, ವೈ-ಫೈ, ಬ್ಲೂಟೂತ್ 5.0, GPS, FM ರೇಡಿಯೋ ಮತ್ತು ಮೈಕ್ರೋ-USB ಪೋರ್ಟ್ ಅನ್ನು ಬೆಂಬಲಿಸಲಿದೆ.


Click it and Unblock the Notifications