Home
Deal of the day

ಹೊಸ ರಿಯಲ್‌ಮಿ ಫೋನ್‌ ಖರೀದಿಸುವವರಿಗೆ ಈ ಕೊಡುಗೆ ಅತ್ಯುತ್ತಮ!

ಏನಾದರೊಂದು ವಿಶೇಷ ಮಾರಾಟ ಮೇಳವನ್ನು ಆಯೋಜಿಸುವ ಮೂಲಕ ಗ್ರಾಹಕರ ಫೇವರೇಟ್ ಇ ಕಾಮರ್ಸ್‌ ಎನಿಸಿಕೊಂಡಿರುವ ಅಮೆಜಾನ್ ಸ್ಮಾರ್ಟ್‌ಫೋನ್‌ಗಳಿಗೆ ಹೆಚ್ಚಿನ ಕೊಡುಗೆ ನೀಡುತ್ತದೆ. ಮುಖ್ಯವಾಗಿ ಹಬ್ಬದ ಹಾಗೂ ವಿಶೇಷ ದಿನಗಳಲ್ಲಿ ಸ್ಮಾರ್ಟ್‌ಫೋನ್, ಮೊಬೈಲ್, ಲ್ಯಾಪ್‌ಟಾಪ್‌ ಸೇರಿದಂತೆ ಇತರೆ ಗ್ಯಾಡ್ಜೆಟ್ಸ್‌ ಗಳಿಗೆ ಆಕರ್ಷಕ ಕೊಡುಗೆ ನೀಡುತ್ತದೆ. ಇನ್ನು ಆಫರ್ ಇಲ್ಲದ ವೇಳೆಯು ಅತ್ಯುತ್ತಮ ಡಿಸ್ಕೌಂಟ್‌ ಲಭ್ಯ ಮಾಡಿರುತ್ತದೆ.

ಹೊಸ ರಿಯಲ್‌ಮಿ ಫೋನ್‌ ಖರೀದಿಸುವವರಿಗೆ ಈ ಕೊಡುಗೆ ಅತ್ಯುತ್ತಮ!

ಅಮೆಜಾನ್ ಪ್ಲಾಟ್‌ಫಾರ್ಮ್ ವಿಶೇಷ ಮಾರಾಟ ಮೇಳ ಆಯೋಜಿಸುವ ಮೂಲಕ ಪ್ರಮುಖ ಕಂಪನಿಗಳ ಫೋನ್‌ಗಳಿಗೆ ಆಕರ್ಷಕ ರಿಯಾಯಿತಿ ಲಭ್ಯ ಮಾಡುತ್ತದೆ. ಹಾಗೆಯೇ ಬಜೆಟ್‌ ದರದ ಫೋನ್‌ಗಳಿಂದ ಹೈ ಎಂಡ್ ಫೋನ್‌ಗಳಿಗೂ ಕೊಡುಗೆ ಲಭ್ಯ. ಜೊತೆಗೆ ಇತ್ತೀಚಿಗೆ ಬಿಡುಗಡೆ ಆಗಿರುವ ಫೋನ್‌ ಗಳಿಗೂ ಭರ್ಜರಿ ರಿಯಾಯಿತಿ ಲಭ್ಯ ಇದೆ. ರಿಯಲ್‌ಮಿ ಮೊಬೈಲ್‌ಗಳಿಗೆ ಅತ್ಯುತ್ತಮ ಕೊಡುಗೆ ಲಭ್ಯ ಮಾಡಿದೆ. ಹಾಗಾದರೇ ಅಮೆಜಾನ್‌ ನಲ್ಲಿ ಸದ್ಯ ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿರುವ ಜನಪ್ರಿಯ ರಿಯಲ್‌ಮಿ ಫೋನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ರಿಯಲ್‌ಮಿ ನಾರ್ಜೊ 50 ಸ್ಮಾರ್ಟ್‌ಫೋನ್‌
ರಿಯಲ್‌ಮಿ ನಾರ್ಜೊ 50 ಸ್ಮಾರ್ಟ್‌ಫೋನ್‌ 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.6 ಇಂಚಿನ ಫುಲ್‌ HD + IPS LCD ಡಿಸ್‌ಪ್ಲೇ ಹೊಂದಿದೆ. ಮೀಡಿಯಾಟೆಕ್‌ ಹಿಲಿಯೋ G96 SoC ಪ್ರೊಸೆಸರ್‌ ಬಲವನ್ನು ಪಡೆದಿದೆ. ಇದು ರಿಯಲ್‌ಮಿ UI 2.0 ಜೊತೆಗೆ ಆಂಡ್ರಾಯ್ಡ್ 11 ಬೆಂಬಲದೊಂದಿಗೆ ಕಾರ್ಯ ನಿರ್ವಹಿಸುತ್ತದೆ. ಹಾಗೆಯೇ 6 GB RAM ಮತ್ತು 128 GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ರಿಯಲ್‌ಮಿ ನಾರ್ಜೊ 50 ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಇದಲ್ಲದೆ 16 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ರಿಯಲ್‌ಮಿ ನಾರ್ಜೊ 50 ಸ್ಮಾರ್ಟ್‌ಫೋನ್‌ 5,000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

ರಿಯಲ್‌ಮಿ ನಾರ್ಜೊ 50A ಸ್ಮಾರ್ಟ್‌ಫೋನ್‌
ರಿಯಲ್‌ಮಿ ನಾರ್ಜೊ 50A ಸ್ಮಾರ್ಟ್‌ಫೋನ್‌ 6.5 ಇಂಚಿನ ಹೆಚ್‌ಡಿ + ಡಿಸ್‌ಪ್ಲೇಯನ್ನು ಹೊಂದಿದೆ. ಇದು ಮೀಡಿಯಾ ಟೆಕ್‌ ಹಿಲಿಯೋ G85 SoC ಪ್ರೊಸೆಸರ್‌ ಬಲವನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್ 11 ಓಎಸ್ ಆಧಾರಿತ ರಿಯಲ್‌ಮಿ ಯುಐ 2.0 ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 4 GB RAM ಮತ್ತು 128 GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯ ವನ್ನು ಹೊಂದಿದೆ. ಈ ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಹೊಂದಿದ್ದು, ಮುಖ್ಯ ಕ್ಯಾಮೆರಾ 50 ಮೆಗಾ ಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. ಇದಲ್ಲದೆ 8 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ವನ್ನು ಹೊಂದಿದೆ. ಜೊತೆಗೆ 6,000 mAh ಬ್ಯಾಟರಿಯನ್ನು ಹೊಂದಿದ್ದು, 18W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ.

ರಿಯಲ್‌ಮಿ ನಾರ್ಜೊ 50i
ರಿಯಲ್‌ಮಿ ನಾರ್ಜೊ 50i ಸ್ಮಾರ್ಟ್‌ಫೋನ್‌ 6.5 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಯುನಿಸೋಕ್ 9863 SoC ಪ್ರೊಸೆಸರ್‌ ಸಾಮರ್ಥ್ಯ ವನ್ನು ಪಡೆದುಕೊಂಡಿದ್ದು, ಆಂಡ್ರಾಯ್ಡ್ 11 ಆಧಾರಿತ ರಿಯಲ್‌ಮಿ UI ಗೋ ಆವೃತ್ತಿ ಬೆಂಬಲದೊಂದಿಗೆ ಕಾರ್ಯ ನಿರ್ವಹಿಸುತ್ತದೆ. ಹಾಗೆಯೇ 4 GB RAM ಮತ್ತು 64 GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಈ ಫೋನ್‌ 8 ಮೆಗಾ ಪಿಕ್ಸೆಲ್ AI ರಿಯರ್ ಕ್ಯಾಮೆರಾವನ್ನು ಹೊಂದಿದೆ. ಅಲ್ಲದೆ 5 ಮೆಗಾ ಪಿಕ್ಸೆಲ್ AI ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್‌ 5,000 mAh ಸಾಮರ್ಥ್ಯದ ಬ್ಯಾಟರಿ ಯನ್ನು ಹೊಂದಿದೆ.

ರಿಯಲ್‌ಮಿ ನಾರ್ಜೊ 30 ಸ್ಮಾರ್ಟ್‌ಫೋನ್‌
ರಿಯಲ್‌ಮಿ ನಾರ್ಜೊ 30 ಸ್ಮಾರ್ಟ್‌ಫೋನ್‌ 6.5 ಇಂಚಿನ ಫುಲ್‌ ಹೆಚ್‌ಡಿ+ ಡಿಸ್‌ಪ್ಲೇಯನ್ನು ಹೊಂದಿದೆ. ಇದು 90Hz ರಿಫ್ರೆಶ್ ರೇಟ್‌ ಅನ್ನು ಹೊಂದಿದ್ದು, ಸ್ಕ್ರೀನ್ ಟು ಬಾಡಿ ಅನುಪಾತ 90.5 ಹೊಂದಿದೆ. ಇನ್ನು ಈ ಡಿಸ್‌ಪ್ಲೇ ಪಿಕ್ಸೆಲ್ ಸಾಂದ್ರತೆಯು 405 ಪಿಪಿಐ ಹೊಂದಿದೆ. ಇದು ಆಕ್ಟಾ ಕೋರ್ ಮೀಡಿಯಾ ಟೆಕ್ ಹಿಲಿಯೊ G95 ಪ್ರೊಸೆಸರ್ ಹೊಂದಿದೆ. ಹಾಗೆಯೇ 6GB RAM ಮತ್ತು 128 GB ಇಂಟರ್‌ ಸ್ಟೋರೇಜ್‌ ಅನ್ನು ಪಡೆದುಕೊಂಡಿದೆ. ಈ ಫೋನ್ ಟ್ರಿಪಲ್‌ ರಿಯರ್‌ ಕ್ಯಾಮೆರಾ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಸೆನ್ಸಾರ್‌ ಹೊಂದಿದೆ. 5000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು ಯುಎಸ್‌ಬಿ ಸಿ ಪೋರ್ಟ್ ಮೂಲಕ 30W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ಹಾಟ್‌ಸ್ಪಾಟ್‌, ವೈಫೈ, ಬ್ಲೂಟೂತ್‌, ಅನ್ನು ಬೆಂಬಲಿಸಲಿದೆ.

ರಿಯಲ್‌ಮಿ 8 ಸ್ಮಾರ್ಟ್‌ಫೋನ್
ರಿಯಲ್‌ಮಿ 8 ಸ್ಮಾರ್ಟ್‌ಫೋನ್ 6.4 AMOLED ಡಿಸ್‌ಪ್ಲೇಯನ್ನು ಹೊಂದಿದ್ದು, ಡಿಸ್‌ಪ್ಲೇಯ ಅನುಪಾತವು 20:9 ಆಗಿದೆ. ಹಾಗೆಯೇ ಡಿಸ್‌ಪ್ಲೇಯು HDR 10 + ಸಫೋರ್ಟ್‌ ಸಹ ಪಡೆದುಕೊಂಡಿದೆ. ಇದು ಮೀಡಿಯಾ ಟೆಕ್ ಹಿಲಿಯೋ G95 ಪ್ರೊಸೆಸರ್ ಅನ್ನು ಹೊಂದಿದೆ. ಅದರೊಂದಿಗೆ Adreno 618 GPU ಗ್ರಾಫಿಕ್ ಸಪೋರ್ಟ್‌ನ ಸೌಲಭ್ಯವನ್ನು ಪಡೆದಿದೆ. ಹಾಗೆಯೇ ಪ್ರೊಸೆಸರ್‌ ಇತ್ತೀಚಿನ ಆಂಡ್ರಾಯ್ಡ್‌ 11 ಓಎಸ್‌ ಬೆಂಬಲವನ್ನು ಪಡೆದುಕೊಂಡಿರಲಿದೆ. ಇನ್ನು ಈ ಫೋನ್‌ 4 GB + 128 GB ಮತ್ತು 8GB + 128 GB ವೇರಿಯಂಟ್ ಮಾದರಿಗಳ ಆಯ್ಕೆ ಪಡೆದಿದೆ. ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಪಡೆದಿದ್ದು, ಮುಖ್ಯ ಕ್ಯಾಮೆರಾವು 64 ಮೆಗಾ ಪಿಕ್ಸಲ್ ಸೆನ್ಸಾರ್ ಹೊಂದಿದೆ. ಈ ಫೋನ್ 5,000 mAh ಬ್ಯಾಟರಿ ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದ್ದು, ಇದರೊಂದಿಗೆ 30W Dart ಸಾಮರ್ಥ್ಯದ ಚಾರ್ಜಿಂಗ್ ಸೌಲಭ್ಯ ವನ್ನು ಒಳಗೊಂಡಿರಲಿದೆ.

English summary
Amazon Sale: Great Offers On These Realme Smartphones.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+