Home
Deal of the day

Amazon: ಅಮೆಜಾನ್‌ ಸಮ್ಮರ್ ಸೇಲ್ 2024: ಒನ್‌ಪ್ಲಸ್‌, ಶಿಯೋಮಿ ಡಿವೈಸ್‌ಗಳಿಗೆ 65% ವರೆಗೆ ರಿಯಾಯಿತಿ

ಅಮೆಜಾನ್‌ (Amazon) ಅಗಾಗ್ಗೆ ವಿಶೇಷ ಸೇಲ್‌ಗಳನ್ನು ಆಯೋಜನೆ ಮಾಡುವ ಮೂಲಕ ಸ್ಮಾರ್ಟ್‌ಫೋನ್‌ ಸೇರಿದಂತೆ ವಿವಿಧ ರೀತಿಯ ಸ್ಮಾರ್ಟ್‌ ಡಿವೈಸ್‌ಗಳನ್ನು ಅಗ್ಗದ ದರದಲ್ಲಿ ನೀಡುವ ಕೆಲಸ ಮಾಡುತ್ತಿದೆ. ಈ ನಡುವೆ ಅಮೆಜಾನ್ ಗ್ರೇಟ್ ಸಮ್ಮರ್ ಸೇಲ್ (Amazon Great Summer Sale) ನಲ್ಲಿ ಕೆಲವು ಡಿವೈಸ್‌ಗಳನ್ನು 65% ರಷ್ಟು ರಿಯಾಯಿತಿಯಲ್ಲಿ ಖರೀದಿ ಮಾಡಬಹುದಾಗಿದೆ.

ಹೌದು, ಅಮೆಜಾನ್‌ನ ಈ ವಿಶೇಷ ಸೇಲ್‌ ಮೇ 2 ರಿಂದ ಮೇ 7 ರವರೆಗೆ ನಡೆಯಲಿದ್ದು, ಇನ್ನು ಒಂದು ದಿನವಷ್ಟೇ ಇದೆ. ಈ ವೇಳೆ ನೀವು ಎಲ್‌ಜಿ. ಮಿ, ಸೋನಿ, ಒನ್‌ಪ್ಲಸ್‌ ಸೇರಿದಂತೆ ಇತರೆ ಬ್ರಾಂಡ್‌ಗಳಿಂದ ವೈವಿಧ್ಯಮಯ ಸ್ಮಾರ್ಟ್‌ಟಿವಿಗಳನ್ನು ಖರೀದಿ ಮಾಡಬಹುದಾಗಿದೆ. ಹಾಗಿದ್ರೆ, ಯಾವೆಲ್ಲಾ ಸ್ಮಾರ್ಟ್‌ಟಿವಿಗಳಿಗೆ (smart TVs) ಏನೆಲ್ಲಾ ಆಫರ್ ಇದೆ, ಅವುಗಳ ಪ್ರಮುಖ ಫೀಚರ್ಸ್‌ ಏನು ಅನ್ನೋ ಮಾಹಿತಿ ಇಲ್ಲಿದೆ ನೋಡಿ.

ಅಮೆಜಾನ್‌ ಸಮ್ಮರ್ ಸೇಲ್ 2024: ಒನ್‌ಪ್ಲಸ್‌,ಶಿಯೋಮಿ ಡಿವೈಸ್‌ಗಳಿಗೆ 65% ರಿಯಾಯಿತಿ

ಸೋನಿ ಬ್ರಾವಿಯಾ 139 cm (55 ಇಂಚು) 4K ಅಲ್ಟ್ರಾ ಹೆಚ್‌ಡಿ ಸ್ಮಾರ್ಟ್ ಎಲ್‌ಇಡಿ ಗೂಗಲ್‌ ಟಿವಿ KD-55X74L: ಈ ಸ್ಮಾರ್ಟ್‌ಟಿವಿಯನ್ನು 55,990 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ ಇದು ಆಪಲ್‌ ಏರ್‌ಪ್ಲೇ ಮತ್ತು ಅಲೆಕ್ಸಾ ಬೆಂಬಲವನ್ನು ಪಡೆದಿದ್ದು, 3840 x 2160 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯ ಹಾಗೂ 60Hz ರಿಫ್ರೆಶ್ ರೇಟ್‌ ಮತ್ತು 178 ಡಿಗ್ರಿ ವೈಡ್ ಆಂಗಲ್ ವೀಕ್ಷಣೆ ಅನುಭವವನ್ನು ನೀಡಲಿದೆ. ಇದರ ಜೊತೆಗೆ 20W ಸ್ಪೀಕರ್‌ ಆಯ್ಕೆ ಪಡೆದಿದ್ದು, ಇದು ಡಾಲ್ಬಿ ಆಡಿಯೊ ಬೆಂಬಲ ಪಡೆದಿದೆ.

ಮಿ 80 cm (32 ಇಂಚು) A ಸರಣಿ ಹೆಚ್ ಡಿ ರೆಡಿ ಸ್ಮಾರ್ಟ್ ಗೂಗಲ್‌ ಟಿವಿ L32M8-5AIN: ಈ ಸ್ಮಾರ್ಟ್‌ಟಿವಿಯನ್ನು ನೀವು 12,490 ರೂ.ಗಳ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಈ ಹೆಚ್‌ಡಿ ರೆಡಿ ಸ್ಮಾರ್ಟ್ ಟಿವಿಯು 60Hz ರಿಫ್ರೆಶ್ ರೇಟ್‌ ಆಯ್ಕೆ ಪಡೆದಿದ್ದು, ವಿಶಾಲವಾದ 178 ಡಿಗ್ರಿ ವೀಕ್ಷಣಾ ಕೋನವನ್ನು ನೀಡಲಿದೆ. ಇದರೊಂದಿಗೆ ಇನ್‌ಬಿಲ್ಟ್‌ ವೈ ಫೈ , ಬ್ಲೂಟೂತ್ ಸಾಮರ್ಥ್ಯಗಳು ಮತ್ತು ಪೋರ್ಟ್‌ಗಳ ವಿಶೇಷ ಸೌಲಭ್ಯ ಲಭ್ಯ ಇದೆ.

ಅಮೆಜಾನ್‌ ಸಮ್ಮರ್ ಸೇಲ್ 2024: ಒನ್‌ಪ್ಲಸ್‌,ಶಿಯೋಮಿ ಡಿವೈಸ್‌ಗಳಿಗೆ 65% ರಿಯಾಯಿತಿ

ಒನ್‌ಪ್ಲಸ್‌ 108 cm (43 ಇಂಚು) Y ಸರಣಿ 4K ಅಲ್ಟ್ರಾ ಹೆಚ್‌ಡಿ ಸ್ಮಾರ್ಟ್ ಆಂಡ್ರಾಯ್ಡ್ ಎಲ್‌ಇಡಿ ಟಿವಿ 43Y1S ಪ್ರೊ: ಈ ಸ್ಮಾರ್ಟ್‌ಟಿವಿ 22,999 ರೂ.ಗಳ ಆಫರ್ ಬೆಲೆಗೆ ಲಭ್ಯ ಇದೆ. ಇದು ಆಪ್‌ಗಳು, ಗೇಮ್‌ಗಳು ಮತ್ತು ಸ್ಟ್ರೀಮಿಂಗ್ ಸೇವೆಗಳಿಗೆ ಪ್ರವೇಶವನ್ನು ನೀಡಲಿದ್ದು. ಸೆಟ್ ಟಾಪ್ ಬಾಕ್ಸ್, ಬ್ಲೂ ರೇ ಪ್ಲೇಯರ್‌ಗಳು, ಗೇಮಿಂಗ್ ಕನ್ಸೋಲ್‌ಗಳನ್ನು ಸಂಪರ್ಕಿಸಲು 3 ಹೆಚ್‌ಡಿಎಮ್‌ಐ ಪೋರ್ಟ್‌ಗಳ ಆಯ್ಕೆ ನೀಡುತ್ತದೆ. ಹಾರ್ಡ್ ಡ್ರೈವ್‌ಗಳು ಮತ್ತು ಇತರ ಯುಎಸ್‌ಬಿ ಡಿವೈಸ್‌ಗಳನ್ನು ಸಂಪರ್ಕಿಸಲು 2 ಯುಎಸ್‌ಬಿ ಪೋರ್ಟ್‌ಗಳು ಸಹ ಇವೆ.

ಮಿ 108 cm (43 ಇಂಚು) ಎ ಸೀರಿಸ್‌ ಫುಲ್‌ ಹೆಚ್‌ಡಿ ಸ್ಮಾರ್ಟ್ ಗೂಗಲ್‌ ಟಿವಿ L43M8-5AIN : ಈ ಸ್ಮಾರ್ಟ್‌ಟಿವಿ 22,999 ರೂ.ಗಳ ಸಾಮಾನ್ಯ ಬೆಲೆ ಹೊಂದಿದ್ದು, ವರ್ಧಿತ ವೀಕ್ಷಣೆಯ ಅನುಭವಕ್ಕಾಗಿ ಫುಲ್‌ ಹೆಚ್‌ಡಿ ರೆಸಲ್ಯೂಶನ್ ಮತ್ತು ಡಾಲ್ಬಿ ಆಡಿಯೋ ಸೌಲಭ್ಯವನ್ನು ನೀಡಲಿದೆ. ಇದರ ಜೊತೆಗೆ ವೈ-ಫೈ, ಬ್ಲೂಟೂತ್ ಮತ್ತು ಬಹು ಪೋರ್ಟ್‌ಗಳು ಸೇರಿದಂತೆ ಬಹುಸಂಖ್ಯೆಯ ಸಂಪರ್ಕ ಆಯ್ಕೆಯನ್ನು ಇದರಲ್ಲಿ ಕಾಣಬಹುದು. ನಿಮ್ಮ ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ ಅಥವಾ ಲ್ಯಾಪ್‌ಟಾಪ್‌ನಿಂದ ಈ ಸ್ಮಾರ್ಟ್‌ಟಿವಿಯಲ್ಲಿ ಸ್ಟ್ರೀಮ್ ಸಹ ಮಾಡಬಹುದಾಗಿದೆ.

ಅಮೆಜಾನ್‌ ಸಮ್ಮರ್ ಸೇಲ್ 2024: ಒನ್‌ಪ್ಲಸ್‌,ಶಿಯೋಮಿ ಡಿವೈಸ್‌ಗಳಿಗೆ 65% ರಿಯಾಯಿತಿ

ಎಲ್‌ಜಿ 108 cm (43 ಇಂಚು) 4K ಅಲ್ಟ್ರಾ ಹೆಚ್‌ಡಿ ಸ್ಮಾರ್ಟ್ ಎಲ್‌ಇಡಿ ಟಿವಿ 43UR7500PSC: ಈ ಸ್ಮಾರ್ಟ್‌ಟಿವಿ 29,990 ರೂ.ಗಳಲ್ಲಿ ಲಭ್ಯ ಇದ್ದು, ವಾಯ್ಸ್‌ ಕಂಟ್ರೋಲ್‌ಗಾಗಿ ಎಐ ಥಿನ್‌ಕ್ಯೂ ಮತ್ತು ಆಪ್ಟಿಮೈಸ್ಡ್ ಗೇಮಿಂಗ್ ಕಾರ್ಯಕ್ಷಮತೆಗಾಗಿ ಗೇಮ್ ಆಪ್ಟಿಮೈಸರ್‌ನಂತಹ ಫೀಚರ್ಸ್‌ ಅನ್ನು ನೀಡುತ್ತದೆ. ಆಡಿಯೊ ಫೀಚರ್ಸ್‌ ವಿಷಯದಲ್ಲಿ, ಇದು 20 ವ್ಯಾಟ್‌ಗಳ ಔಟ್‌ಪುಟ್, 2.0 ಚಾನೆಲ್ ಸ್ಪೀಕರ್, ಎಐ ಸೌಂಡ್ (ವರ್ಚುವಲ್ ಸರೌಂಡ್ 5.1) ಮತ್ತು ಎಐ ಅಕೌಸ್ಟಿಕ್ ಟ್ಯೂನಿಂಗ್ ಅನ್ನು ಹೊಂದಿದೆ.

Best Mobiles in India

English summary
Amazon sale start from May 2nd to May 7th, just one day left. If you are planning to buy Smart TVs you can utilize this offer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+