Apple: ವಿಜಯ್ ಸೇಲ್ಸ್‌ನಲ್ಲಿ ಆಪಲ್ ಡೇಸ್ ಸೇಲ್! ಈ ಎಲ್ಲಾ ಡಿವೈಸ್‌ಗಳಿಗೂ ಆಫರ್..
ಆಪಲ್ ಡಿವೈಸ್‌ಗಳನ್ನು (Apple device) ಖರೀದಿ ಮಾಡುವವರಿಗೆ ಇದು ಸುವರ್ಣಾವಕಾಶ. ಯಾಕೆಂದರೆ ವಿಜಯ್ ಸೇಲ್ಸ್‌ನಲ್ಲಿ ಆಪಲ್ ಡೇಸ್ ಸೇಲ್ (Apple Days sale ) ಆರಂಭ ಮಾಡಲಾಗಿದ್ದು, ಇಲ್ಲಿ ಆಪಲ್‌ನ ಎಲ್ಲಾ ರೀತಿಯ ಡಿವೈಸ್ ಗಳಿಗೆ ಬೊಂಬಾಟ್ ಆಫರ್ ನೀಡಲಾಗಿದೆ.
ಹೌದು, ಆಪಲ್ ಡೇಸ್ ಸೇಲ್ ವಿಜಯ್ ಸೇಲ್ಸ್‌ನಲ್ಲಿ ಇದೀಗ ಲೈವ್ ಆಗಿದ್ದು, ಈ ಸೇಲ್‌ನಲ್ಲಿ ಐಫೋನ್, ಮ್ಯಾಕ್‌ಬುಕ್, ಐಪ್ಯಾಡ್ (iPhone, MacBook, iPad) ಹಾಗೂ ಇತರೆ ಆಪಲ್ ಡಿವೈಸ್‌ಗಳಲ್ಲಿ ಭಾರೀ ರಿಯಾಯಿತಿಯೊಂದಿಗೆ ಖರೀದಿ ಮಾಡಬಹುದಾಗಿದೆ. ಹಾಗಿದ್ರೆ, ಈ ಸೇಲ್ ಎಲ್ಲಿವರೆಗೆ ಇರಲಿದೆ?, ಯಾವ ಡಿವೈಸ್‌ಗೆ ಎಷ್ಟು ಆಫರ್ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಆಪಲ್ ಡೇಸ್ ಸೇಲ್: ಮಾರ್ಚ್ 16 ರಿಂದ ಅಂದರೆ ಇಂದಿನಿಂದ ಈ ಸೇಲ್ ಲೈವ್ ಆಗಿದ್ದು, ಮಾರ್ಚ್ 24 ರಂದು ಕೊನೆಗೊಳ್ಳುತ್ತದೆ. ಈ ಸೇಲ್‌ನಲ್ಲಿ ನೀವು ಮೊದಲೇ ತಿಳಿಸಿದಂತೆ ಆಪಲ್‌ನ ಎಲ್ಲಾ ಡಿವೈಸ್‌ಗಳಲ್ಲೂ ಡಿಸ್ಕೌಂಟ್ ಪಡೆದುಕೊಳ್ಳಬಹುದು. ಈ ಆಫರ್ ನಲ್ಲಿ ನೀವು ಡಿವೈಸ್‌ಗಳನ್ನು ಖರೀದಿ ಮಾಡಲು ವಿಜಯ್ ಸೇಲ್ಸ್ ಸ್ಟೋರ್ (Vijay Sales Store) ಮತ್ತು www.vijaysales.com ಗೆ ಭೇಟಿ ನೀಡಬಹುದಾಗಿದೆ. ಹಾಗಿದ್ರೆ, ತಡಯಾಕೆ ಬನ್ನಿ ಯಾವೆಲ್ಲಾ ಡಿವೈಸ್‌ಗಳು ಏನೆಲ್ಲಾ ಆಫರ್ ಬೆಲೆಗೆ ಲಭ್ಯ ಇವೆ ಗಮನಿಸೋಣ.
ಐಫೋನ್ 15 ಪ್ರೊ: 1TB ಸ್ಟೋರೇಜ್ ವೇರಿಯಂಟ್‌ನ ಐಫೋನ್ 15 ಪ್ರೊ (iPhone 15 Pro) ಬೆಲೆ 184,900 ರೂ.ಗಳು. ಆದರೆ, ಈಗ ಆಫರ್ ಬೆಲೆ 162,990 ರೂ.ಗಳಿಗೆ ಇದನ್ನು ಖರೀದಿ ಮಾಡಬಹುದಾಗಿದೆ. ಜೊತೆಗೆ ಈ ಫೋನ್ ಖರೀದಿ ವೇಳೆ ಹೆಚ್‌ಡಿಎಫ್‌ಸಿ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಅನ್ನು ಬಳಕೆ ಮಾಡಿಕೊಂಡು ಖರೀದಿ ಮಾಡಿದ್ರೆ ಹೆಚ್ಚುವರಿ 3,000ರೂ.ಗಳ ರಿಯಾಯಿತಿಯನ್ನು ಪಡೆಯಬಹುದಾಗಿದೆ. ಹಾಗೆಯೇ 512GB ಸ್ಟೋರೇಜ್ ವವೇರಿಯಂಟ್ ಅನ್ನು 159,990 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ.

ಐಫೋನ್ 15: ಐಫೋನ್ 15 (iPhone 15) ಸ್ಮಾರ್ಟ್‌ಫೋನ್ ಅನ್ನು 70,490 ರೂ.ಗಳ ಬೆಲೆ ಹೊಂದಿದೆ. ಹಾಗೆಯೇ ಐಫೋನ್ 15 ಪ್ಲಸ್ 79,820 ರೂ.ಗಳ ಬೆಲೆಯಲ್ಲಿ ಲಭ್ಯ ಇದ್ದು, ಹೆಚ್‌ಡಿಎಫ್‌ಸಿ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಕೆ ಮಾಡಿ ಖರೀದಿ ಮಾಡಿದ್ರೆ ಇನ್ನೂ ಕಡಿಮೆ ದರದಲ್ಲಿ ಈ ಫೋನ್ ನಿಮ್ಮದಾಗಿಸಿಕೊಳ್ಳಬಹುದು. ಅಂದರೆ ಐಫೋನ್ 15 ಮತ್ತು ಐಫೋನ್ 15 ಪ್ಲಸ್ (iPhone 15 Plus) ಗೆ 4,000 ರೂ.ಗಳು ಹಾಗೂ ಐಫೋನ್ 15 ಪ್ರೊ, ಐಫೋನ್ 15 ಪ್ರೊ ಮ್ಯಾಕ್ಸ್, ಐಫೋನ್ 14 ಮತ್ತು ಐಫೋನ್ 14 ಪ್ಲಸ್ (iPhone 15 Pro, iPhone 15 Pro Max, iPhone 14 and iPhone 14 Plus) ಗೆ 3,000 ರೂ.ಗಳ ಡಿಸ್ಕೌಂಟ್ ಸಿಗಲಿದೆ.
ಐಪ್ಯಾಡ್: ಈಗ ಐಪ್ಯಾಡ್‌ಗಳ ವಿಚಾರಕ್ಕೆ ಬರುವುದಾದರೆ ಐಪ್ಯಾಡ್ 9th ಜನ್ (iPad 9th gen) 27,900 ರೂ.ಳಿಂದ ಪ್ರಾರಂಭವಾಗುತ್ತದೆ. ಆದರೂ ಹೆಚ್‌ಡಿಎಫ್‌ಸಿ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ದಾರರಿಗೆ 2,000 ರೂ.ಗಳ ರಿಯಾಯಿತಿ ಜೊತೆಗೆ 194 ಲಾಯಲ್ಟಿ ಪಾಯಿಂಟ್‌ಗಳನ್ನು ಸಹ ಪಡೆಯಬಹುದಾಗಿದೆ. ಇದರೊಂದಿಗೆ ಐಪ್ಯಾಡ್ 10th ಜನ್ ಅನ್ನು 36,430 ರೂ.ಗಳ ಆರಂಭಿಕ ಬೆಲೆಯಿಂದ ಖರೀದಿ ಮಾಡಬಹುದು. ಇದರಲ್ಲಿ 251 ಲಾಯಲ್ಟಿ ಪಾಯಿಂಟ್‌ಗಳನ್ನು ಗಳಿಸಬಹುದಾಗಿದೆ.
ಇದರ ಜೊತೆಗೆ ಐಪ್ಯಾಡ್ ಏರ್ 5th ಜನ್‌ನ ಆರಂಭಿಕ ಬೆಲೆ 54,680 ರೂ.ಗಳಾಗಿದ್ದು, 4,000 ರೂ.ಗಳ ರಿಯಾಯಿತಿ ಪಡೆಯುವ ಮೂಲಕ 50,680 ರೂ.ಗಳಿಗೆ ನೀವಿದನ್ನು ಕೊಂಡುಕೊಳ್ಳಬಹುದಾಗಿದೆ. ಜೊತೆಗೆ ಇದರಲ್ಲೂ ಸಹ 380 ಲಾಯಲ್ಟಿ ಪಾಯಿಂಟ್‌ಗಳನ್ನು ಪಡೆಯಬಹುದು. ಅಲ್ಲದೆ ಐಪ್ಯಾಡ್ ಪ್ರೊ ಸಹ 4,000ರೂ. ಗಳ ರಿಯಾಯಿತಿಯೊಂದಿಗೆ 79,300 ರೂ.ಗಳ ಬೆಲೆಯಲ್ಲಿ ಲಭ್ಯ ಇದೆ.

ಮ್ಯಾಕ್‌ಬುಕ್: M3 ಚಿಪ್‌ಬಲದೊಂದಿಗೆ ಲಭ್ಯ ಇರುವ ಮ್ಯಾಕ್‌ಬುಕ್ ಏರ್(MacBook Air) 5,000 ರಿಯಾಯಿತಿಯೊಂದಿಗೆ 1,09,900 ರೂ.ಗಳಿಗೆ ಲಭ್ಯವಿದೆ. ಇದರಲ್ಲೂ ನೀವು 824 ಲಾಯಲ್ಟಿ ಪಾಯಿಂಟ್‌ಗಳನ್ನು ಗಳಿಸಬಹುದು. ಹಾಗೆಯೇ 89,900 ರೂ ಬೆಲೆಯ ಮತ್ತೊಂದು ಮ್ಯಾಕ್‌ಬುಕ್ ಏರ್ ವೇರಿಯಂಟ್ ಅನ್ನು 5,000 ರೂ.ಗಳ ರಿಯಾಯಿತಿ ಜೊತೆಗೆ 84,900 ರೂ.ಗಳ ಬೆಲೆಗೆ ಖರೀದಿ ಮಾಡಬಹುದಾಗಿದ್ದು, 637 ಲಾಯಲ್ಟಿ ಪಾಯಿಂಟ್‌ಗಳನ್ನು ಪಡೆಯಬಹುದು.
ಆಪಲ್ ವಾಚ್: ಇನ್ನು ಎಲ್ಲರ ಇಷ್ಟದ ಆಪಲ್ ವಾಚ್ (Apple Watch) ವಿಭಾಗಕ್ಕೆ ಬಂದರೆ ಆಪಲ್ ವಾಚ್ ಸರಣಿ 9 ಅನ್ನು 2,500 ರಿಯಾಯಿತಿಯೊಂದಿಗೆ 36,310 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಇದರ ಜೊತೆಗೆ ಆಪಲ್ ವಾಚ್ ಸರಣಿ SE (2ನೇ ಜನ್) ಅನ್ನು ಸಹ 2,000 ರಿಯಾಯಿತಿಯೊಂದಿಗೆ 25,690ರೂ.ಗಳ ಆಫರ್ ಬೆಲೆಗೆ ಕೊಂಡುಕೊಳ್ಳಬಹುದು. ಇದರ ಜೊತೆಗೆ ಆಪಲ್ ವಾಚ್ ಸರಣಿ ಅಲ್ಟ್ರಾ 4,000 ರೂ.ಗಳ ರಿಯಾಯಿತಿ ಜೊತೆಗೆ 79,260 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ.


Click it and Unblock the Notifications








