ರಿಯಲ್‌ಮಿಯ ಈ ಎಲ್ಲಾ ಫೋನ್‌ಗಳಿಗೆ ಅಮೆಜಾನ್, ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್ ಆಫರ್!
ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಅಗ್ಗದ ದರದಲ್ಲಿ ಅತ್ಯುತ್ತಮ ಫೀಚರ್ಸ್ ನೀಡುವ ಫೋನ್‌ಗಳಾಗಿ ರಿಯಲ್‌ಮಿ ಫೋನ್‌ಗಳು ಅಗ್ರಸ್ಥಾನದಲ್ಲಿ ಗುರುತಿಸಿಕೊಳ್ಳುತ್ತವೆ. ಅದರಂತೆ ಈಗ ಪ್ರಮುಖ ಇ-ಕಾಮರ್ಸ್ ಸೈಟ್‌ಗಳಲ್ಲಿ ಕೆಲವು ಪ್ರಮುಖ ರಿಯಲ್‌ಮಿ ಫೋನ್‌ಗಳಿಗೆ ಭರ್ಜರಿ ಆಫರ್ ಘೋಷಣೆ ಮಾಡಲಾಗಿದೆ.
ಹೌದು, ರಿಯಲ್‌ಮಿ 12 ಪ್ರೊ+, ರಿಯಲ್‌ಮಿ P1 ಪ್ರೊ ಸೇರಿದಂತೆ ಅನೇಕ ಪ್ರಮುಖ ಸ್ಮಾರ್ಟ್‌ಫೋನ್ ಗಳನ್ನು ಇದೀಗ ಭಾರೀ ಆಫರ್ ಬೆಲೆಯೊಂದಿಗೆ ಖರೀದಿ ಮಾಡಬಹುದಾಗಿದೆ. ಅಮೆಜಾನ್ ಬಿಗ್ ಸಮ್ಮರ್ ಸೇಲ್ ಮತ್ತು ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ಸ್ ಡೇಸ್ ಸೇಲ್ ನಲ್ಲಿ ಈ ಆಫರ್ ಇದೆ. ಹಾಗಿದ್ರೆ, ತಡಯಾಕೆ ಬನ್ನಿ ಯಾವೆಲ್ಲಾ ಫೋನ್‌ಗಳಿಗೆ ಏನೆಲ್ಲಾ ಆಫರ್ ಇದೆ ನೋಡೋಣ.

ರಿಯಲ್‌ಮಿ 12 ಪ್ರೊ+ 5G: ಈ ಸ್ಮಾರ್ಟ್‌ಫೋನ್ 8GB+128GB, 8GB+256GB, ಮತ್ತು 12GB+256GB ಯ ಮೂರು ವೇರಿಯಂಟ್ ನಲ್ಲಿ ಲಭ್ಯ ಇದ್ದು, ಬೆಲೆ ಕ್ರಮವಾಗಿ 29,999, ರೂ.ಗಳು, 31,999 ರೂ.ಗಳು ಮತ್ತು 33,999 ರೂ.ಗಳಾಗಿದೆ. ಕೊಡುಗೆ ಮೂಲಕ ಖರೀದಿ ಮಾಡಿದ್ರೆ ಕ್ರಮವಾಗಿ 24,999 ರೂ.ಗಳು, 26,999 ರೂ.ಗಳು ಮತ್ತು 30,999ರೂ.ಗಳಾಗಿದೆ. ಇದರಲ್ಲಿ 3000 ರೂ.ಗಳ ಬ್ಯಾಂಕ್ ಆಫರ್ ಮತ್ತು 2000 ರೂ.ಗಳ ಕೂಪನ್ ಅನ್ನು ನೀಡಲಾಗುತ್ತದೆ. ಈ ಆಫರ್ 2ನೇ ಮೇ 12 AM ರಿಂದ ಫ್ಲಿಪ್‌ಕಾರ್ಟ್ ಮತ್ತು ರಿಯಲ್‌ಮಿ ನಲ್ಲಿ ಲಭ್ಯವಿದೆ.
ರಿಯಲ್‌ಮಿ P1 ಪ್ರೊ 5G: ಈ ಫೋನ್‌ನ 8GB+128GB ಮತ್ತು 8GB+256GB ವೇರಿಯಂಟ್‌ಗಳು ಕ್ರಮವಾಗಿ 21,999 ರೂ.ಗಳು ಮತ್ತು 22,999ರೂ.ಗಳ ಬೆಲೆ ಹೊಂದಿದ್ದು, ಈ ವೇಳೆ ನೀವು 19,999 ರೂ.ಗಳು ಮತ್ತು 20,999 ರೂ.ಗಳು ಆಫರ್ ಬೆಲೆಗೆ ಈ ಫೋನ್‌ಗಳನ್ನು ಖರೀದಿ ಮಾಡಬಹುದಾಗಿದೆ. ಈ ಕೊಡುಗೆಯಲ್ಲಿ 1000 ರೂ.ಗಳ ಕೂಪನ್ ಮತ್ತು 1000 ರೂ.ಗಳ ಬ್ಯಾಂಕ್ ಆಫರ್ ಹೊಂದಿದೆ.

ರಿಯಲ್‌ಮಿ P1 5G: ಈ ಫೋನ್ ಮೂರು ವೇರಿಯಂಟ್ ಅನ್ನು ಹೊಂದಿದೆ. ಅಂದರೆ 6GB+128GB, 8GB+128GB, ಮತ್ತು 8GB+256GB. ಈ ವೇರಿಯಂಟ್‌ಗಳ ಸಾಮಾನ್ಯ ಬೆಲೆ ಕ್ರಮವಾಗಿ 15,999ರೂ.ಗಳು, 17,499 ರೂ.ಗಳು ಮತ್ತು 18,999ರೂ.ಗಳಾಗಿದೆ. ರಿಯಾಯಿತಿ ಬಳಿಕ ಈ ಫೋನ್ ಅನ್ನು 14,999ರೂ.ಗಳು, 15,999 ರೂ.ಗಳು ಮತ್ತು16,999ರೂ.ಗಳು ಬೆಲೆಗೆ ಖರೀದಿ ಮಾಡಬಹುದಾಗಿದೆ. ಅಲ್ಲದೆ 1000 ರೂ.ಗಳ ಕೂಪನ್ ಮತ್ತು 500 ರೂ. ಬೆಲೆಯ ರಿಯಾಯಿತಿಯನ್ನು ಹೊಂದಿದ್ದು, ಈ ಆಫರ್ 1ನೇ ಮೇ 12 AM ರಿಂದ ಆರಂಭ ಆಗಿದೆ.
ರಿಯಲ್‌ಮಿ 12x 5G : ಈ ಸ್ಮಾರ್ಟ್‌ಫೋನ್ ಸಹ ಮೂರು ವೇರಿಯಂಟ್ ಆಯ್ಕೆ ಪಡೆದುಕೊಂಡಿದೆ. 4GB+128GB, 6GB+128GB, ಮತ್ತು 8GB+128GB. ಈ ವೇರಿಯಂಟ್‌ಗಳ ಸಾಮಾನ್ಯ ಕ್ರಮವಾಗಿ 11,999ರೂ.ಗಳು, 13,499 ರೂ.ಗಳು ಮತ್ತು 14,999 ರೂ.ಗಳಾಗಿದೆ. ಆದರೆ ಈ ವಿಶೇಷ ಸೇಲ್‌ನಲ್ಲಿ ನೀವು 10,999ರೂ.ಗಳು, 11,999 ರೂ.ಗಳು ಮತ್ತು 13,999 ರೂ.ಗಳಿಗೆ ಇದನ್ನು ಖರೀದಿ ಮಾಡಬಹುದಾಗಿದೆ. ಈ ಫೋನ್‌ಗೆ 1000 ರೂ.ಗಳ ಬ್ಯಾಂಕ್ ಆಫರ್ ಮತ್ತು 500 ರೂ.ಗಳ ಡಿಸ್ಕೌಂಟ್ ಇದೆ. ಈಗಾಗಲೇ ಸೇಲ್ ಲೈವ್ ಆಗಿದೆ.
ರಿಯಲ್‌ಮಿ ನಾರ್ಜೋ 70 ಪ್ರೊ 5G: ಈ ಫೋನ್ 8GB+256GB ಮತ್ತು 8GB+128GB ವೇರಿಯಂಟ್ ಆಯ್ಕೆಯಲ್ಲಿ ಲಭ್ಯ ಇದ್ದು, 21,999 ರೂ.ಗಳು ಮತ್ತು 19,999 ರೂ.ಗಳ ಸಾಮಾನ್ಯ ಬೆಲೆ ಹೊಂದಿದೆ. ಆದರೆ ನೀವು ಈಗ ಈ ಫೋನ್‌ಗಳನ್ನು 18,999 ರೂ.ಗಳು ಮತ್ತು 17,999 ರೂ.ಗಳಲ್ಲಿ ಖರೀದಿ ಮಾಡಬಹುದಾಗಿದೆ. ಈ ಫೋನ್‌ಗೆ 3000 ರೂ.ಗಳ ಮೌಲ್ಯದ ಕೂಪನ್ ಮತ್ತು 2000 ರೂ.ಗಳ ಬೆಲೆಯ ಕೂಪನ್ ಇದೆ.

ರಿಯಲ್‌ಮಿ ನಾರ್ಜೋ 70 5G: ಈ ಫೋನ್ ಸಹ ಎರಡು ವೇರಿಯಂಟ್ ಆಯ್ಕೆಯಲ್ಲಿ ಲಭ್ಯ ಇದೆ. 8GB+128GB ಮತ್ತು 6GB+128GB ವೇರಿಯಂಟ್ ಆಯ್ಕೆಯ ಫೋನ್‌ಗೆ ಕ್ರಮವಾಗಿ 16,999 ರೂ.ಗಳು ಮತ್ತು 15,999 ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಕೊಡುಗೆ ನಂತರ ಈ ಫೋನ್‌ಗಳ ಬೆಲೆ ಕ್ರಮವಾಗಿ 15,999 ರೂ.ಗಳು ಮತ್ತು 14,999 ರೂ.ಗಳಾಗಿದೆ. ಈ ಆಫರ್ ನಲ್ಲಿ 1000 ರೂ. ಬೆಲೆಯ ಕೂಪನ್ ಅನ್ನು ಹೊಂದಿದೆ.
ರಿಯಲ್‌ಮಿ ನಾರ್ಜೋ 70x 5G: ಇದೇ ಸರಣಿಯ ಮತ್ತೊಂದು ಫೋನ್ ರಿಯಲ್‌ಮಿ ನಾರ್ಜೋ 70x 5G ಗೂ ವಿಶೇಷ ಆಫರ್ ಇದೆ. 6GB+128GB ಮತ್ತು 4GB+128GB ವೇರಿಯಂಟ್ ಆಯ್ಕೆಯ ಈ ಫೋನ್‌ಗೆ ಕ್ರಮವಾಗಿ 13,499ರೂ.ಗಳು ಮತ್ತು 11,999 ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಆದರೆ ನೀವು ಈ ಫೋನ್ ಅನ್ನು 11,999 ರೂ.ಗಳು ಮತ್ತು 10,999 ರೂ.ಗಳ ಬೆಲೆಗೆ ಖರೀದಿ ಮಾಡಬಹುದಾಗಿದೆ.


Click it and Unblock the Notifications








