Home
Deal of the day

256GB ಸ್ಟೋರೇಜ್‌ ಸೌಲಭ್ಯ ಇರುವ ಈ ಫೋನಿನ ಬೆಲೆಯಲ್ಲಿ ಭರ್ಜರಿ ಇಳಿಕೆ!

ಲೀಡಿಂಗ್ ಇ ಕಾಮರ್ಸ್‌ ಅಮೆಜಾನ್‌ (Amazon) ವೆಬ್‌ಸೈಟ್‌ ಈಗಾಗಲೇ ಆನ್‌ಲೈನ್ ಮಾರುಕಟ್ಟೆಯಲ್ಲಿ ಭರ್ಜರಿ ಸೌಂಡ್‌ ಮಾಡಿದ್ದು, ಖರೀದಿದಾರರಿಗೆ ಪ್ರಮುಖ ಅಡ್ಡಾ ಎನಿಸಿದೆ. ಈ ಆನ್‌ಲೈನ್‌ ಶಾಪಿಂಗ್ ತಾಣವು ಮುಖ್ಯವಾಗಿ ಸ್ಮಾರ್ಟ್‌ಫೊನ್‌ಗಳಿಗೆ ಹೆಚ್ಚಿನ ಡಿಸ್ಕೌಂಟ್‌ ಕೊಡುಗೆ ಘೋಷಿಸುತ್ತಾ ಮುನ್ನಡೆದ್ದು, ಈ ಮೂಲಕ ಹೆಚ್ಚಿನ ಗ್ರಾಹಕರನ್ನು ಸೆಳೆಯುವ ಪ್ರಯತ್ನ ನಡೆಸಿದೆ. ಸದ್ಯ ಐಕ್ಯೂ ಸಂಸ್ಥೆಯು ಐಕ್ಯೂ Z7 ಪ್ರೊ 5G (iQOO Z7 Pro 5G) ಫೋನ್‌ ಭಾರೀ ಬೆಲೆ ಇಳಿಕೆ ದರದಲ್ಲಿ ಕಾಣಿಸಿಕೊಂಡಿದೆ.

ಹೌದು, ಅಮೆಜಾನ್‌ ತಾಣದಲ್ಲಿ ಐಕ್ಯೂ Z7 ಪ್ರೊ 5G (iQOO Z7 Pro 5G) ಫೋನ್‌ ಶೇ. 14% ರಷ್ಟು ನೇರ ಡಿಸ್ಕೌಂಟ್‌ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಈ ಫೋನಿನ 8GB RAM + 256GB ಸ್ಟೋರೇಜ್‌ ವೇರಿಯಂಟ್‌ 23,999ರೂ. ಗಳ ಆಫರ್‌ ಪ್ರೈಸ್‌ಟ್ಯಾಗ್‌ನಲ್ಲಿ ಖರೀದಿಗೆ ಲಭ್ಯ. ಇನ್ನು ಅಮೆಜಾನ್‌ ತಾಣದಲ್ಲಿ ಸಿಗುವ ಇತರೆ ಬ್ಯಾಂಕ್‌ ಆಫರ್‌ಗಳನ್ನು ಪಡೆದರೆ, ಇನ್ನಷ್ಟು ರಿಯಾಯಿತಿ ಬೆಲೆಗೆ ಖರೀದಿಸಲು ಅವಕಾಶ ಇದೆ.

256GB ಸ್ಟೋರೇಜ್‌ ಸೌಲಭ್ಯ ಇರುವ ಈ ಫೋನಿನ ಬೆಲೆಯಲ್ಲಿ ಭರ್ಜರಿ ಇಳಿಕೆ!

ಅಂದಹಾಗೆ ಈ ಐಕ್ಯೂ ಮೊಬೈಲ್‌ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಒಳಗೊಂಡಿದ್ದು, ಇದರ ಮುಖ್ಯ ಕ್ಯಾಮೆರಾವು 64 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಅಲ್ಲದೇ ಮುಂಭಾಗದಲ್ಲಿ ಸೆಲ್ಫಿ ಕ್ಯಾಮೆರಾವು 16 ಮೆಗಾ ಪಿಕ್ಸಲ್‌ ಸೆನ್ಸಾರ್‌ ಹೊಂದಿದೆ. ಇನ್ನುಳಿದಂತೆ ಐಕ್ಯೂ Z7 ಪ್ರೊ 5G ಫೋನಿನ ಇತರೆ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಐಕ್ಯೂ Z7 ಪ್ರೊ 5G - ಫೀಚರ್ಸ್‌

ಐಕ್ಯೂ Z7 ಪ್ರೊ 5G ಮೊಬೈಲ್‌ 6.78 ಇಂಚಿನ ಫುಲ್‌ ಹೆಚ್‌ಡಿ+ ಅಮೋಲೆಡ್‌ ಡಿಸ್‌ಪ್ಲೇ ಅನ್ನು ಪಡೆದಿದೆ. ಈ ಡಿಸ್‌ಪ್ಲೇ 2400 x 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ ದಲ್ಲಿ ಇದೆ. ಇನ್ನು ಡಿಸ್‌ಪ್ಲೇ 20:9 ರಚನೆಯ ಅನುಪಾತ ಹೊಂದಿದ್ದು, 120Hz ರಿಫ್ರೆಶ್ ರೇಟ್‌ ಮತ್ತು 300Hz ಟಚ್‌ ಸ್ಯಾಂಪಲಿಂಗ್‌ ರೇಟ್‌ ಆಯ್ಕೆ ಪಡೆದುಕೊಂಡಿದೆ. ಜೊತೆಗೆ 1300 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಅನ್ನು ಒದಗಿಸಲಾಗಿದೆ.

ಐಕ್ಯೂ Z7 ಪ್ರೊ 5G ಮೊಬೈಲ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 7200 SoC ಪ್ರೊಸೆಸರ್‌ ಪವರ್‌ ಸಾಮರ್ಥ್ಯದಲ್ಲಿ ಕಾರ್ಯ ಮಾಡಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 13 ಓಎಸ್‌ ಬೆಂಬಲದೊಂದಿಗೆ ಕೆಲಸ ನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 256GB ಆಂತರೀಕ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ.

ಐಕ್ಯೂ Z7 ಪ್ರೊ 5G ಮೊಬೈಲ್‌ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಹೊಂದಿದೆ. ಇದರ ಮೊದಲ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸರ್‌ ಪಡೆದಿದೆ. ದ್ವಿತೀಯ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಡೆಪ್ತ್ ಸೆನ್ಸರ್ ಪಡೆದಿದೆ. ಇದರ ಜೊತೆಗೆ 16 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಫ್ಲಾಶ್, HDR ಅನ್ನು ಪಡೆದುಕೊಂಡಿದೆ.

ಐಕ್ಯೂ Z7 ಪ್ರೊ 5G ಮೊಬೈಲ್‌ 4,600mAh ಬ್ಯಾಟರಿ ಬ್ಯಾಕ್‌ಅಪ್‌ ಸಾಮರ್ಥ್ಯ ಅನ್ನು ಒಳಗೊಂಡಿದ್ದು, ಇದಕ್ಕೆ ಪೂರಕವಾಗಿ 66W ಫಾಸ್ಟ್‌ ಚಾರ್ಜಿಂಗ್‌ ಅನ್ನು ಸಪೋರ್ಟ್ ಇದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ ವೈಫೈ, ಬ್ಲೂಟೂತ್ 5.3, ಜಿಪಿಎಸ್, USB ಟೈಪ್-C 2.0, OTG ಆಯ್ಕೆಗಳನ್ನು ಪಡೆದಿದೆ. ಹಾಗೆಯೇ ಇದು ಅಂಡರ್‌ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಅನ್ನು ಹೊಂದಿದೆ.

Best Mobiles in India

English summary
Fabulous Price Discount on iQOO Z7 Pro 5G mobile in India. check out offer, price, specifications and more details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+