Home
Deal of the day

ಭಾರೀ ಡಿಸ್ಕೌಂಟ್‌ನಲ್ಲಿ iPhone ಬೇಕಿದ್ರೆ, ಈ ಆಫರ್‌ ಗ್ರಾಹಕರಿಗೆ ಸೂಪರ್‌!

ಮೊಬೈಲ್‌ ಬ್ರ್ಯಾಂಡ್‌ಗಳ ದೊಡ್ಡಣ್ಣ ಎಂದು ಗುರುತಿಸಿಕೊಂಡಿರುವ ಆಪಲ್‌ (Apple) ಸಂಸ್ಥೆಯ ಐಫೋನ್‌ ಮಾಡೆಲ್‌ಗಳು ಭಾರೀ ಮೆಚ್ಚುಗೆ ಪಡೆದಿದ್ದು, ಕೆಲವು ಹಳೆಯ ಐಫೋನ್‌ ಮಾಡೆಲ್‌ಗಳು ಸಹ ಜನಪ್ರಿಯತೆ ಉಳಿಸಿಕೊಂಡಿವೆ. ಆ ಪೈಕಿ ಆಪಲ್‌ ಸಂಸ್ಥೆಯ ಐಫೋನ್‌ 13 (Apple iPhone 13) ಫೋನ್‌ ಸ್ಟೈಲಿಶ್‌ ಲುಕ್‌ ಹಾಗೂ ಬೊಂಬಾಟ್‌ ಫೀಚರ್ಸ್‌ಗಳ ಮೂಲಕ ಗ್ರಾಹಕರ ಗಮನ ಸೆಳೆದಿದೆ. ಅಂದಹಾಗೆ ಈ ಮೊಬೈಲ್‌ ಅಮೆಜಾನ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ನಲ್ಲಿ ಸಖತ್ ಬೆಲೆ ಇಳಿಕೆಯಲ್ಲಿ ಕಾಣಿಸಿಕೊಂಡಿದ್ದು, ಗ್ರಾಹಕರಿಗೆ ಸಂತಸ ಎನಿಸಿದೆ

ಹೌದು, ಇ ಕಾಮರ್ಸ್‌ ವೆಬ್‌ಸೈಟ್‌ ಅಮೆಜಾನ್‌ ತಾಣದಲ್ಲಿ ಐಫೋನ್‌ 13 (Apple iPhone 13) ಸ್ಮಾರ್ಟ್‌ಫೋನ್‌ ಶೇ. 24% ರಷ್ಟು ನೇರ ರಿಯಾಯಿತಿ ಬೆಲೆಯಲ್ಲಿ ಖರೀದಿಗೆ ಲಭ್ಯ ಇದೆ. ಈ ಫೋನಿನ 128GB ವೇರಿಯಂಟ್‌ 45,499ರೂ. ಗಳ ಆಫರ್‌ ದರದಲ್ಲಿ ಖರೀದಿಗೆ ಲಭ್ಯ ಇದೆ. ಹಾಗೆಯೇ ಗ್ರಾಹಕರು ಇನ್ನಷ್ಟು ರಿಯಾಯಿತಿ ಪಡೆಯಲು ಲಭ್ಯ ಇರುವ ಬ್ಯಾಂಕ್‌ ಆಫರ್‌ ಹಾಗೂ ಎಕ್ಸ್‌ಚೇಂಜ್ ಆಫರ್‌ ಸಹ ಪಡೆಯಬಹುದು.

ಭಾರೀ ಡಿಸ್ಕೌಂಟ್‌ನಲ್ಲಿ iPhone ಬೇಕಿದ್ರೆ, ಈ ಆಫರ್‌ ಗ್ರಾಹಕರಿಗೆ ಸೂಪರ್‌!

ಅಂದಹಾಗೆ ಈ ಐಫೋನ್‌ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಪಡೆದಿದ್ದು, ಮೊದಲ ಕ್ಯಾಮೆರಾವು 12 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಹಾಗೆಯೇ ಈ ಫೋನ್ A15 ಬಯೋನಿಕ್ (A15 Bionic chip) ಪಡೆದಿದೆ. ಅಮೆಜಾನ್‌ ತಾಣದಲ್ಲಿ Apple iPhone 13 ಫೋನ್‌ ಅನ್ನು ಆಕರ್ಷಕ ಕೊಡುಗೆಯಲ್ಲಿ ಖರೀದಿಸಬಹುದು. ಹಾಗಾದರೇ ಐಫೋನ್‌ 13 ಮೊಬೈಲ್‌ನ ಇತರೆ ಫೀಚರ್ಸ್‌ಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

ಐಫೋನ್ 13 - ಫೀಚರ್ಸ್‌ ಮಾಹಿತಿ

ಆಪಲ್‌ ಐಫೋನ್ 13 ಮೊಬೈಲ್‌ 6.1 ಇಂಚಿನ ರೇಟಿನಾ XDR ಡಿಸ್‌ಪ್ಲೇ ಅನ್ನು ಹೊಂದಿದ್ದು, 2532 X 1170 ಪಿಕ್ಸೆಲ್ ರೆಸಲ್ಯೂಶನ್ ಜೊತೆಗೆ 460 ppi ಸಹ ಪಡೆದಿದೆ. ಇದರ ಜೊತೆಗೆ 1200 nits ಬ್ರೈಟ್ನೆಸ್‌ ಹೊಂದಿದೆ. ಅಲ್ಲದೇ ಇದು ಫಿಂಗರ್ಪ್ರಿಂಟ್-ನಿರೋಧಕ ಓಲಿಯೋಫೋಬಿಕ್ ಲೇಪನ ಪಡೆದಿದೆ. ಹಾಗೆಯೇ ಈ ಫೋನ್ A15 ಬಯೋನಿಕ್ (A15 Bionic chip) ಸೋಕ್ ಕ್ವಾಡ್‌ ಕೋರ್ ಪ್ರೊಸೆಸರ್‌ ಅನ್ನು ಹೊಂದಿದೆ. ಅಲ್ಲದೇ 5G ಅನ್ನು ಸಪೋರ್ಟ್‌ ಮಾಡುತ್ತದೆ.

ಆಪಲ್‌ ಐಫೋನ್ 13 ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಪ್ರಾಥಮಿಕ ಕ್ಯಾಮೆರಾವು 12 ಮೆಗಾ ಪಿಕ್ಸೆಲ್ ಅಲ್ಟ್ರಾ ಕ್ಯಾಮೆರಾ ಸೆನ್ಸಾರ್ ಹೊಂದಿದ್ದು, ಎರಡನೇ ಕ್ಯಾಮೆರಾವು 12 ಮೆಗಾ ಪಿಕ್ಸಲ್ ವೈಲ್ಡ್‌ ಆಂಗಲ್ ಲೆನ್ಸ್‌ ಒಳಗೊಂಡಿದೆ. ಕ್ಯಾಮೆರಾವು 5x ವರೆಗೆ ಡಿಜಿಟಲ್ ಜೂಮ್, ಸೆನ್ಸರ್-ಶಿಫ್ಟ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್, ಪನೋರಮಾ, ನೈಟ್‌ ಮೋಡ್, ಬರ್ಸ್ಟ್ ಮೋಡ್, ಡೀಪ್ ಫ್ಯೂಷನ್, ಸ್ಮಾರ್ಟ್ HDR 4 ನಂತಹ ಆಯ್ಕೆಗಳನ್ನು ಹೊಂದಿದೆ.

ಅಲ್ಲದೇ ಈ ಐಫೋನ್‌ 120 fps ಅಥವಾ 240 fps ನಲ್ಲಿ 1080p ಗಾಗಿ ಸ್ಲೋ ಮೋಷನ್‌ ವೀಡಿಯೊ ಸಪೋರ್ಟ್ ಮಾಡುತ್ತದೆ. ಇದು QuickTake ವೀಡಿಯೊ ಆಯ್ಕೆ ಒಳಗೊಂಡಿದೆ. ಹಾಗೆಯೇ ಈ ಫೋನಿನ ಕ್ಯಾಮೆರಾವು 60 fps ನಲ್ಲಿ 4K ವರೆಗೆ ಡಾಲ್ಬಿ ವಿಷನ್‌ನೊಂದಿಗೆ HDR ವೀಡಿಯೊ ರೆಕಾರ್ಡಿಂಗ್, ವೀಡಿಯೊಗಾಗಿ ಸೆನ್ಸರ್-ಶಿಫ್ಟ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (ವೈಡ್), 24 fps, 25 fps, 30 fps, ಅಥವಾ 60 fps ನಲ್ಲಿ 4K ವೀಡಿಯೊ ರೆಕಾರ್ಡಿಂಗ್ ಸಪೋರ್ಟ್‌ ಪಡೆದಿದೆ.

Best Mobiles in India

English summary
Fabulous price drop on Apple iPhone 13 on Amazon website. Know about mobile discount price, offer price, other specifications and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+