Home
Deal of the day

ಫಾಸ್ಟ್ರ್ಯಾಕ್‌ ರಿವೋಲ್ಟ್ FS1 ಪ್ರೊ ಸ್ಮಾರ್ಟ್‌ವಾಚ್‌ಗೆ 37% ರಿಯಾಯಿತಿ!

ಇತರೆ ಸ್ಮಾರ್ಟ್‌ ಡಿವೈಸ್‌ಗಳಂತೆ ಸ್ಮಾರ್ಟ್‌ವಾಚ್‌ಗಳು ಸಹ ಇಂದು ಅತ್ಯಗತ್ಯ ಡಿವೈಸ್‌ ಆಗಿದ್ದು, ಇವು ಸಮಯವನ್ನು ತಿಳಿಸುವ ಜೊತೆಗೆ ವಿವಿಧ ಆರೋಗ್ಯ ಸಂಬಂಧಿ ಮಾಹಿತಿಯನ್ನು ನೀಡುತ್ತವೆ. ಅದರಂತೆ ಪ್ರಮುಖ ಕಂಪೆನಿಗಳು ಭಿನ್ನ ಫೀಚರ್ಸ್‌ನೊಂದಿಗೆ ಹೊಸ ಹೊಸ ಸ್ಮಾರ್ಟ್‌ವಾಚ್‌ ಅನಾವರಣ ಮಾಡುತ್ತಿದ್ದು, ಇದೀಗ ಈ ಜನಪ್ರಿಯ ವಾಚ್‌ಗೆ 37% ರಿಯಾಯಿತಿ ನೀಡಲಾಗಿದೆ.

ಹೌದು, ಪ್ರಮುಖ ಸ್ಮಾರ್ಟ್‌ವಾಚ್‌ ಕಂಪೆನಿಯ ಫಾಸ್ಟ್ರ್ಯಾಕ್‌ ರಿವೋಲ್ಟ್ FS1 ಪ್ರೊ (Fastrack Revoltt FS1 Pro) ಮಾರುಕಟ್ಟೆಯಲ್ಲಿ ಭರ್ಜರಿ ಸದ್ದು ಮಾಡುತ್ತಿದ್ದು, ಈ ವಾಚ್‌ಸೂಪರ್‌ ಅಮೋಲೆಡ್‌ ಡಿಸ್‌ಪ್ಲೇಯೊಂದಿಗೆ ಕಾಣಿಸಿಕೊಂಡಿದೆ. ಜೊತೆಗೆ 7 ದಿನಗಳವರೆಗೆ ಬ್ಯಾಟರಿ ಬ್ಯಾಕಪ್‌ ಲಭ್ಯ .ಹಾಗಿದ್ರೆ, ಇದರ ಪ್ರಮುಖ ಫೀಚರ್ಸ್ ಹಾಗೂ ಇದರ ಆಫರ್‌ ಬೆಲೆ ವಿವರವನ್ನು ತಿಳಿಯೋಣ ಬನ್ನಿ.

ಫಾಸ್ಟ್ರ್ಯಾಕ್‌ ರಿವೋಲ್ಟ್ FS1 ಪ್ರೊ ಸ್ಮಾರ್ಟ್‌ವಾಚ್‌ಗೆ 37% ರಿಯಾಯಿತಿ!

ಫಾಸ್ಟ್ರ್ಯಾಕ್‌ ರಿವೋಲ್ಟ್ FS1 ಪ್ರೊ ಡಿಸ್‌ಪ್ಲೇ ವಿವರ: ಈ ಸ್ಮಾರ್ಟ್‌ವಾಚ್‌ 1.96 ಇಂಚಿನ ಸೂಪರ್‌ ಅಮೋಲೆಡ್ ಡಿಸ್‌ಪ್ಲೇ ಹೊಂದಿದ್ದು, ಇದು 410 x 502 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಇದರೊಂದಿಗೆ ಸ್ಪಷ್ಟ ಮತ್ತು ವರ್ಣರಂಜಿತ ದೃಶ್ಯಗಳನ್ನು ನೀಡುತ್ತದೆ. ಹಾಗೆಯೇ ಈ ಸ್ಮಾರ್ಟ್ ವಾಚ್‌ ಕಮಾನಿನ ವಿನ್ಯಾಸ ಪಡೆದಿದ್ದು ಈ ಆಕರ್ಷಕ ಶೈಲಿಯಿಂದಲೇ ಹೆಚ್ಚಿನ ಜನಪ್ರಿಯತೆ ಪಡೆದಿಕೊಂಡಿದೆ.

ಫಾಸ್ಟ್ರ್ಯಾಕ್‌ ರಿವೋಲ್ಟ್ FS1 ಪ್ರೊ ಫೀಚರ್ಸ್ ಮಾಹಿತಿ: ಇದರ ಫೀಚರ್ಸ್‌ ವಿಚಾರಕ್ಕೆ ಬರುವುದಾರೆ ಈ ವಾಚ್‌ ಸಿಂಗಲ್‌ ಸಿಂಗ್‌ ಬ್ಲೂಟೂತ್‌ ಕಾಲ್ ಫೀಚರ್ಸ್‌ ಪಡೆದಿದೆ. ಈ ಮೂಲಕ ಕರೆ ಸ್ವೀಕಾರ ಮಾಡಲು ಅಥವಾ ತಿರಸ್ಕರಿಸಲು ಹಾಗೂ ನೆಚ್ಚಿನ ಸಂಖ್ಯೆಗೆ ಡಯಲ್‌ ಮಾಡಲು ಈ ವಾಚ್‌ ಅನ್ನು ಬಳಕೆ ಮಾಡಿಕೊಳ್ಳಬಹುದು. ಇದರಿಂದ ನಿಮ್ಮ ಫೋನ್‌ ಅನ್ನು ಪಾಕೆಟ್‌ನಿಂದ ತೆಗೆಯುವ ತಾಪತ್ರಯವೇ ಇರುವುದಿಲ್ಲ.

ಇದರೊಂದಿಗೆ ಈ ವಾಚ್ ಒತ್ತಡ, ಹೃದಯ ಬಡಿತ ಮತ್ತು ಇತರ ಪ್ರಮುಖ ಆರೋಗ್ಯ ಸಂಬಂಧಿ ಮಾಹಿತಿಗಳನ್ನು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡಲಿದ್ದು, ನೀವು ಜಾಗಿಂಗ್, ಸೈಕ್ಲಿಂಗ್, ಈಜು ಅಥವಾ ಯೋಗ ಸೇರಿದಂತೆ ಅನೇಕ ಚಟುವಟಿಕೆ ನಡೆಸುವಾಗ ಈ ವಾಚ್‌ ನೈಜ-ಸಮಯದ ಪ್ರತಿಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲಿದೆ. ಈ ಮೂಲಕ ನೀವು ಉತ್ತಮ ದೈಹಿಕ ಆರೋಗ್ಯ ಹೊಂದಬಹುದು.

ಅಂದರೆ ಈ ವಾಚ್‌ ಸುಧಾರಿತ 110+ ಸ್ಪೋರ್ಟ್‌ ಮೋಡ್‌, 200ಕ್ಕೂ ಹೆಚ್ಚಿನ ವಾಚ್‌ಫೇಸ್‌, ಇನ್‌ಬಿಲ್ಟ್‌ ಗೆಮ್‌, ವಾಯ್ಸ್‌ ಅಸಿಸ್ಟೆಂಟ್‌ ಹಾಗೂ ವೆದರ್‌ ರಿಪೋರ್ಟ್‌ ಸೇರಿದಂತೆ ಇನ್ನೂ ಹತ್ತು ಹಲವು ಫೀಚರ್ಸ್ ಮೂಲಕ ಇತರೆ ಸ್ಮಾರ್ಟ್‌ವಾಚ್‌ಗಳಿಗಿಂತ ಭಿನ್ನ ಎನಿಸಿಕೊಂಡಿದೆ. ಜೊತೆಗೆ ಕರೆ ನೋಟಿಫಿಕೇಶನ್, ಕರೆ ಮ್ಯೂಟ್, ಸಾಮಾಜಿಕ ಮಾಧ್ಯಮ ನೋಟಿಫಿಕೇಶನ್, SMS ನೋಟಿಫಿಕೇಶನ್ ಸೇರಿದಂತೆ ಇತರೆ ನೋಟಿಫಿಕೇಶನ್‌ಗಳನ್ನು ವಾಚ್‌ನಲ್ಲಿಯೇ ಓದಬಹುದು.

ಇದರ ಬ್ಯಾಟರಿ ಸಾಮರ್ಥ್ಯದ ವಿಚಾರಕ್ಕೆ ಬರುವುದಾದರೆ ಇದು 7 ದಿನಗಳವರೆಗೆ ಬ್ಯಾಟರಿ ಬ್ಯಾಕಪ್‌ ನೀಡಲಿದೆ. ಅದರಲ್ಲೂ 10 ನಿಮಿಷಗಳ ಚಾರ್ಜ್‌ನೊಂದಿಗೆ 1 ದಿನದ ಬ್ಯಾಟರಿ ಬ್ಯಾಕಪ್‌ ಸಿಗಲಿದೆ ಎಂದು ಕಂಪೆನಿ ಹೇಳುತ್ತದೆ. ಉಳಿದಂತೆ ನೀರಿನ ಸ್ಪ್ಲಾಶ್‌ಗಳು ಮತ್ತು ಧೂಳನ್ನು ನಿಭಾಯಿಸುವ ಸಾಮರ್ಥ್ಯ ಪಡೆದುಕೊಂಡಿದೆ. ಇದಕ್ಕಾಗಿ ಈ ವಾಚ್‌ಗೆ IP68-ರೇಟಿಂಗ್‌ ನೀಡಲಾಗಿದೆ. ಈ ಮೂಲಕ ಯಾವ ಸಮಯದಲ್ಲಾದರೂ ಈ ವಾಚ್‌ ಅನ್ನು ಬಳಕೆ ಮಾಡಬಹುದು.

ಫಾಸ್ಟ್ರ್ಯಾಕ್‌ ರಿವೋಲ್ಟ್ FS1 ಪ್ರೊ ಸ್ಮಾರ್ಟ್‌ವಾಚ್‌ಗೆ 37% ರಿಯಾಯಿತಿ!

ಫಾಸ್ಟ್ರ್ಯಾಕ್ ರಿವೋಲ್ಟ್ FS1 ಪ್ರೊ ಬೆಲೆ ಹಾಗೂ ಲಭ್ಯತೆ: ಇನ್ನು ಈ ವಾಚ್‌ನ ಪ್ರಮುಖ ವಿಚಾರಕ್ಕೆ ಬರುವುದಾದರೆ ಈ ವಾಚ್‌ 7,995 ರೂ.ಗಳ ಸಾಮಾನ್ಯ ಬೆಲೆ ಹೊಂದಿದೆ. ಆದರೆ ನೀವು ಇದನ್ನು ಕೇವಲ 4,995ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಈ ವಾಚ್‌ಗೆ ಫ್ಲಿಪ್‌ಕಾರ್ಟ್‌ನಲ್ಲಿ 37% ರಿಯಾಯಿತಿ ಘೋಷಣೆ ಮಾಡಲಾಗಿದೆ. ಇಷ್ಟು ಮಾತ್ರವಲ್ಲದೆ ಕೆಲವು ಬ್ಯಾಂಕ್‌ ಕಾರ್ಡ್‌ಗಳನ್ನು ಬಳಕೆ ಮಾಡಿಕೊಂಡು ಖರೀದಿ ಮಾಡಿದರೆ ಇನ್ನೂ ಹೆಚ್ಚಿನ ಆಫರ್‌ ಪಡೆಯಬಹುದು.

Best Mobiles in India

English summary
Fastrack Revoltt FS1 Pro Smartwatch is heavily discounted on Flipkart. This watch has got a different display option.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+