SmartTVs: ಫ್ಲಿಪ್‌ಕಾರ್ಟ್‌ನಲ್ಲಿ ಭಾರೀ ಅಗ್ಗದ ಬೆಲೆಗೆ ಬ್ಲೂಪಂಕ್ಟ್ ಸ್ಮಾರ್ಟ್‌ಟಿವಿಗಳು: ಈ ಆಫರ್ ಕೆಲವೇ ದಿನಗಳಲ್ಲಿ ಮುಕ್ತಾಯ
ಆಫರ್ ಬೆಲೆಗೆ ಸ್ಮಾರ್ಟ್‌ಟಿವಿ (SmartTVs) ಖರೀದಿ ಮಾಡಬೇಕು ಅಂದುಕೊಂಡಿರುವವರಿಗೆ ಇದು ಸುವರ್ಣಾವಕಾಶ. ಯಾಕೆಂದರೆ ಪ್ರಮುಖ ಸ್ಮಾರ್ಟ್‌ಟಿವಿ ತಯಾರಿಕಾ ಬ್ರ್ಯಾಂಡ್ ಆಗಿರುವ ಬ್ಲೂಪಂಕ್ಟ್ (Blaupunkt) ತನ್ನ ಸ್ಮಾರ್ಟ್‌ಟಿವಿಗಳ ಮೇಲೆ ಭರ್ಜರಿ ರಿಯಾಯಿತಿ ಘೋಷಣೆ ಮಾಡಿದೆ.
ಹೌದು, ಪ್ರಮುಖ ಇ-ಕಾಮರ್ಸ್ ಸೈಟ್ ಆಗಿರುವ ಫ್ಲಿಪ್‌ಕಾರ್ಟ್‌ನ ಬಿಗ್ ಅಪ್‌ಗ್ರೇಡ್ ಸೇಲ್‌ನಲ್ಲಿ (Flipkart Big Upgrade Sale) ಬ್ಲೂಪಂಕ್ಟ್ ತನ್ನ ಎಲ್ಲಾ ಸ್ಮಾರ್ಟ್ ಟಿವಿಗಳಲ್ಲಿ ಬಂಪರ್ ಡಿಸ್ಕೌಂಟ್ ಘೋಷಣೆ ಮಾಡಿದೆ. ಈ ಮೂಲಕ ಭಾರೀ ಹಣ ಉಳಿತಾಯದೊಂದಿಗೆ ಉತ್ತಮ ಸ್ಮಾರ್ಟ್‌ಟಿವಿ ಅನುಭವ ಪಡೆಯಬಹುದಾಗಿದೆ. ಹಾಗಿದ್ರೆ, ತಡಯಾಕೆ ಬನ್ನಿ ಯಾವೆಲ್ಲಾ ಸ್ಮಾರ್ಟ್‌ಟಿವಿಗಳಿಗೆ ಏನೆಲ್ಲಾ ಆಫರ್ ಇದೆ ನೋಡೋಣ ಬನ್ನಿ.

ಫ್ಲಿಪ್‌ಕಾರ್ಟ್‌ನಲ್ಲಿ ಬ್ಲೂಪಂಕ್ಟ್ ಸ್ಮಾರ್ಟ್‌ಟಿವಿಗಳಿಗೆ ಆಫರ್: ಫ್ಲಿಪ್‌ಕಾರ್ಟ್‌ನಲ್ಲಿ ಈ ಸೇಲ್ ಈಗಾಗಲೇ ಲೈವ್ ಆಗಿದೆ. ಅಂದರೆ ಮಾರ್ಚ್ 9 ರಿಂದ ಆರಂಭ ಆಗಿದ್ದು, 15 ರ ವರೆಗೆ ಆಫರ್ ಲಭ್ಯ ಇದೆ. ಈ ವೇಳೆ ಗ್ರಾಹಕರು ಕ್ರೆಡಿಟ್ ಕಾರ್ಡ್ ಮತ್ತು ಇಎಮ್‌ಐ ವ್ಯವಹಾರದ ಮೂಲಕ ಸ್ಮಾರ್ಟ್ ಟಿವಿ ಖರೀದಿಯಲ್ಲಿ 10% ವರೆಗೆ ರಿಯಾಯಿತಿ ಪಡೆಯಬಹುದಾಗಿದೆ.
ಇನ್ನು ಬ್ಲೂಪಂಕ್ಟ್ ನ 24 ಇಂಚಿನ ಎಲ್‌ಇಡಿ ಟಿವಿ (24Sigma707) ಅನ್ನು ನೀವು ಈ ವೇಳೆ 6,299ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಹಾಗೆಯೇ ಬ್ಲೂಪಂಕ್ಟ್ (32CSA7101) 32 ಇಂಚಿನ ಎಲ್‌ಇಡಿ ಟಿವಿಯನ್ನು 9,999 ರೂ.ಗಳಿಗೆ ಹಾಗೂ 43 ಇಂಚಿನ ಎಲ್‌ಇಡಿ ಟಿವಿಯನ್ನು 16,999 ರೂ.ಗಳಿಗೆ ಮತ್ತು ಬ್ಲೂಪಂಕ್ಟ್ (32CSG7111) 32 ಇಂಚಿನ ಎಲ್‌ಇಡಿ ಸ್ಮಾರ್ಟ್ ಟಿವಿಯನ್ನು 10,299ರೂ.ಗಳಿಗೆ ಖರೀದಿ ಮಾಡಬಹುದು.

ಇದರೊಂದಿಗೆ ಬ್ಲೂಪಂಕ್ಟ್ (40CSG7112) 40 ಇಂಚಿನ ಎಲ್‌ಇಡಿ ಸ್ಮಾರ್ಟ್ ಟಿವಿ 14,999 ರೂ.ಗಳ ಆಫರ್ ಬೆಲೆ ಹೊಂದಿದ್ದರೆ 43 ಇಂಚಿನ ಎಲ್‌ಇಡಿ ಸ್ಮಾರ್ಟ್ ಟಿವಿ 16,999 ರೂ.ಗಳಿಗೆ ಲಭ್ಯ ಇದೆ. ಇನ್ನು ಸೈಬರ್‌ಸೌಂಡ್ ಸರಣಿಯಿಂದ ಬ್ಲೂಪಂಕ್ಟ್ 55 ಇಂಚಿನ ಎಲ್‌ಇಡಿ ಸ್ಮಾರ್ಟ್ ಟಿವಿಗೆ 29,999ರೂ.ಗಳ ಬೆಲೆ ನಿಗದಿ ಮಾಡಲಾಗಿದ್ದು, ಸೈಬರ್‌ಸೌಂಡ್ ಜನ್ 2 50 ಇಂಚಿನ ಅಲ್ಟ್ರಾ ಹೆಚ್‌ಡಿ 4K ಸ್ಮಾರ್ಟ್ ಎಲ್‌ಇಡಿ ಟಿವಿ (50CSGT7022) ಗೆ 25,999 ರೂ.ಗಳು ಮತ್ತು 65 ಇಂಚಿನ ಅಲ್ಟ್ರಾ ಹೆಚ್‌ಡಿ 4K ಸ್ಮಾರ್ಟ್ ಎಲ್‌ಇಡಿ ಟಿವಿ (65CSGT7024) ಗೆ 42,999 ರೂ.ಗಳ ಆಫರ್ ಬೆಲೆ ನಿಗದಿ ಪಡಿಸಲಾಗಿದೆ.
ಹಾಗೆಯೇ ಬ್ಲೂಪಂಕ್ಟನ 43 ಇಂಚಿನ QLED ಸ್ಮಾರ್ಟ್‌ಟಿವಿ 21,999 ರೂ.ಗಳ ಬೆಲೆಗೆ ಲಭ್ಯ ಇದೆ. ಈ ಟಿವಿ ಹೆಚ್‌ಡಿಆರ್ 10+ ಮತ್ತು ಡಾಲ್ಬಿ ವಿಷನ್ ಬೆಂಬಲ QLED 4K ಡಿಸ್‌ಪ್ಲೇ ಆಯ್ಕೆ ಪಡೆದಿದೆ. ಇದು 1.1 ಬಿಲಿಯನ್ ಬಣ್ಣಗಳನ್ನು ಬೆಂಬಲಿಸಲಿದ್ದು, ಡಾಲ್ಬಿ ಅಟ್ಮಾಸ್ ಮತ್ತು ಡಾಲ್ಬಿ ಡಿಜಿಟಲ್ ಪ್ಲಸ್ ಪ್ರಯೋಜನ ಪಡೆದಿದೆ. ಅಲ್ಲದೆ ಡಿಟಿಎಸ್ ಟ್ರೂಸರೌಂಡ್ ಸೌಂಡ್, 50 ವ್ಯಾಟ್ ಸ್ಪೀಕರ್, ವಿವಿದ ಸೌಂಡ್ ಮೋಡ್‌ಗಳು ಮತ್ತು ವಿವಿಧ ಕನೆಕ್ಟಿವಿಟಿ ಸೌಲಭ್ಯ ಪಡೆದಿದೆ.

ಇದರ ಜೊತೆಗೆ ನೀವು ಬ್ಲೂಪಂಕ್ಟ 55 ಇಂಚಿನ ಗೂಗಲ್‌ಟಿವಿಯನ್ನು 33,999 ರೂ.ಗಳಿಗೆ ಖರೀದಿ ಮಾಡಬಹುದು. ಈ ಸ್ಮಾರ್ಟ್‌ಟಿವಿ 4K ಹೆಚ್‌ಡಿಆರ್ 10+ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, ಬೆಜೆಲ್-ಲೆಸ್ ವಿನ್ಯಾಸ ಮತ್ತು ಮಿಶ್ರಲೋಹದ ಸ್ಟ್ಯಾಂಡ್‌ನೊಂದಿಗೆ ಆಕರ್ಷಕವಾಗಿ ಕಾಣುತ್ತದೆ. ಅಲ್ಲದೆ ಡಾಲ್ಬಿ ಡಿಜಿಟಲ್ ಪ್ಲಸ್ ಮತ್ತು ಡಿಟಿಎಸ್ ಟ್ರೂಸರೌಂಡ್ ತಂತ್ರಜ್ಞಾನದೊಂದಿಗೆ 60W ಸ್ಟಿರಿಯೊ ಬಾಕ್ಸ್ ಸ್ಪೀಕರ್ ಸಿಸ್ಟಮ್‌ನಿಂದ ಈ ಸ್ಮಾರ್ಟ್‌ಟಿವಿ ಉತ್ತಮ ಅನುಭವ ನೀಡಲಿದೆ.

ಬ್ಲೂಪಂಕ್ಟ ಸ್ಮಾರ್ಟ್‌ಟಿವಿಗಳ ವಿಶೇಷತೆ ಏನು?: ಬ್ಲೂಪಂಕ್ಟ ಉತ್ತಮ ಗುಣಮಟ್ಟದ ಸ್ಮಾರ್ಟ್‌ಟಿವಿಗಳ ಶ್ರೇಣಿಯನ್ನು ನೀಡುವ ಪ್ರಸಿದ್ಧ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿದೆ. ಜರ್ಮನ್ ಇಂಜಿನಿಯರಿಂಗ್ ಮತ್ತು ಗುಣಮಟ್ಟಕ್ಕೆ ಹೆಸರುವಾಸಿಯಾಗಿದ್ದು, ಸುಧಾರಿತ ತಂತ್ರಜ್ಞಾನ, ನಯವಾದ ವಿನ್ಯಾಸ ಮತ್ತು ಅಸಾಧಾರಣ ಚಿತ್ರ ಮತ್ತು ಸೌಂಡ್ ಗುಣಮಟ್ಟವನ್ನು ನೀಡುತ್ತವೆ. ಇವು 4K ಮತ್ತು QLED ನಂತಹ ಪ್ರಭಾವಶಾಲಿ ಡಿಸ್‌ಪ್ಲೇ ಆಯ್ಕೆ ಪಡೆದಿರಲಿದ್ದು, ವೀಕ್ಷಣೆಯ ಅನುಭವವನ್ನು ಹೆಚ್ಚು ಮಾಡುತ್ತವೆ. ಹಾಗಿದ್ರೆ, ಮತ್ಯಾಕೆ ತಡ ನಿಮಗೆ ಈ ಸ್ಮಾರ್ಟ್‌ಟಿವಿ ಬೇಕು ಎಂದರೆ ಫ್ಲಿಪ್‌ಕಾರ್ಟ್‌ಗೆ ಭೇಟಿ ನೀಡಿ.


Click it and Unblock the Notifications








