Flipkart Month End Mobiles Fest 2023: ಈ ಅತ್ಯುತ್ತಮ ಫೋನ್‌ಗಳಿಗೆ ಭಾರೀ ರಿಯಾಯಿತಿ!
ಪ್ರಮುಖ ಇ-ಕಾಮರ್ಸ್ ಸೈಟ್ ಆಗಿರುವ ಫ್ಲಿಪ್‌ಕಾರ್ಟ್(Flipkart) ಆಗಾಗ್ಗೆ ವಿವಿಧ ಡಿವೈಸ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್ ಅನ್ನು ಘೋಷಣೆ ಮಾಡುವ ಮೂಲಕ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ. ಈ ನಡುವೆ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳ ಮೇಲೆ ಈಗ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಲಾಗಿದ್ದು, ಮೊಬೈಲ್ ಖರೀದಿ ಮಾಡಬೇಕು ಎಂದುಕೊಂಡವರಿಗೆ ಇದು ಉತ್ತಮ ಅವಕಾಶವಾಗಿದೆ.
ಹೌದು, ಫ್ಲಿಪ್‌ಕಾರ್ಟ್‌ನಲ್ಲಿ ತಿಂಗಳ ಅಂತ್ಯದ ಮೊಬೈಲ್ ಫೆಸ್ಟ್ ಸೇಲ್ (Flipkart Month End Mobiles Fest 2023) ಆರಂಭಿಸಿದ್ದು, ಇದರಲ್ಲಿ ನೀವು ನಥಿಂಗ್ ಫೋನ್ (1) ನಿಂದ ಹಿಡಿದು ಐಫೋನ್ 14 ಪ್ರೊ ಮ್ಯಾಕ್ಸ್‌ವರೆಗೆ ಎಲ್ಲಾ ಫೋನ್‌ಗಳ ಮೇಲೆ ಅತ್ಯುತ್ತಮ ಆಫರ್ ಅನ್ನು ಪಡೆದುಕೊಳ್ಳಬಹುದು. ಜೊತೆಗೆ ನೋ ಕಾಸ್ಟ್‌ಇಎಮ್‌ಐ ಆಫರ್ ಸಹ ಲಭ್ಯ ಇದೆ. ಈ ಆಫರ್ ಜೂನ್ 29 ರವರೆಗೆ ಇರಲಿದೆ. ಹಾಗಿದ್ರೆ, ಬನ್ನಿ ಯಾವೆಲ್ಲಾ ಪ್ರಮುಖ ಫೋನ್‌ಗಳು ಏನೆಲ್ಲಾ ಆಫರ್ ಪಡೆದುಕೊಂಡಿವೆ ಎಂಬುದನ್ನು ಗಮನಿಸೋಣ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S21 FE 5: ಸ್ಯಾಮ್‌ಸಂಗ್ ಗ್ಯಾಲಕ್ಸಿ S21 FE 5 ಸ್ಮಾರ್ಟ್‌ಫೋನ್‌ಗೆ ಈ ಸೇಲ್‌ನಲ್ಲಿ ಬಂಫರ್ ಆಫರ್ ಇದೆ. ಅಂದರೆ ನೀವು ಈ ಫೋನ್ ಅನ್ನು 31,999ರೂ.ಗಳಿಗೆ ಖರೀದಿ ಮಾಡಬಹುದು. ಈ ವೇಳೆ ಎಲ್ಲಾ ಕೊಡುಗೆಗಳನ್ನೂ ಸಹ ಅನ್ವಯ ಮಾಡಿಕೊಳ್ಳಬಹುದಾಗಿದೆ. ಉಳಿದಂತೆ ಈ ಫೋನ್ 6.4 ಇಂಚಿನ ಡೈನಾಮಿಕ್ ಅಮೋಲೆಡ್ 2X 120Hz FHD+ ಡಿಸ್‌ಪ್ಲೇ ಹೊಂದಿದ್ದು, ಆಂಡ್ರಾಯ್ಡ್ 12 ಓಎಸ್ ನಲ್ಲಿ ರನ್ ಆಗಲಿದೆ. ಜೊತೆಗೆ 12MP+12MP+8MP ರಿಯರ್ ಕ್ಯಾಮೆರಾಗಳು ಮತ್ತು 32MP ಸೆಲ್ಫಿ ಕ್ಯಾಮೆರಾ ಆಯ್ಕೆ ಇದೆ.
ಐಫೋನ್ 14 ಪ್ರೊ ಮ್ಯಾಕ್ಸ್: ಪ್ರೀಮಿಯಂ ಐಫೋನ್ ಅನ್ನು ಕಡಿಕೆ ಬೆಲೆಗೆ ಖರೀದಿ ಮಾಡಬೇಕು ಎಂದರೆ ನೀವು ಐಫೋನ್ 14 ಪ್ರೊ ಮ್ಯಾಕ್ಸ್ ಫೋನ್ ಆಯ್ಕೆ ಮಾಡಿಕೊಳ್ಳಬಹುದು. ಈ ಫೋನ್ 3,000 ಬ್ಯಾಂಕ್ ಕ್ಯಾಶ್‌ಬ್ಯಾಕ್ ಪಡೆದ ನಂತರ ರೂ 1,24,999 ಕ್ಕೆ ಲಭ್ಯ ಇದೆ. ಅದರಂತೆ 6.7 ಇಂಚಿನ ಸೂಪರ್ ರೆಟಿನಾ XDR ಪ್ಯಾನೆಲ್ ಹೊಂದಿರುವ ಈ ಫೋನ್ A16 ಬಯೋನಿಕ್ ಚಿಪ್ ನೊಂದಿಗೆ 48MP + 12MP + 12MP ರಿಯರ್ ಕ್ಯಾಮೆರಾ ಹಾಗೂ 12MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ.
ಐಫೋನ್ 13: ಐಫೋನ್ 13 ಅಂತೂ ಎಲ್ಲಾ ಸಮಯದಲ್ಲೂ ಆಫರ್ ಬೆಲೆ ಲಭ್ಯ ಇರುತ್ತದೆ. ಅದರಲ್ಲೂ ಹೆಚ್ಚಾಗಿ ಸೇಲ್ ಆಗುತ್ತಿರುವ ಐಫೋನ್‌ಗಳಲ್ಲಿ ಇದು ಪ್ರಮುಖವಾಗಿದೆ. ಅದರಂತೆ ನೀವು ಈ ಫೋನ್ ಅನ್ನು 57,499 ರೂ.ಗಳಿಗೆ ಕೊಂಡುಕೊಳ್ಳಬಹುದು. ಇದು 6.1 ಇಂಚಿನ OLED ಡಿಸ್‌ಪ್ಲೇ ಹೊಂದಿದ್ದು, A15 ಬಯೋನಿಕ್ ಚಿಪ್ ಮೂಲಕ ಕಾರ್ಯನಿರ್ವಹಿಸುತ್ತದೆ. ಉಳಿದಂತೆ 12MP + 12MPಯ ರಿಯರ್ ಕ್ಯಾಮೆರಾ ರಚನೆ ಹಾಗೂ 12MP ಸೆಲ್ಫಿ ಕ್ಯಾಮೆರಾ ಆಯ್ಕೆ ನೀಡಲಾಗಿದೆ.
ನಥಿಂಗ್ ಫೋನ್ (1) : ನಥಿಂಗ್ ಫೋನ್ (2) ಅನ್ನು ಇನ್ನೇನು ಕೆಲವೇ ದಿನಗಳಲ್ಲಿ ಲಾಂಚ್ ಮಾಡಲಾಗುತ್ತಿರುವುದರಿಂದಾಗಿ ನಥಿಂಗ್ ಫೋನ್ (1) ಮೇಲೆ ಭಾರೀ ಆಫರ್‌ಗಳನ್ನು ನೀಡಲಾಗುತ್ತಿದೆ. ಈ ಕಾರಣಕ್ಕೆ ನೀವು 28,249 ರೂ.ಗಳಿಗಿಂತಲೂ ಅಗ್ಗದ ಬೆಲೆಗೆ ಈ ಫೋನ್ ಅನ್ನು ಕೊಂಡುಕೊಳ್ಳಬಹುದಾಗಿದೆ. ಈ ಫೋನ್ 6.55 ಇಂಚಿನ FHD+ ಡಿಸ್‌ಪ್ಲೇ ಹೊಂದಿದ್ದು, ಸ್ನಾಪ್‌ಡ್ರಾಗನ್ 778G+ ಪ್ರೊಸೆಸರ್ ಬಲ ಪಡೆದಿದೆ. ಉಳಿದಂತೆ 50MP + 50MP ಬ್ಯಾಕ್ ಕ್ಯಾಮೆರಾ ರಚನೆ ಮತ್ತು 16MP ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದುಕೊಂಡಿದೆ.
ಗೂಗಲ್ ಪಿಕ್ಸೆಲ್ 7a : ಈ ಗೂಗಲ್ ಪಿಕ್ಸೆಲ್ 7a ಸಹ ಈ ಸೇಲ್‌ನಲ್ಲಿ ಬೊಂಬಾಟ್ ಆಪರ್ ಪಡೆದುಕೊಂಡಿದೆ. ಅಂದರೆ 4,000 ರಿಯಾಯಿತಿಯನ್ನು ಪಡೆದ ನಂತರ ಖರೀದಿದಾರರು ಇದನ್ನು 39,999ರೂ.ಗಳ ಬೆಲೆಗೆ ಖರೀದಿ ಮಾಡಬಹುದು. ಈ ಫೋನ್ 6.1 ಇಂಚಿನ FHD+ ಡಿಸ್‌ಪ್ಲೇ ಹೊಂದಿದ್ದು, ಟೆನ್ಸರ್ G2 SoC ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸುತ್ತದೆ. ಜೊತೆಗೆ 64MP + 13MP ರಿಯರ್ ಕ್ಯಾಮೆರಾ ಹಾಗೂ 13MP ಸೆಲ್ಫಿ ಕ್ಯಾಮೆರಾ ಆಯ್ಕೆ ನೀಡಲಾಗಿದೆ.

ಉದ್ಯೋಗಿಗಳಿಗೆ ಹೇಗೆ ಲಾಭ?: ನಿವೃತ್ತಿಯ ನಂತರ ನಿಯಮಿತ ಆದಾಯದ ಆಯ್ಕೆಯನ್ನು ಹೊಂದಿರದ ಅಥವಾ ಯಾವುದೇ ವರ್ಷಾಶನ ಯೋಜನೆಗಳು ಅಥವಾ ಸ್ಥಿರ ಆದಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿಲ್ಲದವರಿಗೆ ಇದು ತುಂಬಾ ಅಗತ್ಯವಾಗಿದೆ. ಇನ್ನು ಅರ್ಜಿದಾರರ ಪಿಂಚಣಿಯು ಸೆಪ್ಟೆಂಬರ್ 1, 2014ರ ಮೊದಲು ಪ್ರಾರಂಭವಾದರೆ, ಹೆಚ್ಚಿನ ಪಿಂಚಣಿಯ ಲೆಕ್ಕಾಚಾರವು ನಿವೃತ್ತಿಯ ದಿನಾಂಕದ ಹಿಂದಿನ 12 ತಿಂಗಳ ಅವಧಿಯಲ್ಲಿ ಪಡೆದ ಸರಾಸರಿ ಮಾಸಿಕ ವೇತನವನ್ನು ಆಧರಿಸಿರುತ್ತದೆ.


Click it and Unblock the Notifications








