Home
Deal of the day

ನಿಜಕ್ಕೂ ಬಂಪರ್..! 20000ಕ್ಕಿಂತ ಹೆಚ್ಚು ರಿಯಾಯಿತಿ.. ತುಂಬಾ ಕಡಿಮೆಗೆ Google Pixel 8a ಲಭ್ಯ.. ಹೊಸ ಬೆಲೆ ಇಷ್ಟು!

ಇದು ನಿಜಕ್ಕೂ ಬಂಪರ್ ಆಫರ್..! 20,000 ರೂ.ಗಿಂತ ಹೆಚ್ಚು ರಿಯಾಯಿತಿ.. ಹೌದು, ಗೂಗಲ್ ಕಂಪನಿಯ ಸ್ಮಾರ್ಟ್‌ಫೋನ್‌ಗಳಿಗೆ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆಯಿದೆ. ಇವು ಕೊಂಚ ದುಬಾರಿಯಾಗಿದ್ದರೂ, ಅತ್ಯುತ್ತಮ ವೈಶಿಷ್ಟ್ಯಗಳನ್ನು ಹೊಂದಿವೆ. ನೀವು ಗೂಗಲ್ ಸ್ಮಾರ್ಟ್‌ಫೋನ್ ಖರೀದಿಸಲು ಬಯಸಿದರೆ, ಇದು ನಿಮಗೆ ಸರಿಯಾದ ಸಮಯ. ಹೌದು, ಗೂಗಲ್ ಪಿಕ್ಸೆಲ್ 8a (Google Pixel 8a) ಫೋನ್ ಪ್ರಸ್ತುತ, ಮೊದಲಿಗಿಂತ ತುಂಬಾ ಕಡಿಮೆ ಬೆಲೆಗೆ ಲಭ್ಯವಿದೆ. ಫ್ಲಿಪ್‌ಕಾರ್ಟ್ 20,000 ರೂ.ಗಿಂತ ಹೆಚ್ಚಿನ ರಿಯಾಯಿತಿಯನ್ನು (Google Pixel 8a Discount) ಘೋಷಿಸಿದೆ. ಈ ಫೋನಿನ ಮೂಲ ಬೆಲೆ ಮತ್ತು ವಿಶೇಷತೆಗಳನ್ನು ತಿಳಿಯಲು ಮುಂದೆ ಓದಿ.

ಗೂಗಲ್ ಪಿಕ್ಸೆಲ್ 8a ಮೊಬೈಲ್ ಕಾರ್ಯಕ್ಷಮತೆಗೆ ಹೆಸರುವಾಸಿಯಾಗಿದೆ. ಇದು ಶಕ್ತಿಶಾಲಿ ಪ್ರೊಸೆಸರ್, ಅದ್ಭುತ ಕ್ಯಾಮೆರಾ ಮತ್ತು ಸೊಗಸಾದ ವಿನ್ಯಾಸದೊಂದಿಗೆ ಬರುತ್ತದೆ. ಈ ಸ್ಮಾರ್ಟ್‌ಫೋನ್ ಕಳೆದ ವರ್ಷ ಮೇ ತಿಂಗಳಲ್ಲಿ ಬಿಡುಗಡೆಯಾಗಿತ್ತು. ಈ ಮೊಬೈಲ್ ಅನೇಕ ಎಐ (AI) ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಮ್ಯಾಜಿಕ್ ಎಡಿಟರ್, ಬೆಸ್ಟ್ ಟೇಕ್, ಮ್ಯಾಜಿಕ್ ಎರೇಸರ್, ಫೋಟೋ ಅನ್‌ಬ್ಲರ್, ರಿಯಲ್ ಟೋನ್, ಫೇಸ್ ಅನ್‌ಬ್ಲರ್, ಮ್ಯಾನುಯಲ್ ವೈಟ್, ಪನೋರಮಾ, ಲಾಕ್ ಮಾಡಿದ ಫೋಲ್ಡರ್, ನೈಟ್ ಸೈಟ್, ಟ್ಯಾಪ್ ಶಾಟ್, ಪೋರ್ಟ್ರೇಟ್ ಮೋಡ್, ಮೋಷನ್ ಆಟೋಫೋಕಸ್, ಲೈವ್ HDR+, ಅಲ್ಟ್ರಾ HDR ಕ್ಯಾಮೆರಾ ಹೊಂದಿದೆ.

ಬಂಪರ್ ಡೀಲ್: 20000 ರಿಯಾಯಿತಿ.. ತುಂಬಾ ಕಡಿಮೆಗೆ Google Pixel 8a ಲಭ್ಯ!

ಗೂಗಲ್ ಪಿಕ್ಸೆಲ್ 8a ಬಿಡುಗಡೆ ಬೆಲೆ

8GB RAM + 128GB ಸ್ಟೋರೇಜ್‌ = 52,999 ರೂ.
8GB RAM + 256GB ಸ್ಟೋರೇಜ್ = 59,999 ರೂ.

52,999 ಬೆಲೆಯ 8GB RAM + 128GB ಸ್ಟೋರೇಜ್‌ ಹೊಂದಿರುವ ಗೂಗಲ್ ಪಿಕ್ಸೆಲ್ 8a ಮೊಬೈಲ್ ಮೊದಲಿಗಿಂತ ಕಡಿಮೆ ಬೆಲೆಗೆ ಲಭ್ಯವಿದೆ. ಪ್ರಸ್ತುತ ಫ್ಲಿಪ್‌ಕಾರ್ಟ್ ಮಾರಾಟದಲ್ಲಿ ಕೇವಲ 37,999 ರೂ.ಗೆ ಪಟ್ಟಿ ಮಾಡಲಾಗಿದೆ. ಫ್ಲಿಪ್‌ಕಾರ್ಟ್ ಗೂಗಲ್ ಪಿಕ್ಸೆಲ್ ಬೆಲೆಯನ್ನು ನೇರವಾಗಿ 15,000 ರೂ.ಗಳಷ್ಟು ಕಡಿಮೆ ಮಾಡಿದೆ. ಇದಲ್ಲದೆ, ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸುವವರಿಗೆ 5,250 ರೂ. ವರೆಗೆ ಹೆಚ್ಚುವರಿ ರಿಯಾಯಿತಿ ಸಿಗುತ್ತದೆ. ಈ ಎಲ್ಲಾ ಆಫರ್ ಬಳಿಕ, ಈ ಫೋನಿನ ಬೆಲೆ ಕೇವಲ 32,749 ರೂ.ಗೆ ಇಳಿಕೆಯಾಗುತ್ತದೆ.

ಇದಲ್ಲದೆ, ನೋ ಕಾಸ್ಟ್ ಇಎಂಐ ಸೌಲಭ್ಯವೂ ಇದೆ. ಕೇವಲ 3,167 ಮಾಸಿಕ ಪಾವತಿಯೊಂದಿಗೆ ನೀವು ಈ ಫೋನನ್ನು ಖರೀದಿಸಬಹುದು. ಅಂದರೆ, ನೀವು ಬಜೆಟ್ ಬಗ್ಗೆ ಹೆಚ್ಚು ಯೋಚಿಸುವ ಅಗತ್ಯವಿಲ್ಲ. ನಿಮ್ಮ ಬಳಿ ಹಳೆಯ ಸ್ಮಾರ್ಟ್‌ಫೋನ್ ಇದ್ದರೆ, ಅದನ್ನು ಎಕ್ಸ್‌ಚೇಂಜ್ ಮಾಡಿಕೊಳ್ಳಬಹುದು. ಈ ಮೂಲಕ 23,600 ರೂ. ವರೆಗೆ ಹೆಚ್ಚುವರಿ ರಿಯಾಯಿತಿ ಪಡೆಯಬಹುದು. ಈ ಮೊಬೈಲ್ ಅಲೋ, ಬೇ, ಪಾರ್ಸಿಲಿಯನ್ ಮತ್ತು ಅಬ್ಸಿಡಿಯನ್ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಒಟ್ಟಾರೆ, ಇದು ನಿಜವಾಗಿಯೂ ಆನ್‌ಲೈನ್‌ನಲ್ಲಿ ಲಭ್ಯವಿರುವ ಅತ್ಯುತ್ತಮ ಸ್ಮಾರ್ಟ್‌ಫೋನ್ ಡೀಲ್‌ಗಳಲ್ಲಿ ಒಂದಾಗಿದೆ.

ಬಂಪರ್ ಡೀಲ್: 20000 ರಿಯಾಯಿತಿ.. ತುಂಬಾ ಕಡಿಮೆಗೆ Google Pixel 8a ಲಭ್ಯ!

ಗೂಗಲ್ ಪಿಕ್ಸೆಲ್ 8a ವೈಶಿಷ್ಟ್ಯಗಳು

ಸಾಮಾನ್ಯ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೆ ಹೋಲಿಸಿದರೆ ಈ ಫೋನಿನ ವೈಶಿಷ್ಟ್ಯಗಳು ಸ್ವಲ್ಪ ವಿಭಿನ್ನವಾಗಿವೆ. ಗೂಗಲ್ ಪಿಕ್ಸೆಲ್ 8a ಮೊಬೈಲ್ 6.1 ಇಂಚಿನ ಫುಲ್ ಎಚ್‌ಡಿ ಪ್ಲಸ್ ಡಿಸ್ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ದರ, 2000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಮತ್ತು HDR ಸಪೋರ್ಟ್‌ ಹೊಂದಿದೆ. ಈ ಡಿಸ್ಪ್ಲೇಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆ ಪಡೆದಿದೆ. ಈ ಫೋನ್ ಗೂಗಲ್ Tensor G3 ಪ್ರೊಸೆಸರ್ ಮತ್ತು ಟೈಟಾನ್ M2 ಭದ್ರತಾ ಪ್ರೊಸೆಸರ್ ಹೊಂದಿದೆ. ಇದು ಆಂಡ್ರಾಯ್ಡ್‌ 14 ಆಧಾರಿತ ಓಎಸ್‌ನಲ್ಲಿ ಕೆಲಸ ಮಾಡುತ್ತದೆ. ಈ ಫೋನ್ 7 ವರ್ಷಗಳ ಆಂಡ್ರಾಯ್ಡ್ ಓಎಸ್ ನವೀಕರಣಗಳನ್ನು ಪಡೆಯುತ್ತದೆ.

ಗೂಗಲ್ ಪಿಕ್ಸೆಲ್ 8a ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ 64 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಮತ್ತು 13 ಮೆಗಾಪಿಕ್ಸೆಲ್ ದ್ವಿತೀಯ ಕ್ಯಾಮೆರಾ ಲಭ್ಯವಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, 13 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ. ಈ ಕ್ಯಾಮೆರಾಗಳು ಹಲವು ಕೃತಕ ಬುದ್ಧಿಮತ್ತೆ (AI) ಫೀಚರ್ ಹೊಂದಿವೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಈ ಫೋನ್ 5G, 4G LTE, ಬ್ಲೂಟೂತ್ 5.3, ವೈ-ಫೈ 6 ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

Best Mobiles in India

English summary
Google Pixel 8a gets big price drop in flipkart sale, save over rs 20000: Check offers, Specs and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+