Home
Deal of the day

ಲಕ್ಕಿ ಆಫರ್..! 14000 ಉಳಿತಾಯ.. ಈ ದೈತ್ಯ ಫೋನಿಗೆ ದೊಡ್ಡ ರಿಯಾಯಿತಿ.. ಹೊಸ ಬೆಲೆ, ವಿಶೇಷತೆಗಳೇನು?

Google Pixel 9 Pro Price Drop: ಗೂಗಲ್ ಪಿಕ್ಸೆಲ್ ಫೋನ್‌ಗಳಿಗೆ ಭಾರತದಲ್ಲಿ ಭಾರೀ ಬೇಡಿಕೆಯಿದೆ. ಈ ಮೊಬೈಲ್‌ಗಳು ಟೆಕ್ ದೈತ್ಯ ಆಪಲ್‌ (Apple) ಕಂಪನಿಗೆ ಪೈಪೋಟಿ ನೀಡುತ್ತಿವೆ. ಹೌದು, ಗೂಗಲ್ ತನ್ನ ವಿಭಿನ್ನ ಶ್ರೇಣಿ ಸ್ಮಾರ್ಟ್‌ಫೋನ್‌ಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ. ಪ್ರಸ್ತುತ, ಗೂಗಲ್ ಪಿಕ್ಸೆಲ್ 9 ಪ್ರೊ (Google Pixel 9 Pro) ಫೋನಿನ ಬೆಲೆಯನ್ನು ಇಳಿಕೆ ಮಾಡಲಾಗಿದೆ. ನೀವು, ಈ ಮೊಬೈಲ್ ಖರೀದಿಸಿದರೆ ಬರೋಬ್ಬರಿ 14,000 ರೂಪಾಯಿ ಉಳಿತಾಯ ಮಾಡಬಹುದು. ಬನ್ನಿ, ಈ ಫೋನಿನ ಮೂಲ ಬೆಲೆ, ಆಫರ್‌ಗಳು ಮತ್ತು ವಿಶೇಷತೆಗಳನ್ನು ತಿಳಿಯೋಣ.

ಹೌದು, ನೀವು ಗೂಗಲ್ ಪಿಕ್ಸೆಲ್ 9 ಪ್ರೊ ಮೊಬೈಲ್ ಖರೀದಿಸಲು ಬಯಸಿದರೆ, ಇಲ್ಲಿದೆ ಭರ್ಜರಿ ಆಫರ್‌. ವಿಜಯ್ ಸೇಲ್ಸ್‌ನಲ್ಲಿ ಈ ಫೋನಿನ ಬೆಲೆಯನ್ನು ಇಳಿಕೆ ಮಾಡಲಾಗಿದೆ. ಈ ಫೋನಿನ ವಿಶೇಷತೆಗಳೆಂದರೆ, ಇದು ಗೂಗಲ್ ಟೆನ್ಸರ್ G4 SoC ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಈ ಫೋನಿನಲ್ಲಿ 50MP + 48MP + 48MP + 42MP ಕ್ಯಾಮೆರಾಗಳಿವೆ. ಈ ಮೊಬೈಲ್ 6.3 ಇಂಚಿನ ಡಿಸ್‌ಪ್ಲೇ ಹೊಂದಿದೆ. ಇದು 27W ವೈರ್ಡ್ ಫಾಸ್ಟ್ ವೈರ್ಡ್ ಚಾರ್ಜಿಂಗ್, 21W ವೈರ್‌ಲೆಸ್ ಚಾರ್ಜಿಂಗ್ ಮತ್ತು 4,700mAh ಬ್ಯಾಟರಿಯನ್ನು ಹೊಂದಿದೆ.

ಲಕ್ಕಿ ಆಫರ್: 14000 ಉಳಿತಾಯ.. ಈ ದೈತ್ಯ ಫೋನಿಗೆ ಭಾರೀ ರಿಯಾಯಿತಿ.. ಬೆಲೆ ನೋಡಿ

ಗೂಗಲ್ ಪಿಕ್ಸೆಲ್ 9 ಪ್ರೊ ಹೊಸ ಬೆಲೆ ಮತ್ತು ಆಫರ್

ಭಾರತದಲ್ಲಿ ಗೂಗಲ್ ಪಿಕ್ಸೆಲ್ 9 ಪ್ರೊ ಮೊಬೈಲ್ ಒಂದೇ ಸ್ಟೋರೇಜ್ ರೂಪಾಂತರದಲ್ಲಿ ಬಿಡುಗಡೆಯಾಗಿದೆ. ಈ ಫೋನಿನ 16GB RAM + 256GB ಸ್ಟೋರೇಜ್ ಬೆಲೆ 1,09,999 ರೂ. ಆಗಿದೆ. ಪ್ರಸ್ತುತ, ಇದು 99,999 ರೂ.ಗೆ ಲಭ್ಯವಿದೆ. ನೀವು ಇಎಂಐ ವಹಿವಾಟಿಗೆ ಎಚ್‌ಡಿಎಫ್‌ಸಿ ಬ್ಯಾಂಕ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿದರೆ, ಹೆಚ್ಚುವರಿಯಾಗಿ 4,000 ರಿಯಾಯಿತಿ ಪಡೆಯಬಹುದು. ಈ ಮೂಲಕ ಇದರ ಬೆಲೆ 95,999 ರೂ.ಗೆ ಇಳಿಕೆಯಾಗಲಿದೆ.

ಗೂಗಲ್ ಪಿಕ್ಸೆಲ್ 9 ಪ್ರೊ ವೈಶಿಷ್ಟ್ಯಗಳು

ಗೂಗಲ್ ಪಿಕ್ಸೆಲ್ 9 ಪ್ರೊ ಫೋನಿನ ಡಿಸ್‌ಪ್ಲೇ

ಗೂಗಲ್ ಪಿಕ್ಸೆಲ್ 9 ಪ್ರೊ ಸ್ಮಾರ್ಟ್‌ಫೋನ್‌ 6.3 ಇಂಚಿನ LTPO OLED ಸೂಪರ್ ಆಕ್ಟುವಾ ಡಿಸ್‌ಪ್ಲೇ ಹೊಂದಿದೆ. ಇದು 120Hz ರಿಫ್ರೆಶ್ ದರ, 3000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ.

ಗೂಗಲ್ ಪಿಕ್ಸೆಲ್ 9 ಪ್ರೊ ಫೋನಿನ ಪ್ರೊಸೆಸರ್‌

ಗೂಗಲ್ ಪಿಕ್ಸೆಲ್ 9 ಪ್ರೊ ಮೊಬೈಲ್ ಟೈಟಾನ್ M2 ಸೆಕ್ಯುರಿಟಿ ಕೊಪ್ರೊಸೆಸರ್‌ನೊಂದಿಗೆ ಗೂಗಲ್ ಟೆನ್ಸರ್ G4 SoC ಅನ್ನು ಹೊಂದಿದೆ. ಇದು ಆಂಡ್ರಾಯ್ಡ್ 14 ಸಾಫ್ಟ್‌ವೇರ್ ಜೊತೆಗೆ ಕೆಲಸ ನಿರ್ವಹಿಸುತ್ತದೆ. ಈ ಮೊಬೈಲ್ 7 ವರ್ಷಗಳ ಓಎಸ್, ಭದ್ರತೆ ಮತ್ತು ಪಿಕ್ಸೆಲ್ ಡ್ರಾಪ್ ನವೀಕರಣಗಳನ್ನು ಪಡೆಯುತ್ತದೆ ಎಂದು ಕಂಪನಿ ಹೇಳಿದೆ.

ಲಕ್ಕಿ ಆಫರ್: 14000 ಉಳಿತಾಯ.. ಈ ದೈತ್ಯ ಫೋನಿಗೆ ಭಾರೀ ರಿಯಾಯಿತಿ.. ಬೆಲೆ ನೋಡಿ

ಗೂಗಲ್ ಪಿಕ್ಸೆಲ್ 9 ಪ್ರೊ ಫೋನಿನ ಕ್ಯಾಮೆರಾ

ಗೂಗಲ್ ಪಿಕ್ಸೆಲ್ 9 ಪ್ರೊ ಫೋನ್ ಫೋಟೋಗ್ರಫಿ ಪ್ರಿಯರಿಗೆ ಉತ್ತಮ ಆಯ್ಕೆಯಾಗಿದೆ. ಈ ಫೋನಿನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಲಭ್ಯವಿದೆ. ಎರಡನೇ ಕ್ಯಾಮೆರಾ 48 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಲೆನ್ಸ್ ಹೊಂದಿದೆ. ಹಾಗೆಯೇ ಮೂರನೇ ಕ್ಯಾಮೆರಾ 5x ಆಪ್ಟಿಕಲ್ ಜೂಮ್‌ನೊಂದಿಗೆ 48 ಮೆಗಾಪಿಕ್ಸೆಲ್ ಟೆಲಿಫೋಟೋ ಸಂವೇದಕ ಒಳಗೊಂಡಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, ಈ ಗೂಗಲ್ ಪಿಕ್ಸೆಲ್ ಮೊಬೈಲ್ 42 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಹೊಂದಿದೆ.

ಗೂಗಲ್ ಪಿಕ್ಸೆಲ್ 9 ಪ್ರೊ ಫೋನಿನ ಬ್ಯಾಟರಿ

ಗೂಗಲ್ ಪಿಕ್ಸೆಲ್ 9 ಪ್ರೊ ಫೋನಿನ 4,700mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಭಾರತದಲ್ಲಿ ಬಿಡುಗಡೆಯಾಗಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 27W ವೈರ್ಡ್ ಫಾಸ್ಟ್ ವೈರ್ಡ್ ಚಾರ್ಜಿಂಗ್, 21W ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

Best Mobiles in India

English summary
Google Pixel 9 Pro Now Available With Up to Rs 14,000 Discount in India: Where to Buy?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+