Google ಡ್ರೈವ್‌ನಲ್ಲಿ ನಿಮ್ಮ ಡೇಟಾವನ್ನು ಬ್ಯಾಕಪ್ ಮಾಡುವುದು ಹೇಗೆ ಗೊತ್ತಾ?

|

ಸರ್ಚ್‌ ಇಂಜಿನ್‌ ದೈತ್ಯ ಗೂಗಲ್‌ ತನ್ನ ಬಳಕೆದಾರರಿಗೆ ಹೆಚ್ಚುವರಿ ಸಂಗ್ರಹ ಸಾಮರ್ಥ್ಯವನ್ನು ಹೊಂದಿವುದಕ್ಕಾಗಿ ಗೂಗಲ್‌ ಒನ್‌, ಗೂಗಲ್‌ ಡ್ರೈವ್‌, ನಂತಹ ಸೇವೆಗಳನ್ನ ಪರಿಚಯಿಸಿದೆ. ಇದರಲ್ಲಿ ಗೂಗಲ್‌ ಒನ್‌ ಮೂಲತಃ ಚಂದಾದಾರಿಕೆಯನ್ನು ಹೊಂದಿರುವ ಸೇವೆಯಾಗಿದೆ. ಇದು ಗೂಗಲ್ ಡ್ರೈವ್, ಜಿಮೇಲ್ ಮತ್ತು ಗೂಗಲ್ ಫೋಟೋಗಳಲ್ಲಿ ನಿಮಗೆ ಹೆಚ್ಚಿನ ಸಂಗ್ರಹ ಸಾಮರ್ಥ್ಯವನ್ನು ಒದಗಿಸುತ್ತದೆ. ಇನ್ನು ಹೆಚ್ಚುವರಿ ಸಂಗ್ರಹಣೆಯ ಹೊರತಾಗಿ, ಇದರಿಂದ ಸಾಕಷ್ಟು ವಿಶೇಷ ಪ್ರಯೋಜನಗಳನ್ನು ಪಡಯಬಹುದಾಗಿದೆ. ಅದರಲ್ಲೂ ಶೂನ್ಯ ವೆಚ್ಚದಲ್ಲಿ 5 ಕುಟುಂಬ ಸದಸ್ಯರೊಂದಿಗೆ ನಿಮ್ಮ Google ಒನ್ ಖಾತೆಯನ್ನು ಹಂಚಿಕೊಳ್ಳಲು ನಿಮಗೆ ಅವಕಾಶವನ್ನು ಸಹ ಕಲ್ಪಿಸಿದೆ.

ಗೂಗಲ್‌

ಹೌದು, ಗೂಗಲ್‌ ಒನ್‌ನಿಂದ ಬಳಕೆದಾರರಿಗೆ ಸಾಕಷ್ಟು ಉಪಯೋಗವಿದೆ. ಇದರಿಂದ ನೀವು ಗೂಗಲ್‌ ಒನ್‌ನ ಸದಸ್ಯರಾಗಲು, ನೀವು ಮೂಲ ಚಂದಾದಾರಿಕೆಯನ್ನು ಖರೀದಿಸಬೇಕಾಗುತ್ತದೆ. ಇದು ನಿಮಗೆ 100GB ಶೇಖರಣಾ ಸಾಮರ್ಥ್ಯದ ಸ್ಥಳವನ್ನು ನೀಡಲಿದೆ. ಇದಕ್ಕಾಗಿ ನೀವು ತಿಂಗಳಿಗೆ 130 ರೂ. ಅಥವಾ ವಾರ್ಷಿಕ 1,300 ರೂ. ಅನ್ನು ಪಾವತಿಸುವ ಮೂಲಕ ಪಡಯಬಹುದಾಗಿದೆ. ಹಾಗಾದ್ರೆ ನೀವು Google ಖಾತೆಯನ್ನು ಹೊಂದಿದ್ದು, ಈಗಾಗಲೇ 15GB ಉಚಿತ ಸಂಗ್ರಹಣೆಯನ್ನು ಹೊಂದಿರುತ್ತೀರಿ. ಆದರೆ, ನೀವು ಆಂಡ್ರಾಯ್ಡ್ ಫೋನ್ ಬಳಕೆದಾರರಾಗಿದ್ದರೆ, ನಿಮಗೆ ಸಂ್ರಹ ಸಾಮರ್ಥ್ಯ ಸಾಲುವುದಿಲ್ಲ ಇದಕ್ಕಾಗಿ ನಿಮ್ಮ ಡೇಟಾವನ್ನು ಬ್ಯಾಕಪ್ ಮಾಡಲು ನೀವು ಈಗಾಗಲೇ Google ಡ್ರೈವ್ ಅನ್ನು ಬಳಸಬಹುದಾಗಿದೆ. ಆದರೆ ನೀವು ನಿಮ್ಮ ಗೂಗಲ್‌ ಖಾತೆಯಿಂದ ಗೂಗಲ್‌ ಡ್ರೈವ್‌ಗೆ ನಿಮ್ಮ ಡೇಟಾ ಬ್ಯಾಕಪ್‌ ಪಡೆಯುವುದು ಹೇಗೆ ಅನ್ನೊದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Google ಡ್ರೈವ್‌ನೊಂದಿಗೆ ಡೇಟಾವನ್ನು ಬ್ಯಾಕಪ್ ಮಾಡುವುದು ಹೇಗೆ?

Google ಡ್ರೈವ್‌ನೊಂದಿಗೆ ಡೇಟಾವನ್ನು ಬ್ಯಾಕಪ್ ಮಾಡುವುದು ಹೇಗೆ?

ಹಂತ 1: ಸಿಸ್ಟಮ್‌ ಮತ್ತು ಬ್ಯಾಕಪ್‌ಗೆ ಹೋಗಿ. ಸೆಟ್ಟಿಂಗ್ಸ್‌> ಗೂಗಲ್> ಬ್ಯಾಕಪ್‌ನಲ್ಲಿಯೂ ಈ ಆಯ್ಕೆ ಲಭ್ಯವಿರಲಿದೆ. ಡ್ರೈವ್ ಅಪ್ಲಿಕೇಶನ್‌ನಲ್ಲಿಯೂ ನೀವು ಬ್ಯಾಕಪ್ ಆಯ್ಕೆಯನ್ನು ಕಾಣಬಹುದು.

ಹಂತ 2: ಬ್ಯಾಕಪ್ ವಿಭಾಗದಲ್ಲಿ, "Google ಡ್ರೈವ್‌ಗೆ ಬ್ಯಾಕಪ್ ಮಾಡಿ" ಆನ್ ಮಾಡಿ. ಇಲ್ಲಿ ನೀವು ನಿಮ್ಮ ಖಾತೆಯ ಹೆಸರನ್ನು ಕಾಣಬಹುದು ಮತ್ತು ಲಾಸ್ಟ್‌ ಬ್ಯಾಕಪ್‌ನಿಂದ ಟೈಂ ಕಾಣಲಿದೆ. ನಿಮ್ಮ Android ಫೋನ್ ಡೇಟಾವನ್ನು ದೀರ್ಘಕಾಲದವರೆಗೆ ಬ್ಯಾಕಪ್ ಮಾಡಿಲ್ಲ ಎಂದು ನೀವು ಭಾವಿಸಿದರೆ, ಬ್ಯಾಕಪ್ ಅನ್ನು ಮಾಡಲು ""Back up now" ಬಟನ್ ಟ್ಯಾಪ್ ಮಾಡಬೇಕು.

ಹಂತ3: ಇನ್ನು ನೀವು Google ಫೋಟೋಗಳ ಅಪ್ಲಿಕೇಶನ್ ಬಳಸಿ ಫೋಟೋಗಳು ಅಥವಾ ವೀಡಿಯೊಗಳನ್ನು ಬ್ಯಾಕಪ್ ಮಾಡಿದರೆ, ಅವು ಮೂಲ ರೆಸಲ್ಯೂಶನ್‌ನಲ್ಲಿ ಇರುವುದಿಲ್ಲ. ಅಲ್ಲದೆ ನಿಮ್ಮ ಫೋಟೋಗಳನ್ನು ಅವುಗಳ ಮೂಲ ರೆಸಲ್ಯೂಶನ್‌ನಲ್ಲಿ ಸಂಗ್ರಹಿಸಲು ನೀವು ಬಯಸಿದರೆ, ನೀವು Google One ಅಪ್ಲಿಕೇಶನ್ ಅನ್ನು ಬಳಸಬೇಕಾಗುತ್ತದೆ. ನೀವು ಈ ಹಿಂದೆ ನಿಮ್ಮ ಡೇಟಾವನ್ನು ಬ್ಯಾಕಪ್ ಮಾಡಿದ್ದರೆ, ಅದನ್ನು ನೀವು ಅಪ್ಲಿಕೇಶನ್‌ನಿಂದ ರಿ ಇನ್‌ಸ್ಟಾಲ್‌ ಮಾಡಲು ಸಾಧ್ಯವಾಗಲಿದೆ, ಇದಕ್ಕಾಗಿ ನೀವು ಸ್ಟೋರೇಜ್‌ ವಿಭಾಗದಲ್ಲಿರುವ "get backup" ಅನ್ನು ನೀವು ಟ್ಯಾಪ್ ಮಾಡಬೇಕಾಗುತ್ತದೆ.

Google One ಬಳಸಿ ನಿಮ್ಮ Android ಫೋನ್ ಅನ್ನು ಬ್ಯಾಕಪ್ ಮಾಡುವುದು ಹೇಗೆ?

Google One ಬಳಸಿ ನಿಮ್ಮ Android ಫೋನ್ ಅನ್ನು ಬ್ಯಾಕಪ್ ಮಾಡುವುದು ಹೇಗೆ?

ಹಂತ 1: ನೀವು Google One ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್‌ ಮಾಡಿ ಅದನ್ನು ತೆರೆಯಬೇಕು.

ಹಂತ 2: ನಿಮ್ಮ ಸಂಬಂಧಿತ Google ಖಾತೆಗೆ ಲಾಗ್ ಇನ್ ಮಾಡಿ ಮತ್ತು ಸೂಚನೆಗಳನ್ನು ಅನುಸರಿಸಿ.

ಹಂತ 3: ನೀವು ಈಗ "back up now" ಬಟನ್ ಟ್ಯಾಪ್ ಮಾಡಬೇಕಾಗುತ್ತದೆ. ನೀವು ಎಷ್ಟು ಶೇಖರಣಾ ಸ್ಥಳವನ್ನು ಬಳಸಿದ್ದೀರಿ ಎಂಬುದನ್ನು ಅಪ್ಲಿಕೇಶನ್ ತೋರಿಸುತ್ತದೆ.

Most Read Articles
Best Mobiles in India

Read more about:
English summary
To become a member of Google One, you will have to buy the basic subscription, which offers you a whopping 100GB storage space for Rs 130 per month or Rs 1,300 on a yearly basis.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X