Home
Deal of the day

iPhone 16 ಖರೀದಿಸಲು ಇದಕ್ಕಿಂತ ಬೆಸ್ಟ್‌ ಟೈಮ್‌ ಬೇಕೆ?..ಭಾರೀ ಉಳಿತಾಯ ಪಕ್ಕಾ!

ಪ್ರಮುಖ ಆನ್‌ಲೈನ್‌ ಶಾಪಿಂಗ್‌ ಪ್ಲಾಟ್‌ಫಾರ್ಮ್‌ಗಳ ಲಿಸ್ಟ್‌ನಲ್ಲಿ ವಿಜಯ್ ಸೇಲ್ಸ್ (Vijay Sales) ತಾಣ ಸಹ ಒಂದಾಗಿದೆ. ಈ ಪ್ಲಾಟ್‌ಫಾರ್ಮ್‌ ಇದೀಗ ಬ್ಲ್ಯಾಕ್‌ ಫ್ರೈಡೇ ಸೇಲ್‌ (Black Friday sale) ಆಯೋಜಿಸಿದ್ದು, ಈ ಮಾರಾಟದಲ್ಲಿ ಆಯ್ದ ಕೆಲವು ಐಫೋನ್‌ಗಳಿಗೆ ಭರ್ಜರಿ ಡಿಸ್ಕೌಂಟ್‌ನಲ್ಲಿ ತಿಳಿಸಿದೆ. ಈ ವಿಶೇಷ ಸೇಲ್‌ನಲ್ಲಿ ಆಪಲ್‌ ಐಫೋನ್‌ 16 (iPhone 16) ಮೊಬೈಲ್ ಫ್ಲಾಟ್‌ 5000 ರೂ. ಗಳ ಡಿಸ್ಕೌಂಟ್‌ ಪಡೆದಿದ್ದು, ಆಪಲ್‌ ಪ್ರಿಯರು ಅಚ್ಚರಿಯಿಂದ ಹುಬ್ಬೇರಿಸುವಂತೆ ಆಗಿದೆ.

ಹೌದು, ವಿಜಯ್ ಸೇಲ್ಸ್‌ ವೆಬ್‌ಸೈಟ್‌ನಲ್ಲಿ ಬ್ಲ್ಯಾಕ್‌ ಫ್ರೈಡೇ ಸೇಲ್‌ (Black Friday sale) ಇಂದು (ಡಿ. 2 ರಂದು) ಮುಕ್ತಾಯ ಆಗಲಿದೆ. ಈ ಸೇಲ್‌ನಲ್ಲಿ ಆಪಲ್‌ ಐಫೋನ್‌ 16 (iPhone 16) ಮೊಬೈಲ್ ಗಮನಾರ್ಹ ರಿಯಾಯಿತಿ ಪಡೆದುಕೊಂಡಿದ್ದು, 128GB ವೇರಿಯಂಟ್‌ 74,990ರೂ. ಬೆಲೆಗೆ ಖರೀದಿಗೆ ಲಭ್ಯ. ಹಾಗೆಯೇ ಕೆಲವು ಆಯ್ದ ಬ್ಯಾಂಕ್‌ಗಳ ಹಾಗಾದರೇ ಐಫೋನ್‌ 16 (Apple iPhone 16) ಮೊಬೈಲ್‌ನ ಫೀಚರ್ಸ್‌ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

iPhone 16 ಖರೀದಿಸಲು ಇದಕ್ಕಿಂತ ಬೆಸ್ಟ್‌ ಟೈಮ್‌ ಬೇಕೆ?..ಭಾರೀ ಉಳಿತಾಯ ಪಕ್ಕಾ!

ಡಿಸ್‌ಪ್ಲೇ ಡಿಸೈನ್‌ ಹಾಗೂ ರಚನೆ

ಐಫೋನ್‌ 16 ಮೊಬೈಲ್‌ 6.7 ಇಂಚಿನ ರೇಟಿನಾ XDR ಡಿಸ್‌ಪ್ಲೇ ರಚನೆ ಅನ್ನು ಪಡೆದುಕೊಂಡಿದೆ. ಅಂದಹಾಗೆ ಈ ಸರಣಿಯ ಮೊಬೈಲ್‌ಗಳನ್ನು ಏರೋಸ್ಪೇಸ್ ದರ್ಜೆಯ ಅಲ್ಯೂಮಿನಿಯಂನಿಂದ ತಯಾರು ಮಾಡಲಾಗಿದೆ. ಆಪಲ್ ಕಂಫನಿಯ ಈ ಹೊಸ ಐಫೋನ್‌ಗಳ ರಚನೆಯು ಇತರ ಯಾವುದೇ ಗ್ಲಾಸ್-ಬ್ಯಾಕ್ ಫೋನ್‌ಗಿಂತ 2x ಹೆಚ್ಚು ಕಾಲ ಬಾಳಿಕೆ ಬರುವಂತಹ ಸೌಲಭ್ಯ ಪಡೆದಿವೆ.

ಪ್ರೊಸೆಸರ್‌ ಚಿಪ್‌ಸೆಟ್‌ ಯಾವುದು

ಐಫೋನ್‌ 16 ಮೊಬೈಲ್‌ A18 ಬಯೋನಿಕ್ ಚಿಪ್ ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕೆಲಸ ನಿರ್ವಹಿಸಲಿದೆ. ಈ ಚಿಪ್‌ಸೆಟ್‌ ಎರಡು ಪಟ್ಟು ವೇಗದ ನ್ಯೂರಲ್ ಎಂಜಿನ್ ಹಾಗೂ 17 ಪ್ರತಿಶತ ಹೆಚ್ಚು ಬ್ಯಾಂಡ್‌ವಿಡ್ತ್‌ ಜೊತೆಗೆ ನವೀಕರಿಸಿದ ಮೆಮೊರಿ ಉಪ ವ್ಯವಸ್ಥೆ ಸೌಲಭ್ಯ ಅನ್ನು ಒಳಗೊಂಡಿದೆ. ಅಲ್ಲದೇ ಇದು ನೂತನ ಐಫೋನ್‌ 15 ನಲ್ಲಿನ CPU ಗಿಂತ 30 ಪ್ರತಿಶತದಷ್ಟು ಸ್ಪೀಡ್‌ ಪಡೆದಿದುಕೊಂಡಿದೆ.

ಡ್ಯುಯಲ್‌ ಕ್ಯಾಮೆರಾ ಸೆನ್ಸಾರ್‌

ಐಫೋನ್‌ 16 ಮೊಬೈಲ್‌ ಡ್ಯುಯಲ್‌ ಕ್ಯಾಮೆರಾ ರಚನೆ ಅನ್ನು ಹೊಂದಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 48 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿ ಇದೆ. ಹಾಗೆಯೇ ಇದರ ಜೊತೆಗೆ 12 ಮೆಗಾ ಪಿಕ್ಸಲ್‌ನ ಟೆಲಿಫೋಟೋ ಲೆನ್ಸ್‌ ಸೌಲಭ್ಯ ಕೂಡಾ ಪಡೆದಿದೆ. ಅತ್ಯುತ್ತಮ ಗುಣಮಟ್ಟದ ಫೋಟೋ ಸೆರೆಹಿಡಿಯಲು ಪೂರಕವಾಗಿ ಕಾರ್ಯ ನಿರ್ವಹಿಸಲಿದೆ. ನೂತನ ಅಲ್ಟ್ರಾ - ವೈಡ್ ಕ್ಯಾಮೆರಾವನ್ನು ಹಿಂದಿನ ಮಾದರಿಗಳಿಗಿಂತ 2.6 ಪಟ್ಟು ಹೆಚ್ಚು ಬೆಳಕನ್ನು ಸೆರೆಹಿಡಿಯಲು ವಿನ್ಯಾಸ ಮಾಡಲಾಗಿದೆ. ಅಲ್ಲದೇ ಮ್ಯಾಕ್ರೋ ಫೋಟೋಗ್ರಫಿಯನ್ನು ಇದು ಸಪೋರ್ಟ್ ಮಾಡುತ್ತದೆ.

ಬ್ಯಾಟರಿ ಬ್ಯಾಕ್‌ಅಪ್‌ ಸಾಮರ್ಥ್ಯ ಎಷ್ಟು

ಐಫೋನ್‌ 16 ಮೊಬೈಲ್‌ ತನ್ನ ಈ ಹಿಂದಿನ ಸರಣಿಯ ಫೋನ್‌ಗಿಂತ ಅತ್ಯುತ್ತಮವಾದ ಬ್ಯಾಟರಿ ಬ್ಯಾಕ್‌ಅಪ್‌ ಸಾಮರ್ಥ್ಯ ಅನ್ನು ಪಡೆದಿದ್ದು, ಇದು ಆಪಲ್‌ ಐಫೋನ್‌ ಖರೀದಿದಾರರನ್ನು ಮತ್ತಷ್ಟು ಆಕರ್ಷಿಸಿದೆ. ಹಾಗೆಯೇ ಇದು ಡೈನಾಮಿಕ್ ಐಲ್ಯಾಂಡ್‌ (Dynamic Island) ಆಯ್ಕೆಯನ್ನು ಇದು ಒಳಗೊಂಡಿದ್ದು, ಇದು 5G ಸಪೋರ್ಟ್ ಕೂಡಾ ಪಡೆದಿದೆ.

ಹಾಗೆಯೇ ಈ ಆಪಲ್‌ ಐಫೋನ್‌ ವಾಯರ್‌ಲೆಸ್‌ ಕನೆಕ್ಟಿವಿಟಿ ಸೌಲಭ್ಯ ಸಹ ಪಡೆದಿದೆ. ಇದರ ಜೊತೆಗೆ ರೋಡ್‌ ಸೈಡ್‌ ಅಸಿಸ್ಟಂಟ್‌ ವೈಯಾ ಸೆಟಲೈಟ್‌ ಸೌಲಭ್ಯ ಸಹ ಪಡೆದುಕೊಂಡಿದೆ. ಐಫೋನ್‌ 16 ಮೊಬೈಲ್‌ನ ಆರಂಭಿಕ ವೇರಿಯಂಟ್‌ 128GB ಹಾಗೂ 256GB ವೇರಿಯಂಟ್‌ ಆಯ್ಕೆಯಲ್ಲಿ ಲಭ್ಯ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+