ಇತ್ತೀಚಿಗಷ್ಟೆ ಲಾಂಚ್ ಆಗಿರುವ ಈ ಹೊಸ 5G ಫೋನ್ ಬೆಲೆಯಲ್ಲಿ ಸಖತ್ ಡಿಸ್ಕೌಂಟ್!
ಪ್ರಸ್ತುತ ಭಾರೀ ಡಿಸ್ಕೌಂಟ್‌ನಲ್ಲಿ ನೀವೇನಾದರೂ ಹೊಸ ಸ್ಮಾರ್ಟ್‌ಫೋನ್ ಖರೀದಿ ಮಾಡುವ ಇಚ್ಛೆ ಹೊಂದಿದ್ದರೇ, ಅದಕ್ಕೆ ಇದುವೇ ಬೆಸ್ಟ್ ಟೈಮ್!. ಹೌದು ಏಕೆಂದರೆ ಇ ಕಾಮರ್ಸ್ ದೈತ್ಯ ಅಮೆಜಾನ್ ತಾಣವು ಸದ್ಯ ಗ್ರೇಟ್ ಫ್ರೀಡಂ ಫೆಸ್ಟಿವಲ್ ಸೇಲ್ 2024 ಅನ್ನು ಆಯೋಜಿಸಿದೆ. ಈ ಮಾರಾಟ ಮೇಳದಲ್ಲಿ ಕೆಲವು ಆಯ್ದ ನೂತನ ಸ್ಮಾರ್ಟ್‌ಫೊನ್‌ಗಳು ಡಿಸ್ಕೌಂಟ್ ದರದಲ್ಲಿ ಕಾಣಿಸಿಕೊಂಡಿವೆ. ಅದರಲ್ಲಿಯೂ ಇತ್ತೀಚಿಗಷ್ಟೆ ಲಾಂಚ್ ಆಗಿರುವ HMD ಕ್ರೆಸ್ಟ್ ಫೋನ್ ಭರ್ಜರಿ ರಿಯಾಯಿತಿ ಪಡೆದುಕೊಂಡಿದೆ.
ಹೌದು, ಅಮೆಜಾನ್ ಪ್ಲಾಟ್‌ಫಾರ್ಮ್ನಲ್ಲಿ HMD ಕ್ರೆಸ್ಟ್ 5G ಮೊಬೈಲ್ ಶೇ. 24% ರಷ್ಟು ನೇರ ಡಿಸ್ಕೌಂಟ್ ಪಡೆದಿದೆ. ಈ ಫೋನಿನ 6 GB RAM + 128 GB ಸ್ಟೋರೇಜ್ ವೇರಿಯಂಟ್ ಅನ್ನು ಖರೀದಿದಾರರು 14,499ರೂ. ಗಳ ಆಫರ್ ಬೆಲೆಯಲ್ಲಿ ಖರೀದಿ ಮಾಡಬಹುದು. ಇದರ ಜೊತೆಗೆ ಹೆಚ್ಚುವರಿಯಾಗಿ ಆಯ್ದ ಬ್ಯಾಂಕ್‌ಗಳಿಂದ ಇತರೆ ರಿಯಾಯಿತಿ ಕೂಡಾ ದೊರೆಯುತ್ತವೆ.

ಹಾಗೆಯೇ ಈ ಮೊಬೈಲ್ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಜೊತೆಗೆ 33W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಕೂಡಾ ಪಡೆದುಕೊಂಡಿದೆ. ಇನ್ನು ಇದು ಮಿಡ್‌ನೈಟ್ ಬ್ಲೂ, ರಾಯಲ್ ಪಿಂಕ್ ಮತ್ತು ಲಶ್ ಲಿಲಾಕ್ ಕಲರ್ ಆಯ್ಕೆಯಲ್ಲಿ ಖರೀದಿಗೆ ಲಭ್ಯ. ಹಾಗಾದರೇ HMD ಕ್ರೆಸ್ಟ್ 5G ಮೊಬೈಲ್‌ನ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಪಡೆದಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ ಓದಿರಿ.
HMD ಕ್ರೆಸ್ಟ್ ಫೀಚರ್ಸ್ ಹೀಗಿವೆ
HMD ಕ್ರೆಸ್ಟ್ 6.67 ಇಂಚಿನ ಪೂರ್ಣ HD+ OLED ಪ್ಯಾನೆಲ್ ಅನ್ನು ಅನ್ನು ಪಡೆದಿದ್ದು, ಇದು Unisoc T760 SoC ಪ್ರೊಸೆಸರ್ ಶಕ್ತಿಯಿಂದ ಕೆಲಸ ಮಾಡಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 14 ಓಎಸ್ ಸಪೋರ್ಟ್ ನೀಡಲಾಗಿದೆ. ಅಲ್ಲದೇ ಇದು 6 GB RAM ಮತ್ತು 128GB ಸ್ಟೋರೇಜ್ ಆಯ್ಕೆಯನ್ನು ಪಡೆದುಕೊಂಡಿದೆ.
ಹಾಗೆಯೇ HMD ಕ್ರೆಸ್ಟ್ 50 ಮೆಗಾ ಪಿಕ್ಸಲ್ ಪ್ರಾಥಮಿಕ ಕ್ಯಾಮೆರಾ ಮತ್ತು AI ಲೆನ್ಸ್ ಸೇರಿದಂತೆ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ. ಇದು ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ ಮುಂಭಾಗದಲ್ಲಿ 50 ಮೆಗಾ ಪಿಕ್ಸಲ್ ಶೂಟರ್ ಅನ್ನು ಹೊಂದಿದೆ. ಜೊತೆಗೆ 5,00 mAh ಬ್ಯಾಟರಿ ಬ್ಯಾಕ್‌ಅಪ್ ನೀಡಲಾಗಿದ್ದು, 33W ವೇಗದ ಚಾರ್ಜಿಂಗ್ ಸಪೋರ್ಟ್ ಇದೆ.
ಇನ್ನು ಇದೇ ಸರಣಿಯಲ್ಲಿ ಬಿಡುಗಡೆ ಆಗಿರುವ HMD ಕ್ರೆಸ್ಟ್ ಮ್ಯಾಕ್ಸ್ ಈ ಫೋನ್ ಸಹ 6.67 ಇಂಚಿನ ಪೂರ್ಣ HD+ OLED ಪ್ಯಾನೆಲ್ ಅನ್ನು ಅನ್ನು ಹೊಂದಿದ್ದು, ಇದು Unisoc T760 SoC ಪ್ರೊಸೆಸರ್ ಶಕ್ತಿಯಿಂದ ಕೆಲಸ ಮಾಡಲಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 14 ಓಎಸ್ ಸಪೋರ್ಟ್ ನೀಡಲಾಗಿದೆ. ಅಲ್ಲದೇ ಇದು 8 GB RAM ಹಾಗೂ 256 GB ಸ್ಟೋರೇಜ್ ಆಯ್ಕೆಯನ್ನು ಪಡೆದುಕೊಂಡಿದೆ.
ಇನ್ನು HMD ಕ್ರೆಸ್ಟ್ ಮ್ಯಾಕ್ಸ್ ಮೊಬೈಲ್ 64 ಮೆಗಾ ಪಿಕ್ಸಲ್ ಪ್ರಾಥಮಿಕ ಕ್ಯಾಮೆರಾ ಮತ್ತು AI ಲೆನ್ಸ್ ಸೇರಿದಂತೆ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಅನ್ನು ಒಳಗೊಂಡಿದೆ. ಇದು ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ ಮುಂಭಾಗದಲ್ಲಿ 50 ಮೆಗಾ ಪಿಕ್ಸಲ್ ಶೂಟರ್ ಅನ್ನು ಹೊಂದಿದೆ. ಜೊತೆಗೆ 5,00 mAh ಬ್ಯಾಟರಿ ಬ್ಯಾಕ್‌ಅಪ್ ನೀಡಲಾಗಿದ್ದು, 33 W ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಸಹ ಪಡೆದಿದೆ.


Click it and Unblock the Notifications