HONOR DAYS: ಹಾನರ್ ಸಂಸ್ಥೆಯ ಈ ರೌಂಡ್ ಕ್ಯಾಮೆರಾ ಫೋನಿಗೆ ಭಾರೀ ಡಿಸ್ಕೌಂಟ್!
ಲೀಡಿಂಗ್ ಮೊಬೈಲ್ ಸಂಸ್ಥೆ ಎನಿಸಿರುವ ಹಾನರ್ (HONOR) ಬ್ರ್ಯಾಂಡ್ ಕೆಲವು ಫೋನ್‌ಗಳು ಮಾರುಕಟ್ಟೆಗೆ ಪರಿಚಯಿಸಿದ್ದು, ಅವು ಸಖತ್ ಸೌಂಡ್ ಮಾಡುತ್ತಿವೆ. ಆ ಪೈಕಿ ಕಂಪನಿಯ ಇತ್ತೀಚಿನ ಮೊಬೈಲ್‌ಗಳು ಕ್ಯಾಮೆರಾ ಆಯ್ಕೆ ಹಾಗೂ ಅಪ್‌ಡೇಟ್ ಪ್ರೊಸೆಸರ್ ಮೂಲಕ ಹೆಚ್ಚಿನ ಗಮನ ಸೆಳದಿವೆ. ಇದೀಗ ಹಾನರ್ X9b 5G ಫೋನ್ ಇ ಕಾಮರ್ಸ್ ವೆಬ್‌ಸೈಟ್ ದೈತ್ಯ ಅಮೆಜಾನ್‌ನಲ್ಲಿ ಆಕರ್ಷಕ ಬೆಲೆಯಲ್ಲಿ ಖರೀದಿಗೆ ಲಭ್ಯ ಇದ್ದು, ಗ್ರಾಹಕರು ಹುಬ್ಬೇರಿಸುವಂತೆ ಮಾಡಿದೆ.
ಹೌದು, ಅಮೆಜಾನ್ ವೆಬ್‌ಸೈಟ್‌ನಲ್ಲಿ ಹಾನರ್ X9b 5G ಮೊಬೈಲ್ ಶೇ. 19% ರಷ್ಟು ಡಿಸ್ಕೌಂಟ್ ಬೆಲೆಯಲ್ಲಿ ಕಾಣಿಸಿಕೊಂಡಿದ್ದು, ಈ ಫೋನಿನ 8GB + 256GB ವೇರಿಯಂಟ್ ಅನ್ನು ಖರೀದಿದಾರರು 24,998ರೂ. ಗಳ ಆಫರ್ ದರದಲ್ಲಿ ಖರೀದಿಗೆ ಲಭ್ಯ ಇದೆ. ಇನ್ನು ಖರೀದಿದಾರರು ಲಭ್ಯ ಇರುವ ಬ್ಯಾಂಕ್ ಆಫರ್ ಹಾಗೂ ಎಕ್ಸ್‌ಚೇಂಜ್ ಕೊಡುಗೆ ಸಹ ಪಡೆದುಕೊಂಡರೆ, ಇನ್ನಷ್ಟು ರಿಯಾಯಿತಿ ಪಡೆಯುವ ಚಾನ್ಸ್ ಇದೆ.

ಅಂದಹಾಗೆ ಹಾನರ್ X9b 5G ಮೊಬೈಲ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 6 Gen 1 SoC ಪ್ರೊಸೆಸರ್ ಪವರ್ ಪಡೆದುಕೊಂಡಿದೆ. ಆಸಕ್ತ ಖರೀದಿದಾರರು ಹಾನರ್ X9b 5G ಅನ್ನು ಅಮೆಜಾನ್‌ನಲ್ಲಿ ಭರ್ಜರಿ ಡಿಸ್ಕೌಂಟ್ ಬೆಲೆಗೆ ಖರೀದಿಸಬಹುದು. ಹಾಗಾದರೇ ಹಾನರ್ X9b 5G ಮೊಬೈಲ್‌ನ ಇತರೆ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.
ಹಾನರ್ X9b 5G - ಫೀಚರ್ಸ್ ಹೀಗಿವೆ
ಹಾನರ್ X9b 5G ಮೊಬೈಲ್ 6.78 ಇಂಚಿನ ಫುಲ್ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಅನ್ನು ಪಡೆದಿದ್ದು, ಈ ಡಿಸ್‌ಪ್ಲೇಯು 1200 x 2652 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಡಿಸ್‌ಪ್ಲೇಯು 19.9:9 ರಚನೆಯ ಅನುಪಾತವನ್ನು ಹೊಂದಿದ್ದು, 120Hz ರಿಫ್ರೆಶ್ ರೇಟ್ ಅನ್ನು ಸಪೋರ್ಟ್ ಮಾಡುತ್ತದೆ.
ಹಾನರ್ X9b 5G ಮೊಬೈಲ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 6 Gen 1 SoC ಪ್ರೊಸೆಸರ್‌ನಲ್ಲಿ ಕಾರ್ಯ ನಿರ್ವಹಿಸಲಿದೆ. ಇದು ಆಂಡ್ರಾಯ್ಡ್ 13 ಆಧಾರಿತ MagicOS 7.2 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕೆಲಸ ನಿರ್ವಹಿಸಲಿದೆ. ಹಾಗೆಯೇ 8GB RAM ಮತ್ತು 256 GB ಆಂತರೀಕ ಸ್ಟೋರೇಜ್ ಸಾಮರ್ಥ್ಯವನ್ನು ಹೊಂದಿದೆ.
ಹಾನರ್ X9b 5G ಫೋನ್ ತ್ರಿವಳಿ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಪಡೆದಿದ್ದು, ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್ ಸೆನ್ಸಾರ್‌ನಲ್ಲಿ ಇದೆ. ಎರಡನೇ ಕ್ಯಾಮೆರಾ 5 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಮತ್ತು ಡೆಪ್ತ್ ಸೆನ್ಸಾರ್ ಹಾಗೂ ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಸೆನ್ಸಾರ್ ಮ್ಯಾಕ್ರೋ ಲೆನ್ಸ್ ಅನ್ನು ಪಡೆದುಕೊಂಡಿದೆ. ಅಲ್ಲದೇ 8x ವರೆಗೆ ಡಿಜಿಟಲ್ ಜೂಮ್ ಸೌಲಭ್ಯ ಪಡೆದಿದೆ. ಹಾಗೆಯೇ ಮುಂಭಾಗದಲ್ಲಿ 16 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.
ಹಾನರ್ X9b 5G ಮೊಬೈಲ್ 5,800 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ಪಡೆದಿದ್ದು, 35W ಫಾಸ್ಟ್ ಚಾರ್ಜಿಂಗ್ ಅನ್ನು ಸಪೋರ್ಟ್ ಮಾಡುತ್ತದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಬ್ಲೂಟೂತ್, ವೈಫೈ, ಹಾಟ್‌ಸ್ಪಾಟ್, ಯುಎಸ್‌ಬಿ ಟೈಪ್ ಸಿ ಪೋರ್ಟ್ ಅನ್ನು ಪಡೆದುಕೊಂಡಿದೆ. ಇದಲ್ಲದೆ ಗ್ರಾವಿಟಿ ಸೆನ್ಸರ್, ಫಿಂಗರ್‌ಪ್ರಿಂಟ್ ಸೆನ್ಸರ್, ಗೈರೊಸ್ಕೋಪ್, ಕಂಪಾಸ್, ಆಂಬಿಯೆಂಟ್ ಲೈಟ್ ಸೆನ್ಸರ್ ಅನ್ನು ಒಳಗೊಂಡಿವೆ. ಇನ್ನು ಈ ಫೋನ್ ಮಿಡ್‌ನೈಟ್ ಬ್ಲಾಕ್ ಮತ್ತು ಸನ್‌ರೈಸ್ ಆರೆಂಜ್ ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಸಿಗಲಿದೆ.


Click it and Unblock the Notifications