Home
Deal of the day

Honor X9b 5G ಬೆಲೆ ದೊಡ್ಡ ಕುಸಿತ: 6,000 ರೂ. ಅಗ್ಗ.. ಹೊಸ ಬೆಲೆ ಎಷ್ಟು?

ಹಾನರ್ ಕಂಪನಿಯ ಮೊಬೈಲ್‌ಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಿದೆ. ಸ್ಮಾರ್ಟ್‌ಫೋನ್ ಪ್ರಿಯರು ಸಹ ಈ ಫೋನ್‌ಗಳನ್ನು ಇಷ್ಟಪಟ್ಟು ಖರೀದಿಸುತ್ತಾರೆ. ಅದರಂತೆ, ಕಂಪನಿಯು ಆಗಾಗ್ಗೆ ತನ್ನ ಗ್ರಾಹಕರಿಗೆ ಸಿಹಿ ಸುದ್ದಿಯನ್ನು ನೀಡುತ್ತದೆ. ಇದೀಗ, ಹಾನರ್ X9b 5G (Honor X9b 5G) ಫೋನ್ ಖರೀದಿ ಮೇಲೆ ಭರ್ಜರಿ ಆಫರ್‌ ನೀಡುತ್ತಿದೆ. ನೀವು 5G ತಂತ್ರಜ್ಞಾನ ಮತ್ತು ಅಲ್ಟ್ರಾ ಬೌನ್ಸ್ 360 ಡಿಗ್ರಿ ಆಂಟಿ-ಡ್ರಾಪ್ ರೆಸಿಸ್ಟೆನ್ಸ್ ತಂತ್ರಜ್ಞಾನದೊಂದಿಗೆ ಹೊಸ ಫೋನ್ ಖರೀದಿಸಲು ಬಯಸಿದರೆ, ಹಾನರ್ X9b ಉತ್ತಮ ಆಯ್ಕೆಯಾಗಿದೆ. ಈ ಫೋನಿನ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ ಬನ್ನಿ.

ಹಾನರ್ X9b 5G ಫೋನನ್ನು ಫೆಬ್ರವರಿ ತಿಂಗಳಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಯಿತು. ವಿಶೇಷವೆಂದರೆ, ಆನ್‌ಲೈನ್ ಶಾಪಿಂಗ್ ಸೈಟ್ ಅಮೆಜಾನ್‌ನಲ್ಲಿ 6,000 ರೂ.ಗಳ ಬ್ಯಾಂಕ್ ಆಫರ್‌ನೊಂದಿಗೆ ಮಾರಾಟ ಮಾಡಲಾಗುತ್ತಿದೆ. ಅಂದರೆ ನೀವು ಈ ಫೋನನ್ನು ಬಿಡುಗಡೆ ಬೆಲೆಗಿಂತ ಕಡಿಮೆ ಬೆಲೆಗೆ ಖರೀದಿಸಬಹುದು. ಇದು 1.5K AMOLED ಡಿಸ್ಪ್ಲೇ, 108 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 5800mAh ಬ್ಯಾಟರಿ, ಅಲ್ಟ್ರಾ-ಬೌನ್ಸ್ 360-ಡಿಗ್ರಿ ಆಂಟಿ-ಡ್ರಾಪ್ ರೆಸಿಸ್ಟೆನ್ಸ್ ಮತ್ತು ಸ್ಟೇಟ್-ಆಫ್-ದಿ-ಆರ್ಟ್ ಕುಷನಿಂಗ್ ತಂತ್ರಜ್ಞಾನ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

Honor X9b 5G ಬೆಲೆ ದೊಡ್ಡ ಕುಸಿತ: 6,000 ರೂ. ಅಗ್ಗ.. ಹೊಸ ಬೆಲೆ ಎಷ್ಟು?

ಹಾನರ್ X9b 5G ಬೆಲೆ ಮತ್ತು ಆಫರ್‌ಗಳು

ಹಾನರ್‌ ಕಂಪನಿಯು ಈ ಮೊಬೈಲ್ ಅನ್ನು 8GB RAM + 256 GB ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಮಾಡಿದೆ. ಇದು ಮಿಡ್‌ನೈಟ್ ಬ್ಲಾಕ್ ಮತ್ತು ಸನ್ರೈಸ್ ಆರೆಂಜ್‌ ಬಣ್ಣಗಳ ಆಯ್ಕೆಗಳಲ್ಲಿ ಬರುತ್ತದೆ. ಇದರ ಬೆಲೆ 25,999 ರೂ. ಇದೆ. ಪ್ರಸ್ತುತ ಈ ಫೋನ್ ಖರೀದಿ ಮೇಲೆ 6,000 ರೂ.ಗಳ ಬ್ಯಾಂಕ್ ರಿಯಾಯಿತಿ ನೀಡಲಾಗುತ್ತಿದೆ. 6,000 ಡಿಸ್ಕೌಂಟ್‌ನೊಂದಿಗೆ ನೀವು, 19,998 ರೂ.ಗೆ ಈ ಫೋನನ್ನು ಖರೀದಿಸಬಹುದು.

ಯಾವುದೇ ಬ್ಯಾಂಕಿನ ಕ್ರೆಡಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಇಎಂ, ಡೆಬಿಟ್ ಕಾರ್ಡ್, ಡೆಬಿಟ್ ಕಾರ್ಡ್ ಇಎಂಐ ಪಾವತಿಯ ಮೇಲೆ ಈ ಫ್ಲಾಟ್ ರಿಯಾಯಿತಿಯನ್ನು ಪಡೆಯಬಹುದು. ಕಂಪನಿಯು ಹಾನರ್ X9b 5G ಖರೀದಿಯಲ್ಲಿ ನೋ ಕಾಸ್ಟ್ ಇಎಂಐ ಆಯ್ಕೆಯನ್ನು ಸಹ ನೀಡುತ್ತಿದೆ. ಈ ಫೋನನ್ನು 3 ರಿಂದ 6 ತಿಂಗಳ ಸುಲಭ ಕಂತುಗಳಲ್ಲಿ ಖರೀದಿಸಬಹುದು. ಜೊತೆಗೆ, 23,600 ರೂ. ವರೆಗೆ ಎಕ್ಸ್‌ಚೇಂಜ್ ಆಫರ್‌ ಕೂಡ ಲಭ್ಯವಿದೆ.

ಹಾನರ್ X9b 5G ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ: ಹಾನರ್ X9b 5G ಫೋನ್ 6.78 ಇಂಚಿನ AMOLED ಡಿಸ್ಪ್ಲೇ ಹೊಂದಿದೆ. ಇದು 1.5k ರೆಸಲ್ಯೂಶನ್‌, 120Hz ರಿಫ್ರೆಶ್ ದರ, 1200 ನೀಟ್ಸ್ ಗರಿಷ್ಠ ಬ್ರೈಟ್‌ನೆಸ್‌ ಅನ್ನು ಹೊಂದಿದೆ.

ಪ್ರೊಸೆಸರ್: ಈ ಸ್ಮಾರ್ಟ್‌ಫೋನ್ Qualcomm Snapdragon 6 Gen 1 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಜೊತೆಗೆ Adreno A710 GPU ಮತ್ತು ಅಂತರ್ನಿರ್ಮಿತ 5G ಮೋಡೆಮ್‌ ಇದೆ. ಈ ಫೋನ್ 8GB RAM ಮತ್ತು 256GB ವರೆಗೆ ಇಂಟರ್ನಲ್ ಸ್ಟೋರೇಜ್‌ ಹೊಂದಿದೆ. ಅಷ್ಟೇ ಅಲ್ಲ, RAM ಅನ್ನು 8GB ವರೆಗೆ ಹೆಚ್ಚಿಸಬಹುದು.

ಈ ಸುದ್ದಿ ಓದಿದ್ದೀರಾ? ಇಂದು Tecno Pova 6 Neo 5G ಸೇಲ್: 2,000 ಡಿಸ್ಕೌಂಟ್.. ಬೆಲೆಯೂ ಕಡಿಮೆ!

ಸಾಫ್ಟ್‌ವೇರ್: ಈ ಫೋನ್ Android 13 ಆಧಾರಿತ MagicOS 7.2 ನೊಂದಿಗೆ ಕಾರ್ಯನಿರ್ವಹಿಸುತ್ತದೆ. ಇದು ಎರಡು ವರ್ಷಗಳ ಪ್ರಮುಖ ಸಾಫ್ಟ್‌ವೇರ್ ನವೀಕರಣಗಳನ್ನು ಮತ್ತು ಮೂರು ವರ್ಷಗಳ ಭದ್ರತಾ ನವೀಕರಣಗಳನ್ನು ಸಹ ಪಡೆಯುತ್ತದೆ.

ಕ್ಯಾಮೆರಾ: ಹಾನರ್ X9b 5G ಫೋನ್ 108 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿದೆ. ಇದು 5 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಯೂನಿಟ್‌ನೊಂದಿಗೆ ಜೋಡಿಸಲ್ಪಟ್ಟಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, 16 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.

ಬ್ಯಾಟರಿ: ಕಂಪನಿಯು ಹಾನರ್ X9b 5G ಫೋನನ್ನು 5,800mAh ಸಾಮರ್ಥ್ಯ ಬ್ಯಾಟರಿಯೊಂದಿಗೆ ಪರಿಚಯಿಸಿದೆ. ಇದನ್ನು ಚಾರ್ಜ್ ಮಾಡಲು 35W ವೇಗದ ಚಾರ್ಜಿಂಗ್ ಬೆಂಬಲವಿದೆ.

Best Mobiles in India

English summary
Honor X9b 5G Received Massive discount in amazon: Check availability, offers, specs and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+