Home
ಸುದ್ದಿಜಾಲ

ಇಂದು Tecno Pova 6 Neo 5G ಸೇಲ್: 2,000 ಡಿಸ್ಕೌಂಟ್.. ಬೆಲೆಯೂ ಕಡಿಮೆ!

Tecno Pova 6 Neo 5G Sale: ಟೆಕ್ನೋ (Tecno) ಕಂಪನಿಯು ಇತ್ತೀಚೆಗೆ ತನ್ನ 'Pova' ಸರಣಿಯಲ್ಲಿ ಹೊಸ 5G ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದುವೇ, ಟೆಕ್ನೋ ಪೋವಾ 6 ನಿಯೋ 5G (TTECNO POVA 6 Neo 5G) ಸ್ಮಾರ್ಟ್‌ಫೋನ್‌. ಇದರ ಅದ್ಭುತ ಫೀಚರ್ಸ್‌ಗಳು ಈಗಾಗಲೇ, ಮೊಬೈಲ್‌ ಪ್ರಿಯರ ಗಮನ ಸೆಳೆದಿದೆ. ಅಂದಹಾಗೆ, ಈ ಸ್ಮಾರ್ಟ್‌ಫೋನ್ ಇಂದು (ಸೆ.14) ತನ್ನ ಮೊದಲ ಮಾರಾಟಕ್ಕೆ ಸಿದ್ಧವಾಗಿದೆ. ಕಂಪನಿಯು ಬಿಡುಗಡೆ ಭಾಗವಾಗಿ ಕೆಲವು ಆಫರ್‌ಗಳನ್ನು ಘೋಷಿಸಿದೆ. ಈ ಹೊಸ ಫೋನಿನ ಬೆಲೆ, ಲಭ್ಯತೆ ಮತ್ತು ವೈಶಿಷ್ಷ್ಯಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ನೂತನ ಟೆಕ್ನೋ ಪೋವಾ 6 ನಿಯೋ 5G ಫೋನ್ ಹಲವು ಅದ್ಭುತ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿದೆ. ಈ ಫೋನ್‌ ಹಲವು ಎಐ (ಕೃತಕ ಬುದ್ಧಿಮತ್ತೆ) ಫೀಚರ್ಸ್‌ಗಳನ್ನು ಹೊಂದಿದೆ. ಇದು MediaTek ಡೈಮೆನ್ಸಿಟಿ 6300 ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಫೋನಿನಲ್ಲಿ 108 ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ. ಇದು 6.67 ಇಂಚಿನ HD ಪ್ಲಸ್ ಡಿಸ್ಪ್ಲೇ, 5000mAh ಬ್ಯಾಟರಿ, 18W ವೇಗದ ಚಾರ್ಜಿಂಗ್‌ ಸೇರಿದಂತೆ ಇನ್ನಿತರ ವೈಶಿಷ್ಟ್ಯಗಳನ್ನು ಹೊಂದಿದೆ.

ಇಂದು Tecno Pova 6 Neo 5G ಸೇಲ್: 2,000 ಡಿಸ್ಕೌಂಟ್.. ಬೆಲೆಯೂ ಕಡಿಮೆ!

ಟೆಕ್ನೋ ಪೋವಾ 6 ನಿಯೋ 5G ಫೋನಿನ ಬೆಲೆ ಮತ್ತು ಆಫರ್‌ಗಳು

8GB + 128GB ಸ್ಟೋರೇಜ್‌ ಬೆಲೆ = 13,999 ರೂ.
8GB + 256GB ಸ್ಟೋರೇಜ್‌ ಬೆಲೆ = 14,999 ರೂ.

ಕಂಪನಿಯು ಟೆಕ್ನೋ ಪೋವಾ 6 ನಿಯೋ 5G ಅನ್ನು ಎರಡು ಸ್ಟೋರೇಜ್‌ ರೂಪಾಂತರಗಳಲ್ಲಿ ಮಾರಾಟ ಮಾಡಲಿದೆ. ಈ ಫೋನಿನ 8GB RAM + 128GB ಸ್ಟೋರೇಜ್‌ ರೂಪಾಂತರದ ಬೆಲೆ 13,999 ರೂ. ಆಗಿದೆ. 8GB + 256GB ಸ್ಟೋರೇಜ್‌ ರೂಪಾಂತರವು 14,999 ರೂ. ಬೆಲೆಗೆ ಮಾರಾಟವಾಗಲಿದೆ. ಈ ಫೋನ್ ಮಿಡ್‌ನೈಟ್ ಶಾಡೋ, ಅಜುರೆ ಸ್ಕೈ ಮತ್ತು ಅರೋರಾ ಕ್ಲೌಡ್‌ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

ಮೊದಲ ದಿನವೇ ಅಮೆಜಾನ್ ಸೈಟ್‌ನಲ್ಲಿ ನೂತನ ಟೆಕ್ನೋ ಪೋವಾ 6 ನಿಯೋ 5G ಫೋನ್ ಖರೀದಿಸಿದರೆ ಭರ್ಜರಿ ಡಿಸ್ಕೌಂಟ್‌ ಸಿಗುತ್ತದೆ. ಕಂಪನಿಯು ಈ ಫೋನಿನ ಖರೀದಿ ಮೇಲೆ 1,000 ರೂ.ಗಳ ಬ್ಯಾಂಕ್ ರಿಯಾಯಿತಿ ನೀಡುತ್ತಿದೆ. ಇದಲ್ಲದೆ, 1,000 ರೂ.ಗಳ ವರೆಗೆ ಎಕ್ಸ್‌ಚೇಂಜ್ ಆಫರ್ ಸಹ ಲಭ್ಯವಿದೆ. ರಿಯಾಯಿತಿಯೊಂದಿಗೆ ಮೂಲ ಮಾದರಿಯನ್ನು ಕೇವಲ 12,999 ರೂ.ಗೆ ಕೊಳ್ಳಬಹುದು.

ಟೆಕ್ನೋ ಪೋವಾ 6 ನಿಯೋ 5G ಫೋನಿನ ಟಾಪ್ 5 ಫೀಚರ್ಸ್‌

ಡಿಸ್ಪ್ಲೇ: ಟೆಕ್ನೋ ಪೋವಾ 6 ನಿಯೋ 5G ಮೊಬೈಲ್ 120Hz ರಿಫ್ರೆಶ್ ದರದೊಂದಿಗೆ 6.67 ಇಂಚಿನ HD ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಇದು 720×1600 ಪಿಕ್ಸೆಲ್‌ಗಳ ರೆಸಲ್ಯೂಶನ್, 240Hz ಸ್ಪರ್ಶ ಮಾದರಿ ದರ, 480 ನಿಟ್ಸ್‌ಗಳ ಗರಿಷ್ಠ ಬ್ರೈಟ್‌ನೆಸ್‌ ಬೆಂಬಲಿಸುತ್ತದೆ.

ಪ್ರೊಸೆಸರ್: ನೂತನ ಟೆಕ್ನೋ ಫೋನ್ MediaTek ಡೈಮೆನ್ಶನ್ 6300 ಪ್ರೊಸೆಸರ್‌ನೊಂದಿಗೆ ಕೆಲಸ ಮಾಡುತ್ತದೆ. ಇದನ್ನು 6 ​​ನ್ಯಾನೋಮೀಟರ್ ಪ್ರಕ್ರಿಯೆಯಲ್ಲಿ ನಿರ್ಮಿಸಲಾಗಿದೆ. ಗ್ರಾಫಿಕ್ಸ್‌ಗಾಗಿ ಈ ಫೋನ್ Mali G57 MC2 GPU ಅನ್ನು ಪಡೆದಿದೆ. ಈ ಮೊಬೈಲ್ ಇತ್ತೀಚಿನ Android 14 ಆಧಾರಿತ HiOS 14.5 ನಲ್ಲಿ ಕಾರ್ಯನಿರ್ವಹಿಸುತ್ತದೆ.

ಸ್ಟೋರೇಜ್‌: ಟೆಕ್ನೋ ಪೋವಾ 6 ನಿಯೋ 5G ಮೊಬೈಲ್ 8GB RAM ಮತ್ತು 256GB ವರೆಗಿನ ಇಂಟರ್ನಲ್ ಸ್ಟೋರೇಜ್‌ ಒಳಗೊಂಡಿದೆ. ಜೊತೆಗ, 8GB ವಿಸ್ತೃತ ಮೆಮೊರಿಗೆ ಬೆಂಬಲವಿದೆ. ಇದರ ಸಹಾಯದಿಂದ ಒಟ್ಟು 16GB RAM ಅನ್ನು ಬಳಸಬಹುದು. ಇಂಟರ್ನಲ್ ಸ್ಟೋರೇಜ್‌ ಹೆಚ್ಚಿಸಲು, ಮೈಕ್ರೊ SD ಕಾರ್ಡ್ ಸ್ಲಾಟ್ ಅನ್ನು ನೀಡಲಾಗಿದೆ. ಇದರ ಸಹಾಯದಿಂದ 1 TB ವರೆಗೆ ಸ್ಟೋರೇಜ್‌ ಹೆಚ್ಚಿಸಬಹುದು.

ಈ ಸುದ್ದಿ ಓದಿದ್ದೀರಾ?: Samsung: ಅಗ್ಗದ 5G ಫೋನ್ ಬೆಲೆ ಮತ್ತಷ್ಟು ಇಳಿಕೆ; 2,500 ಡಿಸ್ಕೌಂಟ್.. ಹೊಸ ಬೆಲೆ ಎಷ್ಟು?

ಕ್ಯಾಮೆರಾ: ಕಂಪನಿಯು ಟೆಕ್ನೋ ಪೋವಾ 6 ನಿಯೋ 5G ಫೋನನ್ನು ಡ್ಯುಯಲ್ ಕ್ಯಾಮೆರಾ ರಚನೆಯೊಂದಿಗೆ ಪರಿಚಯಿಸಿದೆ. ಇದು 108 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹೊಂದಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನದೊಂದಿಗೆ ಎರಡನೇ ಲೆನ್ಸ್ ಲಭ್ಯವಿದೆ. ಈ ಫೋನಿನಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 8 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಇದೆ.

ಬ್ಯಾಟರಿ: ಈ ನೂತನ ಟೆಕ್ನೋ ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬರುತ್ತದೆ. ಇದನ್ನು ಚಾರ್ಜ್ ಮಾಡಲು, 18 ವ್ಯಾಟ್‌ ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ.

ಇತರೆ ಫೀಚರ್ಸ್‌: ಕನೆಕ್ಟಿವಿಟಿ ಆಯ್ಕೆಗಳಲ್ಲಿ ಟೆಕ್ನೋ ಪೋವಾ 6 ನಿಯೋ 5G ಫೋನ್ ಡ್ಯುಯಲ್ ಸಿಮ್ 5G, Wi-Fi, ಬ್ಲೂಟೂತ್, ಇನ್ಫ್ರಾರೆಡ್ ಸೆನ್ಸರ್, NFC, ಲೈಟ್ ಸೆನ್ಸರ್, ಎಐ ಸೂಟ್, AIGC, ಎಐ ಮ್ಯಾಜಿಕ್ ಎರೇಸರ್, ಎಐ ಕಟೌಟ್, ಎಐ ವಾಲ್‌ಪೇಪರ್, ಎಐ ಆರ್ಟ್‌ಬೋರ್ಡ್, Ask AI ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

Best Mobiles in India

English summary
Tecno Pova 6 Neo 5G Goes on First Sale in India Today Via amazon: check Offer Price, Discount, Specs and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+