Home
Deal of the day

Amazon Fab TV Fest Sale: ಸ್ಮಾರ್ಟ್‌ಟಿವಿಗಳನ್ನು ದೊಡ್ಡ ಡಿಸ್ಕೌಂಟ್‌ನಲ್ಲಿ ಖರೀದಿಸಲು ಇದು ಸೂಕ್ತ ಸಮಯ!

ಅಮೆಜಾನ್‌ ಆಗಾಗ್ಗೆ ಪ್ರತ್ಯೇಕ ಸ್ಮಾರ್ಟ್‌ಡಿವೈಸ್‌ಗಳ ಮೇಲೆ ಭಾರೀ ಆಫರ್‌ ಘೋಷಣೆ ಮಾಡುತ್ತಾ ಬರುತ್ತದೆ. ಅದರಲ್ಲಿ ಸ್ಮಾರ್ಟ್‌ಫೋನ್, ಸ್ಮಾರ್ಟ್‌ ಸ್ಪೀಕರ್‌, ಇಯರ್‌ಬಡ್ಸ್‌, ಲ್ಯಾಪ್‌ಟಾಪ್‌ ಸೇರಿದಂತೆ ಹಲವು ಡಿವೈಸ್‌ಗಳನ್ನು ದೊಡ್ಡ ರಿಯಾಯಿತಿ ಮೂಲಕ ಖರೀದಿ ಮಾಡಬಹುದು. ಅದೇ ರೀತಿ ಈಗ ಸ್ಮಾರ್ಟ್‌ಟಿವಿಗಳನ್ನು ಖರೀದಿ ಮಾಡಲು ಅನುಕೂಲ ಮಾಡಿಕೊಟ್ಟಿದೆ.

ಹೌದು, ಅಮೆಜಾನ್ ಗ್ರ್ಯಾಂಡ್ ಗೇಮಿಂಗ್ ಡೇಸ್ ಸೇಲ್ ಜೊತೆಗೆ ಅಮೆಜಾನ್ ಫ್ಯಾಬ್ ಟಿವಿ ಫೆಸ್ಟ್ ಮಾರಾಟವನ್ನು (Amazon Fab TV Fest Sale) ಘೋಷಣೆ ಮಾಡಿದ್ದು, ಇದರಲ್ಲಿ ನೀವು ಒನ್‌ಪ್ಲಸ್, ಶಿಯೋಮಿ, ರೆಡ್ಮಿ ಹಾಗೂ ಸ್ಯಾಮ್‌ಸಂಗ್‌ ಸೇರಿದಂತೆ ಪ್ರಮುಖ ಬ್ರ್ಯಾಂಡ್‌ಗಳ ಟಿವಿಗಳನ್ನು ಅಗ್ಗದ ಬೆಲೆಗೆ ಖರೀದಿ ಮಾಡಬಹುದು. ಈ ಮಾರಾಟವು ಈಗಾಗಲೇ ಆರಂಭ ಆಗಿದ್ದು, ಜೂನ್ 25, 2023 ರವರೆಗೆ ಲೈವ್ ಆಗಿರುತ್ತದೆ. ಹಾಗಿದ್ರೆ, ಬನ್ನಿ ಯಾವೆಲ್ಲಾ ಕಂಪೆನಿಯ ಟಿವಿಗಳು ಎಷ್ಟು ಆಫರ್ ಬೆಲೆ ಹೊಂದಿವೆ ತಿಳಿಯೋಣ.

ಸ್ಮಾರ್ಟ್‌ಟಿವಿಗಳನ್ನು ದೊಡ್ಡ ಡಿಸ್ಕೌಂಟ್‌ನಲ್ಲಿ ಖರೀದಿಸಲು ಇದು ಸೂಕ್ತ ಸಮಯ!

ಸೋನಿ ಕಂಪೆನಿ ಸ್ಮಾರ್ಟ್‌ಟಿವಿಗಳು: ಸೋನಿ ಬ್ರಾವಿಯಾದ ವಿವಿಧ ಇಂಚಿನ ಟಿವಿಗಳು ಭಿನ್ನ ಆಫರ್‌ ಪಡೆದಿವೆ. ಅದರಂತೆ ಸೋನಿ ಬ್ರಾವಿಯಾ 65 ಇಂಚಿನ 4K ಅಲ್ಟ್ರಾ ಹೆಚ್‌ಡಿ ಸ್ಮಾರ್ಟ್ LED ಗೂಗಲ್‌ TV KD-65X74K ಟಿವಿ 70,990ರೂ.ಗಳ ಬೆಲೆ ಹೊಂದಿದೆ. ಜೊತೆಗೆ 43 ಇಂಚಿನ 4K ಅಲ್ಟ್ರಾ ಹೆಚ್‌ಡಿ ಟಿವಿ KD-43X74K 42,990ರೂ.ಗಳಿಗೆ ಲಭ್ಯ ಇದೆ.ಇದರೊಂದಿಗೆ ನೀವು 55 ಇಂಚಿನ XR ಸರಣಿಯ 4Kಅಲ್ಟ್ರಾ ಹೆಚ್‌ಡಿ ಸ್ಮಾರ್ಟ್ OLEDಗೂಗಲ್‌ TV XR-55A80Jಯನ್ನು 1,24,990 ರೂ.ಗಳಿಗೆ ಕೊಂಡುಕೊಳ್ಳಬಹುದು.

ಸ್ಯಾಮ್‌ಸಂಗ್‌ ಸ್ಮಾರ್ಟ್‌ಟಿವಿಗಳು: ಇನ್ನು ಸ್ಯಾಮ್‌ಸಂಗ್‌ ಕಂಪೆನಿಯ ಸ್ಮಾರ್ಟ್‌ಟಿವಿಗಳ ವಿಭಾಗಕ್ಕೆ ಬಂದರೆ ಇಲ್ಲಿ ಸ್ಯಾಮ್‌ಸಂಗ್‌ನ 55 ಇಂಚಿನ ಕ್ರಿಸ್ಟಲ್ ಐಸ್ಮಾರ್ಟ್‌ 4K ಅಲ್ಟ್ರಾ ಹೆಚ್‌ಡಿ ಸ್ಮಾರ್ಟ್‌ LED TV UA55CUE60AKLX ಗೆ 47,990ರೂ.ಗಳ ಬೆಲೆ ನಿಗದಿ ಪಡಿಸಲಾಗಿದೆ ಹಾಗೂ 43ಇಂಚಿನ UA43AUE65AKXXL ಟಿವಿಗೆ 31,990ರೂ.ಗಳ ಬೆಲೆ ಇದ್ದು, 55 ಇಂಚಿನ UA55AUE60AKLXL ಟಿವಿಗೆ 45,990ರೂ. ಬೆಲೆ ಇದೆ. ಜೊತೆಗೆ 65 ಇಂಚಿನ ದಿ ಫ್ರೇಮ್‌ ಸೀರಿಸ್ 4Kಸ್ಮಾರ್ಟ್‌ QLED TV QA65LS03BAKLXL ಗೆ 1,30,990ರೂ.ಗಳ ಬೆಲೆ ನಿಗದಿ ಮಾಡಲಾಗಿದೆ.

ಎಲ್‌ ಸ್ಮಾರ್ಟ್‌ಟಿವಿ: ಎಲ್‌ಜಿ ಸ್ಮಾರ್ಟ್‌ಟಿವಿಯಲ್ಲಿ ಎಲ್‌ಜಿಯ 43 ಇಂಚಿನ 4K ಅಲ್ಟ್ರಾ ಹೆಚ್‌ಡಿ ಸ್ಮಾರ್ಟ್ LED TV 43UQ7500PSF ಗೆ 30,490ರೂ.ಗಳನ್ನು ನಿಗದಿ ಮಾಡಲಾಗಿದೆ. ಹಾಗೆಯೇ 55 ಇಂಚಿನ 4K ಅಲ್ಟ್ರಾ ಹೆಚ್‌ಡಿ ಸ್ಮಾರ್ಟ್ LED TV 55UQ7500PSF ಗೆ 45,990ರೂ.ಗಳ ಆಫರ್‌ ಬೆಲೆ ನಿಗದಿ ಮಾಡಲಾಗಿದೆ.

ಒನ್‌ಪ್ಲಸ್‌ ಸ್ಮಾರ್ಟ್‌ಟಿವಿ: ಒನ್‌ಪ್ಲಸ್‌ನ 50 ಇಂಚಿನ Y ಸರಣಿ 4K ಅಲ್ಟ್ರಾ ಹೆಚ್‌ಡಿ ಸ್ಮಾರ್ಟ್ ಆಂಡ್ರಾಯ್ಡ್ LED TV 50Y1S ಪ್ರೊ ಟಿವಿಗೆ 32,999ರೂ.ಗಳ ಆಫರ್‌ ಬೆಲೆ ನಿಗದಿ ಮಾಡಲಾಗಿದೆ. ಇದರೊಂದಿಗೆ 43 ಇಂಚಿನ 43Y1S ಪ್ರೊಗೆ 29,999ರೂ.ಗಳು ಹಾಗೂ 55 ಇಂಚಿನ U ಸರಣಿ 4K LED ಸ್ಮಾರ್ಟ್ ಆಂಡ್ರಾಯ್ಡ್‌ TV 55U1S ಗೆ 42,999ರೂ.ಗಳ ಬೆಲೆ ನಿಗದಿ ಮಾಡಲಾಗಿದೆ. ಇದರೊಂದಿಗೆ 65 ಇಂಚಿನ Uಸರಣಿ 4K LED ಸ್ಮಾರ್ಟ್ ಆಂಡ್ರಾಯ್ಡ್‌ TV 65U1S ಗೆ 61,999ರೂ. ಬೆಲೆ ಇದೆ.

ಮಿ ಸ್ಮಾರ್ಟ್‌ಟಿವಿಗಳು: ಮಿ(Mi) ಯ 50 ಇಂಚಿನ X ಸರಣಿ 4K ಅಲ್ಟ್ರಾ ಹೆಚ್‌ಡಿ ಸ್ಮಾರ್ಟ್ ಆಂಡ್ರಾಯ್ಡ್ LED TV L50M7-A2IN ಗೆ 32,999ರೂ. ಬೆಲೆ ನಿಗದಿ ಮಾಡಲಾಗಿದೆ. ಜೊತೆಗೆ 55 ಇಂಚಿನ X ಸರಣಿ 4K ಅಲ್ಟ್ರಾ ಹೆಚ್‌ಡಿ ಸ್ಮಾರ್ಟ್ ಆಂಡ್ರಾಯ್ಡ್ LED TV L55M7-A2IN ಗೆ 37,999ರೂ.ಗಳ ಬೆಲೆ ಇದೆ ಹಾಗೂ 55 ಇಂಚಿನ Q1 ಸರಣಿ 4K ಅಲ್ಟ್ರಾ ಹೆಚ್‌ಡಿ ಸ್ಮಾರ್ಟ್ QLED ಟಿವಿ L55M6-EQG ಗೆ 59,999ರೂ.ಗಳ ಬೆಲೆ ನಿಗದಿಪಡಿಸಲಾಗಿದೆ.

ರೆಡ್ಮಿ ಸ್ಮಾರ್ಟ್‌ಟಿವಿಗಳು: ರೆಡ್ಮಿ ವಿಚಾರಕ್ಕೆ ಬರುವುದಾದರೆ 43 ಇಂಚಿನ 4K ಅಲ್ಟ್ರಾ ಹೆಚ್‌ಡಿ ಆಂಡ್ರಾಯ್ಡ್ ಸ್ಮಾರ್ಟ್ LED TV X43 | L43R7-7AIN ಗೆ 24,999ರೂ.ಹಾಗೂ43 ಇಂಚಿನ ಆಂಡ್ರಾಯ್ಡ್‌ 11 ಸರಣಿ ಫುಲ್‌ಹೆಚ್‌ಡಿ ಸ್ಮಾರ್ಟ್ LED TV L43M6 -RA/L43M7-RA ಗೆ 21,999ರೂ.ಗಳ ಆಫರ್‌ ಬೆಲೆ ನಿಗದಿ ಮಾಡಲಾಗಿದೆ. ಇದರೊಂದಿಗೆ55 ಇಂಚಿನ 4K ಅಲ್ಟ್ರಾ ಹೆಚ್‌ಡಿ ಆಂಡ್ರಾಯ್ಡ್ ಸ್ಮಾರ್ಟ್ LED TV X55 | L55M6-RA -RA/L43M7-RA ಗೆ 34,999ರೂ. ಬೆಲೆ ಇದೆ.

ಸ್ಮಾರ್ಟ್‌ಟಿವಿಗಳನ್ನು ದೊಡ್ಡ ಡಿಸ್ಕೌಂಟ್‌ನಲ್ಲಿ ಖರೀದಿಸಲು ಇದು ಸೂಕ್ತ ಸಮಯ!

ಇತರೆ ಕಂಪೆನಿಯ ಸ್ಮಾರ್ಟ್‌ಟಿವಿಗಳು: ಏಸರ್‌ನ 43 ಇಂಚಿನ ಸುಧಾರಿತ I ಸರಣಿ 4K ಅಲ್ಟ್ರಾ ಹೆಚ್‌ಡಿ ಸ್ಮಾರ್ಟ್ LED ಗೂಗಲ್‌ TV AR43GR2851UDFL 23,999ರೂ.ಗಳ ಬೆಲೆ ಹೊಂದಿದ್ದು, 55 LED TV AR55AR2851UDFL 29,999ರೂ.ಗಳ ಬೆಲೆ ಪಡೆದಿದೆ.ಇದರೊಂದಿಗೆ ವೆಸ್ಟಿಂಗ್‌ಹೌಸ್‌ನ 55ಇಂಚಿನ ಕ್ವಾಂಟಮ್ ಸರಣಿ 4K ಅಲ್ಟ್ರಾ ಹೆಚ್‌ಡಿ ಸ್ಮಾರ್ಟ್ ಪ್ರಮಾಣೀಕೃತ ಆಂಡ್ರಾಯ್ಡ್‌ LED TV WH55PU80 ಸ್ಮಾರ್ಟ್‌ಟಿವಿ 29,999ರೂ.ಬೆಲೆ ಹೊಂದಿದ್ದು, 24 ಇಂಚಿನ ಪೈ ಸರಣಿ HD ರೆಡಿ ಸ್ಮಾರ್ಟ್ LED TV WH24SP06ಗೆ 6,799ರೂ. ಬೆಲೆ ಇದೆ.

ಉಳಿದಂತೆ ಹಿಸೆನ್ಸ್ ಸ್ಮಾರ್ಟ್‌ಟಿವಿಗಳಲ್ಲಿ 43 ಇಂಚಿನ ಬೆಜೆಲ್‌ಲೆಸ್ ಸರಣಿ 4K ಅಲ್ಟ್ರಾ ಹೆಚ್‌ಡಿ ಸ್ಮಾರ್ಟ್ LED ಗೂಗಲ್‌ TV 43A6H ಗೆ 26,999ರೂ.ಗಳ ಬೆಲೆ ಹೊಂದಿದೆ ಹಾಗೂ 55 ಇಂಚಿನ 4K ಅಲ್ಟ್ರಾ HD ಸ್ಮಾರ್ಟ್ IPS QLED TV 55U7H ಗೆ 49,999ರೂ. ಬೆಲೆ ಇದೆ. ಜೊತೆಗೆ TCL 43 ಇಂಚಿನ ಬೆಜೆಲ್-ಲೆಸ್ ಸರಣಿ 4K ಅಲ್ಟ್ರಾ ಹೆಚ್‌ಡಿ ಸ್ಮಾರ್ಟ್ LED ಗೂಗಲ್‌ TV 43P635 25,990ರೂ.ಗಳ ಬೆಲೆ ಹೊಂದಿದೆ.

Best Mobiles in India

English summary
Along with the Amazon Grand Gaming Days sale, Amazon has also announced the Fab TV Fest sale where you can buy TVs from leading brands including OnePlus, Xiaomi, Redmi and Samsung at cheap prices.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+