Motorola: ಮೊಟೊರೊಲಾ ಎಡ್ಜ್ 40 ನಿಯೋ ಫೋನ್‌ಗಿದೆ ಭಾರೀ ಆಫರ್! 8 GB RAM..
ಮೊಟೊರೊಲಾ ಫೋನ್‌ಗಳು (Motorola phone) ಭಿನ್ನ ಫೀಚರ್ಸ್ ಆಯ್ಕೆಯ ಮೂಲಕ ಬಳಕೆದಾರರ ಗಮನಸೆಳೆದಿವೆ. ಈ ನಡುವೆ ಮೊಟೊರೊಲಾದ ಬಹು ಬೇಡಿಕೆಯ ಫೋನ್‌ಗೆ ಪ್ರಮುಖ ಇ-ಕಾಮರ್ಸ್ ಸೈಟ್‌ವೊಂದರಲ್ಲಿ ಭಾರೀ ಆಫರ್ ಘೋಷಣೆ ಮಾಡಲಾಗಿದೆ.
ಹೌದು, ಸ್ಮಾರ್ಟ್‌ಫೋನ್‌ಗಳ ವಿಷಯಕ್ಕೆ ಬಂದರೆ ಮೊಟೊರೊಲಾ ಫೋನ್‌ಗಳು ಭಾರತದಲ್ಲಿ ವಿಶೇಷ ಸ್ಥಾನ ಪಡೆಯುತ್ತವೆ. ಯಾಕೆಂದರೆ ಈ ಫೋನ್‌ಗಳು ಅಗ್ಗದ ದರದಲ್ಲಿ ಉತ್ತಮ ಫೀಚರ್ಸ್ ನೀಡುತ್ತವೆ. ಅದರಂತೆ ಇದೀಗ ಮೊಟೊರೊಲಾ ಎಡ್ಜ್ 40 ನಿಯೋ ಸ್ಮಾರ್ಟ್‌ಫೋನ್‌ಗೆ (Motorola Edge 40 Neo Smartphone) ಆಫರ್ ನೀಡಲಾಗಿದೆ. ಈ ಫೋನ್ 8 GB RAM ಹಾಗೂ ಆಕರ್ಷಕ ಕ್ಯಾಮೆರಾ ರಚನೆ ಪಡೆದಿದೆ. ಹಾಗಿದ್ರೆ, ಬನ್ನಿ ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್ ಹಾಗೂ ಇದರ ಆಫರ್ ಬೆಲೆ ವಿವರವನ್ನು ಗಮನಿಸೋಣ.

ಮೊಟೊರೊಲಾ ಎಡ್ಜ್ 40 ನಿಯೋ ಆಫರ್ ಮಾಹಿತಿ: ಈ ಸ್ಮಾರ್ಟ್‌ಫೋನ್‌ನ ಸಾಮಾನ್ಯ ದರ 27,999 ರೂ.ಗಳಾಗಿದೆ. ಆದರೆ, ನೀವು ಈಗ ಇದನ್ನು 22,999 ರೂ.ಗಳ ದರದಲ್ಲಿ ಖರೀದಿ ಮಾಡಬಹುದಾಗಿದೆ. ಯಾಕೆಂದರೆ ಫ್ಲಿಪ್‌ಕಾರ್ಟ್ ಈ ಫೋನ್‌ಗೆ 17% ರಿಯಾಯಿತಿ ಘೋಷಣೆ ಮಾಡಿದೆ. ಅಲ್ಲದೆ ನೀವು ಕೆಲವು ಬ್ಯಾಂಕ್ ಆಫರ್ ಬಳಕೆ ಮಾಡಿಕೊಳ್ಳುವ ಮೂಲಕ ಇನ್ನೂ ಕಡಿಮೆ ದರದಲ್ಲಿ ಇದನ್ನು ಖರೀದಿ ಮಾಡಬಹುದು.
ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ವ್ಯವಹಾರದ ಮೇಲೆ 10% ರಿಯಾಯಿತಿ, ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದ ಮೇಲೆ 10% ರಿಯಾಯಿತಿ, ಫ್ಲಿಪ್‌ಕಾರ್ಟ್ ಯುಪಿಐ ಪಾವತಿ ಮೇಲೆ 25 ರೂ.ಗಳ ರಿಯಾಯಿತಿ ಪಡೆಯಬಹುದಾಗಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಅನ್ನು ಈ ಬೆಲೆಗೆ ಖರೀದಿ ಮಾಡಲು ಯೋಗ್ಯವಾದ ಫೀಚರ್ಸ್ ಅನ್ನು ಹೊಂದಿದೆಯೇ ಅನ್ನೋದನ್ನು ಗಮನಿಸೋಣ ಬನ್ನಿ.

ಮೊಟೊರೊಲಾ ಎಡ್ಜ್ 40 ನಿಯೋ ಡಿಸ್‌ಪ್ಲೇ ಮಾಹಿತಿ: ಈ ಸ್ಮಾರ್ಟ್‌ಫೋನ್ 6.55 ಇಂಚಿನ P-OLED ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಇದರ ಜೊತೆಗೆ 144Hz ರಿಫ್ರೆಶ್ ರೇಟ್, HDR10+, 1300 ನಿಟ್ಸ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಮೂಲಕ ಉತ್ತಮ ವೀಕ್ಷಣೆ ಅನುಭವ ನೀಡಲಿದೆ. ಹಾಗೆಯೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ರಕ್ಷಣೆ ಪಡೆದಿದೆ.
ಮೊಟೊರೊಲಾ ಎಡ್ಜ್ 40 ನಿಯೋ ಪ್ರೊಸೆಸರ್ ವಿವರ: ಇನ್ನು ಈ ಫೋನ್ ಆಂಡ್ರಾಯ್ಡ್ 13 ಓಎಸ್‌ನಲ್ಲಿ ರನ್ ಆಗಲಿದ್ದು, ಆಂಡ್ರಾಯ್ಡ್ 14 ಗೆ ಅಪ್‌ಗ್ರೇಡ್ ಮಾಡಬಹುದಾಗಿದೆ. ಇದರ ಜೊತೆಗೆ ಮೀಡಿಯಾ ಟೆಕ್ ಡೈಮೆನ್ಸಿಟಿ 7030 (6nm) ಪ್ರೊಸೆಸರ್ ಬಲ ಪಡೆದಿದ್ದು, ಮಾಲಿ-G610 MC3 ಜಿಪಿಯು ಬಲ ಪಡೆದುಕೊಂಡಿದೆ. ಇದರ ಜೊತೆಗೆ 128 GB ಇಂಟರ್ ಸ್ಟೋರೇಜ್ ಆಯ್ಕೆ ಹಾಗೂ 8 GB RAM ನಲ್ಲಿ ಕಾಣಿಸಿಕೊಂಡಿದೆ.

ಮೊಟೊರೊಲಾ ಎಡ್ಜ್ 40 ನಿಯೋ ಕ್ಯಾಮೆರಾ ರಚನೆ: ಇನ್ನು ಈ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದಿದೆ. ಅಂದರೆ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 13 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾ ಆಯ್ಕೆ ಪಡೆದಿದ್ದು, ಎಲ್‌ಇಡಿ ಫ್ಲ್ಯಾಶ್ ಹೆಚ್‌ಡಿಆರ್, ಪನೋರಮಾ ಫೀಚರ್ಸ್ ಆಯ್ಕೆ ಪಡೆದುಕೊಂಡಿದೆ. ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ 32 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ.
ಮೊಟೊರೊಲಾ ಎಡ್ಜ್ 40 ನಿಯೋ ಬ್ಯಾಟರಿ ಹಾಗೂ ಇತರೆ: ಇನ್ನು ಈ ಫೋನ್ 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, 68W ವೈರ್ಡ್ ಚಾರ್ಜಿಂಗ್ ಬೆಂಬಲ ಪಡೆದಿದೆ. ಅಂದರೆ 15 ನಿಮಿಷಗಳಲ್ಲಿ 50% ಚಾರ್ಜ್ ಆಗಲಿದೆ. ಈ ಫೋನ್ ವೈ-ಫೈ 802.11 a/b/g/n/ac/6e, ಟ್ರೈ-ಬ್ಯಾಂಡ್, ವೈ ಫೈ ಡೈರೆಕ್ಟ್, ಬ್ಲೂಟೂತ್ ಆವೃತ್ತಿ 5.4, A2DP, LE,
ಜಿಪಿಎಸ್, ಗ್ಲೋನಾಸ್, ಗೆಲಿಲಿಯೋ ಸ್ಥಾನೀಕರಣ ಸೇರಿದಂತೆ ಅನೇಕ ಕನೆಕ್ಟಿವಿಟಿ ಫೀಚರ್ಸ್ ಪಡೆದಿದೆ.


Click it and Unblock the Notifications








