Home
Deal of the day

48MP ಕ್ಯಾಮೆರಾ, 5G ಫೋನ್.. ಕೇವಲ 8,749 ರೂ.ಗೆ ಲಭ್ಯ! ಎಲ್ಲಿ?

ಇನ್ಫಿನಿಕ್ಸ್‌ (Infinix) ಕಂಪನಿಯ ಇತ್ತೀಚೆಗೆ ಭಾರತದಲ್ಲಿ ಇನ್ಫಿನಿಕ್ಸ್ ಹಾಟ್ 50 5G (Infinix Hot 50 5G) ಫೋನ್‌ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ 2024 ನಲ್ಲಿ ಭಾರಿ ರಿಯಾಯಿತಿಯೊಂದಿಗೆ ಮಾರಾಟವಾಗುತ್ತಿದೆ. ಹೌದು, ಫ್ಲಿಪ್‌ಕಾರ್ಟ್‌ನ ವಿಶೇಷ ಮಾರಾಟದಲ್ಲಿ ಶೇ.23 ರಷ್ಟು ಡಿಸ್ಕೌಂಟ್ ಬಳಿಕ 9,999 ರೂ.ಗೆ ಲಭ್ಯವಿದೆ. ಆಯ್ದ ಬ್ಯಾಂಕ್ ಕಾರ್ಡ್‌ಗಳನ್ನು ಬಳಸಿ ಈ ಫೋನ್ ಖರೀದಿಸಿದರೆ 1,250 ರೂ. ರಿಯಾಯಿತಿ ಸಿಗುತ್ತದೆ. ನೀವು, ಈ ಫೋನನ್ನು ಕೇವಲ 8,749 ರೂ.ಗೆ ಖರೀದಿಸಬಹುದು.

ಕಂಪನಿಯು ತನ್ನ ಗ್ರಾಹಕರ ಬಜೆಟ್‌ ಗಮನದಲ್ಲಿಟ್ಟುಕೊಂಡು ಇನ್ಫಿನಿಕ್ಸ್‌ ಹಾಟ್‌ 50 5G ಫೋನನ್ನು ಬಿಡುಗಡೆ ಮಾಡಿತ್ತು. ಇದು 120Hz ರಿಫ್ರೆಶ್ ದರದೊಂದಿಗೆ 6.7 ಇಂಚಿನ ಹೆಚ್‌ಡಿ ಪ್ಲಸ್ ಎಲ್‌ಸಿಡಿ ಡಿಸ್ಪ್ಲೇಯನ್ನು ಹೊಂದಿದೆ. ಈ ಫೋನ್ ಮೀಡಿಯಾ ಟೆಕ್ ಡೈಮೆನ್ಷನ್ 6300 ಪ್ರೊಸೆಸರ್‌ನೊಂದಿಗೆ ಕಾರ್ಯನಿರ್ವಹಿಸಲಿದೆ. ಕಂಪನಿಯು ಡುಯಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಪರಿಚಯಿಸಿದೆ. ಈ ಫೋನ್ 48 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 5000mAh ಬ್ಯಾಟರಿ ಸೇರಿದಂತೆ ಹಲವು ಅತ್ಯಾಕರ್ಷಕ ವೈಶಿಷ್ಟ್ಯಗಳೊಂದಿಗೆ ಮಾರಾಟವಾಗುತ್ತಿದೆ.

48MP ಕ್ಯಾಮೆರಾ, 5G ಫೋನ್.. ಕೇವಲ 8,749 ರೂ.ಗೆ ಲಭ್ಯ! ಎಲ್ಲಿ?

ಇನ್ಫಿನಿಕ್ಸ್‌ ಹಾಟ್‌ 50 5G ಫೋನಿನ ಬೆಲೆ

ಇನ್ಫಿನಿಕ್ಸ್‌ ಹಾಟ್‌ 50 5G ಫೋನನ್ನು ಎರಡು ಸ್ಟೋರೇಜ್‌ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ. 4GB RAM + 128GB ಸ್ಟೋರೇಜ್‌ ರೂಪಾಂತರವನ್ನು 9,999 ರೂ.ಗೆ ಬಿಡುಗಡೆ ಮಾಡಲಾಗಿತ್ತು. 8GB RAM + 128 GB ಸ್ಟೋರೇಜ್‌ ರೂಪಾಂತರವನ್ನು 10,999 ರೂ.ಗೆ ಪರಿಚಯಿಸಲಾಗಿತ್ತು. ನೀವು ವೈಬ್ರೆಂಟ್ ಬ್ಲೂ, ಸ್ಲೀಕ್ ಬ್ಲಾಕ್, ಸೇಜ್ ಗ್ರೀನ್ ಮತ್ತು ಡ್ರೀಮಿ ಪರ್ಪಲ್ ಬಣ್ಣಗಳಲ್ಲಿ ಈ ಫೋನನ್ನು ಖರೀದಿಸಬಹುದು. ಫ್ಲಿಪ್‌ಕಾರ್ಟ್‌ನಲ್ಲಿ ಈ ಆಫರ್‌ ಪಡೆಯಿರಿ.

ಇನ್ಫಿನಿಕ್ಸ್‌ ಹಾಟ್‌ 50 5G ಫೋನಿನ ವೈಶಿಷ್ಟ್ಯಗಳು

ಡಿಸ್ಪ್ಲೇ ವಿವರ

ಇನ್ಫಿನಿಕ್ಸ್‌ ಹಾಟ್‌ 50 5G ಫೋನ್ 6.7 ಇಂಚಿನ ಹೆಚ್‌ಡಿ ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಇದು 1600 x 720 ಪಿಕ್ಸೆಲ್ ಡಿಸ್ಪ್ಲೇ, 120Hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ. ಜೊತೆಗೆ, ಅತ್ಯುತ್ತಮ ಭದ್ರತೆಯನ್ನು ಹೊಂದಿದೆ.

ಪ್ರೊಸೆಸರ್ ಸಾಮರ್ಥ್ಯ

ಕಂಪನಿಯು ಇನ್ಫಿನಿಕ್ಸ್‌ ಹಾಟ್‌ 50 5G ಫೋನ್ ಅನ್ನು ಮೀಡಿಯಾ ಟೆಕ್ ಡೈಮೆನ್ಶನ್ 6300 ಪ್ರೊಸೆಸರ್‌ನೊಂದಿಗೆ ಪರಿಚಯಿಸಿದೆ. ಜೊತೆಗೆ, ಈ ಫೋನ್ XOS 14.5 ಆಧಾರಿತ ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿದೆ. ಇದು 4GB + 128GB ಮತ್ತು 8GB + 128GB ಸ್ಟೋರೇಜ್ ಆಯ್ಕೆಗಳನ್ನು ಒಳಗೊಂಡಿದೆ. ಇದು 8GB ವರೆಗೆ ವಿಸ್ತೃತ RAMಗೆ ಬೆಂಬಲವನ್ನು ಸಹ ಒಳಗೊಂಡಿದೆ. ಇದರ ಸಹಾಯದಿಂದ ಒಟ್ಟು 16GB ವರೆಗೆ ಬಳಸಬಹುದು.

ಈ ಸುದ್ದಿ ಓದಿದ್ದೀರಾ?: Tecno: ಅ.8ಕ್ಕೆ ಹೊಸ 5G ಫೋನ್ ಲಾಂಚ್: 10,000ಕ್ಕಿಂತ ಕಡಿಮೆ ಬೆಲೆ.. ವಿಶೇಷತೆಗಳೇನು?

ಕ್ಯಾಮೆರಾ ರಚನೆ

ಇದು ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಎಲ್‌ಇಡಿ ಫ್ಲ್ಯಾಷ್ ಲೈಟ್‌ನೊಂದಿಗೆ 48 ಮೆಗಾಪಿಕ್ಸೆಲ್ ಪ್ರಾಥಮಿಕ ಸೋನಿ IMX582 ಕ್ಯಾಮೆರಾ ಲಭ್ಯವಿದೆ. ಇದರಲ್ಲಿ ಎಐ (AI) ಲೆನ್ಸ್ ಕೂಡ ಇದೆ. ಈ ಕ್ಯಾಮೆರಾದಲ್ಲಿ ನೀವು 12ಕ್ಕೂ ಹೆಚ್ಚು ಮೋಡ್‌ಗಳನ್ನು ಪಡೆಯಬಹುದು. ಇದು ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ ಎಲ್ಇಡಿ ಫ್ಲ್ಯಾಷ್‌ನೊಂದಿಗೆ 8 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.

ಬ್ಯಾಟರಿ ಬ್ಯಾಕಪ್

ಇನ್ಫಿನಿಕ್ಸ್‌ ಹಾಟ್‌ 50 5G ಮೊಬೈಲ್ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದನ್ನು ವೇಗವಾಗಿ ಚಾರ್ಜ್‌ ಮಾಡಲು 18W ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ಇದು ಎಐ ಚಾರ್ಜ್ ರಕ್ಷಣೆ, ಪವರ್ ಮ್ಯಾರಥಾನ್, ಸ್ಮಾರ್ಟ್ ಮೋಡ್, ಅಲ್ಟ್ರಾ ಪವರ್ ಸೇವಿಂಗ್ ಮೋಡ್‌ನಂತಹ ವೈಶಿಷ್ಟ್ಯಗಳನ್ನು ಸಹ ಒಳಗೊಂಡಿದೆ.

ಇತರೆ ವೈಶಿಷ್ಟ್ಯಗಳು

ಈ ಫೋನ್ ಭದ್ರತೆಗಾಗಿ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್, ಫೇಸ್ ಅನ್‌ಲಾಕ್ ವೈಶಿಷ್ಟ್ಯ ಮತ್ತು ಹಲವು ಎಐ ತಂತ್ರಜ್ಞಾನ ವೈಶಿಷ್ಟ್ಯಗಳನ್ನು ಹೊಂದಿದೆ. ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಡ್ಯುಯಲ್ ಸಿಮ್, ವೈ-ಫೈ, ಬ್ಲೂಟೂತ್ ಲಭ್ಯವಿದೆ. ಡೈನಾಮಿಕ್ ಬಾರ್ ಇಂಟರಾಕ್ಟಿವ್ ಸ್ಕ್ರೀನ್ ಕೂಡ ಇದರಲ್ಲಿರುವುದು ವಿಶೇಷ.

Best Mobiles in India

English summary
infinix hot 50 5g with 48mp camera is now available with huge discount of 23 percent in flipkart sale: Price, Offer and more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+