Tecno: ಅ.8ಕ್ಕೆ ಹೊಸ 5G ಫೋನ್ ಲಾಂಚ್: 10,000ಕ್ಕಿಂತ ಕಡಿಮೆ ಬೆಲೆ.. ವಿಶೇಷತೆಗಳೇನು?
ಪ್ರಸಿದ್ಧ ಸ್ಮಾರ್ಟ್‌ಫೋನ್ ಕಂಪನಿ ಟೆಕ್ನೋ (Tecno) ಶೀಘ್ರದಲ್ಲೇ ಹೊಸ 5G ಫೋನನ್ನು ಬಿಡುಗಡೆ ಮಾಡಲಿದೆ. ಇದು ಟೆಕ್ನೋ ಸ್ಪಾರ್ಕ್ 30C 5G (Tecno Spark 30C 5G) ಹೆಸರಿನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಈ ಮೂಲಕ ಕಂಪನಿಯು, ಭಾರತದಲ್ಲಿ ಸ್ಪಾರ್ಕ್ 30 ಸರಣಿಯನ್ನು ವಿಸ್ತರಿಸಲಿದೆ. ಕಂಪನಿಯು, ಇತ್ತೀಚೆಗೆ ಈ ಫೋನಿನ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದೆ. ಈ ಫೋನ್ ಭಾರತದಲ್ಲಿ ಅಕ್ಟೋಬರ್ 8 ರಂದು ಬಿಡುಗಡೆಯಾಗಲಿದೆ. ಬನ್ನಿ ಈ ಮುಂಬರುವ ಫೋನಿನ ಬೆಲೆ ಮತ್ತು ವೈಶಿಷ್ಟ್ಯಗಳನ್ನು ತಿಳಿಯೋಣ.
ಕಂಪನಿಯು ಮುಂಬರುವ ಟೆಕ್ನೋ ಸ್ಪಾರ್ಕ್ 30C 5G ಫೋನನ್ನು 10,000 ಕ್ಕಿಂತ ಕಡಿಮೆ (ಅಗ್ಗದ) ಬೆಲೆಯಲ್ಲಿ ಪರಿಚಯಿಸಲಿದೆ. ಇದು 6.67 ಇಂಚಿನ ದೊಡ್ಡ ಡಿಸ್ಪ್ಲೇಯನ್ನು ಹೊಂದಿರಲಿದೆ. ಇದು 120Hz ರಿಫ್ರೆಶ್ ದರ, MediaTek Dimension 6300 ಪ್ರೊಸೆಸರ್, 128GB ಸ್ಟೋರೇಜ್, 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 5000mAh ಸಾಮರ್ಥ್ಯದ ಬ್ಯಾಟರಿ ಮತ್ತು 18W ವೇಗದ ಚಾರ್ಜಿಂಗ್ ಸೇರಿದಂತೆ ಬೆಲೆಗೆ ತಕ್ಕಂತೆ ಹಲವು ಉತ್ತಮ ಗುಣಮಟ್ಟದ ವೈಶಿಷ್ಟ್ಯಗಳನ್ನು ಹೊಂದಿರಲಿದೆ.

ಟೆಕ್ನೋ ಸ್ಪಾರ್ಕ್ 30C 5G ಬಿಡುಗಡೆ ಮತ್ತು ಬೆಲೆ ವಿವರ
ಕಂಪನಿಯು ಟೆಕ್ನೋ ಸ್ಪಾರ್ಕ್ 30C 5G ಫೋನಿನ ಭಾರತ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ. ಇದೇ ಅಕ್ಟೋಬರ್ 8 ರಂದು ಟೆಕ್ನೋ ಸ್ಪಾರ್ಕ್ 30C 5G ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆಯಾಗುತ್ತಿದೆ. ಈ ಫೋನ್ ಕ್ರೇಜಿ ರಿಲಯಬಲ್ ಎಂಬ ಅಡಿಬರಹದೊಂದಿಗೆ ಬರುತ್ತದೆ. ಕಂಪನಿಯು ಈ ಮೊಬೈಲ್ ಅನ್ನು 10,000 ರೂ.ಗಿಂತ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಟೆಕ್ನೋ ಹಂಚಿಕೊಂಡಿರುವ ಟೀಸರ್ ಮೂಲಕ ಈ ಫೋನಿನ ವೈಶಿಷ್ಟ್ಯಗಳು ಸಹ ಬಹಿರಂಗವಾಗಿವೆ.
ಟೆಕ್ನೋ ಸ್ಪಾರ್ಕ್ 30C 5G ಫೋನಿನ ವಿನ್ಯಾಸ
ಟೆಕ್ನೋ ಸ್ಪಾರ್ಕ್ 30C 5G ಮೊಬೈಲ್ ಪಂಚ್ ಹೋಲ್ ನಾಚ್ ಡಿಸ್ಪ್ಲೇಯೊಂದಿಗೆ ಬರುತ್ತದೆ. ಡಿಸ್ಪ್ಲೇಯು ಸಮತಟ್ಟಾಗಿದೆ. ಬೆಜೆಲ್‌ಗಳು ತೆಳ್ಳಗಿರುತ್ತವೆ. ಹಿಂದಿನ ಪ್ಯಾನೆಲ್‌ನಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಇದೆ. ರಿಂಗ್ ಎಲ್ಇಡಿ ಲೈಟ್ ಕೂಡ ಕಾಣಬಹುದು. ಈ ಫೋನ್ ಕಪ್ಪು ಮತ್ತು ಇನ್ನೊಂದು ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆಯಲ್ಲಿ ಕಂಡುಬರುತ್ತದೆ. ಒಟ್ಟಾರೆ, ಕಡಿಮೆ ಬಜೆಟ್‌ನ ಹೊರತಾಗಿಯೂ ಈ ಫೋನ್ ಸ್ಟೈಲಿಶ್ ಲುಕ್ ಹೊಂದಿದೆ.
ಇದನ್ನೂ ಓದಿ: Lava Agni 3 5G vs Lava Agni 2 5G: ಎರಡು ಫೋನ್‌ಗಳ ವ್ಯತ್ಯಾಸವೇನು? ಯಾವುದು ಬೆಸ್ಟ್? ಇಲ್ಲಿದೆ ಮಾಹಿತಿ
ಟೆಕ್ನೋ ಸ್ಪಾರ್ಕ್ 30C 5G ಫೋನಿನ ಫೀಚರ್ಸ್
ಕಂಪನಿಯು ಬಿಡುಗಡೆ ಮಾಡಿರುವ ಟೀಸರ್ ಅನ್ನು ನೋಡಿದರೆ, ಟೆಕ್ನೋ ಸ್ಪಾರ್ಕ್ 30C 5G ಫೋನ್ 48 ಮೆಗಾಪಿಕ್ಸೆಲ್ ಸೋನಿ ಕ್ಯಾಮೆರಾದೊಂದಿಗೆ ಬಿಡುಗಡೆಯಾಗಲಿದೆ ಎಂದು ಸ್ಪಷ್ಟವಾಗುತ್ತದೆ. ಇದರಲ್ಲಿ ಎಐ (AI) ಲೆನ್ಸ್ ಕೂಡ ಇದೆ. ಈ ಫೋನ್ 8MP ಡ್ಯುಯಲ್ ಎಲ್‌ಇಡಿ ಫ್ಲಾಷ್ ಫ್ರಂಟ್ ಕ್ಯಾಮೆರಾವನ್ನು ಹೊಂದಿರುವ ಸಾಧ್ಯತೆಯಿದೆ. ಈ ಫೋನ್ 120Hz ರಿಫ್ರೆಶ್ ದರದೊಂದಿಗೆ 6.67 ಇಂಚಿನ ದೊಡ್ಡ ಡಿಸ್ಪ್ಲೇಯನ್ನು ಹೊಂದಿರಲಿದೆ.
ಕಂಪನಿಯು ಟೆಕ್ನೋ ಸ್ಪಾರ್ಕ್ 30C 5G ಅನ್ನು MediaTek Dimension 6300 ಪ್ರೊಸೆಸರ್‌ನೊಂದಿಗೆ ಪರಿಚಯಿಸುವ ಸಾಧ್ಯತೆಯಿದೆ. ಈ ಬಗ್ಗ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಈ ಸ್ಮಾರ್ಟ್‌ಫೋನ್ ಅನ್ನು 4GB RAM, 4GB ವರ್ಚುವಲ್ RAM, 64GB ಮತ್ತು 128GB ಸ್ಟೋರೇಜ್ ಆಯ್ಕೆಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ.
ಟೆಕ್ನೋ ಸ್ಪಾರ್ಕ್ 30C 5G ಮೊಬೈಲ್ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿರುವ ಸಾಧ್ಯತೆಯಿದೆ. ಇದು 18W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುವ ನಿರೀಕ್ಷೆಯಿದೆ. ಇದಲ್ಲದೆ, ಟೆಕ್ನೋ ಸ್ಪಾರ್ಕ್ 30C 5G ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್‌ನೊಂದಿಗೆ ಬಿಡುಗಡೆಯಾಗಲಿದೆ.


Click it and Unblock the Notifications








