Infinix: ಭರ್ಜರಿ ಆಫರ್ ಬೆಲೆಗೆ ಈ ಸೂಪರ್ ಫೋನ್! 256 GB ಸ್ಟೋರೇಜ್.. 108 MP ಕ್ಯಾಮೆರಾ
ಸ್ಮಾರ್ಟ್‌ಫೋನ್ (Smartphone) ವಿಭಾಗದಲ್ಲಿ ಇನ್ಫಿನಿಕ್ಸ್ ಸ್ಮಾರ್ಟ್‌ಫೋನ್‌ಗಳು ಕಡಿಮೆ ದರದಲ್ಲಿ ಉತ್ತಮ ಫೀಚರ್ಸ್ ಆಯ್ಕೆ ನೀಡಲಿವೆ. ಈ ಕಾರಣಕ್ಕೆ ಈ ಫೋನ್‌ಗಳಿಗೆ ಭಾರತದಲ್ಲಿ ವಿಶೇಷವಾದ ಬೇಡಿಕೆ ಇದೆ. ಈ ನಡುವೆ ಇನ್ಫಿನಿಕ್ಸ್ ನೋಟ್ 30 5G (Infinix Note 30 5G) ಗೆ ಭರ್ಜರಿ ಆಫರ್ ನೀಡಲಾಗಿದೆ.
ಹೌದು, ಇನ್ಫಿನಿಕ್ಸ್ ನೋಟ್ 30 5G ಸ್ಮಾರ್ಟ್‌ಫೋನ್‌ಗೆ ಇದೀಗ ದೊಡ್ಡ ಮಟ್ಟದ ಆಫರ್ ನೀಡಲಾಗಿದೆ. ಈ ಸ್ಮಾರ್ಟ್‌ಫೋನ್ 256 GB ಇಂಟರ್ ಸ್ಟೋರೇಜ್ ಆಯ್ಕೆ ಪಡೆದಿದ್ದು, 108 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾದೊಂದಿಗೆ ಆಕರ್ಷಕ ಫೀಚರ್ಸ್ ಅನ್ನು ಹೊಂದಿದೆ. ಹಾಗಿದ್ರೆ, ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್ ಹಾಗೂ ಆಫರ್ ಬೆಲೆ ವಿವರದ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಇನ್ಫಿನಿಕ್ಸ್ ನೋಟ್ 30 5G ಆಫರ್ ಮಾಹಿತಿ: ಈ ಸ್ಮಾರ್ಟ್‌ಫೋನ್ 19,999 ರೂ.ಗಳ ಬೆಲೆ ಹೊಂದಿದ್ದು, ನೀವು ಈಗ 15,499 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಈ ಫೋನ್‌ಗೆ ಪ್ರಮುಖ ಇ-ಕಾಮರ್ಸ್ ಸೈಟ್ ಆಗಿರುವ ಫ್ಲಿಪ್‌ಕಾರ್ಟ್ (Flipkart) 22% ರಿಯಾಯಿತಿ ನೀಡಿದೆ. ಅಲ್ಲದೆ ಕೆಲವು ಬ್ಯಾಂಕ್ ಆಫರ್ ಮೂಲಕ ಇನ್ನೂ ಕಡಿಮೆ ದರದಲ್ಲಿ ಖರೀದಿ ಮಾಡಬಹುದಾಗಿದೆ.
ಫ್ಲಿಪ್‌ಕಾರ್ಟ್ ಯುಪಿಐ ಬಳಕೆ ಮಾಡಿಕೊಂಡು ಖರೀದಿ ಮಾಡಿದ್ರೆ ತ್ವರಿತ ರಿಯಾಯಿತಿ, ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್ ಬಳಕೆ ಮಾಡಿಕೊಂಡು ಖರೀದಿ ಮಾಡಿದ್ರೆ 5% ಕ್ಯಾಶ್‌ಬ್ಯಾಕ್, ಎಲ್ಲಾ ಬ್ಯಾಂಕ್‌ಗಳ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ವ್ಯವಹಾರದ ಮೇಲೆ 1500 ರೂ.ಗಳ ರಿಯಾಯಿತಿ ಸಿಗಲಿದ್ದು, FreebieSpotify ಪ್ರೀಮಿಯಂ ಸೌಲಭ್ಯ ಸಹ ಸಿಗಲಿದೆ. ಹಾಗಿದ್ರೆ, ಬನ್ನಿ ಈ ಸ್ಮಾರ್ಟ್‌ಫೋನ್‌ನ ಫೀಚರ್ಸ್ ಕಡೆ ಕಣ್ಣಾಯಿಸೋಣ.

ಇನ್ಫಿನಿಕ್ಸ್ ನೋಟ್ 30 5G ಡಿಸ್‌ಪ್ಲೇ ಮಾಹಿತಿ: ಈ ಫೋನ್ 6.78 ಇಂಚಿನ IPS LCD ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ 120Hz ರಿಫ್ರೆಶ್ ರೇಟ್ ಆಯ್ಕೆ ಪಡೆದಿದ್ದು, 580 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಹೊಂದಿದೆ. ಹಾಗೆಯೇ 1080 x 2460 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದ್ದು, ಈ ಮೂಲಕ ಬಳಕೆದಾರರಿಗೆ ವಿಶೇಷವಾದ ಅನುಭವ ಸಿಗಲಿದೆ.
ಇನ್ಫಿನಿಕ್ಸ್ ನೋಟ್ 30 5G ಪ್ರೊಸೆಸರ್ ವಿವರ: ಈ ಫೋನ್ ಆಂಡ್ರಾಯ್ಡ್ 13 ಓಎಸ್ ಅನ್ನು ರನ್ ಮಾಡಲಿದ್ದು, ಮೀಡಿಯಾಟೆಕ್ ಡೈಮೆನ್ಸಿಟಿ 6080 (6 nm) ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ ಈ ಫೋನ್ ಮಾಲಿ-G57 MC2 ಜಿಪಿಯು ಬಲ ಪಡೆದಿದ್ದು, 256GB ಹಾಗೂ 8GB RAM ಸ್ಟೋರೇಜ್ ಪಡೆದಿದೆ. ಇದರ ಜೊತೆಗೆ ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ ಇಂಟರ್ ಸ್ಟೋರೇಜ್ ಅನ್ನು ಹೆಚ್ಚಿಗೆ ಮಾಡಿಕೊಳ್ಳಬಹುದಾಗಿದೆ.
ಇನ್ಫಿನಿಕ್ಸ್ ನೋಟ್ 30 5G ಕ್ಯಾಮೆರಾ ರಚನೆ: ಈ ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಆಯ್ಕೆ ಪಡೆದಿದ್ದು, ಅದರಲ್ಲಿ 108 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 2 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಹೊಂದಿದೆ. ಹಾಗೆಯೇ ಅತ್ಯುತ್ತಮ ಕ್ಯಾಮೆರಾ ಅನುಭವಕ್ಕಾಗಿ ಕ್ವಾಡ್-ಎಲ್ಇಡಿ ಫ್ಲ್ಯಾಶ್, ಹೆಚ್‌ಡಿಆರ್, ಪನೋರಮಾ ಫೀಚರ್ಸ್ ಪಡೆದಿದೆ. ಇನ್ನು ಸೆಲ್ಫಿ ಹಾಗೂ ವಿಡಿಯೋ ಕರೆಗಾಗಿ 16 ಮೆಗಾಪಿಕ್ಸೆಲ್ ಕ್ಯಾಮೆರಾ ಆಯ್ಕೆ ನೀಡಲಾಗಿದೆ.

ಇನ್ಫಿನಿಕ್ಸ್ ನೋಟ್ 30 5G ಬ್ಯಾಟರಿ ಹಾಗೂ ಇತರೆ: ಈ ಸ್ಮಾರ್ಟ್‌ಫೋನ್ 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, 45W ವೈರ್ಡ್ ಚಾರ್ಜಿಂಗ್, ಬೈಪಾಸ್ ಚಾರ್ಜಿಂಗ್ ಬೆಂಬಲ ಪಡೆದಿದೆ. ಇದರ ಜೊತೆಗೆ ಡ್ಯುಯಲ್ ಸ್ಪೀಕರ್‌ಗಳೊಂದಿಗೆ 3.5 ಎಂಎಂ ಜ್ಯಾಕ್, ವೈ-ಫೈ 802.11 a/b/g/n/ac, ಡ್ಯುಯಲ್-ಬ್ಯಾಂಡ್, ವೈ-ಫೈ ಡೈರೆಕ್ಟ್, ಯುಎಸ್‌ಬಿ ಟೈಪ್-ಸಿ 2.0, OTG ಕನೆಕ್ಟಿವಿಟಿ ಸೌಲಭ್ಯಗಳು ಈ ಫೋನ್‌ನಲ್ಲಿವೆ.


Click it and Unblock the Notifications








