Infinix: ಇನ್ಫಿನಿಕ್ಸ್‌ನ ಈ ಸ್ಮಾರ್ಟ್‌ಫೋನ್‌ಗೆ 20% ರಿಯಾಯಿತಿ, 2 TB ವರೆಗೆ ಸ್ಟೋರೇಜ್ ಸೌಲಭ್ಯ...
ಸ್ಮಾರ್ಟ್‌ಫೋನ್‌ಗಳ ವಿಭಾಗದಲ್ಲಿ ಇನ್ಫಿನಿಕ್ಸ್ (Infinix) ಫೋನ್‌ಗಳು ಕಡಿಮೆ ದರದಲ್ಲಿ ಲಭ್ಯ ಇರುವ ಫೋನ್‌ಗಳು ಎಂಬ ಹೆಸರು ಪಡೆದಿವೆ. ಇವು ಕಡಿಮೆ ಸದರದಲ್ಲಿ ಲಭ್ಯವಾದರೂ ಸಹ ಫೀಚರ್ಸ್ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ಅದರಂತೆ ಈಗ ಇನ್ಫಿನಿಕ್ಸ್‌ನ ಪ್ರಮುಖ ಫೋನ್‌ವೊಂದು ಆಫರ್ ಬೆಲೆಗೆ ಲಭ್ಯ ಇದೆ.
ಹೌದು, ಇನ್ಫಿನಿಕ್ಸ್ ಸ್ಮಾರ್ಟ್ 8 ಹೆಚ್‌ಡಿ ಸ್ಮಾರ್ಟ್‌ಫೋನ್ (Infinix Smart 8 HD Smartphone) ಇದೀಗ ಆಫರ್ ಬೆಲೆಗೆ ಲಭ್ಯ ಇದೆ. ಇದು 2 TB ವರೆಗೆ ವಿಸ್ತರಿಸಬಹುದಾದ ಸ್ಟೋರೇಜ್ ಆಯ್ಕೆ ಪಡೆದಿದ್ದು, 13 ಮೆಗಾಪಿಕ್ಸೆಲ್ + AI ಲೆನ್ಸ್ ಆಯ್ಕೆ ಪಡೆದಿದೆ. ಹಾಗಿದ್ರೆ, ಇದರ ಆಫರ್ ಬೆಲೆ ಎಷ್ಟು ಈ ಫೋನ್ ಪ್ರಮುಖ ಫೀಚರ್ಸ್ ಏನು ಅನ್ನೋದನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ. ಅದರಲ್ಲೂ ಬಜೆಟ್ ಬೆಲೆಯಲ್ಲಿ ಫೋನ್ ಹುಡುಕುತ್ತಿರುವವರಿಗೆ ಈ ಫೋನ್ ಉತ್ತಮ ಆಯ್ಕೆಯಾಗಿದೆ.

ಇನ್ಫಿನಿಕ್ಸ್ ಸ್ಮಾರ್ಟ್ 8 ಹೆಚ್‌ಡಿ ಸ್ಮಾರ್ಟ್‌ಫೋನ್ ಆಫರ್ ಮಾಹಿತಿ: ಈ ಸ್ಮಾರ್ಟ್‌ಫೋನ್ 20% ರಿಯಾಯಿತಿಯೊಂದಿಗೆ 6,399 ರೂ.ಗಳ ಆಫರ್ ಬೆಲೆಗೆ ಲಭ್ಯ ಇದೆ. ಇದರ ಸಾಮಾನ್ಯ ದರ 7,999 ರೂ.ಗಳಾಗಿದೆ. ಅದಾಗ್ಯೂ ನೀವು ಕೆಲವು ಬ್ಯಾಂಕ್ ಆಫರ್ ಬಳಕೆ ಮಾಡಿಕೊಂಡು ಇನ್ನೂ ಕಡಿಮೆ ದರದಲ್ಲಿ ಈ ಫೋನ್ ಅನ್ನು ಖರೀದಿ ಮಾಡಬಹುದಾಗಿದೆ.
ಈ ಫೋನ್ ಖರೀದಿ ವೇಳೆ ಫ್ಲಿಪ್‌ಕಾರ್ಟ್ ಯುಪಿಐ ಬಳಕೆ ಮಾಡಿದ್ರೆ 25 ರೂ.ಗಳ ತ್ವರಿತ ರಿಯಾಯಿತಿ, ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕಾರ್ಡ್ ಬಳಕೆ ಮಾಡಿಕೊಂಡು ಖರೀದಿ ಮಾಡಿದ್ರೆ 5% ಕ್ಯಾಶ್‌ಬ್ಯಾಕ್, ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ವ್ಯವಹಾರದ ಮೇಲೆ 750 ರೂ. ವರೆಗೆ ಬ್ಯಾಂಕ್ ಆಫರ್ ಸಿಗಲಿದೆ. ಈ ಮೂಲಕ ಅಗ್ಗದ ದರ ಇರುವ ಈ ಫೋನ್ ಅನ್ನು ಇನ್ನೂ ಅಗ್ಗದ ದರದಲ್ಲಿ ಖರೀದಿ ಮಾಡಬಹುದು.

ಇನ್ಫಿನಿಕ್ಸ್ ಸ್ಮಾರ್ಟ್ 8 ಹೆಚ್‌ಡಿ ಸ್ಮಾರ್ಟ್‌ಫೋನ್ ಡಿಸ್‌ಪ್ಲೇ ಮಾಹಿತಿ: ಈ ಫೋನ್‌ನ ಬೆಲೆ ಬಗ್ಗೆ ತಿಳಿದುಕೊಳ್ಳುವುದರ ಜೊತೆಗೆ ಇದರ ಫೀಚರ್ಸ್ ಬಗ್ಗೆಯೂ ತಿಳಿದುಕೊಂಡರೆ ಉತ್ತಮ. ಈ ಸ್ಮಾರ್ಟ್‌ಫೋನ್ 6.6 ಇಂಚಿನ 104.6 cm2 (~84.6% ಸಸ್ಕ್ರೀನ್-ಟು-ಬಾಡಿ ಅನುಪಾತ) IPS LCD ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, 90Hz ರಿಫ್ರೆಶ್ ರೇಟ್ ಹಾಗೂ 500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಹೊಂದಿದೆ.
ಇನ್ಫಿನಿಕ್ಸ್ ಸ್ಮಾರ್ಟ್ 8 ಹೆಚ್‌ಡಿ ಸ್ಮಾರ್ಟ್‌ಫೋನ್ ಪ್ರೊಸೆಸರ್ ವಿವರ: ಇನ್ನು ಈ ಫೋನ್ ಆಂಡ್ರಾಯ್ಡ್ 13 ಓಎಸ್‌ನಲ್ಲಿ ರನ್ ಆಗಲಿದ್ದು, ಯುನಿಸಾಕ್ T606 (12 nm) ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದರ ಜೊತೆಗೆ ಮಾಲಿ G57 MP1 ಜಿಪಿಯು ಬಲ ಪಡೆದಿದೆ. ಹಾಗೆಯೇ 2 TB ವರೆಗೆ ವಿಸ್ತರಿಸಬಹುದಾದ ಸ್ಟೋರೇಜ್ ಆಯ್ಕೆಗಾಗಿ ಎಸ್‌ಡಿಕಾರ್ಡ್ ಬೆಂಬಲ ಪಡೆದಿದ್ದು, 3GB RAM ಹಾಗೂ 64GB ಇಂಟರ್ ಸ್ಟೋರೇಜ್‌ನಲ್ಲಿ ಈ ಫೋನ್ ಲಭ್ಯ ಇದೆ.
ಇನ್ಫಿನಿಕ್ಸ್ ಸ್ಮಾರ್ಟ್ 8 ಹೆಚ್‌ಡಿ ಸ್ಮಾರ್ಟ್‌ಫೋನ್ ಕ್ಯಾಮೆರಾ ರಚನೆ: ಈ ಸ್ಮಾರ್ಟ್‌ಫೋನ್ ಸಿಂಗಲ್ ರಿಯರ್ ಹಾಗೂ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದೆ. ಅದರಲ್ಲಿ 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹಾಗೂ 0.08 ಮೆಗಾಫಿಕ್ಸೆಲ್ ಸಹಾಯಕ ಸೆನ್ಸರ್ ಹೊಂದಿದೆ. ಇದರ ಜೊತೆಗೆ ರಿಂಗ್ ಎಲ್ಇಡಿ ಫ್ಲ್ಯಾಶ್, ಹೆಚ್‌ಡಿಆರ್, ಪನೋರಮಾ ಫಿಚರ್ಸ್ ಪಡೆದಿದೆ. ಹಾಗೆಯೇ 1080p@30fps ಸಾಮರ್ಥ್ಯದ ವಿಡಿಯೋಗಳನ್ನು ಸೆರೆ ಹಿಡಿಯಬಹುದು. ಉಳಿದಂತೆ ಈ ಫೋನ್ 8 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಆಯ್ಕೆ ಪಡೆದಿದೆ.

ಇನ್ಫಿನಿಕ್ಸ್ ಸ್ಮಾರ್ಟ್ 8 ಹೆಚ್‌ಡಿ ಸ್ಮಾರ್ಟ್‌ಫೋನ್ ಬ್ಯಾಟರಿ ಹಾಗೂ ಇತರೆ: ಈ ಸ್ಮಾರ್ಟ್‌ಫೋನ್ 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದಿದ್ದು, 10W ವೈರ್ಡ್ ಚಾರ್ಜಿಂಗ್ ಬೆಂಬಲ ಪಡೆದಿದೆ. ಇದರ ಜೊತೆಗೆ 3.5 ಎಂಎಂ ಜ್ಯಾಕ್, ವೈ-ಫೈ 802.11 a/b/g/n/ac, ಡ್ಯುಯಲ್-ಬ್ಯಾಂಡ್, ಬ್ಲೂಟೂತ್ ಆವೃತ್ತಿ 5.0, A2DP, LE, ಎಫ್‌ಎಮ್ ರೇಡಿಯೋ ಸೌಲಭ್ಯ ಪಡೆದಿದ್ದು, ಈ ಬೆಲೆಗೆ ತಕ್ಕ ಫೀಚರ್ಸ್ ಹೊಂದಿದೆ.


Click it and Unblock the Notifications








