Home
Deal of the day

ಐಫೋನ್‌ 13 ಪ್ರೊ ಮ್ಯಾಕ್ಸ್‌ಗೆ ದೊಡ್ಡ ಡಿಸ್ಕೌಂಟ್‌; ಈ ಆಫರ್‌ ಮಿಸ್‌ ಮಾಡಿಕೊಂಡ್ರೆ ನಿಮಗೇ ಲಾಸ್‌!

ಆಪಲ್‌ ಐಫೋನ್‌ಗಳು ಇಂದು ಹೆಚ್ಚಾಗಿ ಸೇಲ್‌ ಆಗುತ್ತಿದ್ದು, ಅದರಂತೆ ಪ್ರಮುಕ ಇ ಕಾಮರ್ಸ್‌ ಸೈಟ್‌ಗಳು ಸಹ ಆಗಾಗ್ಗೆ ಈ ಫೋನ್‌ಗಳಿಗೆ ಭರ್ಜರಿ ಡಿಸ್ಕೌಂಟ್‌ ಘೋಷಣೆ ಮಾಡುತ್ತಲೇ ಬರುತ್ತಿವೆ. ಈ ನಡುವೆ ಐಫೋನ್‌ 13 ಪ್ರೊ ಮ್ಯಾಕ್ಸ್‌ಗೆ (iPhone 13 Pro Max) ಭರ್ಜರಿ ರಿಯಾಯಿತಿ ನೀಡಲಾಗಿದೆ.

ಹೌದು, ಐಫೋನ್‌ಗಳು ಸಾಮಾನ್ಯವಾಗಿ ಅಧಿಕ ಬೆಲೆ ಹೊಂದಿರುತ್ತವೆ. ಅದಾಗ್ಯೂ ಬಳಕೆದಾರರು ಕೆಲವು ಸಮಯದಲ್ಲಿ ಈ ರೀತಿಯ ಆಫರ್‌ಗಳನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಈ ಉತ್ತಮ ಫೋನ್‌ಗನ್ನು ಕಡಿಮೆ ಬೆಲೆಗೆ ಖರೀದಿ ಮಾಡಬಹುದಾಗಿದೆ. ಅದರಂತೆ ಈ ಐಫೋನ್‌ನ 1TB ವೇರಿಯಂಟ್‌ಗೆ ಆಫರ್‌ ಲಭ್ಯ ಇದ್ದು, ಈ ಫೋನ್‌ನ A14 ಬಯೋನಿಕ್ ಪ್ರೊಸೆಸರ್ ಉತ್ತಮ ಕಾರ್ಯಕ್ಷಮತೆ ನೀಡಲಿದೆ. ಹಾಗಿದ್ರೆ, ಮತ್ಯಾಕೆ ತಡ ಬನ್ನಿ ಈ ಫೋನ್‌ನ ಪ್ರಮುಖ ಫೀಚರ್ಸ್‌ ಹಾಗೂ ಬೆಲೆ ವಿವರ ತಿಳಿಯೋಣ.

ಐಫೋನ್‌ 13 ಪ್ರೊ ಮ್ಯಾಕ್ಸ್‌ಗೆ ದೊಡ್ಡ ಡಿಸ್ಕೌಂಟ್‌...

ಐಫೋನ್‌ 13 ಪ್ರೊ ಮ್ಯಾಕ್ಸ್‌ ಡಿಸ್‌ಪ್ಲೇ ವಿವರ: ಈ ಫೋನ್ 6.7 ಇಂಚಿನ OLED ಡಿಸ್‌ಪ್ಲೆ ಹೊಂದಿದ್ದು, 1284 x 2778 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯ ಪಡೆದುಕೊಂಡಿದೆ. ಇದರೊಂದಿಗೆ 457ppi ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದ್ದು, ಡಿಸ್‌ಪ್ಲೇಯನ್ನು ಗೀರುಗಳಿಂದ ರಕ್ಷಿಸುವ ಸೌಲಭ್ಯ ಕಲ್ಪಿಸಲಾಗಿದ್ದು, ಚಿಕ್ಕ ಬೆಜೆಲ್ ಮೂಲಕ ನೋಡಲು ಆಕರ್ಷಕವಾಗಿದೆ. ಜೊತೆಗೆ 120Hz ರಿಫ್ರೆಶ್ ರೇಟ್‌ ಆಯ್ಕೆ ಹಾಗೂ 1000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್‌ ಆಯ್ಕೆ ಇದ್ದು, ಐಫೋನ್‌ ವಿಭಾಗದಲ್ಲಿ ಉತ್ತಮ ಎನಿಸಿದೆ.

ಐಫೋನ್‌ 13 ಪ್ರೊ ಮ್ಯಾಕ್ಸ್‌ ಪ್ರೊಸೆಸರ್‌ ಮಾಹಿತಿ: ಈ ಫೋನ್ ಹೊಸ A14 ಬಯೋನಿಕ್ ಪ್ರೊಸೆಸರ್ ಮೂಲಕ ಕಾರ್ಯನಿರ್ವಹಿಸಲಿದ್ದು, ಉತ್ತಮ ಕಾರ್ಯಕ್ಷಮತೆ ಲಭ್ಯ ಆಗಲಿದೆ. ಇದರೊಂದಿಗೆ ಉತ್ತಮವಾದ ಕ್ವಾಡ್‌ ಕೋರ್ ಗ್ರಾಫಿಕ್ಸ್‌ ಆಯ್ಕೆ ನೀಡಲಾಗಿದ್ದು, ಗೇಮರ್‌ಗಳಿಗೆ ಆಟಗಳಲ್ಲಿ ಅತ್ಯುತ್ತಮ ಅನುಭವ ನೀಡಲಿದೆ. ಉಳಿದಂತೆ ಐಓಎಸ್‌ 15 ಇದರಲ್ಲಿ ರನ್‌ ಆಗಲಿದ್ದು, 1TB ಸ್ಟೋರೇಜ್‌ ಆಯ್ಕೆ ಪಡೆದಿದೆ.

ಐಫೋನ್‌ 13 ಪ್ರೊ ಮ್ಯಾಕ್ಸ್‌ ಕ್ಯಾಮೆರಾ ರಚನೆ: ಕ್ಯಾಮೆರಾ ವಿಚಾರಕ್ಕೆ ಬರುವುದಾರೆ ಈ ಫೋನ ಎಲ್ಇಡಿ ಫ್ಲ್ಯಾಶ್‌ ಲೈಟ್‌ ಆಯ್ಕೆಯೊಂದಿಗೆ ಟ್ರಿಪಲ್ ರಿಯರ್‌ ಕ್ಯಾಮರಾ ಆಯ್ಕೆ ಪಡೆದುಕೊಂಡಿದ್ದು, 12MP ಮುಖ್ಯ ಕ್ಯಾಮೆರಾ, 12MP ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಹಾಗೂ 12MP ಟೆಲಿಫೋಟೋ ಕ್ಯಾಮೆರಾವನ್ನು ಆಯ್ಕೆ ಹೊಂದಿದೆ. ಇದರೊಂದಿಗೆ ಮೂರು 13MP ಸೆಲ್ಫಿ ಕ್ಯಾಮೆರಾ ವಿಶೇಷ ಎನಿಸಿದೆ.

ಐಫೋನ್‌ 13 ಪ್ರೊ ಮ್ಯಾಕ್ಸ್‌ ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ: ಈ ಫೋನ್ 3850mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದ್ದು, ದೀರ್ಘ ಬ್ಯಾಟರಿ ಬ್ಯಾಕಪ್‌ ನೀಡಲಿದೆ. ಇದರೊಂದಿಗೆ IP68 ರೇಟಿಂಗ್ ಅನ್ನು ಸಹ ಹೊಂದಿದ್ದು, ಇದು ನೀರು-ನಿರೋಧಕವಾಗಿದೆ. ಜೊತೆಗೆ ಫೇಸ್ ಐಡಿ, ಲಿಡಾರ್ ಸ್ಕ್ಯಾನರ್, ಬ್ಯಾರೋಮೀಟರ್,ಟ್ರಿ-ಆಕ್ಸಿಸ್ ಗೈರೋ, ಅಕ್ಸೆಲೆರೊಮೀಟರ್, ಪ್ರಾಕ್ಸಿಮಿಟಿ ಸೆನ್ಸರ್, ಆಂಬಿಯೆಂಟ್ ಲೈಟ್ ಸೆನ್ಸರ್ ಆಯ್ಕೆ ಇದ್ದು, ಇನ್‌ಬಿಲ್ಟ್‌ಜಿಪಿಎಸ್‌, ಗ್ಲೋನಾಸ್, ಗೆಲಿಲಿಯೋ ಸೇರಿದಂತೆ ಮುಂತಾದ ಅಗತ್ಯ ಫೀಚರ್ಸ್‌ ಆಯ್ಕೆ ಇದೆ.

ಐಫೋನ್‌ 13 ಪ್ರೊ ಮ್ಯಾಕ್ಸ್‌ಗೆ ದೊಡ್ಡ ಡಿಸ್ಕೌಂಟ್‌...

ಐಫೋನ್‌ 13 ಪ್ರೊ ಮ್ಯಾಕ್ಸ್‌ ಆಫರ್‌ ಬೆಲೆ ಹಾಗೂ ಲಭ್ಯತೆ: ಈ ಫೋನ್‌ ಸಾಮಾನ್ಯ ದರ 1,79,900ರೂ.ಗಳಾಗಿದ್ದು, ಇದು ಫ್ಲಿಪ್‌ಕಾರ್ಟ್‌ನಲ್ಲಿ(Flipkart) 13% ಡಿಸ್ಕೌಂಟ್‌ ಪಡೆದುಕೊಂಡಿದೆ. ಈ ಮೂಲಕ ನೀವು ಇದನ್ನು 1,55,999ರೂ.ಗಳಿಗೆ ಕೊಂಡುಕೊಳ್ಳಬಹುದು. ಇಷ್ಟು ಮಾತ್ರವಲ್ಲದೆ ಬ್ಯಾಂಕ್‌ ಹಾಗೂ ವಿನಿಮಯ ಆಫರ್ ಬಳಕೆ ಮಾಡಿಕೊಂಡು ಈ ಫೋನ್ ಖರೀದಿ ಮಾಡಬಹುದಾಗಿದ್ದು, 35,000ರೂ.ವರೆಗೂ ಉಳಿತಾಯ ಮಾಡಬಹುದಾಗಿದೆ.

Best Mobiles in India

English summary
1TB variant of the iPhone 13 Pro Max has a huge offer on Flipkart, and the A14 Bionic processor of this phone will deliver great performance.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+