ಯದ್ವಾತದ್ವಾ ಇಳಿಕೆ! 28,910 ಉಳಿತಾಯ.. ಗರ್ಲ್ ಫ್ರೆಂಡ್‌ಗೆ ಗಿಫ್ಟ್ ಕೊಡಿ.. ಅಗ್ಗದ ಬೆಲೆಗೆ iPhone 14 ಸೇಲ್
ಐಫೋನ್ ಖರೀದಿಸಲು ಬಯಸುವವರಿಗೆ ಇಲ್ಲಿದೆ ದೊಡ್ಡ ಸಿಹಿಸುದ್ದಿ. ಅದರಲ್ಲೂ ನಿಮ್ಮ ಪ್ರೇಯಸಿಗೆ ಐಫೋನ್ ಉಡುಗೊರೆ ನೀಡುವ ಪ್ಲಾನ್ ಇದ್ದರೆ, ಈ ಅವಕಾಶ ಮಿಸ್ ಮಾಡಿಕೊಳ್ಳಬೇಡಿ. ಹೌದು, ಐಫೋನ್ 14 (iPhone 14) ಬೆಲೆ ಭಾರೀ ಇಳಿಕೆಯಾಗಿದೆ. ಬಿಡುಗಡೆ ಬೆಲೆಗಿಂತ 28,910 ರೂ. ಕಡಿಮೆ ಬೆಲೆಗೆ ಐಫೋನ್ 14 ಲಭ್ಯವಿದೆ. ಜೊತೆಗೆ ಬ್ಯಾಂಕ್ ಆಫರ್‌ಗಳ ಮೂಲಕ ಈ ಫೋನನ್ನು ಮತ್ತಷ್ಟು ಕಡಿಮೆ ದರದಲ್ಲಿ ಖರೀದಿಸಬಹುದು. ಜೇಬಿಗೆ ಹೆಚ್ಚಿನ ಹೊರೆ ಹಾಕದೆ ಪ್ರೀಮಿಯಂ ಐಫೋನ್ ಖರೀದಿಸಲು ಬಯಸುವವರಿಗೆ, ಇದು ಫರ್ಪೆಕ್ಟ್ ಟೈಮ್ ಆಗಿದೆ. ಬನ್ನಿ, ಈ ಐಫೋನಿನ ಹೊಸ ಬೆಲೆ ಮತ್ತು ಆಫರ್‌ಗಳನ್ನು ತಿಳಿಯೋಣ.
ಆಪಲ್ ಈ ವರ್ಷದ ಅಕ್ಟೋಬರ್‌ನಲ್ಲಿ ಹೊಸ ಐಫೋನ್ ಸರಣಿಯನ್ನು ಬಿಡುಗಡೆ ಮಾಡಲಿದೆ. ಇದಕ್ಕೂ ಮುಂಚೆಯೇ, ಹಳೆಯ ಐಫೋನ್‌ಗಳ ಬೆಲೆಯನ್ನು ಭಾರೀ ಇಳಿಕೆ ಮಾಡಿದೆ. ಐಫೋನ್ 16 ಸರಣಿ ಬಿಡುಗಡೆಯಾದ ಬಳಿಕ, ಐಫೋನ್ 14 ಸರಣಿಯ ಬೆಲೆ ನಿರಂತರವಾಗಿ ಕುಸಿಯುತ್ತಿವೆ. ಪ್ರಸ್ತುತ, ಕ್ರೋಮಾದಲ್ಲಿ ಐಫೋನ್ 14 ಕಡಿಮೆ ಬೆಲೆಯಲ್ಲಿ ಖರೀದಿಗೆ (iPhone 14 Price Drop) ಲಭ್ಯವಿದೆ. ಈ ಫೋನ್ 6.1 ಇಂಚಿನ ಡಿಸ್ಪ್ಲೇ ಹೊಂದಿದೆ. ಜೊತೆಗೆ ಡ್ಯುಯಲ್ ಕ್ಯಾಮೆರಾ ಸೆಟಪ್, A15 ಬಯೋನಿಕ್ ಪ್ರೊಸೆಸರ್, 3279mAh ಸಾಮರ್ಥ್ಯದ ಬ್ಯಾಟರಿ ಒಳಗೊಂಡಿದೆ.

ಐಫೋನ್ 14 ಬೆಲೆ ಭಾರೀ ಕುಸಿತ!
ಐಫೋನ್ 14 ಸ್ಮಾರ್ಟ್‌ಫೋನ್ 79,900 ರೂ. ಆರಂಭಿಕ ಬೆಲೆಗೆ ಬಿಡುಗಡೆಯಾಗಿತ್ತು. ಪ್ರಸ್ತುತ, ಈ ಐಫೋನಿನ 128GB ಸ್ಟೋರೇಜ್ ರೂಪಾಂತರವನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ನೀವು ಕ್ರೋಮಾದಲ್ಲಿ ಕೇವಲ 50,990 ರೂ.ಗೆ ಖರೀದಿಸಬಹುದು. ಈ ಫೋನ್ ಬಿಡುಗಡೆ ಬೆಲೆಗಿಂತ 28,910 ರೂ. ಕಡಿಮೆ ಬೆಲೆಗೆ ಲಭ್ಯವಿದೆ. ಇದು ಕೇವಲ ಒಂದು ಫ್ಲಾಟ್ ರಿಯಾಯಿತಿ. ಆದರೆ, ಇತರೆ ಆಫರ್ ಮತ್ತು ಬ್ಯಾಂಕ್ ರಿಯಾಯಿತಿಗಳೊಂದಿಗೆ, ನೀವು ಮತ್ತಷ್ಟು ಕಡಿಮೆ ಬೆಲೆಗೆ ಈ ಫೋನನ್ನು ಕೊಳ್ಳಬಹುದು. ಅಂದರೆ, ನೀವು ದೊಡ್ಡ ಉಳಿತಾಯ ಮಾಡಬಹುದು.
ಬ್ಯಾಂಕ್ ಆಫರ್‌ಗಳು ಮತ್ತು ಕ್ಯಾಶ್‌ಬ್ಯಾಕ್
ಆಯ್ದ ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳ ಮೇಲೆ ಕ್ರೋಮಾ ತನ್ನ ಗ್ರಾಹಕರಿಗೆ 1,000 ರೂ. ವರೆಗೆ ತ್ವರಿತ ರಿಯಾಯಿತಿ ನೀಡುತ್ತಿದೆ. ಈ ಆಫರ್ ಐಸಿಐಸಿಐ ಬ್ಯಾಂಕ್, ಎಚ್‌ಎಸ್‌ಬಿಸಿ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಎಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್‌ಗಳಲ್ಲಿ ಲಭ್ಯವಿದೆ. ಇದಲ್ಲದೆ, ಎಕ್ಸ್‌ಚೇಂಜ್ ಆಫರ್‌ಗಳೊಂದಿಗೆ ಈ ಫೋನನ್ನು ಇನ್ನೂ ಕಡಿಮೆ ಬೆಲೆಗೆ ಖರೀದಿಸಬಹುದು. ಈ ಫೋನ್ ಮಿಡ್‌ನೈಟ್, ಸ್ಟಾರ್‌ಲೈಟ್, ಪರ್ಪಲ್ ಮತ್ತು ಬ್ಲೂ ಬಣ್ಣಗಳ ಆಯ್ಕೆಗಳಲ್ಲಿ ಮಾರಾಟವಾಗುತ್ತಿದೆ.
ಈ ಸುದ್ದಿ ಓದಿದ್ದೀರಾ?: ಹೊಸ ದಾಖಲೆ ಸೃಷ್ಟಿ! 4 ಲಕ್ಷಕ್ಕೂ ಅಧಿಕ ಪ್ರೀ-ಬುಕಿಂಗ್.. Samsung ಫೋನ್‌ಗಳಿಗೆ ಮುಗಿಬಿದ್ದ ಗ್ರಾಹಕರು!
ಐಫೋನ್ 14 ಫೀಚರ್ಸ್
ದೊಡ್ಡ ಡಿಸ್ಪ್ಲೇ
ಐಫೋನ್ 14 ಸ್ಮಾರ್ಟ್‌ಫೋನ್ 6.1 ಇಂಚಿನ ಸೂಪರ್ ರೆಟಿನಾ XDR ಓಎಲ್‌ಇಡಿ ಡಿಸ್ಪ್ಲೇ ಹೊಂದಿದೆ. ಇದು 800 ನಿಟ್ಸ್ ಕನಿಷ್ಠ ಹಾಗೂ 1200 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಆಯ್ಕೆ ಪಡೆದಿದೆ. ಈ ಡಿಸ್ಪ್ಲೇಯು 1170 x 2532 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯ ಹೊಂದಿದೆ.
ಪ್ರೊಸೆಸರ್ ಮತ್ತು ಸ್ಟೋರೇಜ್
ಐಫೋನ್ 14 ಫೋನ್ ಆಪಲ್‌ನ A15 ಬಯೋನಿಕ್ ಪ್ರೊಸೆಸರ್ ಹೊಂದಿದೆ. ಇದು iOS 16 ಜೊತೆಗೆ ಕೆಲಸ ಮಾಡುತ್ತದೆ. ಈ ಸ್ಮಾರ್ಟ್‌ಫೋನ್ 6GB RAM + 128GB ಸ್ಟೋರೇಜ್, 6GB RAM + 256GB ಸ್ಟೋರೇಜ್ ಮತ್ತು 6GB RAM + 512GB ಸ್ಟೋರೇಜ್ ಆಯ್ಕೆ ಹೊಂದಿದೆ.

ಅದ್ಭುತ ಕ್ಯಾಮೆರಾ ಸೆಟಪ್
ಐಫೋನ್ 14 ಮೊಬೈಲ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಈ ಫೋನಿನಲ್ಲಿ OIS ಜೊತೆಗೆ 12 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಹಾಗೂ 12 ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾ ಇದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ, ಈ ಫೋನ್ 12 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಹೊಂದಿದೆ.
ಬ್ಯಾಟರಿ ಮತ್ತು ಇತರೆ ವೈಶಿಷ್ಟ್ಯಗಳು
ಐಫೋನ್ 14 ಸ್ಮಾರ್ಟ್‌ಫೋನ್ 3279mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಈ ಬ್ಯಾಟರಿಯನ್ನು ಚಾರ್ಜ್ ಮಾಡಲು, 15W ಹಾಗೂ 7.5W ವೇಗದ ಚಾರ್ಜಿಂಗ್ ಸೌಲಭ್ಯ ಒದಗಿಸಲಾಗಿದೆ. ನೀವು ಅರ್ಧ ಗಂಟೆಯಲ್ಲಿ ಶೇ.50 ರಷ್ಟು ಚಾರ್ಜಿಂಗ್ ಮಾಡಬಹುದು. ಈ ಫೋನ್ ಸ್ಟೀರಿಯೋ ಸ್ಪೀಕರ್ ಸೌಲಭ್ಯ, 3.5 ಎಂಎಂ ಜ್ಯಾಕ್ ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ ಇದು 5G, ವೈ-ಫೈ, ಡ್ಯುಯಲ್ ಸಿಮ್, ಬ್ಲೂಟೂತ್, ಜಿಪಿಎಸ್ ಮತ್ತು ಲೈಟ್ನಿಂಗ್ ಚಾರ್ಜಿಂಗ್ ಪೋರ್ಟ್ ಸೇರಿದಂತೆ ಹಲವು ಸೌಲಭ್ಯಗಳನ್ನು ಒಳಗೊಂಡಿದೆ.


Click it and Unblock the Notifications








