Home
Deal of the day

iphone: ಫ್ಲಿಪ್‌ಕಾರ್ಟ್ ಹೋಳಿ ಸೇಲ್‌ನಲ್ಲಿ ಈ ಆಪಲ್‌ ಫೋನ್‌ಗೆ ಭಾರೀ ಆಫರ್!

ಫ್ಲಿಪ್‌ಕಾರ್ಟ್‌ (Flipkart) ಆಗಾಗ್ಗೆ ವಿಶೇಷ ಸೇಲ್‌ಗಳನ್ನು ಘೋಷಣೆ ಮಾಡಿಕೊಂಡು ಬರುತ್ತಲೇ ಇರುತ್ತದೆ. ಅದರಂತೆ ಈಗ ಹೋಳಿ ಸೇಲ್‌ (Flipkart Holi Sale) ಘೋಷಣೆ ಮಾಡಿದ್ದು, ಈ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳಿಗೆ ವಿಶೇಷ ಆಫರ್ ನೀಡಲಾಗಿದೆ. ಅದರಲ್ಲೂ ನೀವು ಈ ಸೇಲ್‌ನಲ್ಲಿ ಈ ಐಫೋನ್ (iPhone) ‌ ಅನ್ನು ಕಡಿಮೆ ದರದಲ್ಲಿ ಖರೀದಿ ಮಾಡಬಹುದಾಗಿದೆ.

ಹೌದು, ಐಫೋನ್‌ 14 ಪ್ಲಸ್‌ (iPhone 14 Plus) ಅನ್ನು ಈ ವಿಶೇಷ ಸೇಲ್‌ನಲ್ಲಿ ಆಫರ್ ಬೆಲೆಗೆ ಖರೀದಿ ಮಾಡಬಹುದಾಗಿದೆ. ಈ ಫೋನ್ ಸೂಪರ್ ರೆಟಿನಾ XDR ಡಿಸ್‌ಪ್ಲೇ ಹೊಂದಿದ್ದು, ಸುಧಾರಿತ A15 ಬಯೋನಿಕ್ ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದೆ. ಹಾಗಿದ್ರೆ ಈ ಸ್ಮಾರ್ಟ್‌ಫೋನ್‌ನ ಪ್ರಮುಖ ಫೀಚರ್ಸ್‌ ಜೊತೆಗೆ ಇದರ ಆಫರ್ ಬೆಲೆ ವಿವರಗಳನ್ನೂ ತಿಳಿಯೋಣ ಬನ್ನಿ.

ಫ್ಲಿಪ್‌ಕಾರ್ಟ್ ಹೋಳಿ ಸೇಲ್‌ನಲ್ಲಿ ಈ ಆಪಲ್‌ ಫೋನ್‌ಗೆ ಭಾರೀ ಆಫರ್!

ಐಫೋನ್‌ 14 ಪ್ಲಸ್‌ಗೆ ಆಫರ್: ಆಪಲ್‌ ಐಫೋನ್‌ 14 ಪ್ಲಸ್‌ ಅನ್ನು ಈ ಹೋಳಿ ಸೇಲ್‌ನಲ್ಲಿ 52,000 ರೂಪಾಯಿಗಳ ರಿಯಾಯಿತಿಯ ಬಳಿಕ ಕೇವಲ 14,999 ರೂ.ಗಳಲ್ಲಿ ಖರೀದಿ ಮಾಡಬಹುದು. ಈ ಫೋನ್‌ ಅನ್ನು ಭಾರತದಲ್ಲಿ 89,900 ರೂ.ಗಳ ಆರಂಭಿಕ ಬೆಲೆಗೆ ಲಾಂಚ್ ಮಾಡಲಾಗಿತ್ತು. ಆದರೆ, ಹೊಸ ಐಫೋನ್‌ 15 ಪ್ಲಸ್‌ ಅನ್ನು ಲಾಂಚ್‌ ಮಾಡಿದ ನಂತರ ಆಪಲ್‌ ಬರೋಬ್ಬರಿ 10,000 ರಷ್ಟು ಬೆಲೆ ಕಡಿತ ಮಾಡಿದೆ.

ಇನ್ನು ಈ ಆಪಲ್ ಐಫೋನ್ 14 ಪ್ಲಸ್ ಆಪಲ್ ಐಫೋನ್ 14 ನಂತೆಯೇ ಫೀಚರ್ಸ್‌ ಆಯ್ಕೆ ಪಡೆದಿದ್ದು, ದೊಡ್ಡ ಡಿಸ್ಪ್ಲೇ ಮತ್ತು ದೊಡ್ಡ ಬ್ಯಾಟರಿ ಹೊಂದಿದೆ. ಇನ್ನು ಫ್ಲಿಪ್‌ಕಾರ್ಟ್ ಸೇಲ್‌ನಲ್ಲಿ 12,901 ರೂಪಾಯಿಗಳ ರಿಯಾಯಿತಿಯ ನಂತರ 66,999 ರೂಪಾಯಿಗಳಿಗೆ ಇದು ಕಾಣಿಸಿಕೊಂಡಿದ್ದು, ಸಿಟಿ-ಬ್ರಾಂಡೆಡ್ ಕ್ರೆಡಿಟ್ ಕಾರ್ಡ್ ಇಎಮ್‌ಐ ವ್ಯವಹಾರದಲ್ಲಿ 2000 ರೂ.ಗಳ ರಿಯಾಯಿತಿ ಪಡೆಯಬಹುದು.

ಫ್ಲಿಪ್‌ಕಾರ್ಟ್ ಹೋಳಿ ಸೇಲ್‌ನಲ್ಲಿ ಈ ಆಪಲ್‌ ಫೋನ್‌ಗೆ ಭಾರೀ ಆಫರ್!

ಈ ಮೂಲಕ ಈ ಫೋನ್‌ ಬೆಲೆ 64,999 ರೂ.ಗೆ ಇಳಿಕೆಯಾಗಲಿದೆ. ಇದರ ಜೊತೆಗೆ ಖರೀದಿದಾರರು ವಿನಿಮಯ ಆಫರ್ ಬಳಕೆ ಮಾಡಿಕೊಳ್ಳಬಹುದಾಗಿದೆ. ಅಂದರೆ ಹಳೆಯ ಸ್ಮಾರ್ಟ್‌ಫೋನ್‌ ಅನ್ನು ನೀಡಿದ್ರೆ ಬರೋಬ್ಬರಿ 50,000 ರೂ.ವರೆಗೆ ರಿಯಾಯಿತಿ ಪಡೆಯಬಹುದಾಗಿದೆ. ಈ ಮೂಲಕ ಆಫರ್‌ಗಳು ಮತ್ತು ಬ್ಯಾಂಕ್ ರಿಯಾಯಿತಿಗಳೊಂದಿಗೆ ಹೋಳಿ ಸೇಲ್‌ನಲ್ಲಿ ಈ ಫೋನ್‌ ಅನ್ನು ವಲ 14,999 ರೂ.ಗಳಲ್ಲಿ ಖರೀದಿ ಮಾಡಬಹುದಾಗಿದೆ. ಗಮನಿಸಬೇಕಾದ ವಿಷಯ ಏನೆಂದರೆ ವಿನಿಮಯ ಮಾಡಿಕೊಳ್ಳುವ ಫೋನ್‌ ಉತ್ತಮವಾಗಿದ್ದರೆ ಮಾತ್ರ ಇಷ್ಟು ಮೊತ್ತದ ರಿಯಾಯಿತಿ ಸಿಗಲಿದೆ.

ಇನ್ನು ಈ ಫೋನ್‌ನ ಕೆಲವು ಫೀಚರ್ಸ್‌ ಕಡೆ ಕಣ್ಣಾಯಿಸಿವುದಾದರೆ ಇದು 6.7-ಇಂಚಿನ ಸೂಪರ್ ರೆಟಿನಾ XDR ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ ಆಪಲ್‌ ಐಫೋನ್ 13 ಪ್ರೊ ವೇರಿಯಂಟ್‌ನಲ್ಲಿ ಕಂಡುಬರುವಂತೆ ಸುಧಾರಿತ A15 ಬಯೋನಿಕ್ ಚಿಪ್‌ನಿಂದ ಕಾರ್ಯನಿರ್ವಹಿಸಲಿದೆ. ಇದರ ಜೊತೆಗೆ ನೀವು ಈ ಫೋನ್‌ ಅನ್ನು ಒಮ್ಮೆ ಚಾರ್ಜ್‌ ಮಾಡಿದ್ರೆ ಚಾರ್ಜ್‌ನಲ್ಲಿ 26 ಗಂಟೆಗಳವರೆಗೆ ಬಳಕೆ ಮಾಡಬಹುದು.

ಫ್ಲಿಪ್‌ಕಾರ್ಟ್ ಹೋಳಿ ಸೇಲ್‌ನಲ್ಲಿ ಈ ಆಪಲ್‌ ಫೋನ್‌ಗೆ ಭಾರೀ ಆಫರ್!

ಉಳಿದಂತೆ ಈ ಫೋನ್ ಉತ್ತಮ ಕ್ಯಾಮೆರಾ ಸೌಲಭ್ಯ ಪಡೆದಿದೆ. ಅಂದರೆ 12 ಮೆಗಾಪಿಕ್ಸೆಲ್ ಮುಖ್ಯ ಸೆನ್ಸರ್‌ ಅನ್ನು ಈ ಫೋನ್‌ನಲ್ಲಿ ನೋಡಬಹುದಾಗಿದ್ದು, ಅಲ್ಟ್ರಾ-ವೈಡ್ ಸೆನ್ಸರ್‌ನೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಪಡೆದಿದೆ. ಇದರೊಂದಿಗೆ ಐಫೋನ್ ಪ್ರಿಯರು ನೀಲಿ, ನೇರಳೆ, ಮಿಡ್ನೈಟ್, ಸ್ಟಾರ್‌ಲೈಟ್ ಮತ್ತು ಕೆಂಪು ಬಣ್ಣದ ಫೋನ್‌ಗಳಲ್ಲಿ ತಮ್ಮಿಷ್ಟದ ಫೋನ್‌ ಅನ್ನು ಖರೀದಿ ಮಾಡಬಹುದಾಗಿದೆ.

iOS 18 ನಲ್ಲಿ ವಿಶೇಷ ಸೌಲಭ್ಯ: ಈ ನಡುವೆ ಐಫೋನ್‌ ಸಂಬಂಧ ಮತ್ತೊಂದು ಗುಡ್‌ ನ್ಯೂಸ್‌ ಸಿಕ್ಕಿದೆ. ಅದುವೇ iOS 18. ಈ ಓಎಸ್ ವೈಯಕ್ತಿಕಗೊಳಿಸಿದ ಹೋಮ್ ಸ್ಕ್ರೀನ್ ಮತ್ತು ಡೀಪ್‌ ಎಐ ಏಕೀಕರಣವನ್ನು ಒಳಗೊಂಡಿರುತ್ತದೆ. ಈ ಅಪ್‌ಡೇಟ್ ಜೂನ್‌ನಲ್ಲಿ ಡೆವಲಪರ್ ಬೀಟಾಗಳೊಂದಿಗೆ ಮತ್ತು ನಂತರದಲ್ಲಿ ಸಾರ್ವಜನಿಕ ಲಭ್ಯವಾಗಲಿದೆ ಎಂದು ತಿಳಿದುಬಂದಿದೆ.

ಇದರೊಂದಿಗೆ ಸಿರಿ ಸುಧಾರಣೆಗಳು, ಆಪಲ್ ಮ್ಯೂಸಿಕ್‌ಗಾಗಿ ಎಐ-ರಚಿಸಿದ ಲಿಸ್ಟ್‌ಗಳು, ಐವರ್ಕ್ ಸೂಟ್‌ನಲ್ಲಿ ಎಐ ಡಾಕ್ಯುಮೆಂಟ್ ಉತ್ಪಾದನೆ ಮತ್ತು ಮೆಸೆಜ್‌ಗಳಲ್ಲಿ ಚುರುಕಾದ ಪ್ರತ್ಯುತ್ತರ ಸಲಹೆಗಳು ಸೇರಿದಂತೆ ವಿವಿಧ ಎಐ-ಚಾಲಿತ ಫೀಚರ್‌ ಅನ್ನು ಈ ಓಎಸ್‌ ನಲ್ಲಿ ಕಾಣಬಹುದಾಗಿದೆ.

Best Mobiles in India

English summary
iPhone 14 Plus smartphone available with huge offer in the Flipkart Holi Sale.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+